ಮಾರುತಿ - ಹ್ಯುಂಡೈನ್ನು ಹಿಂದಿಕ್ಕಿ ನಂಬರ್ 1 ಸ್ಥಾನಕ್ಕೇರಿತು ಟಾಟಾದ ಈ ಕಾರು.. 6 ಲಕ್ಷ ಬೆಲೆ, 26 ಕಿ.ಮೀ ಮೈಲೇಜ್!

ದೇಶೀಯ ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಗೆ ಸಿಗುವ ಕಾಂಪ್ಯಾಕ್ಟ್ ಎಸ್‌ಯುವಿಗಳು ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಗಳಿಸಿವೆ. ಈ ವಿಭಾಗದಲ್ಲಿ ಅಧಿಪತ್ಯವನ್ನು ಸಾಧಿಸಲು ಟಾಟಾ, ಮಾರುತಿ ಸುಜುಕಿ, ಕಿಯಾ, ಮಹೀಂದ್ರಾ, ರೆನಾಲ್ಟ್, ಹ್ಯುಂಡೈ ಮತ್ತು ನಿಸ್ಸಾನ್ ಕಂಪನಿಗಳು ಭಾರೀ ಪೈಪೋಟಿಯನ್ನು ನಡೆಸುತ್ತಿವೆ.

ಕಳೆದ ತಿಂಗಳು ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಟಾಟಾ ಪಂಚ್ (Tata Punch) ಗರಿಷ್ಠ ಸಂಖ್ಯೆಯಲ್ಲಿ ಮಾರಾಟಗೊಳುವ ಮೂಲಕ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಬರೋಬ್ಬರಿ 19,158 ಯುನಿಟ್ ಮಾರಲಾಗಿದ್ದು, 2023ರ ಏಪ್ರಿಲ್‌ಗೆ ಹೋಲಿಸಿದರೆ (10,934) ಶೇಕಡ 75% ಬೆಳವಣಿಗೆ ಸಾಧಿಸಿದೆ. ಈ ಕಾರು 6.13 ಲಕ್ಷದಿಂದ ರೂ.10.20 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯಲಿದ್ದು, ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಹೊಂದಿದೆ.

Top 10 Compact SUVs April 2024 Tata Punch Become Number One Overtaking Maruti Suzuki-Hyunda

ಈ ಟಾಟಾ ಪಂಚ್ ಕಾರು 18.8 ರಿಂದ 26 ಕೆಎಂಪಿಎಲ್ ಮೈಲೇಜ್ ನೀಡಲಿದ್ದು, 7-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, 7-ಇಂಚಿನ ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಟೋಮೆಟಿಕ್ ಎಸಿ ಮತ್ತು ಕ್ರೂಸ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ ಏರ್‌ಬ್ಯಾಗ್‌, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ರೇರ್ ಪಾರ್ಕಿಂಗ್ ಸೇನಾರ್ಸ್, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಅನ್ನು ಪಡೆದಿದೆ.

ಮಾರುತಿ ಸುಜುಕಿ ಬ್ರೆಝಾ (Maruti Suzuki Brezza) ಎರಡನೇ ಸ್ಥಾನದಲ್ಲಿದ್ದು, ಹೋದ ತಿಂಗಳು 17,113 ಯುನಿಟ್ ಎಸ್‌ಯುವಿಗಳನ್ನು ಮಾರಾಟಗೊಳಿಸಲಾಗಿದೆ. 2023ರ ಏಪ್ರಿಲ್‌ನ 11,836 ಯುನಿಟ್ ಗಳಿಗೆ ಹೋಲಿಕೆ ಮಾಡಿದರೆ ಶೇಕಡ 45% ಪ್ರಗತಿಯನ್ನು ಕಂಡಿದೆ. ಈ ಬ್ರೆಝಾ ಕಾರು ರೂ.8.34 ಲಕ್ಷದಿಂದ ರೂ.14.14 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದೆ.

Top 10 Compact SUVs April 2024 Tata Punch Become Number One Overtaking Maruti Suzuki-Hyunda

ಮಾರುತಿ ಸುಜುಕಿ ಫ್ರಾಂಕ್ಸ್ (Maruti Suzuki Fronx) ಮಾರಾಟ ಪ್ರಮಾಣವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಕಾರು ಮೂರನೇ ಸ್ಥಾನದಲ್ಲಿ ಮುಂದುವರಿದಿದೆ. ಕಳೆದ ತಿಂಗಳು 14,286 ಯುನಿಟ್ ಮಾರಲಾಗಿದ್ದು, ಶೇಕಡ 63% ಪ್ರಗತಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಫ್ರಾಂಕ್ಸ್ ಎಸ್‌ಯುವಿ ರೂ.7.51 ಲಕ್ಷದಿಂದ ರೂ.13.04 ಲಕ್ಷ ಬೆಲೆಯನ್ನು ಹೊಂದಿದೆ. 9-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ ಪ್ಲೇ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.

ಟಾಟಾ ನೆಕ್ಸಾನ್ (Tata Nexon) ಮಾರಾಟದಲ್ಲಿ ಕುಸಿತವಾಗಿದ್ದರೂ ನಾಲ್ಕನೇ ಸ್ಥಾನದಲ್ಲಿ ಮುಂದುವರಿದಿದೆ. ಈ ಏಪ್ರಿಲ್‌ನಲ್ಲಿ 11,168 ಯುನಿಟ್ ಕಾರುಗಳನ್ನು ಮಾರಾಟಗೊಳಿಸಲಾಗಿದ್ದು, ಹೋದ ವರ್ಷಕ್ಕೆ ಹೋಲಿಸಿದರೆ (15,002 ಯುನಿಟ್) ಶೇಕಡ 26% ಹಿನ್ನಡೆಯನ್ನು ಕಂಡಿದೆ. ನೆಕ್ಸಾನ್ ಎಸ್‌ಯುವಿ ರೂ.8.15 ಲಕ್ಷದಿಂದ ರೂ.15.80 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ.

Top 10 Compact SUVs April 2024 Tata Punch Become Number One Overtaking Maruti Suzuki-Hyunda

ಹ್ಯುಂಡೈ ವೆನ್ಯೂ (Hyundai Venue) ಐದನೇ ಸ್ಥಾನದಲ್ಲಿದಲ್ಲಿದೆ. ಆದರೆ, ಮಾರಾಟದಲ್ಲಿ ಮಾತ್ರ ಕುಸಿತವನ್ನು ದಾಖಲಿಸಿದೆ. ಹೋದ ತಿಂಗಳು ಮಾರಲಾಗಿದ್ದ 9,120 ಯುನಿಟ್‌ಗೆ ಹೋಲಿಸಿದರೆ (10,342 ಯುನಿಟ್) ಶೇಕಡ 12% ಹಿನ್ನಡೆಯಾಗಿದೆ. ಈ ಕಾರು ರೂ.7.94 ಲಕ್ಷದಿಂದ ರೂ.13.48 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಲಭ್ಯವಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರೆಯುತ್ತದೆ.

ಆರನೇ ಸ್ಥಾನದಲ್ಲಿ ಕಿಯಾ ಸೋನೆಟ್ (7,901 ಯುನಿಟ್), ಏಳನೇ ಸ್ಥಾನದಲ್ಲಿ ಹ್ಯುಂಡೈ ಎಕ್ಸ್‌ಟರ್ (7,756 ಯುನಿಟ್), ಎಂಟನೇ ಸ್ಥಾನದಲ್ಲಿ ಮಹೀಂದ್ರಾ ಎಕ್ಸ್‌ಯುವಿ300 (4,003 ಯುನಿಟ್), ಒಂಬತ್ತನೇ ಸ್ಥಾನದಲ್ಲಿ ನಿಸ್ಸಾನ್ ಮ್ಯಾಗ್ನೈಟ್ (2,404 ಯುನಿಟ್) ಮತ್ತು ಹತ್ತನೇ ಸ್ಥಾನದಲ್ಲಿ ರೆನಾಲ್ಟ್ ಕಿಗರ್ (1,059 ಯುನಿಟ್) ಇದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, May 9, 2024, 18:45 [IST]
English summary
Top 10 compact suvs april 2024 tata punch become number one overtaking maruti suzuki hyundai
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+