ಟಾಟಾ ಗ್ರಾಹಕರಿಗೆ ಸಿಹಿಸುದ್ದಿ: ಬರೋಬ್ಬರಿ 1 ಲಕ್ಷ ರೂ. ಡಿಸ್ಕೌಂಟ್
ಟಾಟಾ ಮೋಟಾರ್ಸ್ 2024ರ ಎರಡನೇ ತಿಂಗಳಲ್ಲಿ, ತನ್ನ ಅನೇಕ ಕಾರುಗಳಿಗೆ ವಿವಿಧ ಕೊಡುಗೆಗಳು ಮತ್ತು ರಿಯಾಯಿತಿ ಡೀಲ್‌ಗಳನ್ನು ಘೋಷಿಸಿದೆ. ಫೆಬ್ರವರಿ 2024 ರಲ್ಲಿ, ಟಾಟಾ ಭಾರತದಲ್ಲಿ ನೆಕ್ಸಾನ್ ಇವಿಗೆ 1 ಲಕ್ಷ ರೂ.ಗಳ ಗರಿಷ್ಠ ರಿಯಾಯಿತಿಯನ್ನು ನೀಡುತ್ತಿದೆ. ಈ ಕುರಿತ ಹೆಚ್ಚಿನ ವಿವರಗಳನ್ನು ಕೆಳಗೆ ನೋಡೋಣ.
ವಿಶೇಷ ರಿಯಾಯಿತಿ ವಿವರಗಳು: ಟಾಟಾ ಟಿಗೋರ್ ಸೆಡಾನ್ ಈ ತಿಂಗಳು 45,000 ರೂ.ಗಳವರೆಗೆ ನಗದು ರಿಯಾಯಿತಿ ಮತ್ತು 15,000 ರೂ. ವಿನಿಮಯ ಬೋನಸ್ ಸೇರಿದಂತೆ ಒಟ್ಟು 60,000 ರೂ. ಪ್ರಯೋಜನಗಳನ್ನು ಒಳಗೊಂಡಿದೆ. ಇನ್ನು ಎಂಟ್ರಿ ಲೆವೆಲ್ ಟಾಟಾ ಟಿಯಾಗೊ ಹ್ಯಾಚ್ ಬ್ಯಾಕ್ 40,000 ರೂ.ಗಳವರೆಗೆ ನಗದು ರಿಯಾಯಿತಿ ಮತ್ತು 15,000 ರೂ.ಗಳವರೆಗೆ ವಿನಿಮಯ ಬೋನಸ್ ಸೇರಿದಂತೆ ಒಟ್ಟು 55,000 ರೂ. ಪ್ರಯೋಜನಗಳನ್ನು ಒಳಗೊಂಡಿದೆ.

ಈ ಎರಡೂ ಮಾದರಿಗಳನ್ನು ಸಿಂಗಲ್ ಮತ್ತು ಟ್ವಿನ್ ಸಿಲಿಂಡರ್ ಸಿಎನ್‌ಜಿ ಆಯ್ಕೆಯೊಂದಿಗೆ ಮಾರಾಟ ಮಾಡಲಾಗುತ್ತದೆ. ಸಿಂಗಲ್ ಸಿಲಿಂಡರ್ ಟಾಟಾ ಟಿಯಾಗೊ ಸಿಎನ್‌ಜಿ ಮತ್ತು ಟಿಗೋರ್ ಸಿಎನ್‌ಜಿಗಳನ್ನು 60,000 ರೂ.ಗಳವರೆಗೆ ನಗದು ರಿಯಾಯಿತಿ ಮತ್ತು ತಲಾ 15,000 ರೂ.ಗಳ ವಿನಿಮಯ ಬೋನಸ್ ನೊಂದಿಗೆ ಮಾರಾಟ ಮಾಡಲಾಗುತ್ತಿದೆ.
ಟ್ವಿನ್ ಸಿಲಿಂಡರ್ ಟಿಯಾಗೊ ಸಿಎನ್‌ಜಿ ಮತ್ತು ಟಿಗೋರ್ ಸಿಎನ್‌ಜಿ ಕಾರುಗಳ ಮೇಲೆ 35,000 ರೂ.ಗಳ ರಿಯಾಯಿತಿಯನ್ನು ನೀಡಲಾಗುತ್ತಿದೆ. ಎರಡೂ ಕಾರುಗಳ ಮೇಲೆ 15,000 ರೂ.ಗಳ ವಿನಿಮಯ ಬೋನಸ್ ಇದ್ದು, ಒಟ್ಟು 50,000 ರೂ. ಪ್ರಯೋಜನಗಳನ್ನು ಒಳಗೊಂಡಿವೆ. ಉಳಿದಂತೆ ಟಾಟಾ ಪಂಚ್ ಈ ತಿಂಗಳು ಯಾವುದೇ ರಿಯಾಯಿತಿಯೊಂದಿಗೆ ಬಂದಿಲ್ಲ.

ಇತ್ತೀಚಿನ ಟಾಟಾ ನೆಕ್ಸಾನ್, ಸಫಾರಿ ಮತ್ತು ಹ್ಯಾರಿಯರ್ ಅನ್ನು ಸಹ ಯಾವುದೇ ದೊಡ್ಡ ರಿಯಾಯಿತಿಯೊಂದಿಗೆ ನೀಡಲಾಗಿಲ್ಲ. ಮೇಲಿನ ಈ ಎಲ್ಲಾ ರಿಯಾಯಿತಿಗಳು ಲಭ್ಯತೆ ಮತ್ತು ಡೀಲರ್‌ಶಿಪ್‌ನ ಸ್ಥಳಕ್ಕೆ ಒಳಪಟ್ಟಿರುತ್ತವೆ. ಹಾಗೆಯೇ MY 2023ರ ರಿಯಾಯಿತಿಗಳು ಅಸ್ತಿತ್ವದಲ್ಲಿರುವ ಸ್ಟಾಕ್ ಮಟ್ಟವನ್ನು ಅವಲಂಬಿಸಿರುತ್ತದೆ ಎಂಬುದನ್ನು ಗ್ರಾಹಕರು ಗಮನಿಸಬೇಕು.
ಟಾಟಾ ಮೋಟಾರ್ಸ್ ಮಧ್ಯಮ ವರ್ಗದವರಿಗಾಗಿ ನೀಡುವ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಲ್ಟ್ರೋಜ್ ಮೇಲೆ 10,000 ರೂ. ಗಳವರೆಗೆ ನಗದು ರಿಯಾಯಿತಿಯೊಂದಿಗೆ ಮಾರಾಟ ಮಾಡಲಾಗುತ್ತಿದೆ. ಹಾಗೆಯೇ ಇದರ ಜೊತೆಗೆ 10,000 ರೂ. ವಿನಿಮಯ ಬೋನಸ್ ಕೂಡ ಇರಲಿದ್ದು, ಸ್ಥಳೀಯ ಡೀಲರ್‌ಗಳೊಂದಿಗೆ ಸಂಪರ್ಕಿಸಿದರೆ ಹೆಚ್ಚಿನ ಮಾಹಿತಿ ಪಡೆಯಬಹುದು.

ನೆಕ್ಸಾನ್ ಇವಿ 1 ಲಕ್ಷ ಡಿಸ್ಕೌಂಟ್: ಟಾಟಾ ಮೋಟಾರ್ಸ್‌ಗೆ ಪ್ರಮುಖ ಮಾರಾಟ ಲಾಭ ತಂದುಕೊಡುತ್ತಿರುವ ನೆಕ್ಸಾನ್ ಮಾದರಿಯ ಎಲೆಕ್ಟ್ರಿಕ್ ಆವೃತ್ತಿಯು MY 2023 ಸ್ಟಾಕ್ ಮೇಲೆ 1 ಲಕ್ಷ ರೂ. ಗಳವರೆಗೆ ನಗದು ರೂಪದಲ್ಲಿ ಗರಿಷ್ಠ ರಿಯಾಯಿತಿಯೊಂದಿಗೆ ಖರೀದಿಸಬಹುದು ಎಂದು ವರದಿಯಾಗಿದೆ. ಈ ಕುರಿತ ಹೆಚ್ಚಿನ ವಿವರಗಳಿಗಾಗಿ ನಿಮ್ಮ ಹತ್ತಿರದ ಡೀಲರ್‌ಗಳನ್ನು ಸಂಪರ್ಕಿಸಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications