ಮಾರುತಿ ಸ್ವಿಫ್ಟ್‌ಗೆ ಸರಿಯಾದ ಪೈಪೋಟಿ... ಮೈಲೇಜ್ ಮಾತ್ರವಲ್ಲ, ಬೆಲೆ, ಸುರಕ್ಷತೆಯಲ್ಲೂ ಬೆಸ್ಟ್ ಕಾರು!

ಭಾರತದಲ್ಲಿ ಮಾರುತಿ ಸುಜುಕಿ ಕಾರುಗಳಿಗೆ ಅತೀ ಹೆಚ್ಚು ಬೇಡಿಕೆ ಇರುವುದು ಎಲ್ಲರಿಗೂ ತಿಳಿದೇ ಇದೆ. ಕಂಪನಿಯ ಕೆಲವು ಕಾರುಗಳೊಂದಿಗೆ ಸ್ಪರ್ಧಿಸುವ ಮತ್ತೊಂದು ಕಾರಿಲ್ಲ. ಇವರ ಅಗ್ಗದ ಬೆಲೆ, ಉತ್ತಮ ಮೈಲೇಜ್‌ಗೆ ಗ್ರಾಹಕರು ಹೆಚ್ಚಾಗಿ ಆಕರ್ಷಿತರಾಗಿದ್ದಾರೆ. ಆದರೆ, ಈಗ ಕಾಲ ಸ್ವಲ್ಪ ಬದಲಾಗಿದೆ.

ಜನರು ತಮ್ಮ ಭದ್ರತೆಯ ಬಗ್ಗೆ ಮೊದಲಿಗಿಂತ ಹೆಚ್ಚು ಜಾಗೃತರಾಗಿದ್ದಾರೆ. ಈ ಕಾರಣದಿಂದಾಗಿ, ಜನರು ಈಗ ಸುರಕ್ಷೆತೆಗಾಗಿ ಇತರ ಬ್ರಾಂಡ್‌ಗಳ ಕಡೆ ಮುಖ ಮಾಡಿದ್ದಾರೆ. ಹೌದು ಇದಕ್ಕೆ ಉತ್ತಮ ಉದಾಹರಣೆಯೆಂದರೆ ಸ್ವಿಫ್ಟ್‌ಗೆ ಸವಾಲು ಹಾಕಲು ಟಾಟಾ ಟಿಯಾಗೊ (Tata tiago) ರೂಪದಲ್ಲಿ ಉತ್ತಮ ಆಯ್ಕೆಯನ್ನು ಆರಿಸಿಕೊಳ್ಳುತ್ತಿದ್ದಾರೆ. ಟಾಟಾ ಟಿಯಾಗೊ ಕಾರು ಸ್ವಿಫ್ಟ್ ಗಿಂತಲೂ ಕಡಿಮೆ ಬೆಲೆ ಮಾತ್ರವಲ್ಲದೆ ಸುರಕ್ಷತೆಯಲ್ಲೂ ಸ್ವಿಫ್ಟ್‌ಗಿಂತ ಬಹಳ ಮುಂದಿದೆ.

tata-tiago-is-best-rival-competition-for-maruti-suzuki-swift

ಹೆಚ್ಚಿನ ಮೈಲೇಜ್‌ನಿಂದಾಗಿ ಜನರು ಮಾರುತಿ ಕಾರುಗಳನ್ನು ಖರೀದಿಸಲು ಇಷ್ಟಪಡುತ್ತಾರೆ. ಆದರೆ, ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ಜನರು ಈಗ ಭದ್ರತೆಯತ್ತ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಇದರಿಂದಾಗಿಯೇ ಟಾಟಾ ಟಿಯಾಗೊವನ್ನು ಅಧಿಕವಾಗಿ ಖರೀದಿಸಲಾಗುತ್ತಿದೆ. ಈ ಕಾರಿನಲ್ಲಿ ನೀವು ಉತ್ತಮ ಮೈಲೇಜ್ ಜೊತೆಗೆ ಉತ್ತಮ ಸುರಕ್ಷತೆಯನ್ನು ಪಡೆಯಬಹುದು.

