ಗಂಡ - ಹೆಂಡತಿ ಆಫೀಸ್‌ಗೆ ಹೋಗಲು ಈ ಎಲೆಕ್ಟ್ರಿಕ್ ಕಾರು ಬೆಸ್ಟ್.. ರೂ.6.99 ಲಕ್ಷಕ್ಕೆ ಸಿಗುತ್ತೆ, 230 ಕಿ.ಮೀ ರೇಂಜ್!
ಬೆಂಗಳೂರು, ಮುಂಬೈ ಹಾಗೂ ದೆಹಲಿಯಂತಹ ಮಹಾನಗರಗಳಲ್ಲಿ ಉತ್ತಮ ಜೀವನ ಸಾಗಿಸಲು ಗಂಡ ಹಾಗೂ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗಬೇಕು. ಆದರೆ ಚಳಿಗಾಲ, ಬೇಸಿಗೆಗಾಲ ಹಾಗೂ ಮಳೆಗಾಲದಲ್ಲಿ ಬೈಕ್ ಅಥವಾ ಸ್ಕೂಟರ್‌ನಲ್ಲಿ ಪ್ರಯಾಣಿಸುವುದು ತುಂಬಾ ಕಷ್ಟವಾಗುತ್ತದೆ. ಇಂತಹ ಸಂದರ್ಭದಲ್ಲಿ ಕಾರು ಅತ್ಯುತ್ತಮ ಸಾರಿಗೆ ವಿಧಾನವಾಗಿದೆ. ನೀವು ದಿನನಿತ್ಯ ಕಚೇರಿಗೆ ಹೋಗಲು ಬಜೆಟ್ ಬೆಲೆಯಲ್ಲಿ ಹೊಸ ಕಾರು ಖರೀದಿಸಲು ಆಲೋಚಿಸಿದ್ದರೆ.. ಎಂಜಿ ಕಾಮೆಟ್ ಇವಿ (MG Comet EV) ಹೆಚ್ಚು ಸೂಕ್ತವಾಗಲಿದೆ. ಈ ಕಾರನ್ನು ಸುಲಭವಾಗಿ ಪಾರ್ಕಿಂಗ್ ಕೂಡ ಮಾಡಬಹುದು. ಬನ್ನಿ.. ನೂತನ ಕಾಮೆಟ್ ಇವಿಯ ವಿಶೇಷತೆಗಳ ಬಗ್ಗೆ ತಿಳಿಯೋಣ.
ಬೆಲೆ & ರೂಪಾಂತರಗಳು: ದೇಶೀಯ ಮಾರುಕಟ್ಟೆಯಲ್ಲಿ ಎಂಜಿ ಕಾಮೆಟ್ ಇವಿ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತದೆ. ರೂ.6.99 ಲಕ್ಷದಿಂದ ರೂ.9.53 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿದೆ. ಎಕ್ಸಿಕ್ಯೂಟಿವ್ ಮತ್ತು ಎಕ್ಸ್‌ಕ್ಲೂಸಿವ್ ಸೇರಿದಂತೆ ವಿವಿಧ ರೂಪಾಂತರ (ವೇರಿಯೆಂಟ್)ಗಳೊಂದಿಗೆ ದೊರೆಯುತ್ತದೆ. ಅರೋರಾ ಸಿಲ್ವರ್ ಹಾಗೂ ಕ್ಯಾಂಡಿ ವೈಟ್ ಒಳಗೊಂಡಂತೆ 2-ಡುಯಲ್ ಟೋನ್, 3-ಮೊನೊಟೋನ್ ಬಣ್ಣಗಳನ್ನು ಪಡೆದಿದೆ.

ಆಸನಗಳು: ಇದು ಪುಟ್ಟ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್ ಆಗಿದ್ದು, 2-ಡೋರ್ (ಬಾಗಿಲು) ಆಯ್ಕೆಯಲ್ಲಿ ಲಭ್ಯವಿದೆ. 4 ಮಂದಿ ಆರಾಮದಾಯವಾಗಿ ಕುಳಿತುಕೊಂಡು ಪ್ರಯಾಣಿಸಬಹುದು. ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಸಣ್ಣ ಪ್ರವಾಸಕ್ಕೆ ಹೋಗಲು ಸಹ ಉತ್ತಮವಾಗಿದ್ದು, ಹಿಂಭಾಗದ ಆಸನಗಳನ್ನು ಮಡಚಿ ಹೆಚ್ಚಿನ ಲಗೇಜ್ ಸಾಗುಸಬಹುದು. ಸಂಚಾರ ದಟ್ಟಣೆಯಿರುವ ರಸ್ತೆಯಲ್ಲಿಯೂ ಸುಲಭವಾಗಿ ಓಡಿಸಬಹುದು.
ಕಾರ್ಯಕ್ಷಮತೆ: ಈ ಕಾರು 17.3 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದರಲ್ಲಿವ ಎಲೆಕ್ಟ್ರಿಕ್ ಮೋಟಾರ್, 42 ಪಿಎಸ್ ಗರಿಷ್ಠ ಶಕ್ತಿ (ಪವರ್) ಹಾಗೂ 110 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. ಆರ್‌ಡಬ್ಲ್ಯೂಡಿ (ರೇರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 230 ಕಿ.ಮೀ ರೇಂಜ್ (ಮೈಲೇಜ್) ನೀಡುತ್ತದೆ.

ಚಾರ್ಜಿಂಗ್ ಆಯ್ಕೆ: ಎಂಜಿ ಕಾಮೆಟ್ ಇವಿಯ ಬ್ಯಾಟರಿ ಪ್ಯಾಕ್ 3.3 ಕೆಡಬ್ಲ್ಯೂ ಚಾರ್ಜರ್ ಉಪಯೋಗ ಮಾಡಿದಾಗ 0 ಯಿಂದ 100% ಚಾರ್ಜ್ ಆಗಲು 7 ಗಂಟೆ ತೆಗೆದುಕೊಳ್ಳುತ್ತದೆ. ಅದೇ ರೀತಿಯಲ್ಲಿ 7.4 ಕೆಡಬ್ಲ್ಯೂ ಸಾಮರ್ಥ್ಯದ ಚಾರ್ಜರ್ ಬಳಕೆಯಲ್ಲಿ ಬ್ಯಾಟರಿಯು 0 ಯಿಂದ 100% ಚಾರ್ಜ್ ಆಗುವುದಕ್ಕೆ ಕೇವಲ 3.5 ಗಂಟೆ ಸಾಕಾಗುತ್ತದೆ.
ವೈಶಿಷ್ಟ್ಯಗಳು: ಈ ಕಾರು ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯ (ಫೀಚರ್)ಗಳನ್ನು ಪಡೆದಿದೆ. ಡುಯಲ್ 10.25-ಇಂಚಿನ ಸ್ಕ್ರೀನ್ (ಇನ್ಫೋಟೈನ್‌ಮೆಂಟ್ ಸಿಸ್ಟಮ್ & ಇನ್ಸ್ಟ್ರುಮೆಂಟ್ ಕ್ಲಸ್ಟರ್), ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 55ಕ್ಕೂ ಹೆಚ್ಚು ಕನೆಕ್ಟ್ದ್ ಕಾರ್ ಟೆಕ್ ಮತ್ತು ಕೀಲೆಸ್ ಎಂಟ್ರಿಯಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಸುರಕ್ಷತಾ ವೈಶಿಷ್ಟ್ಯಗಳು: ಎಂಜಿ ಕಾಮೆಟ್ ಇವಿ ಪ್ರಯಾಣಿಕರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. ಡುಯಲ್ ಫ್ರಂಟ್ ಏರ್‌ಬ್ಯಾಗ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ರೇರ್ ಪಾರ್ಕಿಂಗ್ ಸೆನ್ಸರ್ಸ್, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ರೇರ್ ಡಿಸ್ಕ್ ಬ್ರೇಕ್ಸ್, ಹೋಲ್ಡ್ ಅಸಿಸ್ಟ್ ಅನ್ನು ಪಡೆದಿದೆ. ಈ ಕಾರಿಗೆ ಟಾಟಾ ಟಿಯಾಗೊ ಇವಿ ಮತ್ತು ಸಿಟ್ರನ್ ಇಸಿ3 ಕಾರುಗಳು ದೊಡ್ಡ ಎದುರಾಳಿಯಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








