ಪ್ರತಿ ಕಿ.ಮೀ ಚಲಿಸಲು ಕೇವಲ 60 ಪೈಸೆ ವೆಚ್ಚ: ಟಾಟಾ ಟಿಯಾಗೋ ಇವಿ EMI, ಆನ್ ರೋಡ್ ಬೆಲೆ ಎಷ್ಟು?
ಭಾರತದಲ್ಲಿ ಪೆಟ್ರೋಲ್ - ಡೀಸೆಲ್ ಬೆಲೆಗಳು ಗಗನಕ್ಕೆರಿದೆ. ಏರುತ್ತಿರುವ ಇಂಧನ ಬೆಲೆಗಳಿಂದ ಪಾರಾಗಲು ಜನರು ಪರ್ಯಾಯ ಆಯ್ಕೆಗಳನ್ನು ಹುಡುಕಲು ಆರಂಭಿಸಿದ್ದಾರೆ. ಇದರಿಂದ ಜನರು ನಿಧಾನವಾಗಿ ಎಲೆಕ್ಟ್ರಿಕ್ ಕಾರುಗಳ ಕಡೆ ಮುಖ ಮಾಡುತ್ತಿದ್ದಾರೆ. ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಭರ್ಜರಿ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. ಈ ವೇಳೆ ಟಾಟಾ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಮುಂದುವರೆಸಲು ಪ್ರಯತ್ನಿಸುತ್ತಿದೆ.
ಸದ್ಯ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಟಾಟಾ ಮೇಲುಗೈಯನ್ನು ಸಾಧಿಸಿದೆ. ಸ್ವದೇಶಿ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಟಿಯಾಗೋ ಮಾದರಿಯನ್ನು ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಗೊಳಿಸಿ ಸಂಚಲನ ಸೃಷ್ಟಿಸಿತು. ಈ ಎಲೆಕ್ರಿಕ್ ಕಾರು ಭಾರತದಲ್ಲಿ ಮಧ್ಯಮ ವರ್ಗದ ಜನರಿಗೆ ಉತ್ತಮ ಆಯ್ಕೆಯಾಗಿದೆ. ಈ ಲೇಖನದಲ್ಲಿ ಮಾರುತಿ ಸ್ವಿಫ್ಟ್ ಕಾರಿನ ಇಎಂಐ, ಆನ್ ರೋಡ್ ಬೆಲೆ ಮತ್ತು ಕಾರಿನ ಸಂಪೂರ್ಣ ಮಾಹಿತಿ ಮತ್ತು ಇತರ ವಿವರವನ್ನು ನೀಡುತ್ತೇವೆ.

ಟಾಟಾ ಟಿಯಾಗೋ ಎಲೆಕ್ಟ್ರಿಕ್ (Tata Tiago EV) ಕಾರಿನ ಆರಂಭಿಕೆ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.8,69,000, ಆದರೆ ಆನ್ ರೋಡ್ ಬೆಲೆಯು ರೂ.9,23,801 ಆಗಿದೆ. ಈ ಎಲೆಕ್ಟ್ರಿಕ್ ಕಾರಿನ XE MR ಮಾದರಿಗೆ 9.8 % ಬಡ್ಡಿ ದರದಲ್ಲಿ ಐದು ವರ್ಷದ ಲೋನ್ ಮಾಡಿದರೆ ಪ್ರತಿ ತಿಂಗಳು ನೀವು ರೂ.17,592 ಗಳಷ್ಟು ಇಎಂಐ ಪಾವತಿಸಬೇಕು. ಇನ್ನು ಈ ಕಾರಿನ ಡೌನ್ ಪೇಮೆಂಟ್ ರೂ.92,000 ಆಗಿದೆ.
