ಟಾಟಾ ಪಂಚ್ EV vs ಇಂಧನ ಚಾಲಿತ ಪಂಚ್... ನೀವು ಯಾವುದನ್ನು ಖರೀದಿಸಬೇಕು?
ಟಾಟಾ ಪಂಚ್ EV ಯ ಬಿಡುಗಡೆಯು, ಟಾಟಾ ಪಂಚ್ ICE(ಇಂಧನ ಚಾಲಿತ) ಮತ್ತು ಎಲೆಕ್ಟ್ರಿಕ್ ಆವೃತ್ತಿಗಳಲ್ಲಿ ಖರೀದಿದಾರರಿಗೆ ಸ್ವಲ್ಪ ಗೊಂದಲಮಯವಾಗಿರಬಹುದು, ಹಾಗಾಗಿ ನೀವು ಟಾಟಾ ಪಂಚ್ ಖರೀದಿಗೆ ಮುಂದಾಗಿದ್ದರೆ, ಇವೆರಡರಲ್ಲಿ ಒಂದನ್ನು ಆಯ್ಕೆ ಮಾಡಲು ನಿಮಗೆ ಸಹಾಯ ಮಾಡಲು ICE ಮತ್ತು EV ಆವೃತ್ತಿಗಳ ನಡುವಿನ ಹೋಲಿಕೆ ಇಲ್ಲಿದೆ.
ಎಂಜಿನ್ ಮತ್ತು ಬ್ಯಾಟರಿ ವಿಶೇಷತೆಗಳು: ನಿಸ್ಸಂಶಯವಾಗಿ, ಇದು ಎರಡರ ನಡುವಿನ ದೊಡ್ಡ ವ್ಯತ್ಯಾಸವಾಗಿದೆ. ಟಾಟಾ ಪಂಚ್ ICE(Internal Combustion Engine) ಒಂದೇ 1.2-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮ್ಯಾನುವಲ್ ಅಥವಾ AMT ಗೇರ್‌ಬಾಕ್ಸ್‌ನೊಂದಿಗೆ ಲಭ್ಯವಿದೆ. ಈ ಎಂಜಿನ್ 87bhp ಪವರ್ ಮತ್ತು 115Nm ಟಾರ್ಕ್ ಅನ್ನು ಹೊರಹಾಕುತ್ತದೆ. ಹಾಗೆಯೇ ಫ್ಯಾಕ್ಟರಿ-ಫಿಟೆಡ್ CNG ಆವೃತ್ತಿಯು 72bhp ಪವರ್ ಮತ್ತು 103Nm ಟಾರ್ಕ್ ಅನ್ನು ಹೊರಹಾಕುತ್ತದೆ.

ಟಾಟಾ ಪಂಚ್‌ನ ಎಲೆಕ್ಟ್ರಿಕ್ ಆವೃತ್ತಿಯು ಎರಡು ಬ್ಯಾಟರಿ ಪ್ಯಾಕ್ ಆಯ್ಕೆಗಳೊಂದಿಗೆ ಲಭ್ಯವಿದೆ. ಮೊದಲನೆಯದು 25kWh ಆಯ್ಕೆಯಾಗಿದ್ದು ಇದು 315km ರೇಂಜ್ ನೀಡುತ್ತದೆ. 100 ಕಿ.ಮೀ ವೇಗವನ್ನು 13.5 ಸೆಕೆಂಡುಗಳಲ್ಲಿ ತಲುಪಬಲ್ಲದು. ಆಫರ್‌ನಲ್ಲಿರುವ ಎರಡನೇ ಬ್ಯಾಟರಿ ಪ್ಯಾಕ್ 35kWh ಯುನಿಟ್ ಆಗಿದ್ದು, ಇದು 421km ರೇಂಜ್ ನೀಡುತ್ತದೆ, 9.5 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ತಲುಪುತ್ತದೆ.
ವಿನ್ಯಾಸ: ಟಾಟಾ ಪಂಚ್ EV ಮತ್ತು ICE ಆವೃತ್ತಿಗಳು ವಿಶಿಷ್ಟ ವಿನ್ಯಾಸಗಳನ್ನು ಹೊಂದಿದ್ದು, ಪಂಚ್‌ನ ICE ಆವೃತ್ತಿಯು ಸ್ಟೆಪ್-ಡೌನ್ ಹೊಂದಿರುವ DRL ಅನ್ನು ಒಳಗೊಂಡಿರುವುದರಿಂದ, EV ಆವೃತ್ತಿಯು ನೇರವಾದ ವಿನ್ಯಾಸವನ್ನು ಪಡೆಯುವುದರಿಂದ ವ್ಯತ್ಯಾಸವನ್ನು ಗುರುತಿಸಬಹುದು. ಮತ್ತೊಂದು ಗಮನಾರ್ಹವಾದ ಸೆಟಪ್ ಮುಂಭಾಗದ ಹೆಡ್‌ಲೈಟ್ ವಿನ್ಯಾಸವಾಗಿದೆ. ಏಕೆಂದರೆ ಪಂಚ್ EV ಟಾಟಾದ ಹೊಸ ವಿನ್ಯಾಸವನ್ನು ಹ್ಯಾರಿಯರ್ ಮತ್ತು ಸಫಾರಿಯಿಂದ ಎರವಲು ಪಡೆದಿದೆ.

