ಪ್ರಸ್ತುತ ಭಾರತದ ನಂ.1 ಕಾರು ಇದೆ: ಅತಿ ಹೆಚ್ಚು ಮಾರಾಟ, ಅಗ್ಗದ ಬೆಲೆಯಲ್ಲಿ ಆಧುನಿಕ ಫೀಚರ್ಸ್!
ಹೊಸ ಟಾಟಾ ನೆಕ್ಸಾನ್ ಈಗ ಹಿಂದೆಂದಿಗಿಂತಲೂ ಹೆಚ್ಚು ಜನಪ್ರಿಯವಾಗಿದೆ. ಹೆಚ್ಚು ನವೀಕರಿಸಿದ ಹೊಸ ಆವೃತ್ತಿಯು ಭಾರತದಲ್ಲಿ ಹೆಚ್ಚು ಮಾರಾಟವಾಗುವ (ಇವಿ ಒಳಗೊಂಡಂತೆ)ಕಾರು ಎನಿಸಿಕೊಂಡಿದೆ. ಕಳೆದ ಡಿಸೆಂಬರ್‌ನಲ್ಲಿ ಟಾಟಾ ಮೋಟಾರ್ಸ್ ತನ್ನ ನೆಕ್ಸಾನ್ ಮಾದರಿಯ ಗರಿಷ್ಠ 15,284 ಯುನಿಟ್‌ಗಳನ್ನು ಮಾರಾಟ ಮಾಡಿ, ದೇಶದಲ್ಲಿ ಮಾರಾಟವಾದ ಇತರ ಎಲ್ಲ ಕಾರುಗಳನ್ನು ಮೀರಿಸಿದೆ.
ಭಾರತದಲ್ಲಿ ಕಾಂಪ್ಯಾಕ್ಟ್ SUV ಮಾರುಕಟ್ಟೆಯು ವೇಗವಾಗಿ ಬೆಳೆಯುತ್ತಿದೆ. ಅದರಲ್ಲೂ ನೆಕ್ಸಾನ್‌ನ ಹೆಚ್ಚುತ್ತಿರುವ ಮಾರಾಟವು ಗ್ರಾಹಕರನ್ನು SUV ಗಳ ಕಡೆಗೆ ಹೆಚ್ಚು ಬದಲಾಗುವಂತೆ ಮಾಡುತ್ತಿದೆ. ಈ ಕಾಂಪ್ಯಾಕ್ಟ್ SUV ವಿಭಾಗವು ಜನರು ಕಾರುಗಳನ್ನು ಖರೀದಿಸುವ ವಿಧಾನವನ್ನೆ ಬದಲಾಯಿಸಿದೆ. ಇದಕ್ಕೆ ಟಾಟಾ ನೆಕ್ಸಾನ್ ಮಾರಾಟದ ಅಂಕಿಅಂಶಗಳೆ ಸಾಕ್ಷಿಯಾಗಿವೆ.

ಹೊಸ ಟಾಟಾ ನೆಕ್ಸಾನ್ ಕಳೆದ ವರ್ಷ (2023) ನವೆಂಬರ್‌ನಲ್ಲಿ 14,916 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಇದು ನವೆಂಬರ್ 2022 ರಲ್ಲಿ ಮಾರಾಟವಾದಕ್ಕಿಂತ ಹೆಚ್ಚು. ಈಗ ಹೊಸ ಫೇಸ್‌ಲಿಫ್ಟ್ ನೆಕ್ಸಾನ್ ಮಾದರಿ ಬಿಡುಗಡೆಯೊಂದಿಗೆ, ಅದರ ಮಾರಾಟವೂ ಸಹ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಇದೇ ಕಾರು ಎಲೆಕ್ಟ್ರಿಕ್ ಆವೃತ್ತಿಯಲ್ಲೂ ಲಭ್ಯವಿದ್ದು, ಸದ್ಯ ಇವಿ ವಿಭಾಗದಲ್ಲೂ ಧೂಳೆಬ್ಬಿಸುತ್ತಿದೆ.
ಹೆಗಿವೆ ವೈಶಿಷ್ಟ್ಯಗಳು?: ಇತ್ತೀಚೆಗೆ ಬಿಡುಗಡೆಯಾದ ಹೊಸ ಟಾಟಾ ನೆಕ್ಸಾನ್ ಸಂಪೂರ್ಣವಾಗಿ ಹೊಸ ಲುಕ್‌ನೊಂದಿಗೆ ಬಂದಿದೆ. ಇದು ಇತರ ಟಾಟಾ ಕಾರುಗಳಿಗಿಂತ ಹೊಸ ವಿನ್ಯಾಸದ ಥೀಮ್ ಹೊಂದಿದೆ. ಇದರ EV ಆವೃತ್ತಿ ಕೂಡ ತುಂಬಾ ವಿಭಿನ್ನವಾಗಿ ಕಾಣುತ್ತದೆ. ಇನ್ನು ಇಂಟೀರಿಯರ್ ತನ್ನ ವಿಭಾಗಕ್ಕೆ ತಕ್ಕಂತೆ ಆಧುನಿಕ ಪ್ರೀಮಿಯಂ ಆಗಿ ಕಾಣುತ್ತದೆ.

ದೊಡ್ಡ ಟಚ್‌ಸ್ಕ್ರೀನ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 360 ಡಿಗ್ರಿ ಕ್ಯಾಮೆರಾ, ಸಂಪರ್ಕಿತ ಕಾರ್ ತಂತ್ರಜ್ಞಾನ, ಏರ್ ಪ್ಯೂರಿಫೈಯರ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ವಾಯ್ಸ್ ಅಸಿಸ್ಟೆಡ್ ಸನ್‌ರೂಫ್ ಮತ್ತು ಇನ್ನೂ ಅನೇಕ ಪ್ರೀಮಿಯಂ ವೈಶಿಷ್ಟ್ಯಗಳನ್ನು ಒಳಗೊಂಡಂತೆ ಅನೇಕ ಹೆಚ್ಚುವರಿ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇದು ಸ್ಟ್ಯಾಂಡರ್ಡ್ ಆಗಿ ಆರು ಏರ್‌ಬ್ಯಾಗ್‌ಗಳನ್ನು ಹೊಂದಿದೆ.
ಎಂಜಿನ್: ಸ್ಟ್ಯಾಂಡರ್ಡ್ ICE ನೆಕ್ಸಾನ್ 1.2-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್‌ನೊಂದಿಗೆ ಬರುತ್ತದೆ. ಇತ್ತೀಚೆಗೆ ನವೀಕರಿಸಿದ ಮಾದರಿಯು AMT/ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಹೊಸ DCT ಗೇರ್‌ಬಾಕ್ಸ್ ಅನ್ನು ಒಳಗೊಂಡಿದೆ. ಇದೇ Nexon EV ಮಾದರಿಯು ಈಗ ದೊಡ್ಡ ಟಚ್‌ಸ್ಕ್ರೀನ್, ಹೊಸ ಬ್ಯಾಟರಿ, ಉತ್ತಮ ರೇಂಜ್ ಹೊಂದಿದೆ.

Tata ICE Nexon ಎಕ್ಸ್ ಶೋ ರೂಂ ಬೆಲೆಗಳು ರೂ. 8.10 ಲಕ್ಷ ರೂ. ನಿಂದ ಆರಂಭವಾಗುತ್ತವೆ. ಇದರ ಟಾಪ್ ವೇರಿಯೆಂಟ್ ಬೆಲೆಯು 15.5 ಲಕ್ಷವೆರೆಗೆ ಇದೆ. ಇದೇ ನೆಕ್ಸಾನ್ ಇವಿ ಆವೃತ್ತಿಯ ಬೆಲೆಯು ರೂ. 14.7 ಲಕ್ಷದಿಂದ ಆರಂಭಾವಗುತ್ತದೆ. ಟಾಪ್ ವೇರಿಯೆಂಟ್ ರೂ. 19.9 ಲಕ್ಷವಿದೆ.
ಇವಿ ವಿಭಾಗದಲ್ಲಿ ಹೊಸ ಸಂಚಲನ: ಟಾಟಾ ಮೋಟಾರ್ಸ್ ಇವಿ ವಿಭಾಗದಲ್ಲಿ ಹೊಸ ಇನ್ನಿಂಗ್ಸ್ ಅನ್ನು ಪಂಚ್ EV ನೊಂದಿಗೆ ಪ್ರಾರಂಭಿಸಿದೆ. ಇದು ನಮ್ಮ ಭಾರತೀಯ ಮಾರುಕಟ್ಟೆಯಲ್ಲಿ ಚಿಕ್ಕ ಎಲೆಕ್ಟ್ರಿಕ್ SUV ಆಗಿದೆ. ಟಾಟಾ ಪಂಚ್ ಎಲೆಕ್ಟ್ರಿಕ್ ಕಾಂಪ್ಯಾಕ್ಟ್ SUV ನಮ್ಮ ದೇಶದಲ್ಲಿ ಜನವರಿ 17 ರಂದು ಬಿಡುಗಡೆಯಾಗಲಿದೆ. ಇದರ ಬುಕಿಂಗ್ ಈಗಾಗಲೇ ರೂ. 21,000 ಟೋಕನ್ ಮೊತ್ತದೊಂದಿಗೆ ಪ್ರಾರಂಭಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications