Tata Nexon: ಟಾಟಾ ನೆಕ್ಸಾನ್‌ಗೆ ಮನಸೋತ ಗ್ರಾಹಕ.. ಪೆಟ್ರೋಲ್ ಕಾರಾದರೂ ಬೈಕ್‌ನಂತೆ ಮೈಲೇಜ್, 8 ಲಕ್ಷ ಬೆಲೆ

ಭಾರತದಲ್ಲಿ ಸುರಕ್ಷತೆ ವಿಚಾರದಲ್ಲಿ ಟಾಟಾ (Tata) ಕಾರುಗಳು ಜನರ ಮನಸ್ಸನ್ನು ಗೆದ್ದಿದ್ದು, ಆ ಕಾರಣಕ್ಕೆ ಪ್ರತಿಯೊಬ್ಬರು ಕಂಪನಿ ಮಾರಾಟಗೊಳಿಸುವ ವಿವಿಧ ಮಾದರಿಗಳನ್ನು ಇಷ್ಟಪಟ್ಟು ಖರೀದಿಸುತ್ತಾರೆ. 2023ರ ಸೆಪ್ಟೆಂಬರ್‌ನಲ್ಲಿ ಟಾಟಾ ನವೀಕರಿಸಿದ ನೆಕ್ಸಾನ್‌ ಎಸ್‌ಯುವಿಯನ್ನು ಬಿಡುಗಡೆಗೊಳಿಸಿತ್ತು. ಸದ್ಯ, ಜನವರಿ (2024)ಯಲ್ಲಿ ಈ ಕಾರು ಕೊಂಚ ಹೆಚ್ಚಿನ ಕಾಯುವಿಕೆ ಅವಧಿಯನ್ನು ಹೊಂದಿದೆ.

ಟಾಟಾ ನೆಕ್ಸಾನ್‌ ಎಸ್‌ಯುವಿಯ ಡಿಸಿಎ ರೂಪಾಂತರಗಳನ್ನು ನೀವು ಇವತ್ತು ಬುಕ್ಕಿಂಗ್ ಮಾಡಿದರೂ ವಿತರಣೆಯಾಗಲು 12 ವಾರಗಳು ಬೇಕಾಗುತ್ತದೆ. ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಈ ಕಾರು, 8 ವಾರಗಳ ಕಾಯುವಿಕೆ ಅವಧಿಯನ್ನು ಮಾತ್ರ ಹೊಂದಿತ್ತು. ಒಂದೇ ತಿಂಗಳಲ್ಲಿ ಅದು ಮತ್ತಷ್ಟು ಹೆಚ್ಚಾಗಿದ್ದು, ಗ್ರಾಹಕರಿಂದ ನೆಕ್ಸಾನ್‌ ಎಸ್‌ಯುವಿಗೆ ಎಷ್ಟರ ಮಟ್ಟಿಗೆ ಬೇಡಿಕೆಯಿದೆ ಎಂಬುದು ಸುಲಭವಾಗಿ ಅರ್ಥವಾಗಿತ್ತದೆ.

Tata Nexon: ಟಾಟಾ ನೆಕ್ಸಾನ್‌ಗೆ ಮನಸೋತ ಗ್ರಾಹಕ.. ಪೆಟ್ರೋಲ್ ಕಾರಾದರೂ ಬೈಕ್‌ನಂತೆ ಮೈಲೇಜ್, 8 ಲಕ್ಷ ಬೆಲೆ

ಡಿಸಿಎ (ಡ್ಯುಯಲ್-ಕ್ಲಚ್ ಆಟೋಮೆಟಿಕ್) ರೂಪಾಂತರಗಳನ್ನು ಹೊರತುಪಡಿಸಿ, ನೆಕ್ಸಾನ್‌ ಕಾರಿನ ಉಳಿದೆಲ್ಲ ರೂಪಾಂತರಗಳು ಡಿಲೆವರಿಯಾಗಲು 8 ವಾರಗಳು ಸಾಕು. ಮುಂಬೈ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಖರೀದಿದಾರರಿಗೆ ಮಾತ್ರ ಈ ಕಾಯುವಿಕೆ ಅವಧಿ ಅನ್ವಯವಾಗುತ್ತದೆ. ಆದರೆ, ರಾಜ್ಯದಿಂದ ರಾಜ್ಯಕ್ಕೆ ರೂಪಾಂತರ, ಬಣ್ಣಗಳನ್ನು ಆಧರಿಸಿ ಆ ಸಮಯಾವಕಾಶ ಬೇರೆಯಿರಲಿದ್ದು, ಹೆಚ್ಚಿನ ವಿವರಗಳಿಗೆ ಸಮೀಪದ ಡೀಲರ್‌ಶಿಪ್ ಅನ್ನು ಸಂಪರ್ಕಿಸಿರಿ.

ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಟಾಟಾ ನೆಕ್ಸಾನ್‌ ಎಸ್‌ಯುವಿ, ರೂ.8.10 ಲಕ್ಷದಿಂದ ರೂ.15.50 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಸ್ಮಾರ್ಟ್, ಪ್ಯೂರ್, ಕ್ರಿಯೇಟಿವ್ ಹಾಗೂ ಫಿಯರ್ ಲೆಸ್ ಎಂಬ ರೂಪಾಂತರ, ಕ್ರಿಯೇಟಿವ್ ಓಷನ್, ಫ್ಲೇಮ್ ರೆಡ್, ಪ್ಯೂರ್ ಗ್ರೇ, ಡೇಟೋನಾ ಗ್ರೇ, ಪ್ರಿಸ್ಟಿನ್ ವೈಟ್ ಕ್ಯಾಲ್ಗರಿ ವೈಟ್ ಸೇರಿದಂತೆ 7 ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ದೊರೆಯುತ್ತದೆ.

Tata Nexon: ಟಾಟಾ ನೆಕ್ಸಾನ್‌ಗೆ ಮನಸೋತ ಗ್ರಾಹಕ.. ಪೆಟ್ರೋಲ್ ಕಾರಾದರೂ ಬೈಕ್‌ನಂತೆ ಮೈಲೇಜ್, 8 ಲಕ್ಷ ಬೆಲೆ

ನೂತನ ಟಾಟಾ ನೆಕ್ಸಾನ್‌ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ನೊಂದಿಗೆ ಲಭ್ಯವಿದೆ. ಇದರ, 1.2 - ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 120 PS ಪವರ್, 170 Nm ಪೀಕ್ ಟಾರ್ಕ್, 1.5 - ಲೀಟರ್ ಡಿಸೇಲ್ ಎಂಜಿನ್ 115 PS ಗರಿಷ್ಠ ಪವರ್, 260 Nm ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ.

ಗೇರ್ ಬಾಕ್ಸ್ ಆಯ್ಕೆ ಬಗ್ಗೆ ಹೇಳುವುದಾದರೆ, ಈ ನೆಕ್ಸಾನ್‌ ಎಸ್‌ಯುವಿ 5 - ಸ್ವೀಡ್ ಮ್ಯಾನುವಲ್, 6 - ಸ್ವೀಡ್ ಮ್ಯಾನುವಲ್, 6 - ಸ್ವೀಡ್ ಆಟೋಮೆಟಿಕ್ (AMT) ಹಾಗೂ 7- ಸ್ವೀಡ್ ಡ್ಯುಯಲ್-ಕ್ಲಚ್ ಆಟೋಮೆಟಿಕ್ (ಡಿಸಿಎ) ಗೇರ್ ಬಾಕ್ಸ್ ಅನ್ನು ಒಳಗೊಂಡಿದೆ. ಮೈಲೇಜ್ ವಿಚಾರವಾಗಿ ಮಾತನಾಡುವುದಾದರೆ, ರೂಪಾಂತರಗಳಿಗೆ ಅನುಗುಣವಾಗಿ 17.01 - 24.08 kmpl ಇಂಧನ ದಕ್ಷತೆಯನ್ನು ಪಡೆದಿದೆ.

ಟಾಟಾ ನೆಕ್ಸಾನ್‌ 5 ಆಸನ ವ್ಯವಸ್ಥೆಯನ್ನು ಹೊಂದಿದ್ದು, ವಿನ್ಯಾಸ ದೃಷ್ಟಿಯಿಂದಲ್ಲೂ ಅತ್ಯುತ್ತಮವಾಗಿದೆ. ಇದು 10.25 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್, 10.25 - ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಆಟೋ ಎಸಿ, ವೈರ್‌ಲೆಸ್ ಫೋನ್ ಚಾರ್ಜಿಂಗ್, ಕ್ರೂಸ್ ಕಂಟ್ರೋಲ್, ಪ್ಯಾಡಲ್ ಶಿಫ್ಟರ್‌, 9 - ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಮ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಸುರಕ್ಷತೆಯ ವಿಚಾರದಲ್ಲಿ ಟಾಟಾ ನೆಕ್ಸಾನ್‌ ಎಸ್‌ಯುವಿಗೆ ಸರಿ ಸಾಟಿಯೇ ಇಲ್ಲ ಎಂದು ಹೇಳಬಹುದು. 6 ಏರ್‌ಬ್ಯಾಗ್‌, EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಹಾಗೂ 360-ಡಿಗ್ರಿ ಕ್ಯಾಮೆರಾವನ್ನು ಒಳಗೊಂಡಿದೆ. ಈ ಕಾರಿಗೆ ಕಿಯಾ ಸೋನೆಟ್, ರೆನಾಲ್ಟ್ ಕಿಗರ್, ಮಾರುತಿ ಸುಜುಕಿ ಬ್ರೆಝಾ ಸೇರಿದಂತೆ ಹಲವು ಪ್ರತಿಸ್ಪರ್ಧಿಗಳಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, January 4, 2024, 10:44 [IST]
English summary
Tata nexon suv january 2024 waiting period revealed mileage like bike
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+