ಮುಂಭಾಗದ ಗ್ರಿಲ್ ಸಹ ವಿಭಿನ್ನವಾಗಿದೆ, ಏಕೆಂದರೆ ICE ಆವೃತ್ತಿಯು ಎಂಜಿನ್ ಮತ್ತು ರೇಡಿಯೇಟರ್ ಅನ್ನು ತಂಪಾಗಿಸಲು ದೊಡ್ಡ ಏರ್ ಇಂಟೇಕ್ ಹೊಂದಿದೆ. EV ಆವೃತ್ತಿಯು ಕೆಳಭಾಗವನ್ನು ಮಾತ್ರ ತೆರೆದಿರುತ್ತದೆ. ಹಿಂಭಾಗದ ಕಡೆಗೆ, ಎಲೆಕ್ಟ್ರಿಕ್ ಪಂಚ್‌ನ ಬೂಟ್‌ನಲ್ಲಿ ಕಂಡುಬರುವ Punch.ev ಬ್ಯಾಡ್ಜಿಂಗ್ ಅನ್ನು ಹೊರತುಪಡಿಸಿ ಎರಡೂ ಒಂದೇ ರೀತಿ ಕಾಣುತ್ತವೆ.
ಒಳಾಂಗಣ ಮತ್ತು ವೈಶಿಷ್ಟ್ಯಗಳು: ICE ಆವೃತ್ತಿಯು ಸಿಂಗಲ್ ಫ್ಲೋಟಿಂಗ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಬಣ್ಣದ ಹೈಲೈಟ್‌ಗಳೊಂದಿಗೆ ಏರ್ ವೆಂಟ್‌ಗಳು, ಸೆಮಿ-ಡಿಜಿಟಲ್ ಡ್ಯಾಶ್‌ಬೋರ್ಡ್, ಸ್ಪೋಕ್ ಸ್ಟೀರಿಂಗ್ ವೀಲ್, ಸನ್‌ರೂಫ್ ಮತ್ತು ಹೆಚ್ಚಿನದನ್ನು ಪಡೆಯುತ್ತದೆ. ಹಾಗೆಯೇ ಪಂಚ್ EV ನೆಕ್ಸಾನ್ EV ಯಂತೆಯೇ ವಿನ್ಯಾಸವನ್ನು ಹೊಂದಿದೆ, ಸ್ಪರ್ಶ-ಚಾಲಿತ ನಿಯಂತ್ರಣಗಳು, ಡ್ಯುಯಲ್ TFT ಸ್ಕ್ರೀನ್‌ಗಳು, ಸ್ಮಾರ್ಟ್‌ಫೋನ್ ಸಂಪರ್ಕ ಮತ್ತು ಹೆಚ್ಚಿನವುಗಳೊಂದಿಗೆ ಬರುತ್ತದೆ.

ಪಂಚ್ EV ಮತ್ತು ICE ಆವೃತ್ತಿಗಳು ಬಹಳಷ್ಟು ನೀಡುತ್ತವೆ, ಇವುಗಳ ಟಾಪ್-ಸ್ಪೆಕ್ ಮಾಡೆಲ್‌ಗಳು ABS, EBD, ಹಿಲ್ ಸ್ಟಾರ್ಟ್ ಅಸಿಸ್ಟ್, 6 ಏರ್‌ಬ್ಯಾಗ್‌ಗಳು, ರಿವರ್ಸ್ ಕ್ಯಾಮೆರಾ, ಸಂಪರ್ಕಿತ ಕಾರ್ ಟೆಕ್, ISOFIX ಸೀಟ್ ಮೌಂಟ್‌ಗಳು ಮತ್ತು ಹೆಚ್ಚಿನವನ್ನು ಪಡೆಯುತ್ತವೆ. ICE ಆವೃತ್ತಿಯು ಈಗಾಗಲೇ 5-ಸ್ಟಾರ್ ಸುರಕ್ಷತೆಯ ರೇಟ್ ಪಡೆದಿರುವುದರಿಂದ, ಇವಿ ಕೂಡ ಇದೇ ಗುಣಮಟ್ಟವನ್ನು ಹೊಂದಿರುತ್ತದೆ ಎನ್ನಲಾಗಿದೆ.
ಯಾವುದನ್ನು ಖರೀದಿಸಬೇಕು?: ಆಯ್ಕೆಯು ಬಳಕೆದಾರರ ಮೇಲೆ ಅವಲಂಬಿತವಾಗಿರುತ್ತದೆ. ICE ಆವೃತ್ತಿಯು ಪ್ರಯತ್ನಿಸಿದ ಮತ್ತು ಪರೀಕ್ಷಿಸಿದ ಸ್ವರೂಪವಾಗಿದೆ, ಆದರೆ EV ಆವೃತ್ತಿ ನಗರ ಬಳಕೆ ಮತ್ತು ಸಣ್ಣ ಹೆದ್ದಾರಿ ಪ್ರಯಾಣಗಳಿಗೆ ಯೋಗ್ಯವಾಗಿದೆ. ಅಲ್ಲದೆ, ಅದರ ICE ಪಂಚ್‌ಗೆ ಹೋಲಿಸಿದರೆ ಎರಡನೆಯದು ಹೆಚ್ಚು ಪ್ರೀಮಿಯಂ ಆಗಿ ಕಾಣುತ್ತದೆ. ನಗರ ಪ್ರಯಾಣವು ಪ್ರಾಥಮಿಕ ಗುರಿಯಾಗಿದ್ದರೆ, ನಾವು ಪಂಚ್ EV ಅನ್ನು ಸೂಚಿಸುತ್ತೇವೆ.


Click it and Unblock the Notifications








