Tata: ಡೀಸೆಲ್ ಆವೃತ್ತಿಯಲ್ಲಿ ಟಾಟಾ ಕರ್ವ್ ಎಸ್‌ಯುವಿ: ಶೀಘ್ರದಲ್ಲೇ ಬಿಡುಗಡೆ, ವಿಶೇಷತೆಗಳೇನು?
ಟಾಟಾ ಮೋಟಾರ್ಸ್ ಬಳಿ ಮುಂಬರುವ ಎಸ್‌ಯುವಿಗಳ ಪಟ್ಟಿ ಬಹುದೊಡ್ಡದಿದೆ. ಇದರಲ್ಲಿ ಒಂದಾದ ಟಾಟಾ ಕರ್ವ್ ಬಗ್ಗೆ ಭಾರೀ ನಿರೀಕ್ಷೆಗಳಿವೆ. ಇದೀಗ ಈ ಮಾದರಿಯನ್ನು ಭಾರತ್ ಮೊಬಿಲಿಟಿ ಎಕ್ಸ್‌ಪೋ 2024 ರಲ್ಲಿ ಪ್ರದರ್ಶಿಸಲಾಗಿದ್ದು, ಬಹಿರಂಗಗೊಂಡಿರುವ ಟಾಟಾ ಕರ್ವ್, ಡೀಸೆಲ್ ಆವೃತ್ತಿಯಲ್ಲೂ ಬರುವುದನ್ನು ಖಚಿತಪಡಿಸಲಾಗಿದೆ.
Curvv SUV ಯ ಪವರ್‌ಟ್ರೇನ್ ಆಯ್ಕೆಗಳು ಡೀಸೆಲ್, ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಆವೃತ್ತಿಯನ್ನು ಒಳಗೊಂಡಿರುತ್ತದೆ. ಪ್ರದರ್ಶಿಸಲಾದ ಮಾದರಿಯು ಉತ್ಪಾದನೆಗೆ ಸಿದ್ಧವಿರುವ ಸುಳಿವನ್ನು ನೀಡಿದೆ. ಮೂಲಗಳ ಪ್ರಕಾರ 2024 ರ ಅಂತ್ಯದ ವೇಳೆಗೆ ಟಾಟಾ Curvv SUV ಬಿಡುಗಡೆಯಾಗಲಿದೆ. ಇದರ ಆರಂಭಿಕ ಬೆಲೆಯನ್ನು ಸುಮಾರು 11 ಲಕ್ಷ (ಎಕ್ಸ್-ಶೋರೂಂ)ಕ್ಕೆ ನಿಗಧಿಪಡಿಸಬಹುದು ಎಂದು ನಿರೀಕ್ಷಿಸಲಾಗಿದೆ.

ಡಿಸೈನ್: ಪ್ರದರ್ಶನ ಕಂಡಿರುವ ಟಾಟಾ Curvv SUV ಡಿಸೈನ್ ಬಗ್ಗೆ ಹೇಳುವುದಾದ್ರೆ, ನೆಕ್ಸಾನ್‌ನೊಂದಿಗಿನ ಹೋಲಿಕೆಗಳನ್ನು ಹೆಚ್ಚಾಗಿ ಹೊಂದಿದೆ. ಬಾನೆಟ್‌ನ ಅಗಲಕ್ಕೆ ವ್ಯಾಪಿಸಿರುವ ಕನೆಕ್ಟೆಡ್ LED DRL ನೊಂದಿಗೆ ನೆಕ್ಸಾನ್ ನೋಟವನ್ನು ಸ್ಪಷ್ಟವಾಗಿ ಕಾಣಬಹುದು. ಮುಖ್ಯವಾಗಿ ಹೆಡ್‌ಲೈಟ್‌ಗಳು ಅದರ ಕೆಳಗೆ ಕುಳಿತುಕೊಂಡಿದ್ದು, ಬಂಪರ್ ಅದನ್ನು ಸುತ್ತುವರೆದಿದೆ.
ಹಿಂಭಾಗದಲ್ಲಿ ಸರಾಗವಾದ ಇಳಿಜಾರಿನ ಕೂಪ್ ತರಹದ ರೂಫ್ ಅನ್ನು ಕಾಣಬಹುದು. ಇದು Curvv SUV ವಿಭಾಗದ ಮೊದಲ ಹೊಸ ಡಿಸೈನ್ ಎಂದು ಹೇಳಬಹುದು, ಫ್ಲಶ್ ಡೋರ್ ಹ್ಯಾಂಡಲ್‌ಗಳು ಹಾಗೂ ಹಿಂದಿನ ಭಾಗವು ಮುಂಭಾಗಕ್ಕಿಂತ ಎತ್ತರದಲ್ಲಿ ಕುಳಿತುಕೊಳ್ಳುವುದರಿಂದ ಕಾರನ್ನು ಹಿಂಭಾಗದಿಂದ ಮುಂಭಾಗಕ್ಕೆ ಇಳಿಜಾರಿನ ಸ್ಟೈಲ್‌ನಲ್ಲಿ ವಿನ್ಯಾಸಗೊಳಿಸಲಾಗಿದೆ.

