ಹೊಸ ಟಾಟಾ ಹ್ಯಾರಿಯರ್ ಎಸ್‍ಯುವಿಗೆ ಭಾರೀ ಡಿಮ್ಯಾಂಡ್: ಮುಗಿಬಿದ್ದು ಖರೀದಿಸುತ್ತಿರುವ ಗ್ರಾಹಕರು!
ಟಾಟಾ ಮೋಟಾರ್ಸ್ (Tata Motors) ವಿಶ್ವಾಸಾರ್ಹ ಕಾರು ತಯಾರಕ ಕಂಪನಿಯಾಗಿ ಖ್ಯಾತಿಗಳಿಸಿದ್ದು, ಹೊರ - ಒಳಭಾಗದಲ್ಲಿ ಸಾಕಷ್ಟು ನವೀನ ಬದಲಾವಣೆ ಹಾಗೂ ವೈಶಿಷ್ಟ್ಯಗಳನ್ನು ಪಡೆದಿರುವ ಫೇಸ್‌ಲಿಫ್ಟ್ ಹ್ಯಾರಿಯರ್ (Harrier facelift) ಎಸ್‌ಯುವಿಯನ್ನು ಮಾರುಕಟ್ಟೆಗೆ ಪರಿಚಯಿಸಿತು. ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್ ಎಸ್‍ಯುವಿಗೆ ಭಾರತದಲ್ಲಿ ಭಾರೀ ಬೇಡಿಕೆಯನ್ನು ಪಡೆದುಕೊಂಡಿದೆ.
ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್ (Tata Harrier facelift) ಎಸ್‌ಯುವ ರೂಪಾಂತರಗಳಿಗೆ ಅನುಗುಣವಾಗಿ ರೂ.15.49 ಲಕ್ಷದಿಂದ ರೂ.24.49 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ. ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್ ಎಸ್‍ಯುವಿಯ ಹೊಸ ನವೀಕರಣಗಳನ್ನು ಪಡೆದುಕೊಂಡಿದೆ. ಈ ಹೊಸ ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್ ಎಸ್‍ಯುವಿಗೆ ಸಾಕಷ್ಟು ಬೇಡಿಕೆಯನ್ನು ಹೊಂದಿರುವುದರಿಂದ ಈ ಎಸ್‍ಯುವಿಗೆ ಕಾಯುವ ಅವಧಿಯನ್ನು ಹೊಂದಿದೆ.

ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್ ಎಸ್‍ಯುವಿಗೆ ಬುಕಿಂಗ್ ದಿನದಿಂದ ನಾಲ್ಕರಿಂದ ಎಂಟರಿಂದ 10 ವಾರಗಳವರೆಗೆ ಕಾಯುವ ಅವಧಿಯನ್ನು ಹೊಂದಿದೆ. ಇದು ಮುಂಬೈನಲ್ಲಿ ಮಾಡಿದ ಬುಕಿಂಗ್‌ಗಳಿಗೆ ಅನ್ವಯಿಸುತ್ತದೆ ಮತ್ತು ರೂಪಾಂತರ, ಬಣ್ಣ ಮತ್ತು ಡೀಲರ್‌ಶಿಪ್ ಅನ್ನು ಅವಲಂಬಿಸಿ ಬದಲಾಗಬಹುದು. ಆಸಕ್ತ ಖರೀದಿದಾರರು ಇನ್ನಷ್ಟು ತಿಳಿದುಕೊಳ್ಳಲು ತಮ್ಮ ಹತ್ತಿರದ ಡೀಲರ್‌ಶಿಪ್ಗೆ ಭೇಟಿ ಮಾಡಿ. ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್ ಎಸ್‍ಯುವಿಯ ವಿನ್ಯಾಸದಲ್ಲಿ ಹಲವು ಬದಲಾವಣೆಗಳನ್ನು ಪಡೆದುಕೊಂಡಿದೆ.
ಇದರ ಹಿಂದಿನ ಮಾದರಿಗೆ ಹೋಲಿಸಿದರೆ, ಹೊಸ ಕಾರು, ಪ್ರತಿಯೊಬ್ಬರನ್ನು ಆಕರ್ಷಿಸುವ ಡಿಸೈನ್ ಹೊಂದಿದೆ. ಮುಂಭಾಗದಲ್ಲಿ ಹಲವು ನವೀಕರಣಗಳನ್ನು ಒಳಗೊಂಡಿದ್ದು, ಹೊಸದಾದ ಗ್ರಿಲ್, ಸ್ಪ್ಲಿಟ್ ಹೆಡ್‌ಲೈಟ್ ಪಡೆದಿದೆ. ಜೊತೆಗೆ ಗ್ರಿಲ್ ಮೇಲ್ಭಾಗ ಫುಲ್-ವಿಡ್ತ್ (ಅಗಲ) ಎಲ್ಇಡಿ ಲೈಟ್ ಬಾರ್ ಹೊಂದಿದೆ. ಇದರೊಂದಿಗೆ ಬಂಪರ್ ಕೂಡ ಹೊಸದಾಗಿದ್ದು, ಸೈಡ್ ಪ್ರೊಫೈಲ್‌ನಲ್ಲಿ ಹ್ಯಾರಿಯರ್ ಫೇಸ್‌ಲಿಫ್ಟ್ ಅಷ್ಟಾಗಿ ಬದಲಾವಣೆ ಪಡೆದಿಲ್ಲ. 18 ಹಾಗೂ 19 ಇಂಚಿನ ಅಲಾಯ್ ವೀಲ್ಸ್ ಅನ್ನು ಹೊಂದಿದೆ.

