Tata Curvv Vs Citroen Basalt: ಟಾಟಾಗೆ ಸೆಡ್ಡು ಹೊಡೆಯುವ ತಾಕತ್ತಿದೆಯೇ?

ಸಿಟ್ರನ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಬಲವಾದ ಹಿಡಿತವನ್ನು ಸಾಧಿಸಲು ಎದುರುನೋಡುತ್ತಿದೆ. ಹಿಂದೆ ಸಿಟ್ರನ್ ಸಿ-3 ಹ್ಯಾಚ್ ಬ್ಯಾಕ್ ಮತ್ತು ಸಿ-3 ಏರ್‌ಕ್ರಾಸ್ ಎಸ್‌ಯುವಿಗಳನ್ನು ಬಿಡುಗಡೆ ಮಾಡಿ, ಈಗ ಹೊಸ ಹ್ಯಾಚ್‌ಬ್ಯಾಕ್‌ ಕೂಪೆಯನ್ನು ಪರಿಚಯಿಸುವ ಮೂಲಕ ಭಾರತೀಯ ಗ್ರಾಹಕರನ್ನು ಸೆಳೆಯಲು ಸಜ್ಜಾಗಿಬಿಟ್ಟಿದೆ.

ಮೊನ್ನೆಯಷ್ಟೇ ಸಿಟ್ರನ್ ತನ್ನ ಹೊಸ ಮೂರನೇ ವಾಹನವನ್ನು ಸಿ-ಕ್ಯೂಬ್ಡ್ ಕಾರ್ಯತಂತ್ರದ ಅಡಿಯಲ್ಲಿ ಭಾರತಕ್ಕೆ ಬಿಡುಗಡೆ ಮಾಡಲು ಸಜ್ಜಾಗಿರುವುದಾಗಿ ಘೋಷಿಸಿದೆ. ಈ ನಿಟ್ಟಿನಲ್ಲಿ ಹೊಸ ಬಸಾಲ್ಟ್ ವಿಷನ್ ಕೂಪೆ ಎಸ್‌ಯುವಿಯನ್ನು ಬಹಿರಂಗಪಡಿಸಿತು. ಇದು ಸಿಎಂಪಿ ಪ್ಲಾಟ್ ಫಾರ್ಮ್ ಅನ್ನು ಆಧರಿಸಿದ ಸಿಟ್ರನ್‌ನ ಮೂರನೇ ವಾಹನವಾಗಿದೆ. ಇದು ಟಾಟಾ ಕರ್ವ್‌ಗೆ ನೇರ ಪ್ರತಿಸ್ಪರ್ಧಿಯಾಗಲಿದೆ.

Tata Curvv Vs Citroen Basalt

Tata Curvv Vs Citroen Basalt: ಬಸಾಲ್ಟ್ ವಿಷನ್ ಆಕರ್ಷಕ ಇಳಿಜಾರಿನ ರೂಫ್ ಹೊಂದಿರುವ ಕೂಪೆ ಶೈಲಿಯ ಎಸ್‌ಯುವಿಯಾಗಿದೆ. ಟಾಟಾ ಮೋಟಾರ್ಸ್ ಕರ್ವ್‌ನೊಂದಿಗೆ ಅದೇ ಪ್ರಕಾರವನ್ನು ಗುರಿಯಾಗಿಸಿಕೊಂಡಿರುವುದರಿಂದ ಇವೆರಡು ನೇರ ಪ್ರತಿಸ್ಪರ್ಧಿಗಳಾಗಲಿವೆ. ಸಿಟ್ರನ್ ಕೂಪೆ ಎಸ್‌ಯುವಿಯ ಪ್ರೊಡಕ್ಷನ್-ಸ್ಪೆಕ್ ಆವೃತ್ತಿಯು ಇದೀಗ ಬಹಿರಂಗಪಡಿಸಿದ ಬಸಾಲ್ಟ್ ವಿಷನ್‌ಗೆ ತುಂಬಾ ಹತ್ತಿರವಾಗಿರಲಿದೆ.

ವಿನ್ಯಾಸ, ಶೈಲಿ, ಅತ್ಯಾಧುನಿಕತೆ ಮತ್ತು ಉಪಸ್ಥಿತಿಗೆ ಸಂಬಂಧಿಸಿದಂತೆ ಟಾಟಾ ಕರ್ವ್ ಯಾವುದೇ ಸ್ಥಾನವನ್ನು ಬಿಟ್ಟುಕೊಡಲ್ಲ ಎಂಬ ಅಂಶವನ್ನು ಅಲ್ಲಗಳೆಯುವಂತಿಲ್ಲ. ಏಕೆಂದರೆ ಟಾಟಾ ಕರ್ವ್ ಇತ್ತೀಚೆಗೆ ಪರಿಷ್ಕರಿಸಲಾದ ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿಗಳಿಂದ ಹೆಚ್ಚು ಸೆಳೆಯುತ್ತದೆ. ತನ್ನ ಇತರ ಮಾದರಿಗಳಿಂದ ಡಿಸೈನ್ ಅನ್ನು ಎರವಲು ಪಡೆದು ಹೊಸ ಲುಕ್ ನೀಡಿದೆ.

