Tata: 5 ಮಂದಿಗೆ ಅದ್ಭುತ ಕಾರು: ಬೆಲೆ ರೂ. 6 ಲಕ್ಷ... ಸೂಪರ್ ಮೈಲೇಜ್!

ಭಾರತದಲ್ಲಿ ಕಡಿಮೆ ಬೆಲೆ ಮಾತ್ರವಲ್ಲದೆ, ಮೈಲೇಜ್ ಕೂಡ ಉತ್ತಮವಾಗಿ ನೀಡುವ ಕಾರುಗಳನ್ನು ಮಾರುತಿ ಸುಜುಕಿ ಮಾರುಕಟ್ಟೆಯಲ್ಲಿ ನೀಡುತ್ತಿದೆ. ಆದರೆ ಸುರಕ್ಷತೆ ಮತ್ತು ನಿರ್ಮಾಣ ಗುಣಮಟ್ಟದ ವಿಷಯಕ್ಕೆ ಬಂದರೆ ಮಾರುತಿ ಕಾರುಗಳನ್ನು ಹಲವರು ಖರೀದಿಸಲು ಹಿಂದೇಟು ಹಾಕುತ್ತಾರೆ. ಅಂಥವರು ಚಿಂತಿಸುವ ಅಗತ್ಯವಿಲ್ಲ, ಈ ಲೇಖವನ್ನು ಒಮ್ಮೆ ಓದಿ.

ಓದುಗರೇ ಟಾಟಾ ಟಿಯಾಗೊ' ಮಾರುತಿ ವ್ಯಾಗನ್ಆರ್ (5 - 7 ಲಕ್ಷ) ಗಿಂತ ಬೆಲೆಯಲ್ಲಿ ಮಾತ್ರವಲ್ಲದೆ ಸುರಕ್ಷತೆಯ ದೃಷ್ಟಿಯಿಂದಲೂ ಉತ್ತಮವಾಗಿದೆ. ಕಂಪನಿಯು ತನ್ನ ಟಾಟಾ ಟಿಯಾಗೊ (Tiago) ಹ್ಯಾಚ್‌ಬ್ಯಾಕ್‌ನೊಂದಿಗೆ ಮಾರುತಿ ಕಾರುಗಳಿಗೆ ಕಠಿಣ ಸ್ಪರ್ಧೆಯನ್ನು ನೀಡುತ್ತಿದೆ. ಟಾಟಾ ಟಿಯಾಗೊ ಬೆಲೆ ರೂ. 5.60 ಲಕ್ಷದಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ.

tata-tiago-best-car-with-maximum-safety-and-super-mileage

ಮಾರಾಟದ ಅಂಕಿಅಂಶಗಳನ್ನು ನೋಡಿಕೊಂಡಿರೆ, ಇತ್ತೀಚೆಗೆ ಟಾಟಾ ಟಿಯಾಗೊ ಮಾರುತಿ ಸೆಲೆರಿಯೊ ಮತ್ತು ಎಸ್-ಪ್ರೆಸ್ಸೊದಂತಹ ಕಾರುಗಳಿಗಿಂತ ಹೆಚ್ಚಾಗಿ ಮಾರಾಟವಾಗಿರುವುದು ವರದಿಯಾಗಿದೆ. ಮಾರುತಿ ಆಲ್ಟೊ, ಎಸ್-ಪ್ರೆಸ್ಸೊ, ಸೆಲೆರಿಯೊ, ವ್ಯಾಗನ್‌ಆರ್‌ನಂತಹ ಕಾರುಗಳಿಗೆ ಹೋಲಿಸಿದರೆ, ಟಾಟಾ ಮೋಟಾರ್ಸ್ ಅಗ್ಗದ ಕಾರುಗಳೊಂದಿಗೆ ಸ್ಪರ್ಧೆಯಲ್ಲಿ ಮುಂದಿದೆ.

ಟಾಟಾ ಟಿಯಾಗೋದಲ್ಲಿ ಆಪಲ್ ಕಾರ್‌ಪ್ಲೇ, ಆಂಡ್ರಾಯ್ಡ್ ಆಟೋ, ಎಲ್‌ಇಡಿ ಡಿಆರ್‌ಎಲ್‌ಗಳು, ಪ್ರೊಜೆಕ್ಟರ್ ಹೆಡ್‌ಲೈಟ್‌ಗಳು, 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ರಿಯರ್ ವೈಪರ್, ರಿಯರ್ ಡಿಫಾಗರ್ ಅನ್ನು ಈ ಕಾರು ಒಳಗೊಂಡಿದೆ. ಇದು 8-ಸ್ಪೀಕರ್ ಸೌಂಡ್ ಸಿಸ್ಟಮ್, ಆಟೋ ಕ್ಲೈಮೆಟ್ ಕಂಟ್ರೋಲ್, ಕೂಲ್ಡ್ ಗ್ಲೋವ್‌ಬಾಕ್ಸ್‌ನಂತಹ ವೈಶಿಷ್ಟ್ಯಗಳನ್ನು ಸಹ ಹೊಂದಿದೆ.

