ಭಾರತಕ್ಕೆ ರೀ ಎಂಟ್ರೀಗೆ ಸಿದ್ಧವಾದ ಸ್ಕೋಡಾ ಸುಪರ್ಬ್: ಪರ್ಫಾಮೆನ್ಸ್ ಕಿಂಗ್‌ನ ಆಗಮನದಲ್ಲಿ ಜನಸಮೂಹ!
ಭಾರತದಲ್ಲಿ ಸ್ಕೋಡಾ ಕಾರುಗಳಿಗಿರುವ ಗತ್ತು ಒಂದು ರೀತಿ ಬೇರೆಯದೇ ಎನ್ನಬಹುದು. ಸದ್ಯಕ್ಕೆ ಕೆಲವೇ ಕೆಲವು ಮಾದರಿಗಳನ್ನು ಸ್ಕೋಡಾ ಮಾರಾಟ ಮಾಡುತ್ತಿದ್ದರೂ, ಬಹುತೇಕ ಭಾರತೀಯರ ಪ್ರೀಮಿಯಂ ಕಾರು ಮಾದರಿಗಳ ಆಯ್ಕೆಯಲ್ಲಿ ಸ್ಕೋಡಾ ಇದ್ದೇ ಇರುತ್ತದೆ. ಅಂತಹ ಸ್ಕೋಡಾ ಪ್ರೀಯರಿಗೆ ಇದೀಗ ಮತ್ತೊಂದು ಸುದ್ದಿ ಸ್ಕೋಡಾ ಕಡೆಯಿಂದ ಬಂದಿದ್ದು, ಎಲ್ಲರ ಕಣ್ಣರಳಿಸಿದೆ.
ಭಾಋತದಲ್ಲಿ ಕೆಲವು ವರ್ಷಗಳ ಹಿಂದಿನವರೆಗೂ ಹವಾ ಸೃಷ್ಟಿಸಿ ನಂತರ ಕಣ್ಮರೆಯಾಗಿದ್ದ ಸ್ಕೋಡಾ ಸುಪರ್ಬ್ ಇದೀಗ ಮತ್ತೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎಂದು ಮೂಲಗಳು ತಿಳಿಸಿವೆ. ಸ್ಕೋಡಾ ಸುಪರ್ಬ್ (Skoda Superb) ಜೊತೆ ಇನ್ನೊಂದು ಪ್ರಸಿದ್ದ ಕಾರು ಮಾದರಿಯಾದ ಸ್ಕೋಡಾ ಆಕ್ಟಾವಿಯಾ ಸಹ ಮರಳಿ ಭಾರತೀಯರ ಮಡಿಲು ಸೇರಲಿದ್ದು, ಎಲ್ಲರು ಕುತೂಹಲದಿಂದ ಕಾದು ಕುಳಿತು ನೋಡುವಂತಾಗಿದೆ.

ಸ್ಕೋಡಾ ಆಟೋ ಇಂಡಿಯಾದ ಬ್ರಾಂಡ್ ಡೈರೆಕ್ಟರ್ ಆಗಿರು ಪೀಟರ್ ಜನೇಬಾ ಮಾತನಾಡಿ, ಕಂಪನಿ ಭಾರತಕ್ಕೆ ಆಕ್ಟಾವಿಯಾ ಮತ್ತು ಸುಪರ್ಬ್, ಈ ಎರಡೂ ಬ್ರಾಂಡ್‌ಗಳನ್ನು ಭಾರತೀಯ ಮಾರುಕಟ್ಟೆಗೆ ತರಲಿದೆ. ನಮಗೆ ಭಾರತ ಪ್ರಮುಖ ಮಾರುಕಟ್ಟೆಯಾಗಿದ್ದು, ಹಲವು ಅಪ್‌ಡೇಟ್‌ಗಳನ್ನು ಪಡೆದುಕೊಂಡು ಈ ಎರಡೂ ಕಾರುಗಳು ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಈ ಬಾರಿ ಪ್ರಮುಖವಾಗಿ ಎರಡು ಯೋಜನೆಗಳೊಂದಿಗೆ ಭಾರತಕ್ಕೆ ರೀ ಎಂಟ್ರೀ ಕೊಡಲಿದ್ದೇವೆ ಎಂದು ಮಾಧ್ಯಮಗಳೊಂದಿಗೆ ಹೇಳಿದ್ದಾರೆ.
ಹೊಸ ಸ್ಕೋಡಾ ಆಕ್ಟೀವಿಯಾ ಕಾರು ಗಣನೀಯವಾಗಿ ನವೀಕರಣಗಳನ್ನು ನೋಡುತ್ತದೆ, ಅದರಲ್ಲೂ ವಿಶೇಷವಾಗಿ ಹೊಸ 13-ಇಂಚಿನ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್‌ನ ಸೇರ್ಪಡೆಯಾಗಿದೆ. ಈ ಸ್ಕ್ರೀನ್ ಫೋಕ್ಸ್‌ವ್ಯಾಗನ್ ಗಾಲ್ಫ್‌ನ ಇತ್ತೀಚಿನ ಅಪ್‌ಡೇಟ್‌ನೊಂದಿಗೆ ಹಂಚಿಕೊಳ್ಳಲಾದ ಆಯ್ಕೆಯ ವೈಶಿಷ್ಟ್ಯವಾಗಿದೆ. ಇದರ ವಾಯ್ಸ್ ಅಸಿಸ್ಟ್ ನಲ್ಲಿ ChatGPT ಎಐ ಸಂಯೋಜಿಸುತ್ತದೆ, ಬಳಕೆದಾರರ ಸಂವಹನವನ್ನು ಹೆಚ್ಚಿಸುತ್ತದೆ.

ಚಾರ್ಜಿಂಗ್ ಆಯ್ಕೆಗಳು ಗಮನಾರ್ಹ ಸುಧಾರಣೆಯನ್ನು ಕಂಡಿವೆ. 'ಫೋನ್ ಬಾಕ್ಸ್'ನ ಪರಿಚಯವು 15W ವರೆಗೆ ವೈರ್‌ಲೆಸ್ ಚಾರ್ಜಿಂಗ್ ಅನ್ನು ಅನುಮತಿಸುತ್ತದೆ. ಇನ್ನು ಕ್ಲೈಮೆಂಟ್ ಕಂಟ್ರೋಲ್ ಅನ್ನು ಹೊಂದಿದೆ. ಇನ್ನು ಇದಲ್ಲದೆ, USB-C ಪೋರ್ಟ್‌ಗಳು ಈಗ 45W ಪವರ್ ಅನ್ನು ನೀಡುತ್ತವೆ. ಇದರೊಂದಿಗೆ ಹಲವು ಅತ್ಯಾಧುನಿಕ ಫಿಚರ್ಸ್ ಗಳನ್ನು ಹೊಂದಿವೆ.
2004 ರಲ್ಲಿ, ಸ್ಕೋಡಾ ಆಟೋ ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಸೂಪರ್ಬ್ ಕಾರನ್ನು ಬಿಡುಗಡೆ ಮಾಡಿತು. ಸ್ಕೋಡಾದ ಪ್ರೀಮಿಯಂ ಸೆಡಾನ್, ಸೂಪರ್ಬ್, ಪ್ರಸ್ತುತ ರೂ. 34.17 ಲಕ್ಷದಿಂದ ರೂ. 37.27 ಲಕ್ಷದ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಇನ್ನು ಕಳೆದ ಕೆಲವು ದಿನಗಳಲ್ಲಿ, ಸ್ಕೋಡಾ ಸೂಪರ್ಬ್ ಅನ್ನು ಭಾರತಕ್ಕೆ ಎರಡು ರೂಪಾಂತರಗಳಲ್ಲಿ ತರಲಾಯಿತು.

ಈ ಬಾರಿ ಭಾರತಕ್ಕೆ ಕಾಲಿಡಲಿರುವ ಸ್ಕೋಡಾ ಸುಪರ್ಬ್‌ನ ವಿವರಗಳನ್ನು ನೋಡುವುದಾದರೆ, ಇದು ೨.೦ ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಜೊತೆ ಬರಲಿದ್ದು, ಈ ಎಂಜಿನ್ ಸಹಾಯದಿಂದ ಬರೋಬ್ಬರಿ ೧೯೦ ಪಿಎಸ್ ಪವರ್ ಮತ್ತು ೩೨೦ ಎನ್‌ಎಮ್ ಟಾರ್ಕ್ ಅನ್ನು ಈ ಕಾರು ಉತ್ಪಾದಿಸಲಿದೆ. 7 ಸ್ಪೀಡ್ ಡಿಎಸ್‌ಜಿ ಟ್ವಿನ್ ಕ್ಲಚ್ ಗಿಯರ್ ಬಾಕ್ಸ್ ಜೊತೆ ಇದು ಬರಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