ಈ ಮೇಲಿನ ಅಂಶಗಳ ಬಗ್ಗೆ ನಿಖರವಾದ ಮಾಹಿತಿಯನ್ನು ತಿಳಿಯನ್ನು ನಿಮ್ಮ ಹತ್ತಿರದ ಟಾಟಾ ಡೀಲರ್‌ಶಿಪ್‌ಗೆ ಭೇಟಿ ನೀಡಿ ಅಥವಾ ಟಾಟಾ ಡೀಲರ್ ಸಂಪರ್ಕಿಸಿ. ಇತ್ತೀಚೆಗೆ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಟಿಯಾಗೋ ಎಲೆಕ್ಟ್ರಿಕ್ ಕಾರನ್ನು ಮೌನವಾಗಿ ನವೀಕರಿಸಿದೆ. XZ+ Tech LR ಈಗ ಆಟೋ ಡಿಮ್ಮಿಂಗ್ IRVM ನೊಂದಿಗೆ ಬರುತ್ತದೆ. XZ+ ರೂಪಾಂತರಗಳು ಈಗ ಮೊಬೈಲ್ ಗಳನ್ನು ವೇಗವಾಗಿ ಚಾರ್ಜ್ ಮಾಡಲು 45 W USB ಪೋರ್ಟ್‌ನೊಂದಿಗೆ ಬರುತ್ತವೆ.

ಇದರ ಹೊರತಾಗಿ, ಪರಾಗ ಏರ್ ಫಿಲ್ಟರ್ ಮತ್ತು ಆಟೋ-ಫೋಲ್ಡ್ ಔಟ್ ರಿಯರ್‌ವ್ಯೂ ಮಿರರ್‌ಗಳು ಈಗ XZ+ ರೂಪಾಂತರಗಳಲ್ಲಿ ಮಾತ್ರ ಲಭ್ಯವಿವೆ. ಟಿಯಾಗೋ ಎಲೆಕ್ಟ್ರಿಕ್ ಕಾರಿನ ಎಲ್ಲಾ ರೂಪಾಂತರಗಳಿಂದ ಬ್ಲ್ಯಾಕ್ ರೂಫ್ ಅನ್ನು ತೆಗೆದುಹಾಕಿದೆ. ಇದರ ಹೊರತಾಗಿ, ಯಾವುದೇ ಬದಲಾವಣೆಗಳಿಲ್ಲ ಮತ್ತು ಬೆಲೆಯಲ್ಲಿ ಪರಿಷ್ಕರಣೆ ಮಾಡಿಲ್ಲ. ಟಾಟಾ ಮೋಟಾರ್ಸ್ ಕಂಪನಿಯು 2026ರ ವೇಳೆಗೆ ಹತ್ತು ಎಲೆಕ್ಟ್ರಿಕ್ ವಾಹನಗಳ ಪೋರ್ಟ್‌ಫೋಲಿಯೊವನ್ನು ಹೊಂದಲು ಟಾಟಾದ ಯೋಜನೆಗಳ ಭಾಗವಾಗಿದೆ.
ಇದರ ನೆಟ್‌ವರ್ಕ್ ಆಗಿ 80 ಹೊಸ ನಗರಗಳನ್ನು ಪ್ರವೇಶಿಸಿದೆ. 165ಕ್ಕೂ ಹೆಚ್ಚು ನಗರಗಳಿಗೆ ಕೂಡ ವಿಸ್ತರಿಸಲಾಗಿದೆ. ಈ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರು IP67-ರೇಟೆಡ್ 24 kWh ಮತ್ತು 19.2 kWh ಬ್ಯಾಟರಿ ಪ್ಯಾಕ್‌ಗಳನ್ನು ಅಳವಡಿಸಲಾಗಿದೆ. ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿನ IP67-ರೇಟೆಡ್ 24 kWh ಬ್ಯಾಟರಿ ಪ್ಯಾಕ್315 ಕಿ.ಮೀ ರೇಂಜ್ ಅನ್ನು ನೀಡಿದರೆ, 19.2 kWh ಬ್ಯಾಟರಿ ಪ್ಯಾಕ್ ಸಿಂಗಲ್ ಚಾರ್ಜ್‌ನಲ್ಲಿ 250 ಕಿ.ಮೀ ರೇಂಜ್ ನೀಡುತ್ತದೆ.

