ಬಡವರ ಸೆಡಾನ್‌, ಮೈಲೇಜ್‌ ಕಾ ಬಾಪ್‌ನ ಟಾಪ್‌ ಹೈಲೈಟ್ಸ್‌: ಟಾಟಾ ಟಿಗೋರ್‌ iCNG AMT

ಭಾರತೀಯ ಕಾರು ನಿರ್ಮಾಣ ಕಂಪನಿಯಾದ ಟಾಟಾ, ಇತ್ತೀಚೆಗಷ್ಟೇ ಟಿಗೋರ್‌ iCNG AMT ಎಂಬ ಭಾರತದ ಮೊದಲ ಆಟೋಮ್ಯಾಟಿಕ್‌ ಸಿಎನ್‌ಜಿ ಕಾರನ್ನು ಬಿಡುಗಡೆ ಮಾಡಿದೆ. ನಾವು ಈಗಾಗಲೇ ಇದರ ರಿವ್ಯೂ ಲೇಖನವನ್ನು ಹಾಕಿದ್ದು, ಇಂದಿನ ಈ ಲೇಖನದಲ್ಲಿ ಹೊಸ ಟಿಗೋರ್‌ iCNG AMT ಕಾರಿನ ಕುರಿತಾಗಿನ ಟಾಪ್‌ ಫೀಚರ್‌ಗಳನ್ನು ನೋಡೋಣ ಬನ್ನಿ.

ಡಿಸೈನ್‌: ಟಾಟಾ ಟಿಗೋರ್‌ iCNG ವಾಹನದ ವಿನ್ಯಾಸವನ್ನು ನೊಡುವುದಾದರೆ, ಕಳೆದ ಬಾರಿಯ ಟಿಗೋರ್‌ನ ಅದೇ ವಿನ್ಯಾಸವನ್ನು ಇದಕ್ಕೂ ನೀಡಿದ್ದಾರೆ. ಈ ಕಾರಿನಲ್ಲಿ ಎಲ್‌ಇಡಿ ಡಿಆರ್‌ಎಲ್‌ ಮತ್ತು ಇದರ ಜೊತೆಗೆ ಹಳೇಯ ಟಿಗೋರ್‌ನಲ್ಲಿದ್ದ ಅದೇ ಹೆಡ್‌ಲೈಟ್‌ಗಳನ್ನು ಸಹ ನೀಡಿದ್ದಾರೆ ಎಂಬುದನ್ನು ನಾವು ಗಮನಿಸಬಹುದಾಗಿದೆ. ಇದರ ಜೊತೆಗೆ ಕಾರಿನ ಮುಂಭಾಗದಲ್ಲಿ ಕ್ರೋಮ್‌ ಮತ್ತು ಪಿಯಾನೋ ಬ್ಲಾಕ್ ಫಿನಿಶ್ ಸಿಕ್ಕಿರುವುದರಿಂದ ಈ ಕಾರಿನ ನೋಟ ಮತ್ತಷ್ಟು ಪ್ರೀಮಿಯಂ ಆಗಿದೆ.

Tata Tigor iCNG Automatic Top Features Engine, Mileage, Price And More

ಇಂಟೀರಿಯರ್‌: ಈ ಕಾರಿನ ಒಳಭಾಗದಲ್ಲಿ ನೋಡುವುದಾದರೆ ನಮಗೆ ಮೊದಲು ಕಾಣಿಸುವ ಮುಖ್ಯವಾದ ವಿಷಯ ಎಂದರೆ ಈ ಕಾರಿನ ಒಳಭಾಗದಲ್ಲಿನ 7 ಇಂಚ್‌ನ ಟಚ್‌ಸ್ಕ್ರೀನ್‌ ಇನ್ಸ್ಟ್ರುಮೆಂಟ್ ಕ್ಲಸ್ಟರ್‌. ಕಳೆದ ಬಾರಿಯ ಟಿಗೋರ್‌ನಲ್ಲೂ ಇದೇ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಇದ್ದುದನ್ನು ನಾವು ಈ ಕ್ಷಣದಲ್ಲಿ ಮೆಲುಕು ಹಾಕಬಹುದಾಗಿದೆ. ಇನ್ನುಳಿದ ಹಲವು ವಿಷಯಗಳು ಸಹ ಕಳೆದ ಬಾರಿಯ ಟಿಗೋರ್‌ನಲ್ಲಿದೆ.

ಬೂಟ್‌ಸ್ಪೇಸ್‌: ಟಿಗೋರ್‌ iCNG AMT ಕಾರಿನ ಬೂಟ್‌ಸ್ಪೇಸ್‌ ಬಗ್ಗೆ ಮಾತನಾಡಲೇ ಬೇಕು. ಈ ಕಾರಿನಲ್ಲಿ ಡ್ಯುಯಲ್‌ ಟ್ಯಾಂಕ್‌ ಸಿಎನ್‌ಜಿ ಇದ್ದರೂ ಸಹ, ಅದನ್ನು ತುಂಬಾ ಬುದ್ದಿವಂತಿಕೆಯಿಂದ ಜೊಡಿಸಿದ್ದಾರೆ. ಇದೇ ಕಾರಣದಿಂದ ಈ ಕಾರಿನಲ್ಲಿ ನಮಗೆ ಲಗೇಜ್‌ಗಳನ್ನಿಡಲು ಉತ್ತಮ ಸ್ಥಳಾವಕಾಶ ಸಹ ಸಿಗುತ್ತಿದ್ದು, ಪ್ರಯಾಣದ ವೇಳೆ ಲಗೇಜ್‌ಗಳನ್ನು ಇದರಲ್ಲಿ ಯಾವುದೇ ತೊಂದರೆ ಇಲ್ಲದೆ ಇಡಬಹುದು. ಸಾಮಾನ್ಯವಾಗಿ ಸಿಎನ್‌ಜಿ ಕಾರುಗಳಲ್ಲಿ ಬೂಟ್‌ ಸ್ಪೇಸ್‌ ಒಂದು ಸಮಸ್ಯೆಯಾಗಿರುತ್ತಿತ್ತು.

Tata Tigor iCNG Automatic Top Features Engine, Mileage, Price And More

ಎಂಜಿನ್‌: ಟಾಟಾ ಟಿಗೋರ್‌ iCNG ವಾಹನವು ಭಾರತದ ಮೊದಲ ಸಿಎನ್‌ಜಿ ಚಾಲಿತ ಆಟೋಮ್ಯಾಟಿಕ್‌ ಕಾರಾಗಿದೆ. ಈ ಕಾರಿನ ಎಂಜಿನ್‌ ಬಗ್ಗೆ ಹೇಳುವುದಾದರೆ ಈ ಕಾರಿನಲ್ಲಿ, 1.2-litre ರೆವಟ್ರೋನ್‌ ಪೆಟ್ರೋಲ್‌ ಎಂಜಿನ್‌ ಸಿಗುತ್ತಿದ್ದು, ಈ ಎಂಜಿನ್‌ ಸಹಾಯದಿಂದ ಹೊಸ ಟಾಟಾ ಟಿಗೋರ್‌ iCNG AMT, ಸಿಎನ್‌ಜಿ ಮೋಡ್‌ನಲ್ಲಿ ಸುಮಾರು 73.4PS ಪವರ್‌ ಮತ್ತು ಪೆಟ್ರೋಲ್‌ ಮೋಡ್‌ನಲ್ಲಿ 86PS ಪವರ್‌ ಅನ್ನು ಉತ್ಪಾದಿಸುತ್ತದೆ.

ಟಾಟಾ ಟಿಗೋರ್ iCNG‌, ಈ ಎಂಜಿನ್‌ ನಿಂದ ಸುಮಾರು 95 NM ಪೀಕ್‌ ಟಾರ್ಕನ್ನು ಸಹ ಹೊರ ಹಾಕುತ್ತಿದ್ದು, ಕಾರಿಗೆ ಅಗತ್ಯಕ್ಕೆ ಬೇಕಾದ ಪರ್ಫಾಮೆನ್ಸ್‌ ನೀಡಲು ಇದು ಸಹಾಯ ಮಾಡುತ್ತದೆ. ಇದರ ಜೊತೆಗಿನ ಮತ್ತೊಂದು ಪ್ರಮುಖವಾದ ವಿಷಯ ಏನೆಂದರೆ, ಇದೀಗ ಈ ಕಾರು 5-speed AMT ಗೇರ್‌ ಬಾಕ್ಸ್‌ನಲ್ಲಿ ಬರುತ್ತಿದ್ದು, ನಿಮ್ಮ ಪ್ರಯಾಣ ಸುಖಕರವಾಗಿರುತ್ತದೆ.

ಆಟೋಮ್ಯಾಟಿಕ್‌ ಗೇರ್‌ ಬಾಕ್ಸ್‌: ಟಾಟಾ ಟಿಗೋರ್‌ iCNG AMT ಕಾರು ಭಾರತದ ಮೊದಲ ಆಟೋಮ್ಯಾಟಿಕ್‌ ಸಿಎನ್‌ಜಿ ಗೇರ್‌ ಬಾಕ್ಸ್‌ ಜೊತೆ ಬಂದಿದೆ. ತನ್ನ ಕೆಲಸವನ್ನು ಈ ಗೇರ್‌ ಬಾಕ್ಸ್‌ ಸಮರ್ಪಕವಾಗಿ ನಿಭಾಯಿಸುತ್ತಿದ್ದು, ಕಾರಿಗೆ ಗರಿಷ್ಟ ಮೈಲೇಜ್‌ ಅನ್ನು ತಂದು ಕೊಡುತ್ತಿದೆ. ನೀವೇನಾದರೂ ಈ ಕಾರನ್ನು ಓಡಿಸುವಾಗ ಗರಿಷ್ಟ ಮೈಲೇಜ್‌ ಅನ್ನು ಪಡೆಯಲು ಪ್ರಯತ್ನಿಸುವುದಾದರೆ ಅದಕ್ಕೆ ಈ ಆಟೋಮ್ಯಾಟಿಕ್‌ ಗೇರ್‌ ಬಾಕ್ಸ್‌ ಸಾಕಷ್ಟು ಸಹಾಯ ಮಾಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನ ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, February 22, 2024, 16:17 [IST]
English summary
Tata tigor icng amt top features engine mileage price and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+