ಬಡವರ ಲ್ಯಾಂಬೋರ್ಗಿನಿ TATA CURVV ಬಗ್ಗೆ‌ ಬಿಗ್‌ ಅಪ್‌ಡೇಟ್‌: ಸುದ್ದಿ ಕೇಳಿ ನಿರಾಸೆಯಲ್ಲಿ ಮಧ್ಯಮ ವರ್ಗ!

ಟಾಟಾ ಮೋಟಾರ್ಸ್‌ ಭಾರತೀಯರ ಹೆಮ್ಮೆಯ ಕಾರು ನಿರ್ಮಾಣ ಕಂಪನಿ ಎಂದು ಹೇಳಲು ಅದರದ್ದೇ ಆದ ಕಾರಣಗಳಿದೆ. ಕಡಿಮೆ ಬೆಲೆಗೆ, ಗ್ರಾಹಕರಿಗೆ ಬೇಕಾದ ರೀತಿಯಲ್ಲಿ ಅತ್ಯಂತ ಹೆಚ್ಚು ಸುರಕ್ಷಿತವಾದ ಕಾರುಗಳನ್ನು ನಿರ್ಮಿಸಿ, ಮಾರಾಟ ಮಾಡುವುದರಿಂದ ಟಾಟಾವನ್ನು ಯಾರೂ ಬಿಟ್ಟು ಕೊಡುವುದಿಲ್ಲ. ಇದೀಗ ಟಾಟಾ ಮೋಟಾರ್ಸ್‌ನ ಬಡವರ ಲ್ಯಾಂಬೋರ್ಗಿನಿ ಬಿಡುಗಡೆಗೆ ಸಿದ್ದವಾಗಿದೆ.

ಹೌದು, ನಿಮಗೆಲ್ಲಾ ತಿಳಿದಿರುವಂತೆ ಟಾಟಾ ಮೋಟಾರ್ಸ್‌, ಕರ್ವ್‌ ಎಂಬ ಕಾರನ್ನು ಅಭಿವೃದ್ದಿ ಪಡಿಸುತ್ತಿರುವುದು ಗೊತ್ತೇ ಇದೆ. ಈಗಾಗಲೇ ದೇಶದ ನಾನಾ ಕಡೆ ಈ ಕಾರಿನ ಪರೀಕ್ಷಾರ್ಥ ಡ್ರೈವ್‌ಗಳನ್ನು ನಡೆಸಿದ್ದು ಹಲವರ ಕ್ಯಾಮೆರಾ ಕಣ್ಣಿಗೆ ಇದು ಸಿಕ್ಕಿದೆ. ಈ ಕಾರು ಯಾವಾಗ ಲಾಂಚ್ ಆಗುತ್ತದೆ ಎಂದು ಟಾಟಾ ಪ್ರೇಮಿಗಳು ಕಾಯುತ್ತಿರುವಾಗಲೇ ಈ ಕಾರಿನ ಕುರಿತಾಗಿ ಸಿಹಿ ಸುದ್ದಿಯೊಂದು ಹೊರಬಿದ್ದಿದೆ.

Tata Curvv set to debut during the upcoming festive season

ಮಾಹಿತಿಗಳ ಪ್ರಕಾರ ಟಾಟಾ ಮೋಟಾರ್ಸ್ ತನ್ನ ಹೊಸ ಕರ್ವ್‌ನ ಉತ್ಪಾದನೆಯನ್ನು ಇದೇ ವರ್ಷದ ಜೂನ್‌ ತಿಂಗಳಿಂದ ಆರಂಭಿಸಲಿದೆ. ಸದಯಕ್ಕೆ ಭಾರತದಲ್ಲಿ ನಡೆಯುತ್ತಿರುವ ಚುನಾವಣಾ ಕಾರಣದಿಂದಾಗಿ ಈ ಕಾರಿನ ಉತ್ಪಾದನೆ ತಡವಾಗಿದೆ ಎಂದು ತಿಳಿದು ಬಂದಿದೆ. ಮಾಹಿತಿಗಳ ಪ್ರಕಾರ ಇದೇ ವರ್ಷದ ಹಬ್ಬಗಳ ಸಂಧರ್ಭದಲ್ಲಿ ಈ ಕಾರು ಮಾರುಕಟ್ಟೆಯನ್ನು ಪ್ರವೇಶಿಸಲಿದ್ದು, ಇದನ್ನು ಖರೀದಿಸಲು ಕಾಯುತ್ತಿದ್ದ ಮಧ್ಯಮ ವರ್ಗಕ್ಕೆ ನಿರಾಸೆಯಾಗಿದೆ.

ಟಾಟಾ ಕರ್ವ್‌ ಕೇವಲ ಎಲೆಕ್ಟ್ರಿಕ್‌ ಮತ್ತು ಪೆಟ್ರೋಲ್‌ ಮಾತ್ರವಲ್ಲ ಡೀಸೆಲ್‌ನಲ್ಲಿಯೂ ಸಹ ಇದು ಲಭ್ಯವಾಗಲಿದೆ ಎಂದು ತಿಳಿದು ಬಂದಿದೆ. ಮೊದಲಿಗೆ ಭಾರತದಲ್ಲಿ ಮೊದಲು ಟಾಟಾ ಕರ್ವ್‌ ಎಲೆಕ್ಟ್ರಿಕ್‌ ಲಾಂಚ್‌ ಆಗಲಿದ್ದು ತದ ನಂತರದಲ್ಲಿ ಡೀಸೆಲ್‌ ಮತ್ತು ಟರ್ಬೋ ಪೆಟ್ರೋಲ್‌ ಎಂಜಿನ್‌ ಆವೃತ್ತಿಗಳು ಲಾಂಚ್‌ ಆಗಲಿದೆ ಎಂದು ತಿಳಿದು ಬಂದಿದೆ.

Tata Curvv set to debut during the upcoming festive season

ಮಾಹಿತಿಗಳ ಪ್ರಕಾರ ಈಗಿರುವ ಟಾಟಾ ನೆಕ್ಸಾನ್‌ನ ಡೀಸೆಲ್‌ ಎಂಜಿನ್‌ ಅನ್ನೇ ಈ ಕಾರಿಗು ಅಳವಡಿಸಲಾಗುತ್ತದೆ ಎಂದು ತಿಳಿದು ಬಂದಿದೆ. ಹೌದು ನೆಕ್ಸಾನ್‌ನಲ್ಲಿರುವ, ೧.೫ ಲೀಟರ್‌ನ ಡೀಸೆಲ್‌ ಎಂಜಿನ್‌ ಸಹಾಯದಿಂದ ಈಗ ನೆಕ್ಸಾನ್‌ ಕಾರ್‌ನಲ್ಲಿ ಉತ್ಪತ್ತಿಯಾಗುವ ಅದೇ ಪವರ್‌ ಮತ್ತು ಪರ್ಫಾಮೆನ್ಸ್‌ ಅನ್ನು ನಾವು ಮುಂಬರಲಿರುವ ಈ ಹೊಸ ಟಾಟಾ ಕರ್ವ್‌ ಡೀಸೆಲ್‌ ಆವೃತ್ತಿಯಲ್ಲಿ ಎದುರು ನೊಡಬಹುದಾಗಿದೆ.

ಈ ಹೊಸ ಟಾಟಾ Curvv ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹ್ಯುಂಡೈ ಕ್ರೆಟಾ ಎಸ್‍ಯುವಿಗೆ ನೇರವಾಗಿ ಪೈಪೋಟಿ ನೀಡುತ್ತದೆ. 2023ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಟಾಟಾ Curvv ಕಳೆದ ವರ್ಷ ಎಲೆಕ್ಟ್ರಿಕ್ ವಾಹನ ಕಾನ್ಸೆಪ್ಟ್ ರೂಪದಲ್ಲಿ ತೋರಿಸಿದ್ದಕ್ಕಿಂತ ಸ್ವಲ್ಪ ಭಿನ್ನವಾಗಿದೆ. ಈ ಬಾರೀ ಅನಾವರಣಗೊಳಿಸಿದ ಟಾಟಾ Curvv ಕಾನ್ಸೆಪ್ಟ್ ಸ್ಪ್ಲಿಟ್ ಹೆಡ್‌ಲೈಟ್ ವಿನ್ಯಾಸದ ನವೀಕರಿಸಿದ ಆವೃತ್ತಿಯನ್ನು ಹೊಂದಿದೆ.

Tata Curvv set to debut during the upcoming festive season

ಇದರ ಡಿಸೈನ್‌ ಮತ್ತು ಇತರ ವಿಷಯಗಳನ್ನು ನೋಡುವುದಾದರೆ, ಈ ಕಾರಿನ ಹೆಡ್‌ಲ್ಯಾಂಪ್‌ಗಳೊಂದಿಗೆ ಹಿಂದೆಂದಿಗಿಂತಲೂ ಹೆಚ್ಚು ಉತ್ಪಾದನೆಗೆ ಸಿದ್ಧವಾಗಿದೆ. ಟಾಟಾ ಮೋಟಾರ್ಸ್‌ನ Curvv ಕಾನ್ಸೆಪ್ಟ್ ಪೂರ್ಣ-ಅಗಲ LED DRL ಗಳನ್ನು ಉಳಿಸಿಕೊಂಡಿದೆ. ಈ ಟಾಟಾ Curvv ಕಾನ್ಸೆಪ್ಟ್ ವಿಶಿಷ್ಟ ಲುಕ್ ಅನ್ನು ಹೊಂದಿದೆ. ಈ ಕಾರು ವಿನ್ಯಾಸದ ಹೈಲೈಟ್ ಅದನ್ನು ಉತ್ಪಾದನೆಗೆ ಮಾಡಿದರೆ, ಎಸ್‍ಯುವಿಗಳು ಬಿ-ವಿಭಾಗದಲ್ಲಿ Curvv ಒಂದು ವಿಶಿಷ್ಟ ಕೊಡುಗೆಯಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, May 15, 2024, 11:02 [IST]
English summary
Tata curvv set to debut during the upcoming festive season
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+