ಸ್ವದೇಶಿ ಬ್ರಾಂಡ್‌ಗಳ ವೇಗಕ್ಕೆ ತತ್ತರಿಸಿದ ವಿದೇಶಿ ಕಂಪನಿಗಳು: ಟಾಟಾ, ಮಹೀಂದ್ರಾ ಟಾಪ್

ಭಾರತದ ಕಾರು ಮಾರುಕಟ್ಟೆಯಲ್ಲಿ ಮೊದಲಿನಿಂದಲೂ ಮಾರುತಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ. ಆದರೆ ಮಾರುತಿ ನಂತರದ ಸ್ಥಾನವನ್ನು ಹ್ಯುಂಡೈ ಭದ್ರಪಡಿಸಿಕೊಂಡಿತ್ತು, ಈಗ ಆ ಕಾಲ ಬದಲಾಗಿದೆ. ಹ್ಯುಂಡೈ ಅನ್ನು ಟಾಟಾ ಹಾಗೂ ಮಹೀಂದ್ರಾ ಕಂಪನಿಗಳು ಹಿಂದಿಕ್ಕಿವೆ. ಮಾರಾಟದಲ್ಲಿ ಮುನ್ನುಗ್ಗುತ್ತಿದ್ದು, ವಾಹನ ರಂಗದಲ್ಲಿ ಹೊಸ ದಾಖಲೆ ನಿರ್ಮಿಸಿವೆ.

ಕಳೆದ ಜನವರಿ ತಿಂಗಳಿನಲ್ಲಿ ಒಟ್ಟಾರೆ ಎಲ್ಲಾ ಬ್ರಾಂಡ್‌ಗಳಿಂದ ನಾಲ್ಕು ಲಕ್ಷ ವಾಹನಗಳನ್ನು ಮಾರಾಟ ಮಾಡಲಾಗಿದೆ. ಇದರಲ್ಲಿ ಶೇ 40 ರಷ್ಟು ಪಾಲು ಮಾರುತಿ ಸುಜುಕಿ ಆಕ್ರಮಿಸಿದೆ. ಇದರ ನಂತರ ಅತಿ ಹೆಚ್ಚು ವಾಹನಗಳನ್ನು ಮಾರಾಟ ಮಾಡುವ ಮೂಲಕ ಟಾಟಾ ಮೋಟಾರ್ಸ್ ಎರಡನೇ ಸ್ಥಾನದಲ್ಲಿದ್ದರೇ ಮೂರನೇ ಸ್ಥಾನವನ್ನು ಮಹೀಂದ್ರಾ ದಕ್ಕಿಸಿಕೊಂಡಿದೆ. ಈ ಮೂಲಕ ಎರಡನೇ ಸ್ಥಾನದಲ್ಲಿದ್ದ ದೈತ್ಯ ಹ್ಯುಂಡೈ ಅನ್ನು ಸ್ವದೇಶಿ ಕಂಪನಿಗಳು ಹಿಂದಿಕ್ಕಿವೆ.

tata-motors-and-mahindra-overtake-hyundai-in-car-sales

ಜನವರಿಯಲ್ಲಿ ಟಾಟಾ ಮೋಟಾರ್ಸ್ ಒಟ್ಟು 84,276 ಕಾರುಗಳನ್ನು ಮಾರಾಟ ಮಾಡಿದೆ. ಅದಕ್ಕೂ ಮುಂಚೆ 54,000 ಕಾರುಗಳನ್ನು ಟಾಟಾ ಮಾರಾಟ ಮಾಡಿತ್ತು. ಇದರಲ್ಲಿ ಹೆಚ್ಚಿನ ಪಾಲು ನೆಕ್ಸಾನ್ ಹಾಗೂ ಪಂಚ್ ಕಾರುಗಳದ್ದಾಗಿದೆ. ಈ ಎರಡೂ ಕಾರುಗಳೇ ಬರೋಬ್ಬರಿ 17,000 ಯೂನಿಟ್‌ಗಳು ಮಾರಾಟವಾಗಿವೆ. ಇನ್ನು ಮಹೀಂದ್ರಾ ವಿಷಯಕ್ಕೆ ಬಂದರೆ ಬ್ರಾಂಡ್‌ನ ಜನಪ್ರಿಯ ಮಾದರಿಗಳಾದ ಸ್ಕಾರ್ಪಿಯೋ-ಎನ್ ಹಾಗೂ XUV700 ಅತ್ಯಧಿಕವಾಗಿ ಮಾರಾಟವಾಗಿವೆ.