Tata Curvv Vs Citroen Basalt

ಸಿಟ್ರನ್ ಬಸಾಲ್ಟ್ ವಿಷಯಕ್ಕೆ ಬಂದರೆ ಕಡಿಮೆ ಬಂಪರ್‌ನಲ್ಲಿ ಕೆಲವು ಸ್ಟೈಲಿಂಗ್ ಅಂಶಗಳನ್ನು ಹೊರತುಪಡಿಸಿ, ಬಸಾಲ್ಟ್ ಕಾರು ಕೂಡ ಸಿ 3 ಏರ್ ಕ್ರಾಸ್ ನಂತೆಯೇ ಹೆಚ್ಚುಕಡಿಮೆ ಅದೇ ಫ್ಯಾಸಿಯಾವನ್ನು ಪಡೆದಿದೆ. ಆದ್ದರಿಂದ, ಎರಡೂ ಕಾರುಗಳು ತಮ್ಮ ಕುಟುಂಬದ ಡಿಎನ್ಎಗೆ ಅಂಟಿಕೊಂಡಿರುವ ಪರಿಚಿತ ಫ್ಯಾಸಿಯಾವನ್ನು ಹೊಂದಿವೆ. ಬಸಾಲ್ಟ್ ಕ್ವಾಡ್ ಎಲ್ಇಡಿ ಡಿಆರ್ಎಲ್ ಸಿಗ್ನೇಚರ್ ಹೊಂದಿದ್ದರೆ, ಕರ್ವ್ ಕನೆಕ್ಟೆಡ್ ತ್ರೀ ಪೀಸ್ ಎಲ್ಇಡಿ ಡಿಆರ್ಎಲ್ ಸಿಗ್ನೇಚರ್ ಹೊಂದಿದೆ.

ಪ್ರೊಫೈಲ್ ನಲ್ಲಿ, ಎರಡೂ ಕಾರುಗಳು ಒಂದೇ ರೀತಿಯ ಕೂಪೆ ಇಳಿಜಾರಿನ ರೂಫ್ ಲೈನ್ ವಿನ್ಯಾಸವನ್ನು ಹೊಂದಿವೆ, ಆದರೆ ಕರ್ವ್ ತನ್ನ ಅವಳಿ ಸ್ಪಾಯ್ಲರ್ ಪರಿಣಾಮದೊಂದಿಗೆ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಕರ್ವ್ವ್ ಫ್ಲಶ್ ಡೋರ್ ಹ್ಯಾಂಡಲ್‌ಗಳನ್ನು ಹೊಂದಿದ್ದರೇ, ಬಸಾಲ್ಟ್ ಇಲ್ಲಿ ಪುಲ್-ಅಪ್ ಮಾದರಿಯ ಡೋರ್ ಹ್ಯಾಂಡಲ್ ಗಳೊಂದಿಗೆ ಬರುತ್ತದೆ.

ಕರ್ವ್‌ನ ವೀಲ್ ಡಿಸೈನ್ ಹೆಚ್ಚು ಹಿತಕರವಾಗಿದ್ದರೇ, ಬಸಾಲ್ಟ್ ಬ್ಲಾಕ್‌ ವೀಲ್‌ಗಳನ್ನು ಹೊಂದಿದೆ. ಸಿಟ್ರನ್ ಬ್ಲಾಕ್ ಎ-ಪಿಲ್ಲರ್‌ಗಳೊಂದಿಗೆ ಫ್ಲೋಟಿಂಗ್ ರೂಫ್ ನೀಡಿದೆ, ಇದು ಕರ್ವ್‌ನಲ್ಲಿ ಕಂಡುಬರುವುದಿಲ್ಲ. ಹಿಂಭಾಗದಲ್ಲಿ, ಕರ್ವ್ ಕನೆಕ್ಟೆಡ್ ಎಲ್ಇಡಿ ಟೈಲ್ ಲೈಟ್‌ಗಳನ್ನು ಹೊಂದಿದ್ದರೇ, ಬಸಾಲ್ಟ್ ಎಲ್ಇಡಿಗಳೊಂದಿಗೆ ರ್ಯಾಪ್-ಅರೌಂಡ್ ಟೈಲ್ ಲೈಟ್‌ಗಳನ್ನು ಹೊಂದಿದೆ. ಎರಡೂ ಕಾರುಗಳು ಸುತ್ತಲೂ ಬಾಡಿ ಕ್ಲಾಡಿಂಗ್ ಅನ್ನು ಹೊಂದಿವೆ.

ಇಂಟೀರಿಯರ್: ಸಿಟ್ರನ್ ಬಸಾಲ್ಟ್ ಮತ್ತು ಟಾಟಾ ಕರ್ವ್ ಎರಡರ ಒಳಾಂಗಣವನ್ನು ಅಧಿಕೃತವಾಗಿ ಬಹಿರಂಗಪಡಿಸಲಾಗಿಲ್ಲ. ಬಸಾಲ್ಟ್ ಸಿ-3 ಏರ್ ಕ್ರಾಸ್ ನೊಂದಿಗೆ ಬಹಳಷ್ಟು ಅಂಶಗಳನ್ನು ಹಂಚಿಕೊಳ್ಳಬಹುದು. ಹಾಗೆಯೇ ಟಾಟಾ ಕರ್ವ್' ನೆಕ್ಸಾನ್ ನೊಂದಿಗೆ ಸಾಕಷ್ಟು ಅಂಶಗಳನ್ನು ಹಂಚಿಕೊಳ್ಳುತ್ತದೆ. ಈ ಕಾರುಗಳ ಬಗ್ಗೆ ಹೆಚ್ಚಿನ ಮಾಹಿತಿ ಮುಂಬರುವ ತಿಂಗಳುಗಳಲ್ಲಿ ಬಹಿರಂಗಪಡಿಸಲಾಗುವುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, March 29, 2024, 12:40 [IST]
English summary
Tata curvv vs citroen basalt design features engine comparison
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+