Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
ಭಾರತದ ಜನಪ್ರಿಯ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್, ಇಂಧನ ಚಾಲಿತ ವಾಹನಗಳು ಮಾತ್ರವಲ್ಲದೇ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲೂ ಮುನ್ನುಗ್ಗುತ್ತಿದೆ. ಇತ್ತೀಚೆಗಷ್ಟೇ ಕಾರ್ಪೊರೇಟ್ ಕಂಪನಿಯೊಂದು ಎರಡು ಸಾವಿರ ಎಲೆಕ್ಟ್ರಿಕ್ ಕಾರುಗಳಿಗಾಗಿ ಆರ್ಡರ್ ನೀಡಿದ್ದು, ಹಂತ-ಹಂತವಾಗಿ ವಾಹನಗಳನ್ನು ಡೆಲಿವರಿ ನೀಡುವುದಾಗಿ ಟಾಟಾ ಒಪ್ಪಂದ ಮಾಡಿಕೊಂಡಿದೆ.
ಪ್ರಸ್ತುತ ದೇಶದಲ್ಲಿ ಟಾಟಾ ಎಲೆಕ್ಟ್ರಿಕ್ ಕಾರುಗಳಿಗೆ ಭಾರೀ ಬೇಡಿಕೆ ಇದೆ. ಟಾಟಾ ಮೋಟಾರ್ಸ್ ತನ್ನ ಎಲೆಕ್ಟ್ರಿಕ್ ಕಾರ್ ಸೆಗ್ಮೆಂಟ್‌ನಲ್ಲಿ ಪಂಚ್ ಇವಿ, ಟಿಗೋರ್ ಇವಿ, ಟಿಯಾಗೋ ಇವಿ, ನೆಕ್ಸಾನ್ ಇವಿನಂತಹ ಬಹುಬೇಡಿಕೆಯ ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಇವೆಲ್ಲವುಗಳೊಂದಿಗೆ ಬಹುತೇಕರಿಗೆ ಗೊತ್ತಿರದ ಎಕ್ಸ್‌ಪ್ರೆಸ್-ಟಿ (XPRES-T)ಎಂಬ ಇವಿ ಕಾರನ್ನು ಕೂಡ ಮಾರಾಟ ಮಾಡುತ್ತಿದೆ. ಇದು ಡಿ-ಫೋರ್ಸ್ ಸೆಗ್ಮೆಂಟ್‌ನಲ್ಲಿ ಮಾತ್ರ ನೀಡುತ್ತಿರುವ ಕಾರಣ ಹಲವರಿಗೆ ಇದರ ಬಗ್ಗೆ ತಿಳಿದಿಲ್ಲ. ವಿವರವಾಗಿ ಹೇಳುವುದಾದ್ರೆ ಈ ಇವಿ ಕಾರನ್ನು ವೈಯಕ್ತಿಕ ಬಳಕೆಗೆ ನೀಡುವುದಿಲ್ಲ, ಬದಲಿಗೆ ಇದು ಕೇವಲ ಟ್ಯಾಕ್ಸಿ ಹಾಗೂ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಿಗೆ ಕ್ಯಾಬ್ ಸೇವೆಗೆ ಮಾತ್ರ ನೀಡಲಾಗುತ್ತದೆ.

2 ಸಾವಿರ ಇವಿ ಕಾರುಗಳಿಗೆ ಆರ್ಡರ್: ವರದಿಗಳ ಪ್ರಕಾರ, ವರ್ಟೆಲೊ (Vertelo) ಎಂಬ ಕಂಪನಿಯು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳಿಗೆ ಆರ್ಡರ್ ನೀಡಿದ್ದು, ಇದರ ಒಟ್ಟರೆ ಮೌಲ್ಯದ ಕುರಿತು ಯಾವುದೇ ಮಾಹಿತಿ ಹೊರಬಿದ್ದಿಲ್ಲ. ವರ್ಟೆಲೊ ಎಂಬುದು ಟ್ಯಾಕ್ಸಿ ಸೇವಾ ಕಂಪನಿಯಾಗಿದ್ದು, ತನ್ನ ಸೇವೆಯಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ತೊಡಗಿಸಿಕೊಳ್ಳಲು ಈ ಬೃಹತ್ ಆರ್ಡರ್ ನೀಡಿರುವುದಾಗಿ ವರದಿಯಾಗಿದೆ.
ಬಾಡಿಗೆ ವಾಹನ ಸೇವಾ ವಿಭಾಗದಲ್ಲಿ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿರುವ ಎಕ್ಸ್‌ಪ್ರೆಸ್-ಟಿ ಇವಿ ಕಾರುಗಳನ್ನು ಹಂತ-ಹಂತವಾಗಿ ಡೆಲಿವರಿ ನೀಡುವುದಾಗಿ ಟಾಟಾ ಮೋಟಾರ್ಸ್ ವರ್ಟೆಲೊ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. 2 ಸಾವಿರ ಕಾರುಗಳನ್ನು ಒಮ್ಮೆಲೆ ತಲುಪಿಸುವುದು ಅಸಾಧ್ಯವಾದ್ದರಿಂದ ಈ ಒಪ್ಪಂದ ಮಾಡಿಕೊಂಡಿರುವುದಾಗಿ ಟಾಟಾ ಮೋಟಾರ್ಸ್ ಘೋಷಿಸಿದೆ.

