Tata Nexon CNG: ಟಾಟಾ ನೆಕ್ಸಾನ್ ಸಿಎನ್‌ಜಿ ಕಾರು ಮೊದಲ ಬಾರಿಗೆ ಪ್ರದರ್ಶನ, ಭಾರೀ ಮೈಲೇಜ್..!
ಭಾರತದ ಕಾರು ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ (Tata Motors) ಅಧಿಪತ್ಯ ಸಾಧಿಸಲು ಪ್ರಯತ್ನಿಸುತ್ತಿದೆ. ಅದರ ಭಾಗವಾಗಿ ಸಿಎನ್‌ಜಿ ವಿಭಾಗವನ್ನು ಬಲಪಡಿಸುತ್ತಿದೆ. ಇತ್ತೀಚೆಗೆ ಟಿಯಾಗೊ (Tiago) ಮತ್ತು ಟಿಗೂರ್ (Tigor) ಸಿಎನ್‌ಜಿ ಆಟೋಮೆಟಿಕ್ ರೂಪಾಂತರಗಳ ಬುಕ್ಕಿಂಗ್ ಅನ್ನು ಶುರು ಮಾಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.
ಇಂದಿನಿಂದ ದೆಹಲಿಯಲ್ಲಿ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ (Bharat Mobility Global Expo 2024) ಪ್ರಾರಂಭವಾಗಿದ್ದು, ಇದೇ ಮೊದಲ ಬಾರಿಗೆ ನೆಕ್ಸಾನ್ ಸಿಎನ್‌ಜಿ ಕಾನ್ಸೆಪ್ಟ್ ಕಾರನ್ನು ಪ್ರದರ್ಶನ ಮಾಡಲಾಗಿದೆ. ಈ ಎಸ್‌ಯುವಿ ಹಲವು ವಿಶೇಷತೆಗಳನ್ನು ಹೊಂದಿದ್ದು, ಪ್ರಥಮ ಟರ್ಬೊ ಪೆಟ್ರೋಲ್ ಚಾಲಿತ ಸಿಎನ್‌ಜಿ ಕಾರಾಗದೆ. ಕಂಪನಿಯ ಟ್ವಿನ್ ಸಿಲಿಂಡರ್ ತಂತ್ರಜ್ಞಾನ (Technology)ವನ್ನು ಪಡೆದಿದೆ.

ಟಾಟಾ ನೆಕ್ಸಾನ್ ಸಿಎನ್‌ಜಿ ಕಾರಿನ ಕಾರ್ಯಕ್ಷಮತೆ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಇದು 1.2 - ಲೀಟರ್ 3 - ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿರುವ ನೀರಿಕ್ಷೆಯಿದ್ದು, 118 ಬಿಹೆಚ್‌ಪಿ ಗರಿಷ್ಠ ಪವರ್ ಹಾಗೂ 170 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿರುವ ಸಾಧ್ಯತೆಯಿದೆ.
ಈ ಕಾರು, ರೂಪಾಂತರಗಳಿಗೆ ಅನುಗುಣವಾಗಿ 5 - ಸ್ವೀಡ್ ಮ್ಯಾನುವಲ್ ಅಥವಾ ಆಟೋಮೆಟಿಕ್ ಆಯ್ಕೆಯಲ್ಲಿ ಸಿಗಬಹುದು. ಜೊತೆಗೆ ಸಿಎನ್‌ಜಿ ಕಿಟ್ ಒಳಗೊಂಡಿದ್ದರೂ 230 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್ ಪಡೆದಿರಲಿದೆ ಎಂದು ತಿಳಿದುಬಂದಿದೆ. ವಿನ್ಯಾಸದ ಬಗ್ಗೆ ಹೇಳುವುದಾದರೆ, ನೆಕ್ಸಾನ್ ಸಿಎನ್‌ಜಿ ಎಸ್‌ಯುವಿ, ಕಳೆದ ಕೆಲವು ತಿಂಗಳ ಹಿಂದೆ ಬಿಡುಗಡೆಯಾದ ನೆಕ್ಸಾನ್ ಫೇಸ್‌ಲಿಫ್ಟ್ ಆವೃತ್ತಿಗೆ ಹೋಲಿಕೆಯಾಗುವುದನ್ನು ಚಿತ್ರದಲ್ಲಿ ಗಮನಿಬಹುದು.

ಹೊಸ ನೆಕ್ಸಾನ್ ಸಿಎನ್‌ಜಿ ಮಾದರಿ ನವೀನವಾದ ಸಿಗ್ನೇಚರ್ ಎಲ್ಇಡಿ ಡಿಆರ್‌ಎಲ್, ಆಕರ್ಷಕ ಎಲ್ಇಡಿ ಲೈಟ್‌ಬಾರ್, ನೂತನ ಹೆಡ್‌ಲೈಟ್, ಫಾಗ್‌ಲ್ಯಾಂಪ್, ಅತ್ಯಾಧುನಿಕ ಗ್ರಿಲ್ ಮತ್ತು ಬಂಪರ್ ಹೊಂದಿದೆ. ಹಿಂಭಾಗದ ವಿನ್ಯಾಸವು ಅತ್ಯುತ್ತಮವಾಗಿದ್ದು, ಕನೆಕ್ಟ್ದ್ ಎಲ್ಇಡಿ ಟೈಲ್ ಲೈಟ್ ಪಡೆದಿದೆ. ಒಳಭಾಗವು ನೆಕ್ಸಾನ್ ಫೇಸ್‌ಲಿಫ್ಟ್ ಎಸ್‌ಯುವಿಯಂತೆ ಆಕರ್ಷಕ ವೈಶಿಷ್ಟ್ಯ ಹೊಂದಿರುವ ಸಾಧ್ಯತೆಯಿದೆ.
ಟಾಟಾ, ನೂತನ ನೆಕ್ಸಾನ್ ಸಿಎನ್‌ಜಿ ಕಾರಿನ ಬೆಲೆ ಹಾಗೂ ಮೈಲೇಜ್ ಕುರಿತು ಎಲ್ಲಿಯೂ ಮಾಹಿತಿ ಬಹಿರಂಗಪಡಿಸಲ್ಲ. ಆದರೂ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗಬಹುದು ಎಂದು ಅಂದಾಜಿಸಲಾಗಿದೆ. ಮೈಲೇಜ್ ವಿಚಾರಕ್ಕೆ ಬರುವುದಾದರೆ, ಸಿಎನ್‌ಜಿ ಚಾಲಿತ ಟಾಟಾ ಪಂಚ್ ಕಾರು 26.99 kmpl ಮೈಲೇಜ್ ನೀಡಲಿದ್ದು, ಅದಕ್ಕೆ ಹೋಲಿಕೆ ಮಾಡಿದರೆ ಹೊಸ ನೂತನ ನೆಕ್ಸಾನ್ ಸಿಎನ್‌ಜಿ ಮಾದರಿ ಗರಿಷ್ಠ ಇಂಧನ ದಕ್ಷತೆ ಹೊಂದಿದೆ ಎನ್ನಲಾಗಿದೆ.

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ರೂ.8.10 ಲಕ್ಷದಿಂದ ರೂ.15.50 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಸಿಗಲಿದ್ದು, ಪ್ರತಿ ಲೀ.ಗೆ 17.01 - 24.08 ಕಿ.ಮೀ ಮೈಲೇಜ್ ಕೊಡುತ್ತದೆ. 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್, 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಟಾಟಾ ನೆಕ್ಸಾನ್ ಇವಿ (Tata Nexon EV) ರೂ.14.74 ಲಕ್ಷದಿಂದ ರೂ.19.94 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗುತ್ತದೆ. 30 - 40.5 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದ್ದು, ಕ್ರಮವಾಗಿ 325 ಕಿ.ಮೀ ರಿಂದ 465 ಕಿ.ಮೀ ರೆಂಜ್ (ಮೈಲೇಜ್) ನೀಡುತ್ತದೆ. 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications