Tata: ಟಾಟಾ ಟಿಯಾಗೊ CNG AMT ಬಿಡುಗಡೆ ಮುನ್ನವೇ ಡೀಲರ್‌ ಬಳಿ ತಲುಪಿದೆ: ವಿಶೇಷತೆಗಳೇನು?

ಟಾಟಾ ಮೋಟಾರ್ಸ್ (Tata Motors) ದೇಶಿಯ ಮಾರುಕಟ್ಟೆಯಲ್ಲಿ ಟಿಯಾಗೊ iCNG AMT (ಆಟೋಮೇಟೆಡ್ ಮ್ಯಾನುವಲ್ ಟ್ರಾನ್ಸ್ಮಿಷನ್) ಮತ್ತು ಟಿಗೋರ್ iCNG AMT ಕಾರುಗಳನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಬುಕಿಂಗ್ ಈಗಾಗಲೇ ತೆರೆದಿದ್ದರೂ, ಕಾರು ತಯಾರಕರು ಇನ್ನೂ ಬೆಲೆಯನ್ನು ಘೋಷಿಸಿಲ್ಲ. ಆದರೆ ಗ್ರಾಹಕರು ಈ ಎರಡೂ ಮಾದರಿಗಳ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದಾರೆ.

ಭಾರತದಲ್ಲಿ ಮೊದಲ ಸಿಎನ್‌ಜಿ ಎಎಂಟಿ ಕಾರುಗಳ ಪರಿಚಯವು ಮಾರುಕಟ್ಟೆಯಲ್ಲಿ ಹೊಸ ಪ್ರವೃತ್ತಿಯನ್ನು ಸ್ಥಾಪಿಸುವ ನಿರೀಕ್ಷೆಯಿದೆ. ಇದು ಇತರ ವಾಹನ ತಯಾರಕರನ್ನು ಅನುಸರಿಸಲು ಪ್ರೇರೇಪಿಸುತ್ತದೆ. ಭವಿಷ್ಯದಲ್ಲಿ, ಟಾಟಾ ಮೋಟಾರ್ಸ್ ಈ ಕೊಡುಗೆಯನ್ನು ಟಾಟಾ ಪಂಚ್ ಮತ್ತು ಟಾಟಾ ಆಲ್ಟ್ರೋಜ್ ಸಿಎನ್‌ಜಿಯಂತಹ ಮಾದರಿಗಳಿಗೆ ಎಎಂಟಿ ಆಯ್ಕೆಗಳೊಂದಿಗೆ ಪರಿಚಯಿಸಬಹುದು.

tata-tiago-cng-amt-reached-dealers-ahead-of-launch-what-are-the-features

ಈಗ ವಿಷಯಕ್ಕೆ ಬಂದರೆ, ಇತ್ತೀಚೆಗೆ ಟಿಯಾಗೊ iCNG AMT ಮತ್ತು ಟಿಗೋರ್ iCNG AMT ಕಾರುಗಳು ಬಿಡುಗಡೆ ಮುನ್ನವೇ ಡೀಲರ್‌ಶಿಪ್‌ಗಳ ಬಳಿ ಬಂದಿವೆ. 2024 ಟಿಯಾಗೊ ಸಿಎನ್‌ಜಿ AMT ವಾಕ್ ರೌಂಡ್ ಟಿಯಾಗೊ ಸಿಎನ್‌ಜಿ AMT ವಿವರವಾದ ಫಸ್ಟ್ ಲುಕ್ ವಾಕ್ ರೌಂಡ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ವಿಡಿಯೋದಲ್ಲಿನ ಮಾಹಿತಿಯ ಪ್ರಕಾರ, ಟಿಯಾಗೊ iCNG AMT ಮೂರು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.

ಅವುಗಳನ್ನು ನೋಡುವುದಾದ್ರೆ, XTA, XZA+ and XZA NRG ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಹೊಸ CNG ರೂಪಾಂತರಗಳು ಪ್ರೊಜೆಕ್ಟರ್ ಹೆಡ್ ಲ್ಯಾಂಪ್‌ಗಳು, ಆಟೋ-ಫೋಲ್ಡಿಂಗ್ ಒಆರ್ ವಿಎಂಗಳು, 7-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್ ಮತ್ತು ಸೆಮಿ-ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನಂತಹ ವೈಶಿಷ್ಟ್ಯಗಳನ್ನು ಪಡೆದಿವೆ.

tata-tiago-cng-amt-reached-dealers-ahead-of-launch-what-are-the-features

ಟಿಯಾಗೊ ಮತ್ತು ಟಿಗೋರ್ ಎರಡನ್ನೂ ಪ್ರಸ್ತುತ 1.2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು ಮ್ಯಾನುವಲ್ ಅಥವಾ ಎಎಂಟಿ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಇದೀಗ ಸಿಎನ್‌ಜಿಯಲ್ಲಿ ಕಡಿಮೆ ಪವರ್‌ನೊಂದಿಗೆ 73.5 bhp ಪವರ್ ಮತ್ತು 95 Nm ಟಾರ್ಕ್ ಉತ್ಪಾದನೆಯೊಂದಿಗೆ ಬರುತ್ತದೆ. ಪ್ರತ್ಯೇಕವಾಗಿ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ನೊಂದಿಗೆ ಜೋಡಿಸಲ್ಪಟ್ಟಿದೆ.

ಈಗ ಸಿಎನ್‌ಜಿ ವೇರಿಯೆಂಟ್‌ಗಳಲ್ಲಿ AMT ಪರಿಚಯದೊಂದಿಗೆ ಭಾರತದಲ್ಲಿ CNG ಕಾರುಗಳಿಗೆ ಮೊದಲ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ನೀಡುವ ಮೂಲಕ ಟಾಟಾ ಮೋಟಾರ್ಸ್ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಟಿಗೋರ್ ಐಸಿಎನ್ಜಿ ಕೂಡ ಅದೇ ಪವರ್ ಟ್ರೇನ್‌ನೊಂದಿಗೆ ಲಭ್ಯವಿರುತ್ತದೆ. ಇದು XZA+ and XZA ಎಂಬ ಎರಡು ರೂಪಾಂತರಗಳಲ್ಲಿ ಬರಲಿದೆ.

tata-tiago-cng-amt-reached-dealers-ahead-of-launch-what-are-the-features

ನಿರೀಕ್ಷಿತ ಬೆಲೆ: ಸಿಎನ್‌ಜಿ ಎಎಂಟಿ ರೂಪಾಂತರಗಳ ಮೈಲೇಜ್ ಅವುಗಳ ಮ್ಯಾನುವಲ್ ವೇರಿಯೆಂಟ್‌ಗಳಿಗೆ ಹೋಲಿಸಿದರೆ ಅಲ್ಪ ಇಳಿಕೆಯಾಗಬಹುದು ಎಂಬುದನ್ನು ಗಮನಿಸಬೇಕು. ಟಿಯಾಗೊ ಸಿಎನ್‌ಜಿ ಕಾರಿನ ಬೆಲೆಯು ಪ್ರಸ್ತುತ ಭಾರತದ ಎಕ್ಸ್ ಶೋರೂಂ ದರದಂತೆ ರೂ. 6.55 ಲಕ್ಷಗಳಾದರೆ, ಟಿಗೋರ್ ಸಿಎನ್‌ಜಿ ಕಾರಿನ ಬೆಲೆಯು ರೂ.7.80 ಲಕ್ಷವಿದೆ. ಅಲ್ಲಿಗೆ ಮ್ಯಾನುವಲ್ ಕಾರುಗಳಿಗಿಂತ ಅಂದಾಜು 60,000 ರೂ.ಗಳ ಬೆಲೆ ಹೆಚ್ಚಾಗುವ ನಿರೀಕ್ಷೆಯಿದೆ.

ಸುರಕ್ಷತೆಯ ವಿಚಾರದಲ್ಲಿ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್‌ಗಳು, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಎಬಿಎಸ್ ಮತ್ತು ಇಬಿಡಿಯಂತಹ ಸುರಕ್ಷತಾ ವೈಶಿಷ್ಟ್ಯಗಳು ಟಾಟಾ ಮೋಟಾರ್ಸ್‌ಗೆ ಆದ್ಯತೆಯಾಗಿದೆ. ಟಾಟಾದ ಅವಳಿ-ಸಿಲಿಂಡರ್ ತಂತ್ರಜ್ಞಾನದ ಸಂಯೋಜನೆಯು ಅಮೂಲ್ಯವಾದ ಬೂಟ್ ಸ್ಪೇಸ್ ಅನ್ನು ನೀಡುವುದರ ಜೊತೆಗೆ ಅತ್ಯುತ್ತಮ ಪರ್ಫಾಮೆನ್ಸ್ ಅನ್ನು ಖಚಿತಪಡಿಸುತ್ತದೆ.

tata-tiago-cng-amt-reached-dealers-ahead-of-launch-what-are-the-features

ಇತರ ಸ್ಪರ್ಧಿಗಳ ಬಗ್ಗೆ ಹೇಳುವುದಾದರೆ, ಟಿಯಾಗೊ ಸಿಎನ್‌ಜಿ, ಹ್ಯುಂಡೈ ಗ್ರ್ಯಾಂಡ್ ಐ 10 ನಿಯೋಸ್ ಸಿಎನ್‌ಜಿ, ಮಾರುತಿ ಸುಜುಕಿ ಸೆಲೆರಿಯೊ ಸಿಎನ್‌ಜಿ ಮತ್ತು ವ್ಯಾಗನ್‌ಆರ್ ಸಿಎನ್ ಜಿಗೆ ಪೈಪೋಟಿ ನೀಡಿದರೆ, ಟಿಗೋರ್ ಸಿಎನ್‌ಜಿ ತನ್ನ ವಿಭಾಗದಲ್ಲಿ ಮಾರುತಿ ಸುಜುಕಿ ಡಿಜೈರ್ ಸಿಎನ್‌ಜಿ, ಹ್ಯುಂಡೈ ಔರಾ ಸಿಎನ್‌ಜಿಗೆ ಪ್ರತಿಸ್ಪರ್ಧಿಯಾಗಿದೆ.

Article Published On: Tuesday, February 6, 2024, 16:22 [IST]
English summary
Tata tiago cng amt reached dealers ahead of launch what are the features
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+