ಕ್ಯಾಮೆರಾ ಕಣ್ಣಿಗೆ ಬಿದ್ದ ಟಾಟಾ ಸಫಾರಿ ಎಲೆಕ್ಟ್ರಿಕ್: ಮತ್ತೊಮ್ಮೆ ಗೇಮ್ ಚೇಂಜರ್ ಆಗುತ್ತಾ ಟಾಟಾ!
ಸದ್ಯಕ್ಕೆ ಭಾರತೀಯ ವಾಹನ ನಿರ್ಮಾಣ ಕ್ಷೇತ್ರದಲ್ಲಿ ಸದಾ ಟ್ರೆಂಡಿಂಗ್‌ನಲ್ಲಿರುವ ಕಾರು ನಿರ್ಮಾಣ ಕಂಪನಿಯೆಂದರೆ ಅದು ಟಾಟಾ ಮೋಟಾರ್ಸ್. ಒಂದಿಲ್ಲೊಂದು ಪರೀಕ್ಷೆಗಳನ್ನು ವಾಹನ ಕ್ಷೇತ್ರದಲ್ಲಿ ನಡೆಸುತ್ತಾ ಗ್ರಾಹಕರಿಗೆ ಯಾವಾಗಲೂ ಉತ್ತಮ ಗುಣಮಟ್ಟ ಮತ್ತು ಗರಿಷ್ಟ ಸುರಕ್ಷತೆಯನ್ನು ಖಾತರಿಪಡಿಸುತ್ತದೆ. ಇದೀಗ ಟಾಟಾ ಕುರಿತಾದ ಬಹುದೊಡ್ಡ ಅಪ್‌ಡೇಟ್ ಒಂದು ಹೊರ ಬಂದಿದೆ.
ಟಾಟಾದ ಬಹು ಪ್ರಸಿದ್ದ ಕಾರು ಮಾಡೆಲ್ ಆದ ಟಾಟಾ ಸಫಾರಿ ಕುರಿತಾದ ಬಹುದೊಡ್ಡ ಮಾಹಿತಿ ಹೊರಬಿದ್ದಿದೆ. ಮಾಹಿತಿಗಳ ಪ್ರಕಾರ ಟಾಟಾ ಮೋಟಾರ್ಸ್ ತನ್ನ ಫ್ಲಾಗ್‌ಶಿಪ್ ಮಾಡೆಲ್ ಆದ ಟಾಟಾ ಸಫಾರಿಯ ಎಲೆಕ್ಟ್ರಿಕ್ ಮಾದರಿಯನ್ನು ಅಭಿವೃದ್ದಿಪಡಿಸುತ್ತಿದ್ದು, ಇದರ ಕೆಲವು ಸ್ಪೈ ಚಿತ್ರಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಭಾರೀ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.

ಈಗಾಗಲೇ ಟಾಟಾ ಮೋಟಾರ್ಸ್ ಹಲವಾರು ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದ್ದು, ಆ ಸಾಲಿಗೆ ಟಾಟಾ ಸಫಾರಿ ಎಲೆಕ್ಟ್ರಿಕ್ ಸಹ ಹೊಸ ಸೇರ್ಪಡೆ ಆಗಲಿದೆ. ಈ ಮೂಲಕ ಟಾಟಾ ಪರಿಸರ ಮಾಲಿಬ್ಯವನ್ನು ತಡೆಗಟ್ಟಲು ಟೊಂಕ ಕಟ್ಟಿ ನಿಂತಂತಿದೆ. ಹೆಚ್ಚು ಹೆಚ್ಚು ಎಲೆಕ್ಟ್ರಿಕ್ ವಾಹನಗಳು ರಸ್ತೆಗಿಳಿದರೆ, ಪರಿಸರ ಮಾಲಿನ್ಯವನ್ನು ಗಮನಾರ್ಹವಾಗಿ ತಡೆಗಟ್ಟಬಹುದಾಗಿದೆ.
ಇನ್ನು ರಸ್ತೆಯಲ್ಲಿ ಟಾಟಾ ಸಫಾರಿ ಎಲೆಕ್ಟ್ರಿಕ್ ಟೆಸ್ಟ್ ರನ್ ಮಾಡುವಾಗ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದು, ಕಾರನ್ನು ಕ್ಯಾಮೋಫ್ಲಾಗ್‌ನಲ್ಲಿ ಸುತ್ತಿದ್ದರಿಂದ ಅದರ ಡಿಸೈನ್ ಮತ್ತು ಇತರ ಫೀಚರ್‌ಗಳು ಅಷ್ಟಾಗಿ ಕಂಡು ಬಂದಿಲ್ಲವಾದರೂ, ಕೆಲವಷ್ಟು ವಿನ್ಯಾಸಗಳು ಗೋಚರವಾಗಿದೆ. ಕನೆಕ್ಟೆಡ್ ಟೈಲ್ ಲ್ಯಾಂಪ್‌ಗಳು, ಹಿಂಭಾಗದಲ್ಲಿ ವೈಪರ್ ಮತ್ತು ರೂಪ್ ಮೌಂಟೆಡ್ ಸ್ಪಾಯಿಲರ್ ಹಾಗು ಶಾರ್ಕ್‌ಫಿನ್ ಆ್ಯಂಟೆನಾಗಳನ್ನು ಈ ಕಾರಿನಲ್ಲಿ ನೋಡಬಹುದಾಗಿದೆ.

