ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್‌ಗೆ ಸಿದ್ದವಾದ ನೆರೆ-ರಾಜ್ಯ!
ಭಾರತೀಯರ ಕನಸಿನ ವಾಹನ ಯಾವುದೆಂದು ಕೇಳಿದರೆ ಹತ್ತರಲ್ಲಿ ಏಳು ಜನರ ಬಾಯಲ್ಲಿ ಬರುವ ಉತ್ತರ ರೇಂಜ್ ರೋವರ್. ಹೌದು, ಲಕ್ಷುರಿ ಎಸ್‌ಯುವಿ ನಿರ್ಮಾಣ ಕಂಪನಿಯಾದ ರೇಂಜ್ ರೋವರ್ ಲ್ಯಾಂಡ್ ರೋವರ್ ಕಾರುಗಳೆಂದರೆ ಭಾರತದಲ್ಲಿ ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ವರ್ಗದವರಿಗೂ ಅಚ್ಚು ಮೆಚ್ಚು.
ಇದೀಗ ತಮಿಳುನಾಡನ್ನು ಲ್ಯಾಂಡ್‌ರೋವರ್ ಮತ್ತು ಜಾಗ್ವಾರ್ (TATA Motor's JLR) ಎಲೆಕ್ಟ್ರಿಕ್‌ನ ಹಬ್ ಆಗಿ ಮಾರ್ಪಾಡು ಮಾಡುವಂತಹ ಮಹತ್ವದ ಹೆಜ್ಜೆಯನ್ನು ಟಾಟಾ ಮೋಟಾರ್ಸ್ ಇಟ್ಟಿದೆ. ಈ ಮೂಲಕ ಕರ್ನಾಟಕಕ್ಕೆ ಬಹುದೊಡ್ಡ ಹಿನ್ನಡೆಯಾಗಿದೆ ಎಂದು ಆಟೋಮೊಬೈಲ್ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನುಮುಂದೆ ಲ್ಯಾಂಡ್‌ರೋವರ್ ಮತ್ತು ಜಾಗ್ವಾರ್ ಕಾರುಗಳು ತಮಿಳುನಾಡಿನಲ್ಲಿ ನಿರ್ಮಾಣವಾಗಲಿದೆ.

ಟಾಟಾ ಮೋಟಾರ್ಸ್ ಇತ್ತೀಚೆಗಷ್ಟೇ ಸುಮಾರು 9000 ಕೋಟಿ ರೂಪಾಯಿಗಳ ಎಲೆಕ್ಟ್ರಿಕ್ ಪ್ಲಾಂಟ್ ಸಿದ್ದಗೊಳಿಸಲು ತಮಿಳುನಾಡು ಸರ್ಕಾರದ ಜೊತೆ MoU (Memorandum of Understanding)ಗೆ ಸಹಿ ಹಾಕಿದ್ದು, ಇಲ್ಲಿ ಲಕ್ಷುರಿ ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ತಯಾರಿಸಿ ಇತರೆಡೆಗೆ ಸಾಗಿಸುವ ಯೋಜನೆಯಿದೆ ಎಂದು ತಿಳಿದು ಬಂದಿದೆ.
ತಮಿಳುನಾಡಿನಲ್ಲಿ ಟಾಟಾ ಮೋಟಾರ್ಸ್ ಸಿದ್ದ ಪಡಿಸುವ ಲ್ಯಾಂಡ್‌ರೋವರ್ ಮತ್ತು ಜಾಗ್ವಾರ್ ಎಲೆಕ್ಟ್ರಿಕ್ ಪ್ಲಾಂಟ್‌ನಲ್ಲಿ ಎರಡು ಲಕ್ಷಕ್ಕೂ ಅಧಿಕ ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದುವಷ್ಟು ವಿಶಾಲವಾದ ಪ್ಲಾಂಟ್ ಇದಾಗಿರಲಿದೆ ಎನ್ನಲಾಗಿದೆ. ಇಲ್ಲಿ ತಯಾರಾಗುವ ಬಹುತೇಕ ಜಾಗ್ವಾರ್ ಕಾರು ಮಾದರಿಗಳು ವಿದೇಶಕ್ಕೆ ಎಕ್ಸ್‌ಪೋರ್ಟ್ ಆಗಲಿದೆ ಎಂಬುದು ಗಮನಿಸಬೇಕಾದ ಮತ್ತೊಂದು ಸಂಗತಿ.

ಟಾಟಾ ಮೋಟಾರ್ಸ್ ಮುಂಬರುವ ವರ್ಷಗಳಲ್ಲಿ ಸುಮಾರು 1.5 ಲಕ್ಷ ಕೋಟಿ ರೂಗಳಷ್ಟು ಹಣವನ್ನು ಈ ವಲಯದಲ್ಲಿ ಅಂದರೆ ಜಾಗ್ವಾರ್ ಲ್ಯಾಂಡ್‌ರೋವರ್‌ನಲ್ಲಿ ಹೂಡಿಕೆ ಮಾಡಲಿದ್ದು ಭಾಈ ದೊಡ್ಡ ಪ್ರಾಜೆಕ್ಟ್ ಅನ್ನು ಕಾರ್ಯ ರೂಪಕ್ಕೆ ತರಲಿದೆ ಎಂದು ತಿಳಿದು ಬಂದಿದೆ. ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಅಧಿಕವಾಗಲಿರುವುದರಿಂದ ಟಾಟಾ ಈ ಮಹತ್ವದ ಹೆಜ್ಜೆ ಇಟ್ಟಿದೆ.
ಕೆಲವು ವರ್ಷಗಳ ಹಿಂದೆಯಿಂದಲೇ ರೇಂಜ್ ರೋವರ್ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ದಿ ಪಡಿಸುವ ಕೆಲಸವನ್ನು ಆರಂಭಿಸಿತ್ತು. ಮುಂದಿನ ವರ್ಷಗಳಲ್ಲಿ ಕಂಪನಿಯು ತನ್ನ ಇತರ ಪ್ರಸಿದ್ದ ಕಾರು ಮಾದರಿಗಳಾದ ರೇಂಜ್ ರೋವರ್, ರೇಂಜ್ ರೋವರ್ ವೇಲಾ, ಇವೋಕ್ ಮತ್ತು ಇತರ ಮಾದರಿಗಳನ್ನು ಭಾರತದಲ್ಲಿ ಅನಾವರಣ ಮಾಡಲಿದೆ ಎಂದು ತಿಳಿದು ಬಂದಿದೆ.

ಮಾಹಿತಿಗಳ ಪ್ರಕಾರ ರೇಂಜ್ ರೋವರ್ ತನ್ನ ಪ್ರಸಿದ್ದ ಕಾರು ಮಾದರಿಗಳಲ್ಲಿ ಒಂದಾದ ರೇಂಜ್ ರೋವರ್ ಸ್ಪೋರ್ಟ್ (Range Rover Sport Electric) ಅನ್ನು ಎಲೆಕ್ಟ್ರಿಕ್ ರೂಪಕ್ಕೆ ತರಲಿದೆ ಎಂದು ತಿಳಿದು ಬಂದಿದೆ. ಹೌದು, ರೇಂಜ್ ರೋವರ್ ಸ್ಪೋರ್ಟ್ ಎಲೆಕ್ಟ್ರಿಕ್ ಅನ್ನು ಈ ವರ್ಷದಲ್ಲೇ ಕಂಪನಿ ಅನಾವರಣಗೊಳಿಸಲಿದೆ. ತನ್ನ ಆರು ಎಲೆಕ್ಟ್ರಿಕ್ ಕಾರು ಮಾದರಿಗಳಲ್ಲಿ ಇದು ಎರಡನೆಯದಾಗಿದ್ದು, 2024 ರ ವೇಳೆಗೆ ಉಳಿದ ಎಲೆಕ್ಟ್ರಿಕ್ ಕಾರುಗಳನ್ನು ಮಾರುಕಟ್ಟೆಗೆ ತರಲಿದೆ.
ಇನ್ನು ಸದ್ಯಕ್ಕೆ ಮಾರುಕಟ್ಟೆಯಲ್ಲಿರುವ ರೇಂಜ್ ರೋವರ್ ಸ್ಪೋರ್ಟ್ ಬಗ್ಗೆ ನೋಡುವುದಾದರೆ, ರೇಂಜ್ ರೋವರ್ ಸ್ಪೋರ್ಟ್ ಎಸ್‍ಯುವಿಯನ್ನು ಮೊದಲ ಬಾರಿಗೆ 2005 ರಲ್ಲಿ ಪರಿಚಯಿಸಲಾಯಿತು, ರೇಂಜ್ ರೋವರ್ ಸ್ಪೋರ್ಟ್ ಎಸ್‍ಯುವಿಯು ಪ್ರಪಂಚದ ಅತ್ಯಂತ ಅಪೇಕ್ಷಣೀಯ ಮತ್ತು ಜನಪ್ರಿಯ ಆಧುನಿಕ ಐಷಾರಾಮಿ ವಾಹನವಾಗಿದೆ. ಈ ರೇಂಜ್ ರೋವರ್ ಸ್ಪೋರ್ಟ್ ಎಸ್‍ಯುವಿಯು ನಿಸ್ಸಂದಿಗ್ಧವಾದ ರೇಂಜ್ ರೋವರ್ ಮಾದರಿ ಆಗಿದ್ದು, ಮಸ್ಕಲರ್ ಮತ್ತು ಕ್ರಿಯಾತ್ಮಕ ನಿಲುವನ್ನು ಹೆಚ್ಚಿಸುತ್ತವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications