ಹೊಸ ದಾಖಲೆ ನಿರ್ಮಿಸಿ ಉದ್ಯೋಗಿಗಳ ಶ್ರಮದ ಫಲ ಎಂದ ಟಾಟಾ ಮೋಟಾರ್ಸ್

ಭಾರತದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಹೊಸ ದಾಖಲೆ ನಿರ್ಮಿಸಿದೆ. ಟಾಟಾ ಮೋಟಾರ್ಸ್ ಗುಜಾರಾತ್‌ನಲ್ಲಿ ಇರುವ ತನ್ನ ಸನಂದ್ ಕಾರು ಉತ್ಪಾದನಾ ಘಟಕದಿಂದ ಬರೋಬ್ಬರಿ ಹತ್ತು ಲಕ್ಷ ಕಾರುಗಳ ನಿರ್ಮಾಣ ಮಾಡಿ ಹೊರತಂದಿರುವುದಾಗಿ ಇತ್ತೀಚಿನ ಪ್ರಕಟಣೆ ಒಂದರಲ್ಲಿ ಘೋಷಿಸಿದೆ.

ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿಮಿಟೆಡ್ ಮತ್ತು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ಚಂದ್ರ ಮಾತನಾಡಿ, "ನಮ್ಮ ಸನಂದ್ ಸ್ಥಾವರದಿಂದ ಹತ್ತು ಲಕ್ಷ ಕಾರುಗಳನ್ನು ಹೊರತಂದಿರುವುದಕ್ಕೆ ತುಂಬಾ ಹೆಮ್ಮೆಪಡುತ್ತೇವೆ. ಮಾರುಕಟ್ಟೆಯ ಅಗತ್ಯಗಳಿಗೆ ತ್ವರಿತವಾಗಿ ಸ್ಪಂದಿಸುವ ಮೂಲಕ ಭಾರತದಲ್ಲಿ ನಮ್ಮ ಬೆಳವಣಿಗೆಯನ್ನು ಹೆಚ್ಚಿಸುವಲ್ಲಿ ಈ ಸೌಲಭ್ಯವು ಪ್ರಮುಖವಾಗಿದೆ ಎಂದರು.

tata-motors-new-record-by-producing-1-million-cars-at-sanand-plant

ಈ ಸಾಧನೆಯು ನಾವು ನಮಗಾಗಿ ನಿಗದಿಪಡಿಸಿದ ಉನ್ನತ ಮಾನದಂಡಗಳಿಗೆ ಮತ್ತು ನಮ್ಮ ಗ್ರಾಹಕರಿಗೆ ನಾವು ಹೊಂದಿರುವ ಬದ್ಧತೆಗೆ ಸಾಕ್ಷಿಯಾಗಿದೆ. ನಮ್ಮ ಪ್ರಯತ್ನಗಳು ನಮ್ಮ ಉತ್ಪನ್ನಗಳಿಗೆ ಹೆಚ್ಚಿನ ಪರಿಗಣನೆಗೆ ಕಾರಣವಾಗಿವೆ. ಈ ಮೈಲಿಗಲ್ಲು ಖಂಡಿತವಾಗಿಯೂ ಗ್ರಾಹಕರಲ್ಲಿ ನಮ್ಮ ಉತ್ಪನ್ನಗಳ ಜನಪ್ರಿಯತೆಯನ್ನು ಪುನರುಚ್ಚರಿಸುತ್ತದೆ. ಸುರಕ್ಷಿತ, ಚುರುಕಾದ ಮತ್ತು ಹಸಿರು ಚಲನಶೀಲತೆ ಪರಿಹಾರಗಳನ್ನು ಒದಗಿಸುವಲ್ಲಿ ನಮ್ಮ ವೇಗವನ್ನು ಮುಂದುವರಿಸುವ ವಿಶ್ವಾಸವಿದೆ ಎಂದರು.