ಮಹೀಂದ್ರಾ ವಾರ್ಷಿಕ ಮಾರಾಟದಲ್ಲಿ ಶೇ15 ರಷ್ಟು ಬೆಳವಣಿಗೆ ಸಾಧಿಸಿದರೆ, ಇದರ ಯುಟಿಲಿಟಿ ವಾಹನ ವಿಭಾಗದಲ್ಲಿ ಶೇ 30ರಷ್ಟು ಬೆಳವಣಿಗೆ ಕಂಡಿದೆ. ಇನ್ನು ಹಲವು ವರ್ಷಗಳಿಂದ ಭಾರತದಲ್ಲಿ ಎರಡನೇ ಸ್ಥಾನದಲ್ಲಿದ್ದ ಹ್ಯುಂಡೈ ಈ ಬಾರಿ ನಾಲ್ಕನೇ ಸ್ಥಾನಕ್ಕೆ ಇಳಿದು ಶೇ8 ರಷ್ಟು ಬೆಳವಣಿಗೆ ಕಂಡಿದೆ. ಇತ್ತಿಚೆಗೆ ಹ್ಯುಂಡೈ ಬಿಡುಗಡೆ ಮಾಡಿದ ಕ್ರೆಟಾದಿಂದ ಹ್ಯುಂಡೈಗೆ ಹೆಚ್ಚಿನ ಬೇಡಿಕೆ ಬಂದಿದೆ. ಕ್ರೆಟಾ ಹಾಗೂ ವೆನ್ಯೂ ಮಾದರಿಗಳು ಹ್ಯುಂಡೈನಿಂದ ಅತಿ ಹೆಚ್ಚು ಮಾರಾಟವಾದ ಕಾರುಗಳಾಗಿವೆ.

tata-motors-and-mahindra-overtake-hyundai-in-car-sales

ಟಾಟಾ ಮೋಟಾರ್ಸ್ ಈಗಾಗಲೇ ತನ್ನ ಎಲ್ಲಾ ಪ್ರತಿಸ್ಪರ್ಧಿಗಳ ವಿರುದ್ಧ ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ವ್ಯಾಪಕ ಅಂತರದಲ್ಲಿ ಮುನ್ನಡೆ ಸಾಧಿಸುತ್ತಿದೆ. ಈ ವೇಗವನ್ನು ಇನ್ನೂ ಹೆಚ್ಚಿಸಲು ಹಾಗೂ ಎಲೆಕ್ಟ್ರಿಕ್ ವಿಭಾಗದಲ್ಲಿ ಹೆಚ್ಚಿನ ಬೇಡಿಕೆಯನ್ನು ಸೃಷ್ಟಿಸಲು ಟಾಟಾ ಹಲವು ಹೊಸ ಎಲೆಕ್ಟ್ರಿಕ್ ಕಾರುಗಳ ಬಿಡುಗಡೆಗೂ ಸಜ್ಜಾಗುತ್ತಿದೆ. ಮೊದಲಿಗೆ ಹ್ಯಾರಿಯರ್ ಇವಿಯನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಿದೆ.

ದೆಹಲಿಯಲ್ಲಿ ನಡೆಯುತ್ತಿರುವ 2024 ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಟಾಟಾ ಹ್ಯಾರಿಯರ್ ಎಲೆಕ್ಟ್ರಿಕ್ ಎಸ್‍ಯುವಿಯನ್ನು (Tata Harrier EV) ಪ್ರದರ್ಶಿಸಿದೆ. ಜೊತೆಗೆ ಉತ್ಪಾದನೆ-ಸಿದ್ಧ ರೂಪದಲ್ಲಿ Curvv ಕೂಪ್, Altroz ​​Racer, ನೆಕ್ಸಾನ್ iCNG ಮತ್ತು ಸಫಾರಿ Dark Edition ಅನ್ನು ಪ್ರದರ್ಶಿಸಿದೆ. ಬಹುನಿರೀಕ್ಷಿತ ಟಾಟಾ ಹ್ಯಾರಿಯರ್ ಎಲೆಕ್ಟ್ರಿಕ್ ಎಸ್‍ಯುವಿಯ ಹೆಚ್ಚಿನ ಮಾಹಿತಿ ಮುಂದಿನ ದಿನಗಳಲ್ಲಿ ಬಹಿರಂಗವಾಗಲಿದೆ.

tata-motors-and-mahindra-overtake-hyundai-in-car-sales

ಇನ್ನು ಮಹೀಂದ್ರಾ ವಿಷಯಕ್ಕೆ ಬಂದರೆ XUV700 ಹಾಗೂ ಥಾರ್‌ನಂತಹ ಅದ್ಬುತ ಎಸ್‌ಯುವಿಗಳೊಂದಿಗೆ ಗ್ರಾಹಕರಿಂದ ಹೆಚ್ಚಿನ ಬೇಡಿಕೆ ಗಳಿಸಿದೆ. ಜೊತೆಗೆ ಹಲವು ಹೊಸ ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಪರಿಚಯಿಸಲು ಮಹೀಂದ್ರಾ ಕೂಡ ತೀವ್ರವಾಗಿ ಶ್ರಮಿಸುತ್ತಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ದೇಶದಲ್ಲಿ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಅಗ್ರಸ್ಥಾನವನ್ನು ತಲುಪಲು ಯೋಜಿಸುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, February 2, 2024, 16:44 [IST]
English summary
Tata motors and mahindra overtake hyundai in car sales
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+