ಈ ಕಾರಿನಲ್ಲಿ 3.3 kW ಎಸಿ ಚಾರ್ಜ್ ಮತ್ತು 7.2 kW ಎಸಿ ಚಾರ್ಜ್ ಸೌಲಭ್ಯಗಳನ್ನು ಆಯ್ಕೆ ರೂಪದಲ್ಲಿ ನೀಡಲಾಗುತ್ತದೆ. 7.2 kW ಎಸಿ ಚಾರ್ಜ್ ಸೌಲಭ್ಯದ ಮೂಲಕ 3 ಗಂಟೆ 36 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಅನ್ನು ಮಾಡಬಹುದಾಗಿದೆ. ಈ ಟಿಯಾಗೋ ಎಲೆಕ್ಟ್ರಿಕ್ ಕಾರು 50kW ಸಾಮರ್ಥ್ಯದ ಡಿಸಿ ಫಾಸ್ಟ್ ಚಾರ್ಜಿಂಗ್ ಕೇಂದ್ರಗಳಲ್ಲಿ ಚಾರ್ಜ್ ಮಾಡಿದ್ದಲ್ಲಿ ಕೇವಲ 57 ನಿಮಿಷಗಳಲ್ಲಿ ಸೊನ್ನೆಯಿಂದ ನೂರರಷ್ಟು ಚಾರ್ಜ್ ಆಗುತ್ತೆ.
ಎಂಟು ವರ್ಷ ಅಥವಾ 1.60 ಲಕ್ಷ ಕಿಮೀ ವಾರಂಟಿಯೊಂದಿಗೆ (ಯಾವುದು ಮೊದಲು ಬರುತ್ತದೆಯೋ ಅದು) ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಮೋಟರ್ ಬರುತ್ತದೆ. ಹೆಚ್ಚಿನ ಅನುಕೂಲಕ್ಕಾಗಿ, ನಾಲ್ಕು ಚಾರ್ಜಿಂಗ್ ಆಯ್ಕೆಗಳು ಕೂಡ ಲಭ್ಯವಿರುತ್ತದೆ. ಇನ್ನು 15ಎಎಂಪಿ ಹೋಂ ಚಾರ್ಜರ್ ಮೂಲಕ ಚಾರ್ಜ್ ಮಾಡಿದ್ದಲ್ಲಿ ಕನಿಷ್ಠ 15ರಿಂದ 18 ಗಂಟೆ ತೆಗೆದುಕೊಳ್ಳುತ್ತದೆ.
ಈ ಟಿಯಾಗೋ ಎಲೆಕ್ಟ್ರಿಕ್ ಕಾರು 1,000 ರೂ. 1,100 ಕಿಮೀ ಚಾಲನೆಗೆ ಇದು ಹೆಚ್ಚು ಆಕರ್ಷಕವಾದ ಪ್ರತಿಪಾದನೆಯಾಗಿದೆ ಮತ್ತು 250 ಕಿಮೀಗೆ 20 ಯೂನಿಟ್‌ಗಳ ಬಳಕೆಯೊಂದಿಗೆ, ನೀವು ಪ್ರತಿ ಕಿ.ಮೀ.ಗೆ 60 ಪೈಸೆ ವೆಚ್ಚವಾಗುತ್ತದೆ ಎಂದು ಹೇಳಲಾಗುತ್ತಿದೆ. ಈ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರಿನ ಹೆಡ್‌ಲೈಟ್ ಸುತ್ತಲೂ ಬ್ಲ್ಯೂ ಹೈಲೈಟ್ಸ್ ನೀಡಲಾಗಿದೆ.


Click it and Unblock the Notifications