Tata: ಎಲೆಕ್ಟ್ರಿಕ್ ಅವತಾರದಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಟಾಟಾ ಸಫಾರಿ: ಬೆಲೆ, ಬಿಡುಗಡೆ ಯಾವಾಗ?

ಭಾರತೀಯ ಆಟೋ ಉದ್ಯಮದ ಪ್ರಮುಖ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್(Tata Motors), ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಎಲೆಕ್ಟ್ರಿಕ್ ವಾಹನಗಳ ಮೇಲಿನ ಗ್ರಾಹಕರ ಅಪನಂಬಿಕೆಯ ನಡುವೆಯೂ ಜನರ ವಿಶ್ವಾಸ ಗಳಿಸುತ್ತಾ ಇತರ ಬ್ರಾಂಡ್‌ಗಳನ್ನು ಹಿಂದಿಕ್ಕಿ ಮಾರುಕಟ್ಟೆಯಲ್ಲಿ ಯಶಸ್ಸನ್ನು ಕಾಣುತ್ತಿದೆ.

ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ತೀವ್ರ ಪೈಪೋಟಿ ಎದುರಾಗಲಿದ್ದು, ಟಾಟಾ ಮೋಟಾರ್ಸ್ ಎಲ್ಲದಕ್ಕೂ ಸಿದ್ದವಾಗಿರಲು ತನ್ನ ಇವಿ ವಾಹನ ಶ್ರೇಣಿಯನ್ನು ವಿಸ್ತರಿಸಲು ಮುಂದಾಗಿದೆ. ತನ್ನ ಇವಿ ಮಾರುಕಟ್ಟೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ, ಕಂಪನಿಯು ಮುಂದಿನ ಐದು ವರ್ಷಗಳಲ್ಲಿ ಪ್ರಯಾಣಿಕ ವಾಹನ ಮತ್ತು ವಾಣಿಜ್ಯ ವಾಹನ ವಿಭಾಗಗಳಲ್ಲಿ 10 ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡಲು ಯೋಜಿಸಿದೆ. ಟಾಟಾದ 2024 ರ ಉತ್ಪನ್ನ ಯೋಜನೆಗಳ ಬಗ್ಗೆ ಮಾತನಾಡುವುದಾದರೆ, ಕಂಪನಿಯು ಈಗಾಗಲೇ ಪಂಚ್ ಇವಿಯನ್ನು ಪರಿಚಯಿಸಿದೆ, ಇದರ ನಂತರ ಶೀಘ್ರದಲ್ಲೇ ಹೊಸ ಟಾಟಾ ಕರ್ವ್ ಇವಿ ಕೂಡ ಬಿಡುಗಡೆಯಾಗಲಿದೆ.

tata-safari-electric-car-launch-and-price-details

ಟಾಟಾ ಮೋಟಾರ್ಸ್ ಯೋಜನೆಯಂತೆ ಎಲ್ಲವೂ ಅಂದುಕೊಂಡಂತೆ ನಡೆದರೆ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಎಲೆಕ್ಟ್ರಿಕ್ ಕಾರುಗಳು ಕ್ರಮವಾಗಿ 2024 ಹಬ್ಬದ ಸೀಸನ್ ಮತ್ತು 2025ರ ಆರಂಭದಲ್ಲಿ ಬರುವ ನಿರೀಕ್ಷೆಯಿದೆ. ಈಗಾಗಲೇ ಈ ಎರಡೂ ಎಲೆಕ್ಟ್ರಿಕ್ ಕಾರುಗಳ ಪರೀಕ್ಷೆಗಳು ಜೋರಾಗಿ ನಡೆಯುತ್ತಿವೆ. ಆರಂಭಿಕ ಪರೀಕ್ಷಾ ಹಂತದಲ್ಲಿರುವ ಟಾಟಾ ಸಫಾರಿ ಇವಿ ಇತ್ತೀಚೆಗೆ ರೋಡ್‌ ಟೆಸ್ಟಿಂಗ್ ವೇಳೆ ಕ್ಯಾಮೆರಾ ಕಣ್ಣಿಗೆ ಬಿದ್ದಿದೆ.

ಪಂಚ್ ಇವಿ ಮತ್ತು ಹ್ಯಾರಿಯರ್ ಇವಿ ನಂತರ, ಇದು ಬ್ರಾಂಡ್‌ನ ಹೊಸ ಆಕ್ಟಿ.ಇವಿ ಪ್ಲಾಟ್ ಫಾರ್ಮ್‌ಗೆ ಆಧಾರವಾಗಿರುವ ಮೂರನೇ ಟಾಟಾ ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ಮೂರು ಸಾಲಿನ ಎಲೆಕ್ಟ್ರಿಕ್ ಎಸ್‌ಯುವಿಯ ವಿನ್ಯಾಸವು ಹೆಚ್ಚಾಗಿ ಇಂಧನ ಚಾಲಿತ ಸಫಾರಿಯನ್ನು ಹೋಲುತ್ತದೆ. ಒಳಾಂಗಣವು ಸಾಮಾನ್ಯ ಸಫಾರಿಯೊಂದಿಗೆ ಬಲವಾದ ಹೋಲಿಕೆಯನ್ನು ಹಂಚಿಕೊಳ್ಳುತ್ತದೆ.

tata-safari-electric-car-launch-and-price-details

ಇನ್ನು ವ್ಯತ್ಯಾಸಗಳನ್ನು ನೋಡುವುದಾದ್ರೆ ಕ್ಲೋಸ್ಡ್-ಆಫ್ ಗ್ರಿಲ್, ವಿಭಿನ್ನವಾಗಿ ವಿನ್ಯಾಸಗೊಳಿಸಲಾದ ಅಲಾಯ್ ವೀಲ್‌ಗಳು ಮತ್ತು ಇವಿ ಬ್ಯಾಡ್ಜ್ ಗಳಂತಹ ಕೆಲವು ಇವಿ-ನಿರ್ದಿಷ್ಟ ಕಾಸ್ಮೆಟಿಕ್ ಬದಲಾವಣೆಗಳನ್ನು ವಾಹನದಲ್ಲಿ ಮಾಡಲಾಗುವುದು. ಐಸಿಇ ಆವೃತ್ತಿಯಲ್ಲಿ ನಾವು ನೋಡಿದಂತೆ ಎಲೆಕ್ಟ್ರಿಕ್ ಎಸ್‌ಯುವಿ 4-ಸ್ಪೋಕ್ ಸ್ಟೀರಿಂಗ್ ನೊಂದಿಗೆ 'ಟಾಟಾ ಲೋಗೊ' ಮತ್ತು ಡ್ಯಾಶ್ ಬೋರ್ಡ್ ವಿನ್ಯಾಸದೊಂದಿಗೆ ಬರಲಿದೆ. ಇನ್ನು ಹೊಸ ಟಾಟಾ ಸಫಾರಿ ಇವಿ 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, 12.3-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ವೆಂಟಿಲೇಟೆಡ್ ಫ್ರಂಟ್ ಮತ್ತು ರಿಯರ್ ಸೀಟ್ಗಳು, ಡ್ಯುಯಲ್ ಜೋನ್ ಎಸಿ ಮತ್ತು ಪನೋರಮಿಕ್ ಸನ್‌ರೂಫ್‌ನೊಂದಿಗೆ ಬರುವ ಸಾಧ್ಯತೆಯಿದೆ.

ಸುರಕ್ಷತೆಗಾಗಿ ಮೂರು ಸಾಲಿನ ಇವಿ ಬ್ಲೈಂಡ್ ಸ್ಪಾಟ್ ಮಾನಿಟರ್, ADAS ಟೆಕ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು 7 ಏರ್‌ಬ್ಯಾಗ್‌ಗಳೊಂದಿಗೆ 360 ಡಿಗ್ರಿ ಕ್ಯಾಮೆರಾವನ್ನು ಹೊಂದಿರುತ್ತದೆ. ಟಾಟಾ ಸಫಾರಿ ಇವಿಯು ಸಿಂಗಲ್ ಚಾರ್ಜ್‌ನಲ್ಲಿ ಸುಮಾರು 500 ಕಿ.ಮೀ. ಓಡಬಲ್ಲದು. ಅದರ ಪವರ್ ಟ್ರೇನ್ ವಿವರಗಳು ಇನ್ನೂ ರಹಸ್ಯವಾಗಿವೆ.

tata-safari-electric-car-launch-and-price-details

ಬೆಲೆ ನೋಡುವುದಾದ್ರೆ, ಅಂದಾಜು 32 ಲಕ್ಷ ರೂ.ಗಳ ಆರಂಭಿಕ ಬೆಲೆಯೊಂದಿಗೆ, ಈ ಎಲೆಕ್ಟ್ರಿಕ್ ಎಸ್‌ಯುವಿ ಬಿವೈಡಿ ಅಟ್ಟೋ 3, ಎಂಜಿ ಝಡ್-ಎಸ್‌ ಇವಿ ಮತ್ತು ಮುಂಬರುವ ಮಾರುತಿ ಸುಜುಕಿ ಇವಿಎಕ್ಸ್ ಮತ್ತು ಹ್ಯುಂಡೈ ಕ್ರೆಟಾ ಇವಿಗಳಂತಹ ಎಲೆಕ್ಟ್ರಿಕ್ ವಾಹನಗಳಿಗೆ ಸವಾಲು ಹಾಕಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, April 27, 2024, 8:30 [IST]
English summary
Tata safari electric car launch and price details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+