ಟಾಟಾ ಸಫಾರಿ ಎಲೆಕ್ಟ್ರಿಕ್ ಮಾರುಕಟ್ಟೆಗೆ ಬಂದರೆ ಈ ಸೆಗ್ಮೆಂಟ್‌ನ ಇತರ ಕಾರುಗಳಿಗೆ ಪ್ರಭಲ ಪೈಪೋಟಿ ಒಡ್ಡುವುದರಲ್ಲಿ ಯಾವಿದೇ ಸಂದೇಹವಿಲ್ಲ. ಇದಕ್ಕೆ ಕಾರಣವೆಂದರೆ ಈ ಕಾರಿನ ಫೀಚರ್ ಮತ್ತು ಇತರ ವಿಷಯಗಳು. ಟಾಟಾ ಸಫಾರಿ ಎಲೆಕ್ಟ್ರಿಕ್ ಒಂದು ಚಾರ್ಜ್‌ನಲ್ಲಿ ಸುಮಾರು ೫೦೦ ಕಿಮೀ ರೇಂಜ್ ನೀಡುವ ನಿರೀಕ್ಷೆ ಇದ್ದು ಇಷ್ಟು ರೇಂಜ್ ನೀಡಿದರೆ ಖಂಡಿತವಾಗಿಯು ಇದೊಂದು ಟಾಟಾದ ಪ್ರಮುಖ ಟ್ರಂಪ್ ಕಾರ್ಡ್ ಆಗಲಿದೆ.
ಇನ್ನು ಸದ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿರುವ 2023 ಟಾಟಾ ಸಫಾರಿ ಅದರ ಹಿಂದಿನ ಮೆಕ್ಯಾನಿಕಲ್ ಬಿಟ್‌ಗಳನ್ನು ಹಾಗೇ ಉಳಿಸಿಕೊಂಡಿದೆ. ಆದ್ದರಿಂದ ಬಾನೆಟ್ ಅಡಿಯಲ್ಲಿ, ನೀವು ಇನ್ನೂ Stellantis-ಮೂಲದ 2.0-ಲೀಟರ್ Kryotec, ಟರ್ಬೋಚಾರ್ಜ್ಡ್ ಇನ್‌ಲೈನ್, ನಾಲ್ಕು-ಪಾಟ್ ಡೀಸೆಲ್ ಎಂಜಿನ್ ಅನ್ನು ಕಾಣಬಹುದು. ಇದು 3,750 rpm ನಲ್ಲಿ 168bhp ಪವರ್ ಮತ್ತು 1,750 ಮತ್ತು 2,500rpm ನಡುವೆ 350Nm ಗರಿಷ್ಠ ಟಾರ್ಕ್ ಅನ್ನು ಹೊರಹಾಕುತ್ತದೆ.
ಟಾಟಾ ಸಫಾರಿ ಡ್ಯಾಶ್‌ಬೋರ್ಡ್‌ನಲ್ಲಿ ದೊಡ್ಡ 10.25-ಇಂಚಿನ ಡಿಜಿಟಲ್ ಡ್ರೈವರ್‌ನ ಡಿಸ್‌ಪ್ಲೇ ಇದೆ, ಇದು ನ್ಯಾವಿಗೇಷನ್ ಸೇರಿದಂತೆ ಪ್ರಯಾಣದಲ್ಲಿರುವಾಗ ನಿಮಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ನೀಡುತ್ತದೆ. ಡ್ರೈವರ್‌ನ ಡಿಸ್‌ಪ್ಲೇಗಿಂತ ಸ್ವಲ್ಪ ಹಿಂದಿರುವ ಹೊಸ ಡ್ಯುಯಲ್-ಟೋನ್ ಫೋರ್-ಸ್ಪೋಕ್ ಸ್ಟೀರಿಂಗ್ ವೀಲ್ ಆಕರ್ಷಕ ಮತ್ತು ಸ್ಪೋರ್ಟಿಯಾಗಿ ಕಾಣುತ್ತದೆ.
ಈ ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ ಹ್ಯುಂಡೈನಿಂದ ಪಡೆದ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮೇಟಿಕ್‌ನೊಂದಿಗೆ ಜೋಡಿಸಲಾಗಿದೆ. ನಮಗೆ ರಿವ್ಯೂ ಮಾಡಲು ಮುಂದಾಗ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸಿಕ್ಕಿತು. ಡ್ರೈವಿಂಗ್ ಮೋಡ್ ಅನ್ನು ಅವಲಂಬಿಸಿ (ಇಕೋ, ಸಿಟಿ ಮತ್ತು ಸ್ಪೋರ್ಟ್), ಡ್ರೈವ್ ಟ್ರೈನ್ ಪವರ್ ಡೆಲಿವರಿ ಮತ್ತು ಗೇರ್ ಶಿಫ್ಟ್ ಗಳನ್ನು ಬದಲಾಯಿಸುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications