ಸಖತ್‌ ವಿಶೇಷತೆಗಿರುವ ಸ್ಕೋಡಾ ಸೂಪರ್ಬ್‌ 2024: ಆದರೆ ಭಾರತೀಯ ಬಡಕುಟುಂಬಗಳಿಗೆ ಅಲ್ಲ!

ಭಾರತೀಯರ ಬಹುನಿರೀಕ್ಷಿತ ಕಾರಾಗಿದ್ದ ಸ್ಕೋಡಾ ಸೂಪರ್ಬ್‌ ನಿನ್ನೆ ಭಾರತೀಯ ಮಾರುಕಟ್ಟೆಗೆ ರೀ ಲಾಂಚ್ ಆಗಿದೆ. ಕೆಲವೇ ವರ್ಷದ ಹಿಂದೆ ಭಾರತೀಯ ಮಾರುಕಟ್ಟೆಯಿಂದ ಕಣ್ಮರೆಯಾಗಿದ್ದ ಈ ಕಾರು, ಹಲವಾರು ಬದಲಾವಣೆಗಳೊಂದಿಗೆ ಮತ್ತೆ ಮಾರುಕಟ್ಟೆಗೆ ಲಾಂಚ್‌ ಆಗಿದೆ. ಇಂದಿನ ಈ ಲೇಖನದಲ್ಲಿ ಈ ಕಾರಿನ ಪ್ರಮುಖ ವಿಷಯಗಳ ಬಗ್ಗೆ ಮಾತನಾಡಲಿದ್ದೇವೆ.

1. ಎಂಜಿನ್‌: ಹೊಸ ಸ್ಕೋಡಾ ಸೂಪರ್ಬ್‌ ಹೃದಯ ಎಂದರೆ ಇದರ ಎಂಜಿನ್‌. ಸೂಪರ್ಬ್ ಕಾರು 2.0-ಲೀಟರ್ ಫೋರ್ ಸಿಲಿಂಡರ್ ಎಂಜಿನ್, ಟಿಎಸ್ಐ ಗ್ಯಾಸೋಲಿನ್ ಮೋಟಾರ್ ಹೊಂದಿದ್ದು, 187 ಬಿಹೆಚ್‌ಪಿ ಗರಿಷ್ಠ ಪವರ್ (ಶಕ್ತಿ) ಹಾಗೂ 320 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ 7-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದ್ದು, FWD (ಫ್ರಂಟ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದೆ.

Skoda Superb 2024 Top Features Engine Price Saftey And More

2. ವಿನ್ಯಾಸ: ಈ ಬಾರಿಯ ಸ್ಕೋಡಾ ಸೂಪರ್ಬ್‌ ಕಾರು ಹಳೆಯ ವಿನ್ಯಾಸವನ್ನೇ ಹೋಲುತ್ತದೆಯಾದರೂ, ಅಲ್ಲಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದೆ. ಮುಂಭಾಗ (ಫ್ರಂಟ್) ಸಿಗ್ನೇಚರ್ ಸ್ಕೋಡಾ ರೇಡಿಯೇಟರ್ ಗ್ರಿಲ್, ಎಲ್‌ಇಡಿ ಹೆಡ್‌ಲ್ಯಾಂಪ್ಸ್, ಕಾರ್ನರಿಂಗ್ ಫಂಕ್ಷನ್‌ ಜೊತೆಯಲ್ಲಿ ಎಲ್ಇಡಿ ಫಾಗ್ ಲ್ಯಾಂಪ್ಸ್ ಹೊಂದಿದೆ. ಹಿಂಭಾಗ (ರೇರ್) ಎಲ್ಇಡಿ ಟೈಲ್‌ಲ್ಯಾಂಪ್ಸ್ ಹಾಗೂ ಫಾಗ್ ಲೈಟ್ಸ್ ಒಳಗೊಂಡಿದೆ. ಬದಿಗಳ (ಸೈಡ್) ವಿನ್ಯಾಸವು ಉತ್ತಮವಾಗಿದ್ದು, 18-ಇಂಚಿನ ಡುಯಲ್-ಟೋನ್ ಅಲಾಯ್ ವೀಲ್ಸ್ ಪಡೆದಿದೆ.