ಎಂಜಿನ್ ಆಯ್ಕೆ: ಕರ್ವ್ ಎಸ್‌ಯುವಿ ಟಾಟಾದ ಹೊಸ 1.2-ಲೀಟರ್ T-GDI ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಪಡೆಯಬಹದು. ಇದು 125 PS ಪವರ್ ಮತ್ತು 225 Nm ಟಾರ್ಕ್ ಉತ್ಪದಿಸುತ್ತದೆ. ಇದರ ಜೊತೆಗೆ ಟಾಟಾ ಈಗ 115 PS ಪವರ್ ಮತ್ತು 260 Nm ಟಾರ್ಕ್ ಉತ್ಪಾದಿಸುವ 1.5-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ನೀಡಲಾಗುವುದು ಎಂದು ಬಹಿರಂಗಪಡಿಸಿದೆ.
ಸದ್ಯಕ್ಕೆ ಡೀಸೆಲ್‌ಗಾಗಿ ಕೇವಲ 6-ಸ್ಪೀಡ್ ಮ್ಯಾನ್ಯುವಲ್ ಅನ್ನು ದೃಢೀಕರಿಸಲಾಗಿದೆ. ಆದರೆ ಆಟೋಮ್ಯಾಟಿಕ್ ಬಗ್ಗೆ ಯಾವುದೇ ಮಾಹಿತಿ ಹೊರಬದ್ದಿಲ್ಲ. ಮತ್ತೊಂದೆಡೆ, ಪೆಟ್ರೋಲ್ ಎಂಜಿನ್ 6-ಸ್ಪೀಡ್ ಮ್ಯಾನುವಲ್ ಅಥವಾ 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಪಡೆಯುವ ನಿರೀಕ್ಷೆಯಿದೆ. ಇವುಗಳ ಜೊತೆಗೆ ಎಲೆಕ್ಟ್ರಿಕ್ Curvv EV ಅನ್ನು ಸಹ ಮಾರಾಟ ಮಾಡಲಾಗುತ್ತದೆ.

ಇಂಟೀರಿಯರ್: ಟಾಟಾ ಕರ್ವ್‌ನ ಒಳಾಂಗಣವು ನೆಕ್ಸಾನ್ ಫೇಸ್‌ಲಿಫ್ಟ್ ಹಾಗೂ ಹೊಸ ಟಾಟಾ ಕಾರುಗಳಲ್ಲಿ ನೋಡಿದಂತೆಯೇ ಇರುತ್ತದೆ. ದೊಡ್ಡ ಟಚ್‌ಸ್ಕ್ರೀನ್ ಹೊಂದಿರುವ ಕನಿಷ್ಠ ಡ್ಯಾಶ್‌ಬೋರ್ಡ್ ವಿನ್ಯಾಸವನ್ನು ಚಿತ್ರಗಳಲ್ಲಿ ಕಾಣಬಹುದು. ಟಚ್-ಸೆನ್ಸಿಟಿವ್ ಎಸಿ ಕಂಟ್ರೋಲ್‌ಗಳು ಇರಲಿದ್ದು, ಹ್ಯಾರಿಯರ್ ಮತ್ತು ಸಫಾರಿಯಲ್ಲಿರುವಂತೆ ಟಾಟಾ ಲೋಗೋ ಹೊಂದಿರುವ ಸ್ಟೀರಿಂಗ್ ವೀಲ್ ಇದೆ.
ವೈಶಿಷ್ಟ್ಯಗಳ ವಿಷಯಕ್ಕೆ ಬಂದರೆ, ನೆಕ್ಸಾನ್, ನೆಕ್ಸಾನ್ ಇವಿನಲ್ಲಿರುವ ಎಲ್ಲವನ್ನೂ ಪಡೆಯಬಹುದು, 12.3-ಇಂಚಿನ ಟಚ್‌ಸ್ಕ್ರೀನ್, ಸಂಪೂರ್ಣ ಡಿಜಿಟಲ್ 10.25-ಇಂಚಿನ ಡ್ರೈವರ್ ಡಿಸ್ಪ್ಲೇ, ಕ್ರೂಸ್ ಕಂಟ್ರೋಲ್, ಕೀಲೆಸ್ ಎಂಟ್ರಿ, 360-ಡಿಗ್ರಿ ಕ್ಯಾಮೆರಾ, ಮುಂಭಾಗದ ವೆಂಟಿಲೇಟೆಡ್ ಸೀಟ್‌ಗಳು, ಫೋನ್ ಚಾರ್ಜರ್, ಪುಶ್-ಬಟನ್ ಸ್ಟಾರ್ಟ್ ಇರಲಿದೆ. ಸುರಕ್ಷತೆಯ ಭಾಗವಾಗಿ ಆರು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಮ್ ಒಳಗೊಂಡಿರಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications