ಮೂರು ಲಕ್ಷ ಯೂನಿಟ್‌ ಮಾರಾಟದ ದಾಖಲೆ: ಕಿರೀಟವಿಲ್ಲದ ರಾಜನಾಗಿ ಮೆರೆಯುತ್ತಿರುವ ಟಾಟಾ ಪಂಚ್‌

ಭಾರತದ ಹೆಮ್ಮೆಯ ಕಾರು ನಿರ್ಮಾಣ ಕಂಪನಿಯಾದ ಟಾಟಾ, ದಿನ ಕಳೆದಂತೆ ಒಂದಿಲ್ಲೊಂದು ದಾಖಲೆಯನ್ನು, ಮೈಲುಗಲ್ಲನ್ನು ಭಾರತೀಯ ವಾಹನ ಕ್ಷೇತ್ರದಲ್ಲಿ ಸೃಷ್ಟಿಮಾಡುತ್ತಲೇ ಇದೆ. ಅದೇ ರೀತಿ ದಿನ ಕಳೆದಂತೆ ಟಾಟಾ ಕಾರುಗಳ ಮೇಲೆ ಭಾರತೀಯರು ತೋರುತ್ತಿರುವ ಒಲವು ಕೂಡ ಹೆಚ್ಚಾಗುತ್ತಿದೆ ಎಂದರೆ ತಪ್ಪಾಗಲಾರದು.

ಇದೀಗ ಟಾಟಾ ಸುದ್ದಿಯಾಗುತ್ತಿರುವುದು ಮೈಕ್ರೋ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಕೆಲ ವರ್ಷಗಳ ಹಿಂದೆ ಮಾರುಕಟ್ಟೆಗೆ ಪರಿಚಯಿಸಿದ ಪಂಚ್‌ ಎಂಬ ಕಾರಿನಿಂದ. ಟಾಟಾ ಪಂಚ್‌ (Tata Punch) ಬಗ್ಗೆ ಅರಿವಿಲ್ಲದೇ ಇರುವವರ ಸಂಖ್ಯೆ ಬಹಳ ಕಮ್ಮಿಯೇ ಎನ್ನಬಹುದು. ಈ ಕಾರು ಲಾಂಚ್‌ ಆದಾಗಿನಿಂದ ಇಂದಿನವರೆಗೆ ಭಾರತೀಯ ಮೈಕ್ರೋ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಉತ್ತಮ ಪ್ರದರ್ಶನವನ್ನು ತೋರುತ್ತಿದ್ದು, ಹಲವಾರು ಮಧ್ಯಮ ವರ್ಗದ ಕುಟುಂಬದ ನೆಚ್ಚಿನ ಆಯ್ಕೆಯೂ ಸಹ ಆಗಿದೆ. 


Tata Punch

ಈ ವರ್ಷದ ಆರಂಭದಲ್ಲಿಯೇ ಟಾಟಾ ಪಂಚ್‌ ಹೊಸ ಮೈಲುಗಲ್ಲನ್ನು ಸಾಧಿಸಿದ್ದು, ಮಾಹಿತಿಗಳ ಪ್ರಕಾರ ಟಾಟಾ ಪಂಚ್‌ ಇಲ್ಲಿಯವರೆಗೆ ಸುಮಾರು 3 ಲಕ್ಷ ಯೂನಿಟ್‌ಗಳನ್ನು ಭಾರತದಲ್ಲಿ ಮಾರಾಟ ಮಾಡಿದೆ. ಹೌದು, ಇನ್ನೊಂದು ಪ್ರಮುಖ ವಿಷಯವೇನು ಎಂದರೆ ಕಳೆದ ಒಂಬತ್ತು ತಿಂಗಳಲ್ಲಿ ಈ ಕಾರಿನ ಮಾರಾಟ ಸಾಕಷ್ಟು ಹೆಚ್ಚಾಗಿದ್ದು, ಈ ಅವಧಿಯಲ್ಲಿ ಟಾಟಾ ಪಂಚ್‌ ಸುಮಾರು ಒಂದು ಲಕ್ಷ ಯೂನಿಟ್‌ ಮಾರಾಟವಾಗಿದೆ ಎಂದು ತಿಳಿದು ಬಂದಿದೆ.

ಟಾಟಾ ಮೋಟಾರ್ಸ್‌ನ ಎಸ್‌ಯುವಿ ಲೈನ್‌ ಪಂಚ್‌‌ಗಳಲ್ಲಿ ಟಾಟಾ ಪಂಚ್‌ ಅತೀ ಚಿಕ್ಕ ಎಸ್‌ಯುವಿ ಆಗಿದೆ. ಭಾರತೀಯ ಮೈಕ್ರೋ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ವೀರಾಜಮಾನವಾಗಿ ಮೆರೆಯುತ್ತಿದ್ದ ಟಾಟಾ ಪಂಚ್‌ಗೆ ಇತ್ತೀಚೆಗಷ್ಟೇ ಹ್ಯುಂಡೈ ಎಕ್ಸ್‌ಟರ್‌ ಎಂಬ ಕಾರನ್ನು ಲಾಂಚ್‌ ಮಾಡುವ ಮೂಲಕ ಪ್ರತಿಸ್ಪರ್ಧಿಯನ್ನು ಒಡ್ಡಿತ್ತು. ಆದರೆ ಇದಕ್ಕೆ ಬೆದರದ ಪಂಚ್‌, ಭಾರತೀಯ ಮಾರುಕಟ್ಟೆಯಲ್ಲಿ ತನ್ನ ನಾಗಾಲೋಟವನ್ನು ಮುಂದುವರೆಸಿದೆ.

ಇನ್ನು ಟಾಟಾ ಪಂಚ್‌ ಎರಡು ಇಂಧನದ ಆಯ್ಕೆಯ ಮಾದರಿಯಲ್ಲಿ ಲಭ್ಯವಿದೆ. ಪಂಚ್,‌ ಪೆಟ್ರೋಲ್‌ ಮತ್ತು ಸಿಎನ್‌ಜಿ ಆಯ್ಕೆಗಳಲ್ಲಿ ಲಭ್ಯವಿದ್ದು ಈ ಕಾರು ಇಷ್ಟೊಂದು ಮಾರಾಟವಾಗಲು ಇದೂ ಸಹ ಪ್ರಮುಖ ಕಾರಣ ಎಂಬುದು ಎಲ್ಲರ ಅಭಿಪ್ರಾಯ. ಈ ಕಾರಣ ಒಂದು ಲೆಕ್ಕದಲ್ಲಿ ನೋಡುವುದಾದರೆ ಸಮಂಜಸವೂ ಹೌದು. ಮಾಹಿತಿಗಳ ಪ್ರಕಾರ ಟಾಟಾ ಪಂಚ್‌ ಈ ವರ್ಷದಲ್ಲಿ ಎಲೆಕ್ಟ್ರಿಕ್‌ ಮಾದರಿಯಲ್ಲಿಯೂ ಲಭ್ಯವಾಗಲಿದೆ ಎಂದು ತಿಳಿದು ಬಂದಿದೆ.

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಇಂಧನ ಚಾಲಿತ ಟಾಟಾ ಪಂಚ್ ಕಾರಿನ ಬಗ್ಗೆ ಮಾತನಾಡುವುದಾದರೆ, ವೇರಿಯಂಟ್‌ಗಳಿಗೆ ಅನುಗುಣವಾಗಿ ರೂ.6 ಲಕ್ಷದಿಂದ ರೂ.10.10 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. 1.2 - ಲೀಟರ್ ಸಾಮರ್ಥ್ಯದ ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯಲ್ಲಿ ದೊರೆಯಲಿದ್ದು, 20.09 kmpl ರಿಂದ 26.99 km/kg ಮೈಲೇಜ್ ನೀಡುತ್ತದೆ.

ಹಲವಾರು ಬಣ್ಣಗಳ ಆಯ್ಕೆಯಲ್ಲಿ ದೊರೆಯುವ ಈ ಟಾಟಾ ಪಂಚ್, 7 - ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, 7 - ಇಂಚಿನ ಸೆಮಿ - ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌, ಆಟೋ ಕ್ಲೇಮೇಟ್ ಕಂಟ್ರೋಲ್ ಮತ್ತು ಕ್ರೂಸ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಂ) ಅನ್ನು ಹೊಂದಿದೆ.

ಮಾಹಿತಿಗಳ ಪ್ರಕಾರ ಮುಂಬರಲಿರುವ ಟಾಟಾ ಪಂಚ್ ಇವಿ, ಟಿಗೂರ್ ಇವಿ ಹಾಗೂ ಟಿಯಾಗೊ ಇವಿಯಂತೆ 26 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಪಡೆದಿರಲಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 300 km ರೇಂಜ್ ನೀಡುವ ಸಾಮರ್ಥ್ಯ ಹೊಂದಿರಬಹುದು. ಜೊತೆಯಲ್ಲಿ 7.2 kW ಎಸಿ ಚಾರ್ಜರ್ ಹಾಗೂ ಡಿಸಿ ಫಾಸ್ಟ್ ಚಾರ್ಜರ್ ಆಯ್ಕೆಯಲ್ಲಿ ಖರೀದಿಗೆ ದೊರೆಯಬಹುದು ಎಂಬ ಮಾತುಗಳು ಕೇಳಿ ಬರುತ್ತಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, January 4, 2024, 15:39 [IST]
English summary
Tata punch completes 3 lakh production units milestone
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+