ಇನ್ನು ಹ್ಯಾರಿಯರ್ ಫೇಸ್‌ಲಿಫ್ಟ್ ಹಿಂಭಾಗ ಹಲವು ಹೊಸತನವನ್ನು ಹೊಂದಿದೆ. ನವೀಕರಿಸಿದ ಬಂಪರ್ ಹಾಗೂ ಎಲ್ಇಡಿ ಲೈಟಿಂಗ್ ಅನ್ನು ಒಳಗೊಂಡಿದೆ. ಇದರ ಒಟ್ಟಾರೆ ವಿನ್ಯಾಸ ಕಳೆದ ಜನವರಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಹ್ಯಾರಿಯರ್ ಇವಿ ಮಾದರಿಗೆ ಹೋಲಿಕೆಯಾಗುತ್ತದೆ. ಇದರ ಒಳಭಾಗ ಮತ್ತು ಫೀಚಸ್: ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್ ಒಳಭಾಗವು ಹಲವು ಬದಲಾವಣೆಗಳಾಗಿವೆ. ರೂಪಾಂತರಗಳಿಗೆ ಅನುಗುಣವಾಗಿ 10.25 - ಇಂಚು ಅಥವಾ 12.3 - ಇಂಚಿನ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್ ಹೊಂದಿದೆ.
ಈ ಎಸ್‍ಯುವಿಯ ಎಲ್ಇಡಿ ಅಂಬಿಯೇಟ್ ಲೈಟಿಂಗ್, 10.25 - ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಟಾಟಾ ಲೋಗೋದೊಂದಿಗೆ ಹೊಸದಾದ 4- ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಹೊಂದಿದೆ. ಇದರೊಂದಿಗೆ ಡ್ಯುಯಲ್ - ಝೋನ್ ಕ್ಲೈಮೇಟ್ ಕಂಟ್ರೋಲ್, 10 - ಸ್ಪೀಕರ್ ಜೆಬಿಎಲ್ - ಟ್ಯೂನ್ಡ್ ಸೌಂಡ್ ಸಿಸ್ಟಮ್, 360 - ಡಿಗ್ರಿ ಕ್ಯಾಮೆರಾ, ಸನ್‌ರೂಫ್ ಸೇರಿದಂತೆ ಹತ್ತಾರು ಫೀಚರ್ಸ್ ಗಳನ್ನು ಹೊಂದಿವೆ.

ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್ ಎಸ್‌ಯುವಿ ಎಂಜಿನ್ ಪರ್ಫಾಮೆನ್ಸ್ ಬಗ್ಗೆ ಹೇಳುವುದಾದರೆ, ಇದು 2.0 - ಲೀಟರ್ ಡೀಸೆಲ್ ಎಂಜಿನ್ ಒಳಗೊಂಡಿದ್ದು, 170 hp ಗರಿಷ್ಠ ಪವರ್ ಹಾಗೂ 350 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ ರೂಪಾಂತರಗಳ ಅನ್ವಯ 6 - ಸ್ವೀಡ್ ಮ್ಯಾನುವಲ್ ಅಥವಾ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗಲಿದೆ. ಈ ಹೊಸ ಟಾಟಾ ಹ್ಯಾರಿಯರ್ ಇಕೋ (Eco), ಸಿಟಿ (City) ಮತ್ತು ಸ್ಪೋರ್ಟ್ (Sports) ಎಂಬ ಡ್ರೈವಿಂಗ್ ಮೋಡ್ ಆಯ್ಕೆಯನ್ನು ಪಡೆದಿದೆ.
ಈ ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್ ಮಾದರಿಯು ಹುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್, ಎಂಜಿ ಹೆಕ್ಟರ್ ಮತ್ತು ಜೀಪ್ ಕಂಪಾಸ್ ಪ್ರಬಲ ಪ್ರತಿಸ್ಪರ್ಧಿಯಾಗಿದ್ದು, ಈಗಾಗಲೇ ಬುಕ್ಕಿಂಗ್ ಶುರುವಾಗಿದೆ. ಈ ಎಸ್‍ಯುವಿಯು ಲೂನಾರ್ ವೈಟ್, ಪೆಬಲ್ ಗ್ರೇ, ಸನ್ಲೈಟ್ ಯೆಲ್ಲೋ ಮತ್ತು ಕೊರಲ್ ರೆಡ್ ಸೇರಿದಂತೆ 6 ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಲಭ್ಯವಿರುತ್ತದೆ.
ಈ ಹ್ಯಾರಿಯರ್ ಸೇಫ್ಟಿ ದೃಷ್ಟಿಯಿಂದ ಅತ್ಯುತ್ತಮ ಕಾರೆಂದು ಗುರುತಿಸಿಕೊಂಡಿದ್ದು, ಗ್ಲೋಬಲ್ ಎನ್‌ಸಿಎಪಿ (Global NCAP) ಪರೀಕ್ಷೆಯ ವಯಸ್ಕರ ಸುರಕ್ಷತೆ ವಿಭಾಗದಲ್ಲಿ 34ಕ್ಕೆ 33.05 ಅಂಕ ಗಳಿಸುವ ಮೂಲಕ 5 - ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿದೆ. ಸುರಕ್ಷತೆ ಸಲುವಾಗಿ 7 ಏರ್‌ಬ್ಯಾಗ್, ADAS, ಹಿಲ್ - ಹೋಲ್ಡ್ ಕಂಟ್ರೋಲ್, 3 - ಪಾಯಿಂಟ್ ಸೀಟ್ ಬೆಲ್ಟ್ ರಿಮೆಂಡರ್ ಒಳಗೊಂಡಂತೆ ವಿವಿಧ ಫೀಚರ್ಸ್ ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications