ಅಗ್ಗದ ಟಾಟಾ ಟಿಯಾಗೊ, ಟಿಗೂರ್ CNG ಆಟೋಮೆಟಿಕ್ ಕಾರುಗಳ ಬುಕ್ಕಿಂಗ್ ಶುರು.. ಬೈಕ್‌ನಂತೆ ಮೈಲೇಜ್!

ದೇಶದ ವಿಶ್ವಾಸಾರ್ಹ ಕಂಪನಿಯಾಗಿ ಟಾಟಾ (Tata) ಗುರುತಿಸಿಕೊಂಡಿದ್ದು, ಕಳೆದ ಕೆಲವು ವರ್ಷಗಳಿಂದ ಸಿಎನ್‌ಜಿ ಕಾರು ಮಾರುಕಟ್ಟೆಯಲ್ಲಿ ಅಧಿಪತ್ಯ ಸಾಧಿಸುತ್ತಿದೆ. ಈಗ, ಅತ್ಯಂತ ಕಡಿಮೆ ಬೆಲೆಗೆ ಖರೀದಿಗೆ ದೊರೆಯಲಿರುವ ಟಿಯಾಗೊ (Tiago) ಹಾಗೂ ಟಿಗೂರ್ (Tigor) ಸಿಎನ್‌ಜಿ ಆಟೋಮೆಟಿಕ್ (Cng Automatic Transmission) ಮಾದರಿಗಳ ಬುಕ್ಕಿಂಗ್ ಆರಂಭಿಸಿದೆ.

ಆಸಕ್ತ ಗ್ರಾಹಕರು ರೂ.21,000 ಟೋಕನ್ ಮೊತ್ತ ಪಾವತಿಸುವ ಮೂಲಕ ಟಾಟಾದ ಡೀಲರ್‌ಶಿಪ್‌ ಅಥವಾ ಆನ್‌ಲೈನ್ ನಲ್ಲಿ ಈ ಕಾರುಗಳನ್ನು ಕಾಯ್ದಿರಿಸಬಹುದು. ಟಿಯಾಗೊ ಎಕ್ಸ್‌ಟಿಎ ಸಿಎನ್‌ಜಿ, ಎಕ್ಸ್‌ಝಡ್ಎ ಪ್ಲಸ್ ಸಿಎನ್‌ಜಿ, ಎಕ್ಸ್‌ಝಡ್ಎ ಎನ್‌ಆರ್‌ಜಿ ಸಿಎನ್‌ಜಿ ರೂಪಾಂತರದ ಆಯ್ಕೆಯಲ್ಲಿ ಸಿಗಲಿದೆ. ಅದೇ ರೀತಿಯಲ್ಲಿ ಟಿಗೂರ್ ಕಾರು ಎಕ್ಸ್‌ಝಡ್ಎ ಸಿಎನ್‌ಜಿ, ಎಕ್ಸ್‌ಝಡ್ಎ ಪ್ಲಸ್ ಸಿಎನ್‌ಜಿ ರೂಪಾಂತರಗಳೊಂದಿಗೆ ದೊರೆಯಲಿದೆ.

Tata Tiago, Tigor CNG Automatic Cars Booking Open: Mileage Like Bikes

ಟಾಟಾ ಟಿಯಾಗೊ, ಟಿಗೂರ್ ಸಿಎನ್‌ಜಿ ಆಟೋಮೆಟಿಕ್ ಮಾದರಿಗಳು ಪಡೆದುಕೊಂಡಿರುವ ಪವರ್‌ಟ್ರೇನ್ ಕುರಿತು ಹೇಳುವುದಾದರೆ, ಇವೆರೆಡು ಕಾರುಗಳು 1.2 - ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 73 PS ಗರಿಷ್ಠ ಪವರ್ ಹಾಗೂ 95 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿವೆ. ಜೊತೆಗೆ 5 - ಆಟೋಮೆಟಿಕ್ (ಎಎಂಟಿ) ಗೇರ್ ಬಾಕ್ಸ್ ಆಯ್ಕೆಯನ್ನು ಒಳಗೊಂಡಿವೆ.