tata-tiago-best-car-with-maximum-safety-and-super-mileage

ಸುರಕ್ಷತೆಯ ವಿಷಯದಲ್ಲಿ, ಇದು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಹಿಂಭಾಗದ ಪಾರ್ಕಿಂಗ್ ಸೆನ್ಸಾರ್, EBD ಜೊತೆಗೆ ABS, ಪ್ರಯಾಣಿಕರ ಸುರಕ್ಷತೆಗಾಗಿ ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್ ಅನ್ನು ಒಳಗೊಂಡಿದೆ. ಟಿಯಾಗೋ ಎಂಜಿನ್ ವಿಶೇಷತೆಗಳನ್ನು ನೋಡುವುದಾದ್ರೆ, ಇದು 1.2-ಲೀಟರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ.

ಇನ್ನು WagonR ನ ಸುರಕ್ಷತಾ ರೇಟಿಂಗ್ ಬಗ್ಗೆ ಹೇಳುವುದಾದ್ರೆ, ಇದು ಗ್ಲೋಬಲ್ NCAP ಕ್ರ್ಯಾಶ್ ಟೆಸ್ಟ್‌ನಲ್ಲಿ ಕೇವಲ 1-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದುಕೊಂಡಿದೆ. ನಿರ್ಮಾಣ ಗುಣಮಟ್ಟ ಮತ್ತು ಸುರಕ್ಷತಾ ವೈಶಿಷ್ಟ್ಯಗಳ ವಿಷಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಕಾರುಗಳಿಗೆ NCAP 5-ಸ್ಟಾರ್ ರೇಟಿಂಗ್ ನೀಡುತ್ತದೆ. ಆದರೆ ನಿರ್ಮಾಣ ಗುಣಮಟ್ಟದಲ್ಲಿ ವ್ಯಾಗನ್ಆರ್ ವಯಸ್ಸಾದವರು ಮತ್ತು ಮಕ್ಕಳನ್ನು ರಕ್ಷಿಸುವಲ್ಲಿ ತುಂಬಾ ದುರ್ಬಲವಾಗಿದೆ.

tata-tiago-best-car-with-maximum-safety-and-super-mileage

ಕಾರು ಕಂಪನಿಗಳು ತಮ್ಮ ಬೆಲೆಗಳನ್ನು ಕಡಿಮೆ ಮಾಡಲು ಕಾರುಗಳ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುತ್ತವೆ. ಅಂತಹ ಹೆಚ್ಚಿನ ಕಾರುಗಳು ಗುಣಮಟ್ಟವಿಲ್ಲದ ಬಿಡಿಭಾಗಗಳನ್ನು ಹೊಂದಿರುತ್ತವೆ. ಆದರೆ ಈ ವಿಷಯದಲ್ಲಿ ಟಾಟಾ ಟಿಯಾಗೊ ಒಂದು ಕೈ ಮುಂದಿದೆ. ಎಂಟ್ರಿ-ಲೆವೆಲ್ ಕಾರ್ ಆಗಿದ್ದರೂ, ಟಿಯಾಗೊ 4-ಸ್ಟಾರ್ ಸುರಕ್ಷತಾ ರೇಟಿಂಗ್, ಪ್ರೀಮಿಯಂ ಇಂಟೀರಿಯರ್ ಗುಣಮಟ್ಟವನ್ನು ಹೊಂದಿದೆ.

ಈ ಎಂಜಿನ್ 86 bhp ಪವರ್ ಮತ್ತು 113 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರು ಸಿಎನ್‌ಜಿ ರೂಪಾಂತರದಲ್ಲೂ ಲಭ್ಯವಿದೆ. ಈ ಕಾರಿನಲ್ಲಿ 5-ಸ್ಪೀಡ್ ಮ್ಯಾನುವಲ್, 5-ಸ್ಪೀಡ್ AMT ಗೇರ್‌ಬಾಕ್ಸ್ ಆಯ್ಕೆಗಳು ಲಭ್ಯವಿದೆ. ಕಂಪನಿಯ ಪ್ರಕಾರ, ಪೆಟ್ರೋಲ್‌ನಲ್ಲಿ 19.01kmpl ಮೈಲೇಜ್ ನೀಡುತ್ತದೆ, ಒಂದು ಕೆಜಿ CNG ನಲ್ಲಿ 26.49km ವರೆಗೆ ಮೈಲೇಜ್ ಪಡೆಯಬಹುದು.

tata-tiago-best-car-with-maximum-safety-and-super-mileage

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Sunday, February 25, 2024, 13:00 [IST]
English summary
Tata tiago best car with maximum safety and super mileage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+