Tata: ಮತ್ತಷ್ಟು ಕಲರ್‌ಫುಲ್ ಬಣ್ಣಗಳಲ್ಲಿ ಲಭ್ಯವಿದೆ ಟಾಟಾ ಪಂಚ್ ಇವಿ: 421 ಕಿ.ಮೀ ರೇಂಜ್

ಬಹುನಿರೀಕ್ಷಿತ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರನ್ನು ಕೊನೆಗೂ ಬಿಡುಗಡೆ ಮಾಡಲಾಗಿದ್ದು, ಇದರ ಆರಂಭಿಕ ಬೆಲೆಯು 10.99 (ಎಕ್ಸ್‌ ಶೋರೂಂ) ಲಕ್ಷದಿಂದ ಪ್ರಾರಂಭವಾಗುತ್ತದೆ. ಈಗಾಗಲೇ ಬುಕಿಂಗ್ ಪ್ರಾರಂಭವಾಗಿದ್ದು, ಆಸಕ್ತ ಗ್ರಾಹಕರು ರೂ. 21,000 ಕೊಟ್ಟು ಹೊಸ ಇವಿ ಪಂಚ್ ಅನ್ನು ಬುಕ್ ಮಾಡಿಕೊಳ್ಳಬಹುದು.

ಟಾಟಾ ಇವಿ ಪಂಚ್ (Tata EV Punch) ಹೊಸ ಡಿಸೈನ್, ಹೊಸ ವೈಶಿಷ್ಟ್ಯಗಳು, ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳು ಮತ್ತು 421 ಕಿ.ಮೀ ವರೆಗೆ ರೇಂಜ್ ನೀಡುತ್ತದೆ. ನೀವು ಟಾಟಾ ಪಂಚ್ EV ಅನ್ನು ಖರೀದಿಸಲು ಯೋಜಿಸುತ್ತಿದ್ದರೆ, ಇಲ್ಲಿ ನಾವು ನೀಡಿರುವ ಮಾಹಿತಿ ನಿಮಗೆ ತುಂಬಾ ಉಪಯುಕ್ತವಾಗಬಹುದು. ಮುಖ್ಯವಾಗಿ ಯಾವೆಲ್ಲಾ ಬಣ್ಣಗಳ ಆಯ್ಕೆಯಿದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

tata-punch-ev-available-in-9-colour-options-know-more-details

ಟಾಟಾ ಪಂಚ್ ಇವಿ ಬಣ್ಣಗಳ ಆಯ್ಕೆ: ಎಂಪವರ್ಡ್ ಆಕ್ಸೈಡ್ (ಡ್ಯುಯಲ್-ಟೋನ್ ಮಾತ್ರ), ಸೀವೀಡ್ (ಡ್ಯುಯಲ್-ಟೋನ್ ಮತ್ತು ಮೊನೊಟೋನ್), ಫಿಯರ್ ಲೆಸ್ ರೆಡ್ (ಡ್ಯುಯಲ್-ಟೋನ್ ಮತ್ತು ಮೊನೊಟೋನ್), ಡೇಟೋನಾ ಗ್ರೇ (ಡ್ಯುಯಲ್-ಟೋನ್ ಮತ್ತು ಮೊನೊಟೋನ್), ಪ್ರಿಸ್ಟಿನ್ ವೈಟ್ (ಡ್ಯುಯಲ್-ಟೋನ್ ಮತ್ತು ಮೊನೊಟೋನ್) ಇವಿಷ್ಟು ಪಂಚ್ ಇವಿಯಲ್ಲಿ ಲಭ್ಯವಿರುವ ಬಣ್ಣಗಳಾಗಿವೆ.

ಬ್ಯಾಟರಿ ಪ್ಯಾಕ್ ಮತ್ತು ರೇಂಜ್: ಈ ಎಲೆಕ್ಟ್ರಿಕ್ ಕಾರಿನಲ್ಲಿ 25 kWh ಮತ್ತು 35 kWh ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿದೆ. ಇವು ಕ್ರಮವಾಗಿ 315 ಕಿ.ಮೀ ರೇಂಜ್ ಹಾಗೂ 421 ಕಿ.ಮೀ ರೇಂಜ್ ಅನ್ನು ನೀಡುತ್ತವೆ. 25 kWh ಮಾದರಿಯು 80bhp ಪವರ್ ಮತ್ತು 114Nm ಟಾರ್ಕ್ ಅನ್ನು ಉತ್ಪಾದಿಸಿದರೆ, 35 kWh ಮಾದರಿ 120bhp ಪವರ್ ಮತ್ತು 190Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

tata-punch-ev-available-in-9-colour-options-know-more-details

ಹೆಚ್ಚುವರಿಯಾಗಿ, ಬ್ರ್ಯಾಂಡ್ ಎರಡು ಚಾರ್ಜರ್ ಆಯ್ಕೆಗಳನ್ನು ನೀಡುತ್ತದೆ. ಇದು 7.2 kW ಫಾಸ್ಟ್ಚಾರ್ಜರ್ (LR ರೂಪಾಂತರಕ್ಕೆ ಪ್ರತ್ಯೇಕವಾಗಿ ಲಭ್ಯವಿದೆ) ಮತ್ತು 3.3 kW ವಾಲ್‌ಬಾಕ್ಸ್ ಚಾರ್ಜರ್ ಅನ್ನು ಹೊಂದಿದೆ. ಈ ಹೊಸ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರಿನಲ್ಲಿ ದೊಡ್ಡದಾದ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ. ಈ ಯುನಿಟ್ Apple CarPlay ಮತ್ತು Android Auto ಎರಡಕ್ಕೂ ಕನೆಕ್ಟ್ ಆಗಿರುತ್ತದೆ.

ಹಾರ್ಡ್‌ವೇರ್: ಟಾಟಾ ಪಂಚ್ ಇವಿಯಲ್ಲಿ 16-ಇಂಚಿನ ಡೈಮಂಡ್-ಕಟ್ ಅಲಾಯ್ ವ್ಹೀಲ್, ನಾಲ್ಕು ಡಿಸ್ಕ್ ಬ್ರೇಕ್‌ಗಳು, ಟಾಟಾ ಲೋಗೋದ ಮಧ್ಯದಲ್ಲಿ ಇರಿಸಲಾದ ಚಾರ್ಜಿಂಗ್ ಫ್ಲಾಪ್ ಮತ್ತು ಮುಂಭಾಗದ ಬಂಪರ್‌ನಲ್ಲಿ ಇರಿಸಲಾಗಿರುವ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಫಾಗ್ ಲ್ಯಾಂಪ್‌ಗಳು ಹೊಸ ಇವಿಯನ್ನು ಮತ್ತಷ್ಟು ಆಕರ್ಷಕವಾಗಿಸುತ್ತವೆ.

tata-punch-ev-available-in-9-colour-options-know-more-details

ವೈಶಿಷ್ಟ್ಯಗಳು: ನವೀಕರಿಸಿದ ಸೆಂಟರ್ ಕನ್ಸೋಲ್ ಈಗ ಟಚ್-ಸೆನ್ಸಿಟಿವ್ ಎಸಿ ಕಂಟ್ರೋಲ್ ಪ್ಯಾನೆಲ್ ಅನ್ನು ಸಂಯೋಜಿಸಿದೆ. ಹೆಚ್ಚುವರಿಯಾಗಿ ಟಾಟಾ ಪಂಚ್ ಇವಿ ಹೊಸ ಟು-ಸ್ಪೋಕ್ ಸ್ಟೀರಿಂಗ್ ವೀಲ್ ಅನ್ನು ಪ್ರಕಾಶಿತ ಟಾಟಾ ಲೋಗೋದೊಂದಿಗೆ ಅಳವಡಿಸಿಕೊಂಡಿದೆ. ಇದನ್ನು ಟಾಟಾ ನೆಕ್ಸಾನ್ ಇವಿಯಿಂದ ಎರವಲು ಪಡೆಯಲಾಗಿದೆ, ಟಚ್ ಆಧಾರಿತ ಕಂಟ್ರೋಲ್ ಗಳನ್ನು ಕೂಡ ಒಳಗೊಂಡಿದೆ.

7-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಮತ್ತು AQI ಡಿಸ್ಪ್ಲೇಯೊಂದಿಗೆ ಏರ್ ಪ್ಯೂರಿಫೈಯರ್, ಇದರೊಂದಿಗೆ ಆಟೋ ಫೋಲ್ಡ್ ORVM ಗಳು, ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, ಲೆಥೆರೆಟ್ ಸೀಟುಗಳು, 360 ಡಿಗ್ರಿ ಕ್ಯಾಮೆರಾ, ಬ್ಲೈಂಡ್ ಸ್ಪಾಟ್ ಮಾನಿಟರ್, ಸನ್‌ರೂಫ್ ಅನ್ನು ಹೊಂದಿದೆ. ಕ್ರೂಸ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಮತ್ತು 6 ಏರ್‌ಬ್ಯಾಗ್‌ಗಳನ್ನು ಹೊಂದಿದೆ.

tata-punch-ev-available-in-9-colour-options-know-more-details

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, January 19, 2024, 11:58 [IST]
English summary
Tata punch ev available in 9 colour options know more details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+