ಟಾಟಾ ನೆಕ್ಸಾನ್ CNG ಅಥವಾ ಮಾರುತಿ ಬ್ರೆಝಾ CNG... ಯಾವುದನ್ನು ಖರೀದಿಸಬೇಕು?
ಟಾಟಾ ಮೋಟಾರ್ಸ್ ಭಾರತ್ ಮೊಬಿಲಿಟಿ ಶೋ 2024 ರಲ್ಲಿ ಮುಖ್ಯ ಆಕರ್ಷಣೆಯನ್ನು ಪಡೆಯಿತು. ಹೊಸ Nexon i-CNG ಅನ್ನು ಪ್ರದರ್ಶಿಸುವ ಮೂಲಕ ಟಾಟಾ ಮೋಟಾರ್ಸ್, ಮಾರುತಿ ನಂತರ ಕಂಪನಿ-ನೀಡುವ CNG ಕಿಟ್‌ನೊಂದಿಗೆ ಕಾಂಪ್ಯಾಕ್ಟ್ SUV ಅನ್ನು ನೀಡುವ ಎರಡನೇ ಭಾರತದ ಅತಿದೊಡ್ಡ ವಾಹನ ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ.
ಸದ್ಯ ಭಾರತದಲ್ಲಿ ಕಾಂಪ್ಯಾಕ್ಟ್ CNG ಎಸ್‌ಯುವಿ ವಿಭಾಗದ ನೇತೃತ್ವವನ್ನು ಮಾರುತಿ ಸುಜುಕಿ ಬ್ರೆಝಾ ವಹಿಸಿದೆ. ಆದರೂ Nexon i-CNG ಯೊಂದಿಗಿನ ತಂತ್ರಜ್ಞಾನವು ಇದಕ್ಕಿಂತ ವಿಭಿನ್ನವಾಗಿದೆ. ಇದು ಎಷ್ಟು ವಿಭಿನ್ನವಾಗಿದೆ? ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ, ಅಂದರೆ ಟಾಟಾ ನೆಕ್ಸಾನ್ ಸಿಎನ್‌ಜಿ ಮತ್ತು ಮಾರುತಿ ಸುಜುಕಿ ಬ್ರೆಝಾ ಸಿಎನ್‌ಜಿ ವಿಶೇಷತೆಗಳನ್ನು ಹೋಲಿಕೆ ಮಾಡಿ ನೋಡೋಣ.

ಟಾಟಾ ನೆಕ್ಸನ್ ಸಿಎನ್‌ಜಿ: ಟಾಟಾ ನೆಕ್ಸಾನ್ i-CNG ಅನ್ನು ಇತ್ತೀಚೆಗೆ ಭಾರತ್ ಮೊಬಿಲಿಟಿ ಶೋ 2024 ರಲ್ಲಿ ಪ್ರದರ್ಶಿಸಲಾಯಿತು. ಇದು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಮೊಟ್ಟಮೊದಲ ಟರ್ಬೊ-ಪೆಟ್ರೋಲ್-ಚಾಲಿತ CNG ಕಾರಾಗಿ ಹೊರಹೊಮ್ಮಿದೆ. ಅಲ್ಲದೆ ಇದು ಟ್ವಿನ್ - ಸಿಲಿಂಡರ್ ಸಿಎನ್‌ಜಿ ತಂತ್ರಜ್ಞಾನವನ್ನು ಹೊಂದಿದ್ದು, ಸುಮಾರು 230 ಲೀಟರ್ ಬೂಟ್ ಸ್ಪೇಸ್‌ನೊಂದಿಗೆ 60 ಲೀಟರ್ ಗ್ಯಾಸ್ ಅನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.
ಟಾಟಾ ನೀಡುವ ಟ್ವಿನ್ ಸಿಲಿಂಡರ್ ಟೆಕ್ನಾಲಜಿಯಿಂದಲೇ ಸದ್ಯ ಭಾರತದಲ್ಲಿ ಇತರ ವಾಹನ ತಯಾರಕರಿಂದ ಟಾಟಾ ಮೋಟಾರ್ಸ್ ಭಿನ್ನಾವಾಗಿದೆ. ಇನ್ನು ಟಾಟಾ ನೆಕ್ಸಾನ್ ಪವರ್‌ಟ್ರೇನ್‌ನ ವಿಷಯಕ್ಕೆ ಬಂದರೆ ಪವರ್ ಉತ್ಪಾದನೆಯನ್ನು ವಾಹನ ತಯಾರಕರು ಬಹಿರಂಗಪಡಿಸಿಲ್ಲ. ಆದರೂ ನಮಗಿರುವ ಮಾಹಿತಿಯ ಪ್ರಕಾರ ಪೆಟ್ರೋಲ್ ಚಾಲಿತ ಎಂಜಿನ್ ಅನ್ನು 118bhp ಪವರ್ ಮತ್ತು 170Nm ಟಾರ್ಕ್ ಉತ್ಪಾದಿಸಲು ಟ್ಯೂನ್ ಮಾಡಲಾಗಿದೆ.

ಇದಲ್ಲದೆ, ನೆಕ್ಸಾನ್ i-CNG ಮೈಕ್ರೋ ಸ್ವಿಚ್, ಸೋರಿಕೆ-ನಿರೋಧಕ ವಸ್ತುಗಳು (Leak-proof materials), ಥರ್ಮಲ್ ಘಟನೆಯ ರಕ್ಷಣೆ (Thermal event protection), ಸಿಂಗಲ್ ಸುಧಾರಿತ ECU, CNG ಮೋಡ್‌ನಲ್ಲಿ ನೇರ ಪ್ರಾರಂಭ, ಇಂಧನಗಳ ನಡುವೆ ಆಟೋ ಸ್ವಿಚ್, ಮಾಡ್ಯುಲರ್ ಫ್ಯೂಯಲ್ ಫಿಲ್ಟರ್ ಮತ್ತು ಸೋರಿಕೆ ಪತ್ತೆ ವೈಫಲ್ಯದಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.
ಮಾರುತಿ ಸುಜುಕಿ ಬ್ರೆಝಾ CNG: ಮಾರುತಿ ಸುಜುಕಿ ಬ್ರೆಝಾವನ್ನು ಭಾರತದಲ್ಲಿ ಮೊದಲ ಬಾರಿಗೆ ಮಾರ್ಚ್ 2023 ರಲ್ಲಿ ಪರಿಚಯಿಸಲಾಯಿತು. ಇದು ಮೂರು ರೂಪಾಂತರಗಳಲ್ಲಿ ಲಭ್ಯವಿದೆ, ಅವುಗಳೆಂದರೆ, LXi, VXi ಮತ್ತು ZXi ವೇರಿಯೆಂಟ್‌ಗಳಾಗಿವೆ. ಇದರ ಆರಂಭಿಕ ಬೆಲೆಯು ರೂ. 9.29 ಲಕ್ಷ (ಎಕ್ಸ್ ಶೋ ರೂಂ) ವಾಗಿದೆ.
ಈ SUV 1.5 - ಲೀಟರ್ K15C ನ್ಯಾಚುರಲ್ಲಿ ಆಸ್ಪೈರ್ಡ್ ಪೆಟ್ರೋಲ್ ಎಂಜಿನ್ ಅನ್ನು ಕಾರ್ಖಾನೆಯಲ್ಲಿ ಅಳವಡಿಸಲಾಗಿರುವ, ಸಿಂಗಲ್-ಸಿಲಿಂಡರ್ CNG ಕಿಟ್‌ನೊಂದಿಗೆ ಬರುತ್ತದೆ. ಈ ಮೋಟಾರ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. 87bhp ಪವರ್ ಮತ್ತು 121Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