ಒಂದೆಡೆ ಮಾರುತಿ ಸುಜುಕಿ ಸ್ವಿಫ್ಟ್ ಗ್ಲೋಬಲ್ ಎನ್‌ಸಿಎಪಿ ಸುರಕ್ಷತಾ ರೇಟಿಂಗ್‌ನಲ್ಲಿ 1 ಸ್ಟಾರ್ ಪಡೆದುಕೊಂಡಿದ್ದರೆ ಇತ್ತ ಟಿಯಾಗೊ 4 ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಪಡೆದಿದೆ. 4 ಸ್ಟಾರ್ (ಗ್ಲೋಬಲ್ NCAP) ರೇಟಿಂಗ್‌ನೊಂದಿಗೆ, ಅತಿವೇಗದ ಎಚ್ಚರಿಕೆ, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಪಂಕ್ಚರ್ ರಿಪೇರಿ ಕಿಟ್, ಸೀಟ್ ಬೆಲ್ಟ್ ಎಚ್ಚರಿಕೆಯಂತಹ ವೈಶಿಷ್ಟ್ಯಗಳು ಬೇಸ್ ರೂಪಾಂತರದಲ್ಲಿಯೇ ಲಭ್ಯವಿದೆ.

tata-tiago-is-best-rival-competition-for-maruti-suzuki-swift

ಇತರ ರೂಪಾಂತರಗಳು ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್), ಎಲೆಕ್ಟ್ರಾನಿಕ್ ಬ್ರೇಕ್ ಡಿಸ್ಟ್ರಿಬ್ಯೂಷನ್ (ಇಬಿಡಿ), ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್ (ಸಿಎಸ್‌ಸಿ), ರಿಯರ್ ಪಾರ್ಕಿಂಗ್ ಸೆನ್ಸರ್, ಸ್ಪೀಡ್ ಡಿಪೆಂಡೆಂಟ್ ಆಟೋ ಡೋರ್ ಲಾಕ್, ಚೈಲ್ಡ್ ಲಾಕ್, ಆಟೋ ಡಿಮ್ಮಿಂಗ್ ರಿಯರ್ ಮುಂತಾದ ಹಲವು ವೈಶಿಷ್ಟ್ಯಗಳನ್ನು ಟಾಟಾ ಟಿಯಾಗೊ ಹೊಂದಿದೆ.

ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ನಿಮ್ಮ ಸಣ್ಣ ಕುಟುಂಬಕ್ಕಾಗಿ ಕಾರನ್ನು ಖರೀದಿಸಲು ಬಯಸಿದರೆ, ಟಿಯಾಗೊ ನಿಮಗೆ ಉತ್ತಮ ಆಯ್ಕೆಯಾಗಿದೆ. ದೆಹಲಿಯಲ್ಲಿ ಇದರ ಆರಂಭಿಕ ಎಕ್ಸ್ ಶೋ ರೂಂ ಬೆಲೆ 5.60 ಲಕ್ಷ ರೂ. ಇದ್ದು, ಇದೆ ದೆಹಲಿಯಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಎಕ್ಸ್ ಶೋ ರೂಂ ಆರಂಭಿಕ ಬೆಲೆ ರೂ.5.99 ಲಕ್ಷವಿದೆ. ಹಾಗೆಯೇ ವೈಶಿಷ್ಟ್ಯಗಳ ವಿಷಯದಲ್ಲೂ ಟಿಯಾಗೊ ಉತ್ತಮವಾಗಿದೆ.

tata-tiago-is-best-rival-competition-for-maruti-suzuki-swift

ಟಾಟಾ ಟಿಯಾಗೊ ಕಾರು 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 86Bhp ಪವರ್ ಮತ್ತು 113Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದಲ್ಲದೆ, ಈ ಕಾರು ಸಿಎನ್‌ಜಿ ರೂಪಾಂತರದಲ್ಲಿಯೂ ಬರುತ್ತದೆ. CNG ಮೋಡ್‌ನಲ್ಲಿ, ಕಾರಿನ ಎಂಜಿನ್ 73Bhp ಪವರ್ ಮತ್ತು 95Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಟಾಟಾ ಟಿಯಾಗೊ 5 ಸ್ಪೀಡ್ ಮ್ಯಾನುವಲ್ ಮತ್ತು AMT ಗೇರ್ ಬಾಕ್ಸ್ ಎರಡರ ಆಯ್ಕೆಯನ್ನು ಹೊಂದಿದೆ. ಮೈಲೇಜ್‌ಗೆ ಸಂಬಂಧಿಸಿದಂತೆ, ಪೆಟ್ರೋಲ್‌ನಲ್ಲಿ ಇದರ ಮೈಲೇಜ್ 19.01kmpl ಎಂದು ಕಂಪನಿ ಹೇಳಿಕೊಂಡಿದೆ. ಹಾಗೆಯೇ ಕಾರು CNG ಮೋಡ್‌ನಲ್ಲಿ 26.49km/kg ಮೈಲೇಜ್ ನೀಡುತ್ತದೆ ಎಂದು ಟಾಟಾ ಮೋಟಾರ್ಸ್ ಹೇಳಿದೆ.

tata-tiago-is-best-rival-competition-for-maruti-suzuki-swift

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, January 1, 2024, 10:23 [IST]
English summary
Tata tiago is best rival competition for maruti suzuki swift
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+