ಗರಿಷ್ಠ ಸುರಕ್ಷತೆ ಟಾಟಾ ಕಾರಿಗಾಗಿ ಕ್ಯೂ ನಿಂತ ಜನ: ಮಾರಾಟದಲ್ಲಿ ಏರಿಕೆ

ಭಾರತದ ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿ ಟಾಟಾ ಮೋಟಾರ್ಸ್ (Tata Motors) ದೊಡ್ಡಮಟ್ಟದಲ್ಲಿ ಜನಪ್ರಿಯತೆಯನ್ನು ಗಳಿಸಿದೆ. ಈ ಸ್ವದೇಶಿ ವಾಹನ ತಯಾರಕ ಟಾಟಾ ಮೋಟಾರ್ಸ್ 2024ರ ಏಪ್ರಿಲ್ ತಿಂಗಳ ಮಾರಾಟದ ಅಂಕಿಅಂಶಗಳನ್ನು ಬಿಡುಗಡೆ ಮಾಡಿದೆ. ಕಳೆದ ತಿಂಗಳು, ಟಾಟಾ ಕಂಪನಿಯು ಒಟ್ಟು 77,521 ಯುನಿಟ್‌ಗಳನ್ನು ಮಾರಾಟ ಮಾಡಿದ್ದಾರೆ.

ಇದರಲ್ಲಿ 29,538 ವಾಣಿಜ್ಯ ವಾಹನಗಳು ಮತ್ತು ಉಳಿದವು, 47,983, ಎಲೆಕ್ಟ್ರಿಕ್ ಸೇರಿದಂತೆ ಪ್ರಯಾಣಿಕ ವಾಹನಗಳಾಗಿವೆ. 2023ರ ಏಪ್ರಿಲ್ ತಿಂಗಳಿನಲ್ಲಿ 69,599 ಯುನಿಟ್‌ಗಳು ಮಾರಾಟವಾಗಿವೆ. ಇದನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇಕಡಾ 11.38 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಪ್ರಯಾಣಿಕ ವಾಹನಗಳ ದೇಶೀಯ ಮಾರಾಟದ ಅಂಕಿಅಂಶಗಳಿಗೆ ಬರುವುದಾದರೆ, 47,983 ಯುನಿಟ್‌ಗಳನ್ನು ಮಾರಾಟವಾಗಿವೆ.

Tata Motors

ಸ್ವದೇಶಿ ವಾಹನ ತಯಾರಕ ಸಂಸ್ಥೆಯು ಕಳೆದ ವರ್ಷದ ಇದೇ ಅವಧಿಯಲ್ಲಿ ಮಾರಾಟವಾದ 47,007 ಯುನಿಟ್‌ಗಳಿಗೆ ಹೋಲಿಸಿದರೆ ತನ್ನ ಮಾರಾಟದಲ್ಲಿ ವರ್ಷದಿಂದ ವರ್ಷಕ್ಕೆ 2 ಶೇಕಡಾ ಬೆಳವಣಿಗೆಯನ್ನು ಕಂಡಿದೆ. ಇನ್ನು 2024ರ ಮಾರ್ಚ್ ತಿಂಗಳಿನ ಮಾರಾಟವನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇಕಡಾ 4.24 ರಷ್ಟು ಮಾರಾಟದಲ್ಲಿ ಕುಸಿತವನ್ನು ಕಂಡಿದೆ.

ವಾಣಿಜ್ಯ ವಾಹನಗಳು ಸೇರಿದಂತೆ ಒಟ್ಟು ದೇಶೀಯ ಮಾರಾಟವು ಶೇಕಡಾ 12 ರಷ್ಟು ಬೆಳವಣಿಗೆಯನ್ನು ಕಂಡಿದೆ. 2024ರ ಏಪ್ರಿಲ್ ತಿಂಗಳಿನಲ್ಲಿ 76,399 ಯುನಿಟ್‌ಗಳು ಮಾರಾಟವಾಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ ಮಾರಾಟವಾದ 68,514 ಯುನಿಟ್‌ಗಳಿಗೆ ಹೋಲಿಸಿದರೆ ಬೆಳವಣಿಗೆಯನ್ನು ಕಂಡಿದೆ. ರಫ್ತಿನ ಬಗ್ಗೆ ಹೇಳುವುದಾದರೆ, ಬ್ರ್ಯಾಂಡ್ ಕಳೆದ ತಿಂಗಳು 100 ಕಾರುಗಳನ್ನು ರಫ್ತು ಮಾಡಿದೆ.

Tata Motors

2024ರ ಮಾರ್ಚ್ ತಿಂಗಳಿನಲ್ಲಿ 187 ಯುನಿಟ್‌ಗಳನ್ನು ರಫ್ತು ಮಾಡಿದೆ, ಇದನ್ನು ಕಳೆದ ತಿಂಗಳ ರಫ್ತಿಗ ಹೋಲಿಸಿದರೆ 46 ಪ್ರತಿಶತದಷ್ಟು ಗಮನಾರ್ಹ ಕುಸಿತವವಾಗಿದೆ. ಇನ್ನು ವಾಣಿಜ್ಯ ವಾಹನ ಮಾರಾಟದ ವಿಷಯದಲ್ಲಿ, ಟಾಟಾ ದೇಶೀಯ ಮಾರುಕಟ್ಟೆಯಲ್ಲಿ 28,516 ಯುನಿಟ್‌ಗಳನ್ನು ಮಾರಾಟ ಮಾಡಿದೆ, ಇದು ವರ್ಷದಿಂದ ವರ್ಷಕ್ಕೆ ಶೇಕಡಾ 33 ರಷ್ಟು ಬೆಳವಣಿಗೆಯನ್ನು ಸಾದಿಸಿದೆ.

ಇನ್ನು 2014 ರಿಂದ, ಗ್ಲೋಬಲ್ ಎನ್‌ಸಿಎಪಿ 'ಸೇಫರ್ ಕಾರ್ಸ್ ಫಾರ್ ಇಂಡಿಯಾ' ಯೋಜನೆಯಡಿ ಭಾರತದಲ್ಲಿ ಪ್ರಯಾಣಿಕ ವಾಹನಗಳ ಸುರಕ್ಷತೆಯನ್ನು ಪರೀಕ್ಷಿಸುತ್ತಿದೆ. ಟಾಟಾ ಮೋಟಾರ್ಸ್ (Tata Motors) ಗ್ಲೋಬಲ್ ಎನ್‌ಸಿಎಪಿ ನಡೆಸಿದ ಕ್ರ್ಯಾಶ್ ಟೆಸ್ಟ್‌ಗಳಲ್ಲಿ (Crash Test) 5 ಸ್ಟಾರ್ ರೇಟಿಂಗ್‌ಗಳನ್ನು ಪಡೆದ ಕಂಪನಿಯಾಗಿದೆ. ಟೆಸ್ಟಿಂಗ್ ಏಜೆನ್ಸಿ ಗ್ಲೋಬಲ್ ಎನ್‌ಸಿಎಪಿ ಸ್ವತಃ ಟಾಟಾ ಮೋಟಾರ್ಸ್ ಹೆಚ್ಚಿನ ಸುರಕ್ಷತೆಯನ್ನು ನೀಡುವ ಕಾರುಗಳನ್ನು ತಯಾರಿಸುವ ಪ್ರಯತ್ನಗಳನ್ನು ಶ್ಲಾಘಿಸಿದೆ.

ಗ್ಲೋಬಲ್ ಎನ್‌ಸಿಎಪಿ ಟಾಟಾವನ್ನು ಒಂದು ದಶಕದಲ್ಲಿ ವಾಹನ ತಯಾರಕರು ಎಷ್ಟು ಸುಧಾರಿಸಬಹುದು ಎಂಬುದಕ್ಕೆ ಉದಾಹರಣೆಯಾಗಿದೆ. ಮೈಕ್ರೋ-ಬ್ಲಾಗಿಂಗ್ ಸೈಟ್ ಎಕ್ಸ್ ಜಾಲತಾಣದಲ್ಲಿ ಹಂಚಿಕೊಂಡಿರುವ 64 ಸೆಕೆಂಡುಗಳ ವೀಡಿಯೊ ಮೂರು ಟಾಟಾ ಕಾರುಗಳು ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ಗೆ ಒಳಗಾಗಿದೆ. ಮೂರು ಮಾದರಿಗಳು ಟಾಟಾ ನ್ಯಾನೋ, ಆಲ್ಟ್ರೋಜ್ ಮತ್ತು ನೆಕ್ಸಾನ್. 2014 ರಲ್ಲಿ ಕ್ರ್ಯಾಶ್ ಟೆಸ್ಟ್‌ಗೆ ಒಳಗಾದ ನ್ಯಾನೋ ಆ ಕಾಲದ ಕೆಲವು ಭಾರತೀಯ ಕಾರುಗಳು ಸುರಕ್ಷಿತವಾಗಿರಲಿಲ್ಲ ಎಂಬುದಕ್ಕೆ ಪುರಾವೆಯಾಗಿದೆ.

ಇದರಿಂದ ಕಲಿತ ನಂತರ, ಟಾಟಾದ ಆಲ್ಟ್ರೋಸ್ ಮತ್ತು ನೆಕ್ಸಾನ್ ಮಾದರಿಗಳೊಂದಿಗೆ 5-ಸ್ಟಾರ್ ಸುರಕ್ಷತಾ ರೇಟಿಂಗ್‌ನೊಂದಿಗೆ ಹಿಂತಿರುಗಿದ್ದರು. ಸಣ್ಣ ವೀಡಿಯೊದಲ್ಲಿ, ಉನ್ನತ ಗುಣಮಟ್ಟದ ಮಾದರಿಗಳನ್ನು ತಯಾರಿಸಲು ಬದ್ಧರಾದ ಕಂಪನಿಗಳು 10 ವರ್ಷಗಳಲ್ಲಿ ಏನು ಮಾಡಬಹುದು ಎಂಬುದನ್ನು ಪರೀಕ್ಷಾ ಸಂಸ್ಥೆ ತೋರಿಸುತ್ತದೆ. ಪ್ರಸ್ತುತ ಕ್ರ್ಯಾಶ್ ಟೆಸ್ಟ್‌ನಲ್ಲಿ ಅನುತ್ತೀರ್ಣರಾಗಿರುವ ಕಾರು ತಯಾರಕರಿಗೆ ಈ ವೀಡಿಯೊ ಸ್ಫೂರ್ತಿಯಾಗಿದೆ.

Article Published On: Friday, May 3, 2024, 18:55 [IST]
English summary
Tata motors sales report april 2024 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+