ಟಾಟಾದ ಈ ಕಾರುಗಳಿಗೆ ಎಪ್ರಿಲ್ ತಿಂಗಳಲ್ಲಿ ಭರ್ಜರಿ ಡಿಸ್ಕೌಂಟ್: ಬೆಲೆ ಕೇಳಿ ಶೋ ರೂಮ್ ಕ್ಯೂ ನಿಂತ ಜನ!
ಕಾರುಗಳನ್ನು ಕೊಳ್ಳಬೇಕು ಎಂದುಕೊಂಡಿರುವವರಿಗೆ ಏಪ್ರಿಲ್ ತಿಂಗಳಲ್ಲಿ ಸಾಕಷ್ಟು ಆಫರ್‌ಗಳು ಲಭ್ಯವಾಗುತ್ತಿದೆ. ಅದರಲ್ಲಿ ಟಾಟಾ ಕಾರುಗಳು ಸಹ ಹೊರತಾಗಿಲ್ಲ. ಈ ತಿಂಗಳಲ್ಲಿ ಟಾಟಾ ಕಾರುಗಳಾದ ಆಲ್ಟ್ರೋಝ್, ಟಿಯಾಗೋ ಮತ್ತು ನೆಕ್ಸಾನ್ ಕಾರು ಮಾದರಿಗಳಿಗೆ ಭಾರೀ ಆಫರ್‌ಗಳು ಲಭ್ಯವಾಗುತ್ತಿದೆ. ಇಂದಿನ ಈ ಲೇಖನದಲ್ಲಿ ಆ ಕುರಿತಾಗಿ ನೋಡೊಣ.
ಟಾಟಾ ಕಂಪನಿಯ ಪ್ರಸಿದ್ದ ಕಾರು ಮಾದರಿಗಳಲ್ಲಿ ಪ್ರಮುಖವಾದುದು ಟಾಟಾ ನೆಕ್ಸಾನ್, ಟಿಯಾಗೋ ಮತ್ತು ಟಾಟಾ ಆಲ್ಟ್ರೋಝ್. ಬಿಡುಗಡೆಯಾಗಿ ಇಲ್ಲಿನವರೆಗೆ ಹಲವಾರು ಅಪ್‌ಡೇಟ್‌ಗಳನ್ನು ಪಡೆದುಕೊಂಡು ಮಾರುಕಟ್ಟೆಯಲ್ಲಿ ಮುನ್ನುಗ್ಗುತ್ತಿರುವ ಈ ಕಾರುಗಳು, ಇದೀಗ ಏಪ್ರಿಲ್ 2024 ನಲ್ಲಿ ಭಾರೀ ಡಿಸ್ಕೌಂಟ್‌ಗಳಲ್ಲಿ ಲಭ್ಯವಾಗುತ್ತಿದೆ. ಮಾಹಿತಿಗಳ ಪ್ರಕಾರ ಈ ಮೂರು ಕಾರು ಮಾದರಿಗಳಿಗೆ ಟಾಟಾ ಸುಮಾರು 40000 ರೂಗಳವರೆಗೆ ಡಿಸ್ಕೌಂಟ್ ನೀಡುತ್ತಿದೆ.

ಹೌದು, ಈ ತಿಂಗಳಲ್ಲಿ ಅತೀ ಹೆಚ್ಚು ಡಿಸ್ಕೌಟ್ ಸಿಗುತ್ತಿರುವುದು ಟಾಟಾ ಟಿಯಾಗೋ ಕಾರಿಗೆ. ಟಿಯಾಗೋ XT ಮತ್ತು XT (O) ಆವೃತ್ತಿಗಳಿಗೆ ಸುಮಾರು ರೂ 40000 ದಷ್ಟು ಡಿಸ್ಕೌಂಟ್ ಸಿಗುತ್ತಿದೆ. ಟಾಟಾ ಟಿಯಾಗೋದಲ್ಲಿ ಆಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೋ, ಎಲ್‌ಇಡಿ ಡಿಆರ್‌ಎಲ್‌ಗಳು, ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ರಿಯರ್ ವೈಪರ್, ರಿಯರ್ ಡಿಫಾಗರ್ ಅನ್ನು ಈ ಕಾರು ಒಳಗೊಂಡಿದೆ.
ಈ ಎಂಜಿನ್ 86 bhp ಪವರ್ ಮತ್ತು 113 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರು ಸಿಎನ್‌ಜಿ ರೂಪಾಂತರದಲ್ಲೂ ಲಭ್ಯವಿದೆ. ಈ ಕಾರಿನಲ್ಲಿ 5-ಸ್ಪೀಡ್ ಮ್ಯಾನುವಲ್, 5-ಸ್ಪೀಡ್ AMT ಗೇರ್‌ಬಾಕ್ಸ್ ಆಯ್ಕೆಗಳು ಲಭ್ಯವಿದೆ. ಕಂಪನಿಯ ಪ್ರಕಾರ, ಪೆಟ್ರೋಲ್‌ನಲ್ಲಿ 19.01kmpl ಮೈಲೇಜ್ ನೀಡುತ್ತದೆ, ಒಂದು ಕೆಜಿ CNG ನಲ್ಲಿ 26.49km ವರೆಗೆ ಮೈಲೇಜ್ ಪಡೆಯಬಹುದು.

