ಡೀಸೆಲ್ ಎಂಜಿನ್‌ನಲ್ಲೂ ಬರಲಿದೆ ಸ್ಟೈಲಿಶ್ ಟಾಟಾ ಕರ್ವ್: ಫೈವ್‌ಸ್ಟಾರ್ ಹೋಟೆಲ್‌ನಂತಿದೆ ಎಂದ ನೆಟ್ಟಿಗರು!
ಕಳೆದ ಕೆಲವು ವರ್ಷಗಳಿಂದ ಟಾಟಾ ಮೋಟಾರ್ಸ್ ಭಾರತೀಯ ವಾಹನ ನಿರ್ಮಾಣ ಮತ್ತು ಮಾರಾಟ ಕ್ಷೇತ್ರದಲ್ಲಿ ಗಳಿಸಿರುವಂತಹ ಬೆಳವಣಿಗೆಗಳಂತೂ ಅಪಾರ. ಕೆಲವು ವರ್ಷಗಳಿಂದ ಹಲವಾರು ಹೊಸ ಹೊಸ ಕಾರುಗಳನ್ನು ಟಾಟಾ ಮಾರುಕಟ್ಟೆಗೆ ಬಿಟ್ಟಿದ್ದು, ಬಹುತೇಕ ಕಾರುಗಳನ್ನು ಭಾರತೀಯ ಗ್ರಾಹಕರು ಎರಡೂ ಕೈಗಳನ್ನು ನೀಡಿ ಸ್ವಾಗತಿಸಿದ್ದಾರೆ ಎಂದೇ ಹೇಳಬಹುದು.
೨೦೨೩ ರ ಆಟೋ ಎಕ್ಸ್ಪೋದಲ್ಲಿ ಟಾಟಾ ಒಮದು ಅತ್ಯಾಕರ್ಷಕ ಕಾರಿನ ಕಾನ್ಸೆಪ್ಟ್ ಒಂದನ್ನು ಅನಾವರಣ ಮಾಡಿತ್ತು. ಅದುವೇ ಬಹಳ ಹಿಂದಿನಿಂದಲೂ ಸದ್ದು ಮಾಡುತ್ತಾ ಬಂದಿದ್ದ ಟಾಟಾ ಕರ್ವ್. ಹೌದು, ಅತ್ಯಾಕರ್ಷಕ ಡಿಸೈನ್ ವಿನ್ಯಾಸದಿಂದ ಕೂಡಿರುವ ಈ ಕಾರಿನ ಎಲೆಕ್ಟ್ರಿಕ್ ಮಾದರಿಯನ್ನು ಈ ಹಿಂದೆ ಟಾಟಾ ಅನಾವರಣ ಗೊಳಿಸಿತ್ತು. ಅದಾದ ಕೆಲವು ದಿನಗಳ ಬಳಿಕ ಇದರ ಪೆಟ್ರೋಲ್ ಆವೃತ್ತಿಯೂ ಸಹ ಹೊರಬರಲಿದೆ ಎಂದು ಮೂಲಗಳು ತಿಳಿಸಿತ್ತು.

ಆದರೆ ಇದೀಗ ಟಾಟಾ ಕಡೆಯಿಂದ ಮತ್ತೊಂದು ಸುದ್ದಿ ಹೊರ ಬಿದ್ದಿದೆ. ಹೌದು, ಟಾಟಾ ಕರ್ವ್ ಕೇವಲ ಎಲೆಕ್ಟ್ರಿಕ್ ಮತ್ತು ಪೆಟ್ರೋಲ್ ಮಾತ್ರವಲ್ಲ ಡೀಸೆಲ್‌ನಲ್ಲಿಯೂ ಸಹ ಇದು ಲಭ್ಯವಾಗಲಿದೆ ಎಂದು ತಿಳಿದು ಬಂದಿದೆ. ಮೊದಲಿಗೆ ಭಾರತದಲ್ಲಿ ಮೊದಲು ಟಾಟಾ ಕರ್ವ್ ಎಲೆಕ್ಟ್ರಿಕ್ ಲಾಂಚ್ ಆಗಲಿದ್ದು ತದ ನಂತರದಲ್ಲಿ ಡೀಸೆಲ್ ಮತ್ತು ಟರ್ಬೋ ಪೆಟ್ರೋಲ್ ಎಂಜಿನ್ ಆವೃತ್ತಿಗಳು ಲಾಂಚ್ ಆಗಲಿದೆ ಎಂದು ತಿಳಿದು ಬಂದಿದೆ.
ಮಾಹಿತಿಗಳ ಪ್ರಕಾರ ಈಗಿರುವ ಟಾಟಾ ನೆಕ್ಸಾನ್‌ನ ಡೀಸೆಲ್ ಎಂಜಿನ್ ಅನ್ನೇ ಈ ಕಾರಿಗು ಅಳವಡಿಸಲಾಗುತ್ತದೆ ಎಂದು ತಿಳಿದು ಬಂದಿದೆ. ಹೌದು ನೆಕ್ಸಾನ್‌ನಲ್ಲಿರುವ, ೧.೫ ಲೀಟರ್‌ನ ಡೀಸೆಲ್ ಎಂಜಿನ್ ಸಹಾಯದಿಂದ ಈಗ ನೆಕ್ಸಾನ್ ಕಾರ್‌ನಲ್ಲಿ ಉತ್ಪತ್ತಿಯಾಗುವ ಅದೇ ಪವರ್ ಮತ್ತು ಪರ್ಫಾಮೆನ್ಸ್ ಅನ್ನು ನಾವು ಮುಂಬರಲಿರುವ ಈ ಹೊಸ ಟಾಟಾ ಕರ್ವ್ ಡೀಸೆಲ್ ಆವೃತ್ತಿಯಲ್ಲಿ ಎದುರು ನೊಡಬಹುದಾಗಿದೆ.