ಈ ಕಾರುಗಳು ಹತ್ತಾರು ಆಕರ್ಷಕ ವೈಶಿಷ್ಟ್ಯಗಳೊಂದಿಗೆ ಗ್ರಾಹಕರಿಗೆ ಖರೀದಿಗೆ ಲಭ್ಯವಿವೆ. ಪ್ರಮುಖವಾಗಿ ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಟೋ ಎಸಿ, 7 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು 8 - ಸ್ಪೀಕರ್‌ಗಳನ್ನು ಹೊಂದಿವೆ. ಸುರಕ್ಷತೆಯ ಸಲುವಾಗಿ ಡುಯಲ್ ಫ್ರಂಟ್ ಏರ್‌ಬ್ಯಾಗ್‌, ಟೈರ್ ಪ್ರೆಶರ್ ಮಾನಿಟರ್, ರೇರ್ ಪಾರ್ಕಿಂಗ್ ಕ್ಯಾಮೆರಾ, ರೇರ್ ಸೆನ್ಸರ್ಸ್ & ಡಿಫಾಗರ್ ಅನ್ನು ಒಳಗೊಂಡಿವೆ.

Tata Tiago, Tigor CNG Automatic Cars Booking Open: Mileage Like Bikes

ಟಾಟಾ ಟಿಯಾಗೊ, ಟಿಗೂರ್ ಪೆಟ್ರೋಲ್ ರೂಪಾಂತರಗಳಿಗೆ ಹೋಲಿಕೆ ಮಾಡಿದರೆ ಸಿಎನ್‌ಜಿ ಆಟೋಮೆಟಿಕ್ ಮಾದರಿಗಳು ರೂ.60,000 ಹೆಚ್ಚಿನ ದರವನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಟಿಯಾಗೊ ಸಿಎನ್‌ಜಿ ಕಾರು, ರೂ.6.55 ಲಕ್ಷದಿಂದ ರೂ.8.20 ಲಕ್ಷ, ಟಿಗೂರ್ ಸಿಎನ್‌ಜಿ ಮಾದರಿ ರೂ.7.80 ಲಕ್ಷದಿಂದ ರೂ.8.95 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿರಬಹುದು ಎಂದು ಹೇಳಲಾಗಿದೆ.

ನಿರ್ವಹಣಾ ವೆಚ್ಚ ಕಡಿಮೆ ಮತ್ತು ಗರಿಷ್ಠ ಮೈಲೇಜ್ ನೀಡುವ ಕಾರಣ, ಹಲವು ಮಂದಿ ಸಿಎನ್‌ಜಿ ಕಾರುಗಳನ್ನು ಇಷ್ಟಪಟ್ಟು ಕೊಂಡುಕೊಳ್ಳುತ್ತಾರೆ. ಟಾಟಾ ಟಿಯಾಗೊ, ಟಿಗೂರ್ ಸಿಎನ್‌ಜಿ ಆಟೋಮೆಟಿಕ್ ಮಾದರಿಗಳು ಸಹ ಯಾವ ಬೈಕ್‌ಗೂ ಕಮ್ಮಿಯಿಲ್ಲದಂತೆ ಮೈಲೇಜ್ ನೀಡುತ್ತವೆ ಎನ್ನಲಾಗಿದೆ. ಟಿಯಾಗೊ 26.49 km/kg ಹಾಗೂ ಟಿಗೂರ್ 24.49 km/kg ಇಂಧನ ದಕ್ಷತೆ ಹೊಂದಿರಲಿದೆ ಎನ್ನಲಾಗಿದೆ.

Tata Tiago, Tigor CNG Automatic Cars Booking Open: Mileage Like Bikes

ಈ ಟಾಟಾ ಟಿಯಾಗೊ, ಟಿಗೂರ್ ಸಿಎನ್‌ಜಿ ಆಟೋಮೆಟಿಕ್ ಕಾರುಗಳಿಗೆ ಮಾರುತಿ ಸುಜುಕಿ ಡಿಜೈರ್ ಮತ್ತು ಹ್ಯುಂಡೈ ಔರಾ ಪ್ರಬಲ ಪ್ರತಿಸ್ಪರ್ಧಿಯಾಗಿವೆ. ನೀವು ಬಜೆಟ್ ಬೆಲೆಗೆ ಹೆಚ್ಚು ಮೈಲೇಜ್ ನಿಡುವ ಕಾರನ್ನು ಹುಡುಕುತ್ತಿದ್ದರೆ ಇವೆರಡು ಒಳ್ಳೆಯ ಆಯ್ಕೆಯಾಗಬಹುದು. ಈಗಾಗಲೇ ಬುಕ್ಕಿಂಗ್ ಆರಂಭವಾಗಿರುವುದರಿಂದ ಕೆಲವೇ ದಿನಗಳಲ್ಲಿ ದೇಶೀಯ ಮಾರುಕಟ್ಟೆಯನ್ನು ಪ್ರವೇಶಿಸುವ ನೀರಿಕ್ಷೆಯಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, January 25, 2024, 10:07 [IST]
English summary
Tata tiago tigor cng automatic cars booking open mileage like bikes
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+