3. ಫೀಚರ್‌ಗಳು: ಸ್ಕೋಡಾ ಸೂಪರ್ಬ್ 2024 ಕಾರಿನಲ್ಲಿ ಹಲವಾರು ಅತ್ಯಾಧುನಿಕ ಫೀಚರ್‌ಗಳನ್ನು ಕಾಣಬಹುದಾಗಿದೆ. ಪ್ರಮುಖವಾಗಿ ಮೊಬೈಲ್ ಕನೆಕ್ಟಿವಿಟಿಯೊಂದಿಗೆ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್, ವರ್ಚುವಲ್ ಕಾಕ್‌ಪಿಟ್, 12-ಸ್ಪೀಕರ್ ಕ್ಯಾಂಟನ್ ಆಡಿಯೋ ಸಿಸ್ಟಮ್, 3-ಜೋನ್ ಕ್ಲೇಮೇಟ್ ಕಂಟ್ರೋಲ್, ರೇರ್ ವಿಂಡೋ & ವಿಂಡ್‌ಸ್ಕ್ರೀನ್‌ಗಾಗಿ ರೋಲ್-ಅಪ್ ಸನ್ ವೈಸರ್ಸ್ ಅನ್ನು ತನ್ನದಾಗಿಸಿಕೊಂಡಿದೆ.

Skoda Superb 2024 Top Features Engine Price Saftey And More

4. ಸುರಕ್ಷತೆ: ಸಹಜವಾಗಿಯೇ ಸ್ಕೋಡಾ ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ.ಹೊಸ ಸ್ಕೋಡಾ ಸೂಪರ್ಬ್ ಕಾರು ಭರಪೂರ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದಿದ್ದು, 9 ಏರ್‌ಬ್ಯಾಗ್‌, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಹಿಲ್ ಬ್ರೇಕ್ ಅಸಿಸ್ಟ್, ಹಿಲ್ ಹೋಲ್ಡ್ ಕಂಟ್ರೋಲ್, ಆಟೋ ಹೋಲ್ಡ್‌, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, 360 ಡಿಗ್ರಿ ಕ್ಯಾಮೆರಾ, ಪಾರ್ಕ್ ಅಸಿಸ್ಟ್ ಅನ್ನು ಹೊಂದಿದೆ.

5. ಬೆಲೆ: ದೇಶೀಯ ಮಾರುಕಟ್ಟೆಯಲ್ಲಿ ಈ ಕಾರು ರೂ.54 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಕೇವಲ ಒಂದೇ ರೂಪಾಂತರದ ಆಯ್ಕೆಯನ್ನು ಈ ಕಾರು ಹೊಂದಿದ್ದು, ಈ ತಿಂಗಳ ಕೊನೆಯಲ್ಲಿ ವಿತರಣೆಗಳು ಶುರುವಾಗಲಿದೆ. ಆಸಕ್ತ ಗ್ರಾಹಕರು ಕಂಪನಿಯ ಶೋರೂಂ ಅಥವಾ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೂತನ ಸೆಡಾನ್‌ನ್ನು ಕಾಯ್ದಿರಿಸಬಹುದು.

Skoda Superb 2024 Top Features Engine Price Saftey And More

ಈ ಕಾರು ಲಾಂಚ್‌ ಆಗುವುದಕ್ಕೂ ಕೆಲವು ದಿನಗಳ ಹಿಂದೆ, ಸ್ಕೋಡಾ ಆಟೋ ಇಂಡಿಯಾದ ಬ್ರಾಂಡ್‌ ಡೈರೆಕ್ಟರ್‌ ಆಗಿರು ಪೀಟರ್‌ ಜನೇಬಾ ಮಾತನಾಡಿ, ಕಂಪನಿ ಭಾರತಕ್ಕೆ ಆಕ್ಟಾವಿಯಾ ಮತ್ತು ಸುಪರ್ಬ್‌, ಈ ಎರಡೂ ಬ್ರಾಂಡ್‌ಗಳನ್ನು ಭಾರತೀಯ ಮಾರುಕಟ್ಟೆಗೆ ತರಲಿದೆ. ನಮಗೆ ಭಾರತ ಪ್ರಮುಖ ಮಾರುಕಟ್ಟೆಯಾಗಿದ್ದು, ಹಲವು ಅಪ್‌ಡೇಟ್‌ಗಳನ್ನು ಪಡೆದುಕೊಂಡು ಈ ಎರಡೂ ಕಾರುಗಳು ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಈ ಬಾರಿ ಪ್ರಮುಖವಾಗಿ ಎರಡು ಯೋಜನೆಗಳೊಂದಿಗೆ ಭಾರತಕ್ಕೆ ರೀ ಎಂಟ್ರೀ ಕೊಡಲಿದ್ದೇವೆ ಎಂದು ಮಾಧ್ಯಮಗಳೊಂದಿಗೆ ಹೇಳಿದ್ದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, April 4, 2024, 16:48 [IST]
English summary
Skoda superb 2024 top features engine price saftey and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+