ಟಾಟಾ, ಹ್ಯುಂಡೈ, ಸಿಟ್ರನ್ ಕಂಪನಿಗಳಿಂದ 3 ನವೀಕೃತ ಹ್ಯಾಚ್‌ಬ್ಯಾಕ್‌ಗಳು ಬಿಡುಗಡೆಗೆ ಸಜ್ಜು!
ಟಾಟಾ, ಹ್ಯುಂಡೈ, ಸಿಟ್ರನ್ ಕೆಲವೇ ತಿಂಗಳುಗಳಲ್ಲಿ ಹೊಸ ಹ್ಯಾಚ್‌ಬ್ಯಾಕ್‌ಗಳನ್ನು(ಅಪ್‌ಡೇಟೆಡ್ ಆವೃತ್ತಿಗಳು)ಹೊರತರುವ ಸಾಧ್ಯತೆಯಿದೆ. ಇದರಲ್ಲಿ ಟಾಟಾ ಆಲ್ಟ್ರೋಜ್ ರೇಸರ್ ಬಿಡುಗಡೆ ದಿನಾಂಕ ಘೋಷಿಸಲಾಗಿದೆಯಾದರೂ, ಹ್ಯುಂಡೈ i20 ಮತ್ತು ಸಿಟ್ರನ್ C3 AT ಬಿಡುಗಡೆಯ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ. ಏನೇ ಆಗಲಿ, ಈ ಮೂರು ಕಾರುಗಳ ಪ್ರಮುಖ ಮಾಹಿತಿಯನ್ನು ನಿಮಗಾಗಿ ತಂದಿದ್ದೇವೆ.
1. ಹ್ಯುಂಡೈ i20 Nಲೈನ್ ಫೇಸ್ ಲಿಫ್ಟ್: ಹ್ಯುಂಡೈ ಇತ್ತೀಚೆಗೆ ಯುರೋಪ್‌ನಲ್ಲಿ ಮಾರಾಟವಾಗುವ ತನ್ನ i20 Nಲೈನ್ನ ಹೊರಭಾಗ ಮತ್ತು ಒಳಾಂಗಣವನ್ನು ಅಪ್‌ಡೇಟ್ ಮಾಡಿದೆ. ಹೊಸದಾಗಿ ವಿನ್ಯಾಸಗೊಳಿಸಲಾದ 17 ಇಂಚಿನ ಅಲಾಯ್ ವೀಲ್‌ಗಳು, ನವೀಕರಿಸಿದ ಫ್ರಂಟ್ ರೇಡಿಯೇಟರ್ ಗ್ರಿಲ್ ಸೇರಿದಂತೆ ಕೆಲವನ್ನು ಹೊಸದಾಗಿ ವಿನ್ಯಾಸಗೊಳಿಸಲಾಗಿದೆ. ಹೆಚ್ಚುವರಿಯಾಗಿ ಇದು ನಾಲ್ಕು ಹೊಸ ಬಣ್ಣಗಳನ್ನು ಕೂಡ ಪಡೆದುಕೊಂಡಿದೆ. ಹ್ಯುಂಡೈ ಭಾರತಕ್ಕೂ ತನ್ನ i20 Nಲೈನ್ ಹೊಸ ಆವೃತ್ತಿಯನ್ನು ಪರಿಚಯಿಸಲು ನೋಡುತ್ತಿದೆ. ಮೂಲಗಳ ಪ್ರಕಾರ ಮುಂದಿನ ಕೆಲವೇ ದಿನಗಳಲ್ಲಿ ನವೀಕರಿಸಿದ i20 Nಲೈನ್ ಅನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.

2. ಟಾಟಾ ಆಲ್ಟ್ರೋಜ್ ರೇಸರ್: ಟಾಟಾ ಮೋಟಾರ್ಸ್ ಆಲ್ಟ್ರೋಜ್ ರೇಸರ್ ಅನ್ನು ಪರ್ಫಾಮೆನ್ಸ್ ಆಧಾರಿತ ಪ್ರೀಮಿಯಂ ಹ್ಯಾಚ್ ಬ್ಯಾಕ್ ಆಗಿ ಮುಂದಿನ ತಿಂಗಳು ಬಿಡುಗಡೆ ಮಾಡಲಿದೆ. ಇದು ಆಲ್ಟ್ರೋಜ್ ಶ್ರೇಣಿಯಲ್ಲಿ ಅಗ್ರಸ್ಥಾನವನ್ನು ಆಕ್ರಮಿಸಲು ಸಜ್ಜಾಗಿದೆ, ಹ್ಯುಂಡೈ i20 Nಲೈನ್ ನಂತಹ ಮಾದರಿಗಳೊಂದಿಗೆ ನೇರವಾಗಿ ಸ್ಪರ್ಧಿಸಲಿದೆ. ಬಾಹ್ಯ ಮತ್ತು ಒಳಾಂಗಣವು ಸಾಮಾನ್ಯ ಆಲ್ಟ್ರೋಜ್‌ಗಿಂತ ಬಿನ್ನವಾಗಿರಲು ಹಲವು ಅಪ್‌ಡೇಟ್‌ಗಳನ್ನು ನೀಡಲಾಗಿದೆ.
ಮುಂಬರಲಿರುವ ಹೊಸ ಟಾಟಾ ಆಲ್ಟ್ರೋಜ್ ರೇಸರ್ ಬಾನೆಟ್ ಅಡಿಯಲ್ಲಿ, ಆಲ್ಟ್ರೋಜ್ ರೇಸರ್ ನೆಕ್ಸಾನ್ ಕಾಂಪ್ಯಾಕ್ಟ್ ಎಸ್‌ಯುವಿಯಲ್ಲಿ ಕಂಡುಬರುವ 1.2 ಲೀಟರ್ 3 - ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 120 ಬಿಹೆಚ್‌ಪಿ ಪವರ್ ಹಾಗೂ 170 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಟಾಟಾ ಆಲ್ಟ್ರೋಜ್ ರೇಸರ್ ವೈಶಿಷ್ಟ್ಯಗಳು: ವೈರ್‌ಲೆಸ್ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಂಪರ್ಕದೊಂದಿಗೆ ಹೊಸ 10.25 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆರು ಏರ್ ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಚಾಲಕ ಮತ್ತು ಮುಂಭಾಗದ ಪ್ರಯಾಣಿಕರಿಗೆ ವೆಂಟಿಲೇಟೆಡ್ ಸೀಟ್‌ಗಳು, 360 ಡಿಗ್ರಿ ಕ್ಯಾಮೆರಾ ಸಿಸ್ಟಮ್, ಹೆಡ್ಸ್ ಅಪ್ ಡಿಸ್‌ಪ್ಲೇ, ವಾಯ್ಸ್ ಅಸಿಸ್ಟೆಡ್ ಸನ್ ರೂಫ್, ಲೆದರ್ ಸೀಟ್ ಅಪ್ ಹೋಲ್ಸ್ಟರಿ ಜೊತೆಗೆ ಕಾಂಟ್ರಾಸ್ಟ್ ಸ್ಟಿಚಿಂಗ್ ಸೇರಿದಂತೆ ರೇಸರ್ ಬ್ಯಾಡ್ಜಿಂಗ್ ಇತ್ಯಾದಿಗಳನ್ನು ಮುಂಬರಲಿರುವ ಹೊಸ ಟಾಟಾ ಆಲ್ಟ್ರೋಜ್ ರೇಸರ್ ಒಳಗೊಂಡಿದೆ.
3. ಸಿಟ್ರೋನ್ C3 ಟರ್ಬೊ AT: ಸಿಟ್ರನ್ ಪ್ರಸ್ತುತ C3 ಏರ್‌ಕ್ರಾಸ್ ನಲ್ಲಿ ಕಾಣಿಸಿಕೊಂಡಿರುವ 6 - ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅನ್ನು ಮುಂದಿನ ತಿಂಗಳು C-3 ಕಾಂಪ್ಯಾಕ್ಟ್ ಹ್ಯಾಚ್ ಬ್ಯಾಕ್‌ನ ಶ್ರೇಣಿಗೆ ಪರಿಚಯಿಸಲು ಸಜ್ಜಾಗುತ್ತಿದೆ. ಈ ಟ್ರಾನ್ಸ್ ಮಿಷನ್ ಆಯ್ಕೆಯನ್ನು 1.2 ಲೀಟರ್ 3 ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೆ ಪ್ರತ್ಯೇಕವಾಗಿ ಜೋಡಿಸಲಾಗುತ್ತದೆ.

ಈ ಹೊಸ ಮುಂಬರಲಿರುವ ಸಿಟ್ರೋನ್ C3 ಟರ್ಬೊ AT ಆವೃತ್ತಿಯು ತನ್ನ MT ಗಿಂತ ಸುಮಾರು 1.20 ಲಕ್ಷ ರೂ.ಗಳ ಬೆಲೆ ಹೆಚ್ಚಳದೊಂದಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಹೊಸ ಟ್ರಾನ್ಸ್‌ಮಿಷನ್ ಜೊತೆಗೆ, ಹೊಸ ವೈಶಿಷ್ಟ್ಯಗಳು ಮತ್ತು ಸುರಕ್ಷತಾ ತಂತ್ರಜ್ಞಾನವನ್ನು ಪರಿಚಯಿಸುವ ಸಾಧ್ಯತೆಯೂ ಇದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