ಟಾಟಾ ಎಕ್ಸ್‌ಪ್ರೆಸ್-ಟಿ ವಿಶೇಷತೆಗಳು: 2021 ರಲ್ಲಿ, ಟಾಟಾ ಮೋಟಾರ್ಸ್ ಟಿಗೋರ್ ಶ್ರೇಣಿಯನ್ನು ಎರಡು ಪ್ರತ್ಯೇಕ ಮಾದರಿಗಳಾಗಿ ವಿಂಗಡಿಸಿತು. ಟಿಗೋರ್ ಇವಿಯನ್ನು ಪ್ರಯಾಣಿಕ ವಾಹನ ಬಳಕೆಗಾಗಿ ಗೊತ್ತುಪಡಿಸಲಾದರೆ, ಎಕ್ಸ್‌ಪ್ರೆಸ್-ಟಿ ಅನ್ನು ಟ್ಯಾಕ್ಸಿ ಫ್ಲೀಟ್‌ಗಳಿಗಾಗಿ ಪ್ರತ್ಯೇಕವಾಗಿ ಪ್ರಾರಂಭಿಸಲಾಯಿತು. ಸದ್ಯ ಟಾಟಾ ಎಕ್ಸ್‌ಪ್ರೆಸ್ - ಟಿ ಎರಡು ರೂಪಾಂತರಗಳಲ್ಲಿ ಲಭ್ಯವಿದ್ದು, ಅದರಲ್ಲಿ ಒಂದು 277 km ಕಿ.ಮೀ ರೇಂಜ್ ನೀಡಿದ್ರೆ ಇನ್ನೊಂದು 315 km (ಟಾಪ್ - ಸ್ಪೆಕ್ ರೂಪಾಂತರ) ರೇಂಜ್ ನೀಡುತ್ತದೆ. ಈ ರೇಂಜ್ ಅಂಕಿಅಂಶಗಳು ARAI - ಪ್ರಮಾಣೀಕೃತವಾಗಿವೆ. ಎರಡೂ ಮಾದರಿಗಳು ಫಾಸ್ಟ್ ಚಾರ್ಜರ್‌ಗಳೊಂದಿಗೆ ಹೊಂದಿಕೆಯಾಗುತ್ತವೆ.
ಫಾಸ್ಟ್ ಚಾರ್ಜರ್ ಅನ್ನು ಬಳಸಿಕೊಂಡು, ಶೇ 80 ರಷ್ಟು ಚಾರ್ಜಿಂಗ್ ಅನ್ನು ಕ್ರಮವಾಗಿ 90 ನಿಮಿಷಗಳು ಮತ್ತು 110 ನಿಮಿಷಗಳಲ್ಲಿ ಮಾಡಬಹುದು. ಇದಲ್ಲದೆ, ಟಾಟಾ ಕ್ಸ್‌ಪ್ರೆಸ್-ಟಿ ಅನ್ನು 15A ಪ್ಲಗ್ ಮೂಲಕ ಚಾರ್ಜ್ ಮಾಡಬಹುದು. ಡ್ಯುಯಲ್ ಏರ್‌ಬ್ಯಾಗ್‌ಗಳು, ಎಬಿಎಸ್ ಮತ್ತು ಇಬಿಡಿಯೊಂದಿಗೆ ಕಾರು ಪ್ರಯಾಣಿಕರಿಗೆ ಸುರಕ್ಷಿತವಾಗಿದೆ.

ಇದು ಟ್ಯಾಕ್ಸಿ ಸರ್ವಿಸ್ ಕಾರ್ ಆಗಿದ್ದರೂ, ಟಾಟಾ ಮೋಟಾರ್ಸ್ ಇದರಲ್ಲಿ ಪ್ರೀಮಿಯಂ ಗುಣಮಟ್ಟದ ವೈಶಿಷ್ಟ್ಯಗಳನ್ನು ನೀಡಿದೆ. ಎಕ್ಸ್ಪ್ರೆಸ್ - ಟಿ ಇವಿ ಸ್ವಯಂಚಾಲಿತ ಹವಾಮಾನ ನಿಯಂತ್ರಣ, ನೀಲಿ ಅಲಂಕಾರಿಕ ಪ್ಯಾನಲ್‌ಗಳು ಸೇರಿದಂತೆ ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಒಟ್ಟಾರೆ ಫ್ಲೀಟ್ ವಿಭಾಗದಲ್ಲಿ ಯಾವುದೇ ದೂರುಗಳಿಲ್ಲದೇ ಉತ್ತಮ ಬೇಡಿಕೆಯನ್ನು ಪಡೆದುಕೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications