ತಿಂಗಳಾಂತ್ಯಕ್ಕೆ ಮೂರೇ ದಿನ ಬಾಕಿ: ಮಾರ್ಚ್‌ನಲ್ಲಿ ಈ ನಾಲ್ಕು ಹೊಸ ಕಾರುಗಳ ಬಿಡುಗಡೆ
ಭಾರತದಲ್ಲಿ ನಾಲ್ಕು ಹೊಸ ಕಾರುಗಳ ಬಿಡುಗಡೆಯನ್ನು ಮಾರ್ಚ್‌ಗೆ ನಿಗದಿಪಡಿಸಲಾಗಿದೆ. ನೀವು ಹೊಸ ಕಾರುಗಳನ್ನು ಖರೀದಿಸಲು ಯೋಜಿಸುತ್ತಿದ್ದರೆ, ಮಾರ್ಚ್ ತಿಂಗಳವರೆಗೆ ಕಾದರೆ ಹೊಸ ಕಾರುಗಳನ್ನು ಪರಿಶೀಲಿಸಬಹುದು. ಹಾಗದ್ರೆ ಮುಂದಿನ ತಿಂಗಳು ಬಿಡುಗಡೆಗೆ ಸಜ್ಜಾಗಿರುವ ಆ ನಾಲ್ಕು ಕಾರುಗಳು ಯಾವುವು ಎಂಬ ವಿವರಗಳನ್ನು ಇಲ್ಲಿ ನೋಡೊಣ.
ಬಿವೈಡಿ ಸೀಲ್ ಇವಿ: ಚೀನಾ ಮೂಲದ ಬಿವೈಡಿ ತನ್ನ ಮೂರನೇ ಎಲೆಕ್ಟ್ರಿಕ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿಬಿಟ್ಟಿದೆ. ಈ ಹೊಸ ಕಾರಿನ ಮೂಲಕ ಭಾರತದಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸಿಕೊಳ್ಳಲು ನೋಡುತ್ತಿದೆ. ಈ ಸೂಪರ್ ಎಲೆಕ್ಟ್ರಿಕ್ ಕಾರು ಅಂತರಾಷ್ಟ್ರೀಯ ಮಟ್ಟದಲ್ಲಿ ಟೆಸ್ಲಾ ಮಾಡಲ್ 3 ನೊಂದಿಗೆ ಸ್ಪರ್ಧಿಸುತ್ತದೆ.

ಬಿವೈಡಿ ಸೀಲ್ ಇವಿ ಸಂಪರ್ಣ ಚಾರ್ಜ್‌ನಲ್ಲಿ ಬರೋಬ್ಬರಿ 570 ಕಿ.ಮೀ ರೇಂಜ್ ನೀಡುತ್ತದೆ. ಈ ಪ್ರೀಮಿಯಂ ಕಾರು ಅದ್ದೂರಿ ಫೀಚರ್‌ಗಳನ್ನು ಒಳಗೊಂಡಿದ್ದು, ಬಿಡುಗಡೆ ಬಳಿಕ ಹೆಚ್ಚಿನ ಮಾಹಿತಿ ಹೊರಬೀಳಲಿದೆ. ಮಾರ್ಚ್ 5 ರಂದು ಬಿಡುಗಡೆಯಾಗಲಿರುವ ಈ ಹೊಸ ಕಾರು 50 ಲಕ್ಷ ಬೆಲೆಯಿರಬಹುದು ಎಂದು ನಿರೀಕ್ಷಿಸಲಾಗಿದೆ.
ಹ್ಯುಂಡೈ ಕ್ರೆಟಾ N ಲೈನ್: ಹ್ಯುಂಡೈ ಶೀಘ್ರದಲ್ಲೇ ತನ್ನ ಕ್ರೆಟಾದ ಎನ್‌ಲೈನ್ ಆವೃತ್ತಿಯನ್ನು ನವೀಕರಿಸಿ ಬಿಡುಗಡೆ ಮಾಡಲಿದೆ. ಮೂಲಗಳ ಪ್ರಕಾರ ಮಾರ್ಚ್ 11 ರಂದು ಹೊಸ ಕ್ರೆಟಾ ಎನ್‌ಲೈನ್ ಬಿಡುಗಡೆಯಾಗಲಿದೆ. ಈ ಹೊಸ ಕಾರು ಹಳೆಯ ಕ್ರೆಟಾಗಿಂತ ಹೆಚ್ಚಿನ ಪರ್ಫಾಮೆನ್ಸ್ ನೀಡಲಿದ್ದು, ಕಂಪನಿಯು ಉತ್ತಮ ಕಾರ್ಯಕ್ಷಮತೆಯ ವಾಹನಗಳನ್ನು ಬಯಸುವ ಕಾರು ಉತ್ಸಾಹಿಗಳನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ.

ಈ ಕಾರು 1.5 ಲೀ. ಟರ್ಬೊ ಪೆಟ್ರೋಲ್ ಎಂಜಿನ್ ಹೊಂದಿದ್ದು, 158 bhp ಪವರ್ ಹಾಗೂ 253 Nm ಟಾರ್ಕ್ ಉತ್ಪಾದಿಸುತ್ತದೆ. ಸಸ್ಪೆಂಷನ್ ಮತ್ತು ಇತರ ಅಂಶಗಳು ಸಾಮಾನ್ಯ ಕ್ರೆಟಾದಂತೆಯೇ ಇದ್ದರೂ, ಎನ್ ಲೈನ್ ನವೀಕರಿಸಿದ ಗ್ರಿಲ್ ಮತ್ತು ಬಂಪರ್ ಗಳೊಂದಿಗೆ ಹೆಚ್ಚು ಆಕರ್ಷಕ ಹೊರಭಾಗವನ್ನು ಹೊಂದಿರುತ್ತದೆ.
ಟಾಟಾ ನೆಕ್ಸಾನ್ ಡಾರ್ಕ್ ಎಡಿಷನ್: ಟಾಟಾ ಮೋಟಾರ್ಸ್ ಈಗ 2024 ನೆಕ್ಸಾನ್ ಡಾರ್ಕ್ ಎಡಿಷನ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ತರುತ್ತಿದೆ. ಹೆಚ್ಚು ಆಕರ್ಷಕ ವೈಶಿಷ್ಟ್ಯಗಳೊಂದಿಗೆ, ಕಾರನ್ನು ಮಾರ್ಚ್ ಆರಂಭದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಟಾಟಾ ನೆಕ್ಸಾನ್ ತನ್ನ ಹೆಚ್ಚಿನ ಸುರಕ್ಷತಾ ರೇಟಿಂಗ್ ಗೆ ಹೆಸರುವಾಸಿಯಾಗಿದ್ದು, ಐದು ಸ್ಟಾರ್ ರೇಟಿಂಗ್ ಗಳಿಸಿದೆ.

ಡಾರ್ಕ್ ಎಡಿಷನ್ ನ ಬೆಲೆಯು ಸಾಮಾನ್ಯ ಮಾದರಿಗಳಿಗಿಂತ ರೂ.30,000 ಹೆಚ್ಚಾಗುವ ನಿರೀಕ್ಷೆಯಿದೆ. ಸಾಮಾನ್ಯ ಟಾಟಾ ನೆಕ್ಸಾನ್‌ನ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.8.14 ಲಕ್ಷಗಳಾಗಿದೆ. ಪ್ರಸ್ತುತ, ಟಾಟಾ ನೆಕ್ಸಾನ್ ಪೆಟ್ರೋಲ್ ಮತ್ತು ಡೀಸೆಲ್ ರೂಪಾಂತರಗಳಲ್ಲಿ ಲಭ್ಯವಿದ್ದು, ಸಿಎನ್ ಜಿ ಆಯ್ಕೆಯನ್ನು ಸಹ ಶೀಘ್ರದಲ್ಲೇ ನಿರೀಕ್ಷಿಸಲಾಗಿದೆ.
ಮಹೀಂದ್ರಾ ಎಕ್ಸ್ ಯುವಿ 300 ಫೇಸ್ ಲಿಫ್ಟ್: ಮಹೀಂದ್ರಾ ಈ ಕಾರಿಗಾಗಿ ವ್ಯಾಪಕವಾದ ರೋಡ್ ಟೆಸ್ಟಿಂಗ್ ನಡೆಸುತ್ತಿದ್ದು, ಎಕ್ಸ್ ಯುವಿ 300 ಅಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಮಹೀಂದ್ರಾ ಎಕ್ಸ್ ಯುವಿ 300 ಶೀಘ್ರದಲ್ಲೇ ಫೇಸ್ ಲಿಫ್ಟ್ ಆಗಿ ಬಿಡುಗಡೆಯಾಗಲಿದೆ. ಅಧಿಕೃತ ಪ್ರಕಟಣೆಯನ್ನು ಇನ್ನೂ ಮಾಡಲಾಗಿಲ್ಲವಾದರೂ, ಮುಂದಿನ ಕೆಲವು ವಾರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಮಹೀಂದ್ರಾ ಎಕ್ಸ್ ಯುವಿ 300 ಎಸ್ ಯುವಿಯ ಮುಂಬರುವ ಫೇಸ್ ಲಿಫ್ಟ್ ಆವೃತ್ತಿಯು ಬಾಹ್ಯ ನೋಟ ಮತ್ತು ವೈಶಿಷ್ಟ್ಯಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಪಡೆಯುವ ಭರವಸೆಯಿದೆ, ಇದು ಸಂಭಾವ್ಯ ಖರೀದಿದಾರರಿಗೆ ಇನ್ನಷ್ಟು ಆಕರ್ಷಕವಾಗಿದೆ. ಬೆಲೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ, ಈಗಿರುವ ಮಾದರಿಗಿಂತ ತುಸು ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ.


Click it and Unblock the Notifications








