Tata: ಟಾಟಾದ ಈ ಕಾರು ನಾಲ್ಕೇ ವಾರಗಳಲ್ಲಿ ವಿತರಣೆ.. ಬೈಕ್‌ನಂತೆ ಮೈಲೇಜ್!

ಟಾಟಾ (Tata) ವಿಶ್ವಾಸಾರ್ಹ ಕಾರು ತಯಾರಕ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಕಂಪನಿಯ ಮಾರಾಟಗೊಳಿಸುವ ಹ್ಯಾಚ್‌ಬ್ಯಾಕ್, ಎಸ್‌ಯುವಿಗಳಿಗೆ ಸಖತ್ ಡಿಮ್ಯಾಂಡ್ ಇದ್ದು, ಆಕರ್ಷಕ ವೈಶಿಷ್ಟ್ಯ ಹಾಗೂ ವಿನ್ಯಾಸ ಹೊಂದಿರುವುದರಿಂದ ಹೆಚ್ಚಿನ ಮಂದಿ ಇಷ್ಟಪಟ್ಟು ಖರೀದಿಸುತ್ತಾರೆ. ಸದ್ಯ, ಟಿಗೂರ್ ಕಾಂಪ್ಯಾಕ್ಟ್ ಸೆಡಾನ್ ಕಾಯುವಿಕೆ ಅವಧಿ ಬಗ್ಗೆ ಮಾಹಿತಿ ದೊರೆತಿದೆ.

ಜನವರಿ (2024)ಯಲ್ಲಿ ಟಾಟಾ ಟಿಗೂರ್ ಕಾರನ್ನು ಗ್ರಾಹಕರು ಕೇವಲ 4 ವಾರಗಳಲ್ಲಿ ವಿತರಣೆ ಪಡೆಯಬಹುದು. ಮುಂಬೈ ಭಾಗದಲ್ಲಿ ಮಾತ್ರ ಈ ಕಾಯುವಿಕೆ ಅವಧಿ (Waiting Period) ಅನ್ವಯವಾಗಲಿದೆ. ಆದರೆ ರಾಜ್ಯದಿಂದ ರಾಜ್ಯಕ್ಕೆ ರೂಪಾಂತರಗಳು, ಬಣ್ಣಗಳನ್ನು ಆಧರಿಸಿ ಈ ಸಮಯಾವಕಾಶ ಬೇರೆಯಿರಲಿದ್ದು, ಹೆಚ್ಚಿನ ವಿವರಗಳಿಗೆ ನಿಮ್ಮ ಸಮೀಪದ ಡೀಲರ್‌ಶಿಪ್ ಗೆ ಭೇಟಿ ನೀಡಿರಿ.

Tata: ಟಾಟಾದ ಈ ಕಾರು ನಾಲ್ಕೇ ವಾರಗಳಲ್ಲಿ ವಿತರಣೆ.. ಬೈಕ್‌ನಂತೆ ಮೈಲೇಜ್!

ಟಾಟಾ ಟಿಗೂರ್ (Tata Tigor), ರೂ.6.30 ಲಕ್ಷದಿಂದ ರೂ.8.95 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದ್ದು, ಎಕ್ಸ್ಇ, ಎಕ್ಸ್ಎಂ ಸೇರಿದಂತೆ 4 ರೂಪಾಂತರಗಳ ಆಯ್ಕೆಯಲ್ಲಿ ಸಿಗುತ್ತದೆ. ಜೊತೆಗೆ ಮ್ಯಾಗ್ನೆಟಿಕ್ ರೆಡ್, ಅರಿಜೋನಾ ಬ್ಲೂ, ಓಪಲ್ ವೈಟ್ ಒಳಗೊಂಡಂತೆ 4 ಆಕರ್ಷಕ ಬಣ್ಣಗಳೊಂದಿಗೂ ದೊರೆಯುತ್ತದೆ. ಈ ಕಾರಿನಲ್ಲಿ 4 ಜನರು ಆರಾಮದಾಯಕವಾಗಿ ಪ್ರಯಾಣಿಸಬಹುದು.

ಈ ಟಾಟಾ ಟಿಗೂರ್ ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದ್ದು, ಇದರ 1.2 - ಲೀಟರ್ ಪೆಟ್ರೋಲ್ ಎಂಜಿನ್, 86 PS ಗರಿಷ್ಠ ಪವರ್, 113 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 5 - ಸ್ವೀಡ್ ಮ್ಯಾನುವಲ್/ 5 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಒಳಗೊಂಡಿದೆ.

Tata: ಟಾಟಾದ ಈ ಕಾರು ನಾಲ್ಕೇ ವಾರಗಳಲ್ಲಿ ವಿತರಣೆ.. ಬೈಕ್‌ನಂತೆ ಮೈಲೇಜ್!

ಮತ್ತೊಂದು ಸಿಎನ್‌ಜಿ ಕಿಟ್ ಪಡೆದಿರುವ ಕಾರು, ಇದೇ ಎಂಜಿನ್ ಆಯ್ಕೆಯನ್ನು ಪಡೆದಿದೆ. ಆದರೆ, 73.5 PS ಪವರ್, 95 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಕೇವಲ 5 - ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಲಭ್ಯವಿದೆ. ಪೆಟ್ರೋಲ್ ರೂಪಾಂತರಗಳು 19.28 kmpl - 19.60kmpl, ಸಿಎನ್‌ಜಿ ರೂಪಾಂತರಗಳು 26.49 km/kg ಮೈಲೇಜ್ ನೀಡುತ್ತವೆ.

ಟಾಟಾ ಟಿಗೂರ್ ವಿನ್ಯಾಸದ ವಿಚಾರದಲ್ಲೂ ಅತ್ಯಾಧುನಿಕವಾಗಿದೆ. ವೈಶಿಷ್ಟ್ಯಗಳ ಕುರಿತು ಹೇಳುವುದಾದರೆ, 7 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ರೈನ್-ಸೆನ್ಸಿಂಗ್ ವೈಪರ್ಸ್, ಕೀಲೆಸ್ ಎಂಟ್ರಿ, ಆಟೋ ಎಸಿ ಮತ್ತು ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ.

Tata: ಟಾಟಾದ ಈ ಕಾರು ನಾಲ್ಕೇ ವಾರಗಳಲ್ಲಿ ವಿತರಣೆ.. ಬೈಕ್‌ನಂತೆ ಮೈಲೇಜ್!

ಸುರಕ್ಷತೆಯ ದೃಷ್ಟಿಯಿಂದಲ್ಲೂ ಈ ಕಾರು ಅತ್ಯುತ್ತಮವಾಗಿದ್ದು, ಡುಯಲ್ ಫ್ರಂಟ್ ಏರ್‌ಬ್ಯಾಗ್‌, EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಹಾಗೂ ರೇರ್ ಪಾರ್ಕಿಂಗ್ ಸೇನಾರ್ಸ್ ಸೇರಿದಂತೆ ಹಲವು ಸೇಫ್ಟಿ ಫೀಚರ್ಸ್ ಪಡೆದಿದೆ. ಈ ಕಾರಿಗೆ ಮಾರುತಿ ಸುಜುಕಿ ಡಿಜೈರ್, ಹ್ಯುಂಡೈ ಔರಾ ಮತ್ತು ಹೋಂಡಾ ಅಮೇಜ್ ಪ್ರಬಲ ಎದುರಾಳಿಗಳಿವೆ.

ಟಾಟಾ ಟಿಗೂರ್ ಕಡಿಮೆ ಕಾಯುವಿಕೆ ಅವಧಿಯೊಂದಿಗೆ ಕೈಗೆಟುಕುವ ಬೆಲೆಗೆ ಸಿಗುವುದು ಹೊಸ ಕಾರು ಖರೀದಿದಾರರಿಗೆ ಹೆಚ್ಚಿನ ಖುಷಿಯನ್ನು ತಂದಿದೆ. ಮುಂಬರುವ ದಿನಗಳಲ್ಲಿ ಗ್ರಾಹಕರಿಂದ ಅಧಿಕ ಬೇಡಿಕೆ ಬಂದರೆ, ಈ ಕಾರಿನ ಕಾಯುವಿಕೆ ಅವಧಿ ಮತ್ತಷ್ಟು ದ್ವಿಗುಣಗೊಳ್ಳಬಹುದು. ಟಿಗೂರ್ ಎಲೆಕ್ಟ್ರಿಕ್ ರೂಪದಲ್ಲಿ ವಾಣಿಜ್ಯ ಬಳಕೆಗೆ ಮಾತ್ರ ದೊರೆಯುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, January 8, 2024, 15:25 [IST]
English summary
Tata tigor january 2024 waiting period upto four weeks mileage like bike
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+