ಈ ಮೈಲಿಗಲ್ಲಿಗೆ ನಾವು ಋಣಿಯಾಗಿದ್ದೇವೆ. ಈ ಮೈಲಿಗಲ್ಲನ್ನು ಸಾಧಿಸುವಲ್ಲಿ ಅವಿಭಾಜ್ಯ ಅಂಗವಾಗಿರುವ ನಮ್ಮ ಉದ್ಯೋಗಿಗಳು, ಪೂರೈಕೆದಾರರು, ಚಾನೆಲ್ ಪಾಲುದಾರರು ಮತ್ತು ಮುಖ್ಯವಾಗಿ ಗುಜರಾತ್ ಸರ್ಕಾರದ ಅಚಲ ಬೆಂಬಲಕ್ಕಾಗಿ ನಾವು ಅವರನ್ನು ಗುರುತಿಸುತ್ತೇವೆ ಮತ್ತು ಧನ್ಯವಾದ ಅರ್ಪಿಸುತ್ತೇವೆ ಎಂದು ವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ಚಂದ್ರ ಹೇಳಿದರು.

tata-motors-new-record-by-producing-1-million-cars-at-sanand-plant

1,100 ಎಕರೆಯಲ್ಲಿ ಸನಂದ್ ಘಟಕ: ಒಟ್ಟು 1,100 ಎಕರೆಯಲ್ಲಿ ಸನಂದ್ ಘಟಕವನ್ನು 2010 ರಲ್ಲಿ ನಿರ್ಮಾಣ ಮಾಡಲಾಯಿತು. ಇದರಲ್ಲಿ 741 ಎಕರೆ (ಟಿಎಂಎಲ್) ಮತ್ತು 359 ಎಕರೆ (ವೆಂಡರ್ ಪಾರ್ಕ್) ನಲ್ಲಿ 6000 ಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗಿಗಳೊಂದಿಗೆ ಸ್ಥಾಪಿಸಲಾಯಿತು. ಇವರೆಲ್ಲರು ಟಾಟಾ ಮೋಟಾರ್ಸ್ ಬೆಳವಣಿಗೆ ಮತ್ತು ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸದ್ದಾರೆ ಎಂದು ಟಾಟಾ ಮೋಟಾರ್ಸ್ ಹೇಳಿಕೊಂಡಿದೆ.

ಟಾಟಾ ಮೋಟಾರ್ಸ್‌ನ ಅತ್ಯಂತ ಕಿರಿಯ ಘಟಕಗಳಲ್ಲಿ ಒಂದಾದ ಸನಂದ್ ಘಟಕವು ತನ್ನ ಎಲ್ಲಾ ಪ್ರಕ್ರಿಯೆಗಳಲ್ಲಿ ಕ್ಷಣ ಕ್ಷಣದ ತಂತ್ರಜ್ಞಾನವನ್ನು ಹೊಂದಿದೆ. ಹೆಚ್ಚು ಯಾಂತ್ರೀಕೃತ ಘಟಕವು ಲೀನ್ ಪ್ರೊಸೆಸ್ ಮ್ಯಾನೇಜ್ಮೆಂಟ್ ಸಿಸ್ಟಮ್ ಅನ್ನು ಸಂಯೋಜಿಸಿದೆ. ಈ ಘಟಕವು ಪ್ರೆಸ್ ಲೈನ್, ವೆಲ್ಡ್ ಶಾಪ್, ಪೇಂಟ್ ಶಾಪ್, ಅಸೆಂಬ್ಲಿ ಲೈನ್ ಮತ್ತು ಪವರ್ ಟ್ರೇನ್ ಷಾಪ್ ಅನ್ನು ಹೊಂದಿದೆ.

tata-motors-new-record-by-producing-1-million-cars-at-sanand-plant

ಈ ಸೌಲಭ್ಯವು ಹೊಂದಿಕೊಳ್ಳುವ ಜೋಡಣೆ ಮಾರ್ಗವನ್ನು ಹೊಂದಿದ್ದು, ಟಿಗೋರ್, ಟಿಗೋರ್ ಎಎಂಟಿ, ಟಿಗೋರ್ ಇವಿ, ಟಿಗೋರ್ ಐಸಿಎನ್‌ಜಿ, ಟಿಯಾಗೊ, ಟಿಯಾಗೊ ಎಎಂಟಿ, ಟಿಯಾಗೊ ಇವಿ, ಟಿಯಾಗೊ ಐಸಿಎನ್‌ಜಿ ಮತ್ತು ಎಕ್ಸ್ ಪ್ರೆಸ್ -ಟಿ ಇವಿಯಂತಹ ವಿವಿಧ ಮಾದರಿ ಪ್ರಯಾಣಿಕ ವಾಹನಗಳನ್ನು ಉತ್ಪಾದಿಸಲು ಹೆಸರುವಾಸಿಯಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, March 12, 2024, 16:59 [IST]
English summary
Tata motors new record by producing 1 million cars at sanand plant
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+