ಈ ಹೊಸ ಟಾಟಾ Curvv ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹ್ಯುಂಡೈ ಕ್ರೆಟಾ ಎಸ್‍ಯುವಿಗೆ ನೇರವಾಗಿ ಪೈಪೋಟಿ ನೀಡುತ್ತದೆ. 2023ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಟಾಟಾ Curvv ಕಳೆದ ವರ್ಷ ಎಲೆಕ್ಟ್ರಿಕ್ ವಾಹನ ಕಾನ್ಸೆಪ್ಟ್ ರೂಪದಲ್ಲಿ ತೋರಿಸಿದ್ದಕ್ಕಿಂತ ಸ್ವಲ್ಪ ಭಿನ್ನವಾಗಿದೆ. ಈ ಬಾರೀ ಅನಾವರಣಗೊಳಿಸಿದ ಟಾಟಾ Curvv ಕಾನ್ಸೆಪ್ಟ್ ಸ್ಪ್ಲಿಟ್ ಹೆಡ್‌ಲೈಟ್ ವಿನ್ಯಾಸದ ನವೀಕರಿಸಿದ ಆವೃತ್ತಿಯನ್ನು ಹೊಂದಿದೆ.
ಇದರ ಡಿಸೈನ್ ಮತ್ತು ಇತರ ವಿಷಯಗಳನ್ನು ನೋಡುವುದಾದರೆ, ಈ ಕಾರಿನ ಹೆಡ್‌ಲ್ಯಾಂಪ್‌ಗಳೊಂದಿಗೆ ಹಿಂದೆಂದಿಗಿಂತಲೂ ಹೆಚ್ಚು ಉತ್ಪಾದನೆಗೆ ಸಿದ್ಧವಾಗಿದೆ. ಟಾಟಾ ಮೋಟಾರ್ಸ್‌ನ Curvv ಕಾನ್ಸೆಪ್ಟ್ ಪೂರ್ಣ-ಅಗಲ LED DRL ಗಳನ್ನು ಉಳಿಸಿಕೊಂಡಿದೆ. ಈ ಟಾಟಾ Curvv ಕಾನ್ಸೆಪ್ಟ್ ವಿಶಿಷ್ಟ ಲುಕ್ ಅನ್ನು ಹೊಂದಿದೆ. ಈ ಕಾರು ವಿನ್ಯಾಸದ ಹೈಲೈಟ್ ಅದನ್ನು ಉತ್ಪಾದನೆಗೆ ಮಾಡಿದರೆ, ಎಸ್‍ಯುವಿಗಳು ಬಿ-ವಿಭಾಗದಲ್ಲಿ Curvv ಒಂದು ವಿಶಿಷ್ಟ ಕೊಡುಗೆಯಾಗಿದೆ.

ಇನ್ನು ಟಾಟಾ ಮೋಟಾರ್ಸ್ ಕಂಪನಿಯು Curvv ಟಾಟಾದ Gen 2 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರುವುದರಿಂದ ಮುಂಬೈ ಸಂಸ್ಥೆಯು ಬಹಿರಂಗಪಡಿಸಿದ ಯೋಜನೆಗಳ ಪ್ರಕಾರ ಇದು ಒಂದೇ ಚಾರ್ಜ್‌ನಲ್ಲಿ 400 ಮತ್ತು 500 ಕಿಲೋಮೀಟರ್‌ಗಳ ರೇಂಜ್ ಅನ್ನು ನೀಡುತ್ತದೆ ಎಂದು ನಾವು ನಿರೀಕ್ಷಿಸಬಹುದು. 2023ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿದ ಟಾಟಾ Curvv ಎಂಜಿನ್ ಬಗ್ಗೆಯು ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ. ಪ್ರೊಡಕ್ಷನ್-ಸ್ಪೆಕ್ Curvv ಇದು ಮುಂದಿನ ವರ್ಷಗಳಲ್ಲಿ ನಡುವೆ ಬಿಡುಗಡೆಯಾಗಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications