ಕೊನೆಗೂ ಹೊರಬಂತು ಟಾಟಾ ಪಂಚ್ ಎಲೆಕ್ಟ್ರಿಕ್‌ ವಿಶೇಷತೆಗಳು: ಬುಕಿಂಗ್‌ ಓಪನ್‌, ಕೂಡಲೇ ತ್ವರೆ ಮಾಡಿ

2023 ರ ಭರ್ಜರಿ ಎಲೆಕ್ಟ್ರಿಕ್‌ ವಾಹನದ ಮಾರಾಟಗಳ ನಂತರ 2024ರಲ್ಲಿಯೂ ತನ್ನ ಜೈತ್ರಯಾತ್ರೆಯನ್ನು ಮುಂದುವರೆಸುವತ್ತ ಟಾಟಾ ಮುಖ ಮಾಡಿದೆ. ಇದಕ್ಕೆ ಮೊದಲ ಹೆಜ್ಜೆಯಾಗಿ ಈ ವರ್ಷದಲ್ಲಿಯೇ ಟಾಟಾ ತನ್ನ ಪಂಚ್‌ ಎಂಬ ಮೈಕ್ರೋ ಎಸ್‌ಯುವಿಗೆ ಎಲೆಕ್ಟ್ರಿಕ್‌ ಟಚ್‌ ನೀಡುತ್ತಿರುವುದು ಈಗಾಗಲೇ ಜಗಜ್ಜಾಹೀರಾಗಿದೆ.

ಈಗಾಗಲೇ ಟಾಟಾ ಪಂಚ್‌ ಎಲೆಕ್ಟ್ರಿಕ್‌ ಎಸ್‌ಯುವಿಯ ಹಲವಾರು ಸ್ಪೈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಎಲ್ಲಾ ಕಾರು ಪ್ರೇಮಿಗಳು ಸಹ ಕುತೂಹಲದಿಂದ ಕಾಯುತ್ತಿದ್ದರು. ಎಲ್ಲರ ನಿರೀಕ್ಷೆಯಂತೆ ಟಾಟಾ ಪಂಚ್‌ ಎಲೆಕ್ಟ್ರಿಕ್‌ (TATA Punch Electric) ಇದೀಗ ಔದ್ಯೋಗಿಕವಾಗಿ ರಿವೀಲ್‌ ಆಗಿದ್ದು ಇದರ ಸಂಪೂರ್ಣ ಮಾಹಿತಿಯನ್ನು ನಾವಿಂದು ನಿಮ್ಮ ಮುಂದೆ ಇಡುತ್ತಿದ್ದೇವೆ.

TATA Punch Electric Officially Revealed

ಟಾಟಾ ಹೊರಬಿಟ್ಟಿರುವ ಮಾಹಿತಿಗಳ ಪ್ರಕಾರ ಹಲವಾರು ಅಪ್‌ಡೇಟ್‌ಗಳನ್ನು ಟಾಟಾ ಪಂಚ್‌ ಹೊಂದಿದ್ದು ಇದರಲ್ಲಿ ವೆಂಟಿಲೇಟೆಡ್‌ ಸೀಟ್‌ಗಳು ಸಹ ಇದೆ. ಈ ಮೂಲಕ ವೆಂಟಿಲೇಟೆಡ್‌ ಸೀಟ್‌ಗಳನ್ನು ನೀಡುತ್ತಿರುವ ಸೆಗ್ಮೆಂಟ್‌ ಫಸ್ಟ್‌ ಕಾರು ಎಂಬ ಹೆಗ್ಗಳಿಕೆಯನ್ನು ಟಾಟಾ ಪಂಚ್‌ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಈ ಕಾರಿನ ಬ್ಯಾಟರಿ ಬಗ್ಗೆ ಯಾವುದೇ ಮಾಹಿತಿಯನ್ನು ಟಾಟಾ ಹೊರ ಬಿಟ್ಟಿಲ್ಲ.

ಇನ್ನುಳಿದಂತೆ ಟಾಟಾ ಪಂಚ್‌ ಎಲೆಕ್ಟ್ರಿಕ್‌ ಕಾರಿನಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್‌ ಮತ್ತು ಸ್ಮಾರ್ಟ್‌ ಡಿಆರ್‌ಎಲ್‌ಗಳು ಲಭ್ಯವಿದೆ. ಇದರ ಜೊತೆಗೆ 360 ಡಿಗ್ರಿ ಕ್ಯಾಮೆರಾ, ಎಸ್‌ಓಎಸ್‌ ಫಂಕ್ಷನ್‌, ಡಿಸಿ ಫಾಸ್ಟ್‌ ಚಾರ್ಜಿಂಗ್‌, ಮಲ್ಟಿ ಮೋಡ್‌ ರೀಜಿನ್‌ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಆರು ಏರ್‌ ಬ್ಯಾಗ್‌ಗಳನ್ನು ಟಾಟಾ ಈ ಕಾರಿನಲ್ಲಿ ನೀಡಿದೆ.

TATA Punch Electric Officially Revealed

ಇದರ ಜೊತೆಗೆ ಟಾಟಾ ಪಂಚ್‌ ಎಲೆಕ್ಟ್ರಿಕ್‌ ಮೂರು ವೇರಿಯಂಟ್‌ಗಳಲ್ಲಿ ಲಭ್ಯವಾಗಲಿದೆ. ಸ್ಮಾರ್ಟ್‌, ಅಡ್ವೆಂಚರ್‌, ಎಂಪವರ್ಡ್‌ ಮತ್ತು ಎಂಪವರ್ಡ್‌ ಪ್ಲಸ್‌ ಎಂಬ ಮೂರು ವೇರಿಯಂಟ್‌ಗಳು ಇರಲಿದ್ದು ಆಯ್ಕೆಗೆ ಅನುಸಾರವಾಗಿ ಈ ಕಾರಿನಲ್ಲಿ ಸನ್‌ರೂಫ್‌ ಸಹ ಲಬ್ಯವಾಗಲಿದೆ. ಇದು ಈ ಕಾರಿನ ಮಾರಾಟದವನ್ನು ಇಮ್ಮಡಿಗೊಳಿಸಲಿದೆ ಎಂಬುದು ಎಲ್ಲರ ಅಭಿಪ್ರಾಯ.

ಈಗಾಗಲೇ ಟಾಟಾ ಪಂಚ್‌ ಭಾರತೀಯ ಮೈಕ್ರೋ ಎಸ್‌ಯುವಿ ಸೆಗ್ಮೆಂಟ್‌ಅನ್ನು ಆಳುತ್ತಿದ್ದು ಹೊಸ ಎಲೆಕ್ಟ್ರಿಕ್‌ ಆವೃತ್ತಿ ಬಂದರೆ ಇದಕ್ಕೆ ಆನೆ ಬಲ ಬರುವುದಂತೂ ಖಂಡಿತ. ಈಗ ಮಾರುಕಟ್ಟೆಯಲ್ಲಿ ಟಾಟಾ ಪಂಚ್ ಪೆಟ್ರೋಲ್‌ ಮತ್ತು ಸಿಎನ್‌ಜಿ ಸೇರಿ‌ ಎರಡು ಇಂಧನಗಳ ಆಯ್ಕೆಯಲ್ಲಿ ಲಭ್ಯವಿದೆ. ಈ ಕಾರು ಇಷ್ಟೊಂದು ಜನಪ್ರಿಯವಾಗಲು ಇದು ಸಹ ಒಂದು ಕಾರಣ.

TATA Punch Electric Officially Revealed

ಇನ್ನು ಈ ಕಾರು ವರ್ಷದ ಆರಂಭದಲ್ಲಿಯೇ ಟಾಟಾ ಪಂಚ್‌ ಹೊಸ ಮೈಲುಗಲ್ಲನ್ನು ಸಾಧಿಸಿದ್ದು, ಮಾಹಿತಿಗಳ ಪ್ರಕಾರ ಟಾಟಾ ಪಂಚ್‌ ಇಲ್ಲಿಯವರೆಗೆ ಸುಮಾರು 3 ಲಕ್ಷ ಯೂನಿಟ್‌ಗಳನ್ನು ಭಾರತದಲ್ಲಿ ಮಾರಾಟ ಮಾಡಿದೆ. ಹೌದು, ಇನ್ನೊಂದು ಪ್ರಮುಖ ವಿಷಯವೇನು ಎಂದರೆ ಕಳೆದ ಒಂಬತ್ತು ತಿಂಗಳಲ್ಲಿ ಈ ಕಾರಿನ ಮಾರಾಟ ಸಾಕಷ್ಟು ಹೆಚ್ಚಾಗಿದ್ದು, ಈ ಅವಧಿಯಲ್ಲಿ ಟಾಟಾ ಪಂಚ್‌ ಸುಮಾರು ಒಂದು ಲಕ್ಷ ಯೂನಿಟ್‌ ಮಾರಾಟವಾಗಿದೆ ಎಂದು ತಿಳಿದು ಬಂದಿದೆ.

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಇಂಧನ ಚಾಲಿತ ಟಾಟಾ ಪಂಚ್ ಕಾರಿನ ಬಗ್ಗೆ ಮಾತನಾಡುವುದಾದರೆ, ವೇರಿಯಂಟ್‌ಗಳಿಗೆ ಅನುಗುಣವಾಗಿ ರೂ.6 ಲಕ್ಷದಿಂದ ರೂ.10.10 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. 1.2 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯಲ್ಲಿ ದೊರೆಯಲಿದ್ದು, 20.09 kmpl ರಿಂದ 26.99 km/kg ಮೈಲೇಜ್ ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, January 5, 2024, 13:02 [IST]
English summary
Tata punch electric officially revealed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+