ಟಾಟಾ ನೆಕ್ಸಾನ್ (TATA Nexon) ಆಫರ್‌ಗಳ ಬಗ್ಗೆ ನೋಡುವುದಾದರೆ, ಸುಮಾರು 15000 ರೂಗಳ ಡಿಸ್ಕೌಂಟ್ ಅನ್ನು ಟಾಟಾ ನೆಕ್ಸಾನ್ ಪಡೆದುಕೊಳ್ಳುತ್ತದೆ. ಇದರಲ್ಲಿ ಯಾವುದೇ ಕ್ಯಾಶ್ ಡಿಸ್ಕೌಂಟ್ ಲಭ್ಯವಿಲ್ಲ. ಬದಲಿಗೆ ಎಕ್ಸ್‌ಚೇಂಜ್ ಆಫರ್ ಆಗಿ ಈ ಕೊಡುಗೆ ನೆಕ್ಸಾನ್ ಕಾರಿಗೆ ಲಭ್ಯವಿದೆ ಎಂದು ತಿಳಿದು ಬಂದಿದೆ.
ಟಾಟಾ ನೆಕ್ಸಾನ್ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದ್ದು, ಇದರಿಂದ ಒಳಭಾಗ ಮತ್ತಷ್ಟು ಅತ್ಯಾಧುನಿಕವಾಗಿ ಕಾಣುತ್ತದೆ. ಫ್ರಂಟ್ ವೆಂಟಿಲೇಟೆಡ್ ಸೀಟ್, ಕೋಲ್ಡ್ ಗ್ಲೋವ್ ಬಾಕ್ಸ್ (ಕೈಗವಸು ಪಟ್ಟಿಗೆ), ಹೊಸ ಡ್ಯುಯಲ್-ಕ್ಲಚ್ ಗೇರ್‌ಬಾಕ್ಸ್‌ಗಾಗಿ ಫ್ಯಾನ್ಸಿ ಶಿಫ್ಟರ್, ಹಿಂಭಾಗ ಎಸಿ ವೆಂಟ್ಸ್, ಸೆಕೆಂಡ್ ಜನರೇಷನ್ ಐಆರ್‌ಎ ಕನೆಕ್ಟ್ದ್ ಕಾರ್ ಟೆಕ್, ವಾಯ್ಸ್ ಕಂಟ್ರೋಲ್ ಎಲೆಕ್ಟ್ರಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು 382-ಲೀಟರ್ ಬೂಟ್ ಸ್ಪೇಸ್ ಪಡೆದಿದೆ.

ಇನ್ನು ಟಾಟಾ ಆಲ್ಟ್ರೋಝ್ ಕಾರಿನ ಆಫರ್ ಕುರಿತಾಗಿ ನೋಡುವುದಾದರೆ, ಸುಮಾರು 35000 ರೂಗಳ ವರೆಗೆ ಈ ಕಾರಿಗೆ ಆಫರ್ ಅನ್ನು ಟಾಟಾ ನೀಡುತ್ತಿದೆ. ಇದರ ಸಿಎನ್‌ಜಿ ಆವೃತ್ತಿಗೂ ಸುಮಾರು ೨೦೦೦೦ ರೂಗಳ ಆಫರ್ ಸಿಗುತ್ತಿದೆ. ಈ ಕಾರು, ರೂ.6.60 ಲಕ್ಷದಿಂದ ರೂ.10.74 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದ್ದು, ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ.
ಈ ಟಾಟಾ ಆಲ್ಟ್ರೋಜ್ ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ ಎಂಜಿನ್ ಆಯ್ಕೆಯಲ್ಲಿ ದೊರೆಯುತ್ತದೆ. ಇದರ 1.2-ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ 86 ಪಿಎಸ್ ಪವರ್, 113 ಏನ್ಎಂ ಪೀಕ್ ಟಾರ್ಕ್, 1.2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 110 ಪಿಎಸ್ ಪವರ್, 140 ಏನ್ಎಂ ಪೀಕ್ ಟಾರ್ಕ್, 1.5-ಲೀಟರ್ ಡೀಸೆಲ್ ಎಂಜಿನ್ 90 ಪಿಎಸ್ ಪವರ್ ಮತ್ತು 200 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications