Tata: ಟಾಟಾದ ಈ ಕಾರಿಗೆ ಮುಗಿಬಿದ್ದ ಗ್ರಾಹಕರು, 26 ಕಿ.ಮೀ ಮೈಲೇಜ್.. 6 ಲಕ್ಷಕ್ಕೆ ಸಿಗುತ್ತದೆ
ದೇಶದ ವಿಶ್ವಾಸಾರ್ಹ ಕಾರು ತಯಾರಕ ಕಂಪನಿಯಾಗಿ ಟಾಟಾ (Tata) ಜನಪ್ರಿಯವಾಗಿದೆ. ಜನವರಿ (2024) ತಿಂಗಳಲ್ಲಿಯೂ ಕಂಪನಿಯ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಲ್ಟ್ರೊಜ್ (Altroz) ಭಾರೀ ಬೇಡಿಕೆಯನ್ನು ಹೊಂದಿದ್ದು, ಕೊಂಚ ಹೆಚ್ಚಿನ ಕಾಯುವಿಕೆ ಅವಧಿ (waiting period)ಯನ್ನು ಒಳಗೊಂಡಿದೆ . ಆ ಬಗ್ಗೆ ಇಲ್ಲಿದೆ ಮಾಹಿತಿ.
ಟಾಟಾ ಆಲ್ಟ್ರೊಜ್ (Tata Altroz) ಹ್ಯಾಚ್‌ಬ್ಯಾಕ್, ಪೆಟ್ರೋಲ್ ಹಾಗೂ ಡಿಸೇಲ್ (ಮ್ಯಾನುವಲ್) ರೂಪಾಂತರಗಳನ್ನು ನೀವು ಇವತ್ತು ಬುಕ್ಕಿಂಗ್ ಮಾಡಿದರೂ ವಿತರಣೆ ಪಡೆಯಲು 6 ವಾರಗಳವರೆಗೆ ಕಾಯಬೇಕು. ಹೆಚ್ಚಿನ ಮೈಲೇಜ್ ನೀಡುವ ಸಿಎನ್‌ಜಿ ರೂಪಾಂತರಗಳು 6 ರಿಂದ 8 ವಾರಗಳವರೆಗೆ ಕಾಯುವಿಕೆ ಅವಧಿಯನ್ನು ಹೊಂದಿವೆ. ರಾಜ್ಯದಿಂದ ರಾಜ್ಯಕ್ಕೆ ಡೀಲರ್‌ಶಿಪ್ ಅನ್ವಯ ಈ ಸಮಯ ಬೇರೆಯಾಗಬಹುದು.

ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಟಾಟಾ ಆಲ್ಟ್ರೊಜ್, ರೂ.6.60 ಲಕ್ಷದಿಂದ ರೂ.10.74 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಶೀಘ್ರದಲ್ಲೇ ಈ ಕಾರಿನ ಬೆಲೆ ಒಂದಷ್ಟು ಹೆಚ್ಚಳಗೊಳ್ಳುವ ನೀರಿಕ್ಷೆಯೂ ಇದೆ. ಈ ಆಲ್ಟ್ರೊಜ್, ಎಕ್ಸ್ಇ, ಎಕ್ಸ್ಎಂ, ಎಕ್ಸ್ಎಂ ಪ್ಲಸ್ ಸೇರಿದಂತೆ ವಿವಿಧ ರೂಪಾಂತರಗಳ ಆಯ್ಕೆಯಲ್ಲಿ ದೊರೆಯುತ್ತದೆ.
ಟಾಟಾ ಆಲ್ಟ್ರೊಜ್ ಪೆಟ್ರೋಲ್, ಡೀಸೆಲ್ ಹಾಗೂ ಸಿಎನ್‌ಜಿ ಪವರ್ ಟ್ರೈನ್ ಆಯ್ಕೆಯಲ್ಲಿ ಲಭ್ಯವಿದೆ. ಇದರ 1.2 - ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 86 PS ಪವರ್, 113 Nm ಪೀಕ್ ಟಾರ್ಕ್, 1.2 - ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 110 PS ಪವರ್, 140 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿದೆ.

ಮತ್ತೊಂದು, 1.5 - ಲೀಟರ್ ಡೀಸೆಲ್ ಎಂಜಿನ್ 90 PS ಗರಿಷ್ಠ ಪವರ್, 200 Nm ಪೀಕ್ ಟಾರ್ಕ್ ಹೊರಹಾಕುತ್ತದೆ. ಜೊತೆಗೆ ರೂಪಾಂತರಗಳಿಗೆ ಅನುಗುಣವಾಗಿ 5 - ಸ್ವೀಡ್ ಮ್ಯಾನುವಲ್/ 6 - ಸ್ವೀಡ್ ಡುಯಲ್ ಕ್ಲಚ್ (DCT) ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ.
ಸಿಎನ್‌ಜಿ ವೇರಿಯೆಂಟ್ಸ್ 1.2 - ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಎಂಜಿನ್ ಪಡೆದಿದ್ದು, 73.5 PS ಪವರ್, 103 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 - ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಮಾತ್ರ ಸಿಗುತ್ತದೆ. ಮೈಲೇಜ್ ವಿಚಾರವಾಗಿ ಮಾತನಾಡುವುದಾದರೆ, ಪೆಟ್ರೋಲ್ ಹಾಗೂ ಡೀಸೆಲ್ ರೂಪಾಂತರಗಳು 18.50 kmpl - 23.64 kmpl, ಸಿಎನ್‌ಜಿ ರೂಪಾಂತರಗಳು 26.20 km/kg ಮೈಲೇಜ್ ನೀಡುತ್ತವೆ.
ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿರುವ ಟಾಟಾ ಆಲ್ಟ್ರೊಜ್ ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ 7 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಂಬಿಯೆಂಟ್ ಲೈಟಿಂಗ್, ಕ್ರೂಸ್ ಕಂಟ್ರೋಲ್ ಮತ್ತು ಸಿಂಗಲ್ ಪೇನ್ ಸನ್‌ರೂಫ್ ಮತ್ತು 345 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಅನ್ನು ಒಳಗೊಂಡಿದೆ.
ಸುರಕ್ಷತೆಯ ದೃಷ್ಟಿಯಿಂದಲ್ಲೂ ಟಾಟಾ ಆಲ್ಟ್ರೊಜ್ ಅತ್ಯುತ್ತಮವಾಗಿದ್ದು, ಡುಯಲ್ ಫ್ರಂಟ್ ಏರ್‌ಬ್ಯಾಗ್, ISOFIX ಚೈಲ್ಡ್-ಸೀಟ್ ಆಂಕರ್ಸ್, ಆಟೋ ಪಾರ್ಕ್ ಲಾಕ್ ಹಾಗೂ ರೇರ್ ಪಾರ್ಕಿಂಗ್ ಸೆನ್ಸರ್ಸ್ ಅನ್ನು ಹೊಂದಿದೆ. ಈ ಕಾರಿಗೆ ಹುಂಡೈ ಐ20, ಮಾರುತಿ ಸುಜುಕಿ ಬಲೆನೊ ಮತ್ತು ಟೊಯೊಟಾ ಗ್ಲಾನ್ಜಾ ಪ್ರಬಲ ಪ್ರತಿಸ್ಪರ್ಧಿಯಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications