Suv Inida: ಟಾಟಾದ ಈ ನಂಬಿಕೆಯ ಕಾರುಗಳು ಬ್ರೆಝಾ, ಸ್ಕಾರ್ಪಿಯೋವನ್ನು ಹಿಂದಿಕ್ಕಿ ಬಿಟ್ಟವು, ಟಾಪ್ 2ರಲ್ಲಿ ಇವೆ!
ಭಾರತದಲ್ಲಿ ಕಳೆದ ಕೆಲವು ವರ್ಷಗಳಿಂದ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ (ಎಸ್‌ಯುವಿ - Suv) ಭಾರೀ ಜನಪ್ರಿಯತೆಯನ್ನು ಗಳಿಸುತ್ತಿವೆ. ಟಾಟಾ, ಮಾರುತಿ ಸುಜುಕಿ, ಮಹೀಂದ್ರಾ, ಹ್ಯುಂಡೈ, ಕಿಯಾ ಕಂಪನಿಯ ಎಸ್‌ಯುವಿಗಳನ್ನು ಹೆಚ್ಚಿನ ಮಂದಿ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಆದರೂ ಈ ವಿಭಾಗದಲ್ಲಿ ಟಾಟಾ ಸಂಪೂರ್ಣವಾದ ಪಾರುಪಾತ್ಯ ಸಾಧಿಸಿದೆ.
ಇತ್ತೀಚೆಗೆ ಎಲ್ಲ ಪ್ರಮುಖ ವಾಹನ ತಯಾರಕರು, ಡಿಸೆಂಬರ್ (2023) ತಿಂಗಳ ಮಾರಾಟ ವರದಿಯನ್ನು ಪ್ರಕಟಿಸಿದ್ದು, ಟಾಟಾ ನೆಕ್ಸಾನ್ (Tata Nexon) ಎಸ್‌ಯುವಿ ಮೊದಲ ಸ್ಥಾನದಲ್ಲಿದೆ. ಕಂಪನಿಯು ಹೋದ ತಿಂಗಳು, 15,284 ಯುನಿಟ್ ನೆಕ್ಸಾನ್ ಕಾರುಗಳನ್ನು ಸೇಲ್ ಮಾಡಿದ್ದು, 2022ರ ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ (12,053 ಯುನಿಟ್) ವರ್ಷದಿಂದ ವರ್ಷಕ್ಕೆ ಶೇಕಡ 27% ಬೆಳವಣಿಗೆ ಸಾಧಿಸಿದೆ.

ಎರಡನೇ ಸ್ಥಾನದಲ್ಲಿ ಮೈಕ್ರೋ ಎಸ್‌ಯುವಿ ಟಾಟಾ ಪಂಚ್ (Tata Punch) ಇದ್ದು, ಕಂಪನಿಯು 2023ರ ಡಿಸೆಂಬರ್ ತಿಂಗಳಲ್ಲಿ ಒಟ್ಟು 13,787 ಯುನಿಟ್ ಮಾರಾಟಗೊಳಿಸಿದ್ದು, 2022ರ ಅದೇ ಅವಧಿಗೆ ಹೋಲಿಕೆ ಮಾಡಿದರೆ ವರ್ಷದಿಂದ ವರ್ಷಕ್ಕೆ ಶೇಕಡ 30% ಪ್ರಗತಿಯಾಗಿದೆ. ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಟಾಟಾ ಪಂಚ್, ರೂ.6 ಲಕ್ಷದಿಂದ ರೂ.10.10 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ.
ಮೂರನೇ ಸ್ಥಾನದಲ್ಲಿ ಜನಪ್ರಿಯ ಮಾರುತಿ ಸುಜುಕಿ ಬ್ರೆಝಾ (Maruti Suzuki Brezza) ಇದೆ. ಈ ಕಾರಿನ ಮಾರಾಟದಲ್ಲೂ ಉತ್ತಮವಾದ ಬೆಳವಣಿಗೆ ಕಾಣಲಾಗಿದೆ. ಕಳೆದ ತಿಂಗಳು 12,844 ಯುನಿಟ್ ಸೇಲ್ ಮಾಡಲಾಗಿದ್ದು, 2022ರ ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ (11,200) ವರ್ಷದಿಂದ ವರ್ಷಕ್ಕೆ ಶೇಕಡ 15% ಮುನ್ನಡೆ ಸಾಧಿಸಲಾಗಿದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಆಯ್ಕೆಯಲ್ಲಿ ದೊರೆಯುವ ಈ ಕಾರು, ರೂ.8.29 ಲಕ್ಷ ಆರಂಭಿಕ ದರವನ್ನು ಹೊಂದಿದೆ.

ಮಹೀಂದ್ರಾ ಸ್ಕಾರ್ಪಿಯೋ (Mahindra Scorpio) ಎಸ್‌ಯುವಿ, ನಾಲ್ಕನೇ ಸ್ಥಾನದಲ್ಲಿದ್ದು, ಭರ್ಜರಿ ಸಂಖ್ಯೆಯಲ್ಲಿ ಮಾರಾಟವಾಗಿವೆ. 2022ರಲ್ಲಿ ಮಾರಾಟ ಮಾಡಿದ್ದ 7,003 ಯುನಿಟ್ ಸ್ಕಾರ್ಪಿಯೋಗಳಿಗೆ ಹೋಲಿಸಿದರೆ, 2023ರ ಡಿಸೆಂಬರ್ ತಿಂಗಳಲ್ಲಿ 11,355 ಯುನಿಟ್ ಸೇಲ್ ಮಾಡಲಾಗಿದೆ. ಈ ಮೂಲಕ ವರ್ಷದಿಂದ ವರ್ಷಕ್ಕೆ ಶೇಕಡ 62% ಬೆಳವಣಿಗೆಯಾಗಿದೆ. ಇದು, ಸ್ಕಾರ್ಪಿಯೋ-ಎನ್, ಸ್ಕಾರ್ಪಿಯೋ ಕ್ಲಾಸಿಕ್ ಎಂಬ 2 ಮಾದರಿಗಳಲ್ಲಿ ದೊರೆಯುತ್ತದೆ.
ಐದನೇ ಸ್ಥಾನದಲ್ಲಿ ಹ್ಯುಂಡೈ ವೆನ್ಯೂ (Hyundai Venue) ಇದೆ. ಕಂಪನಿಯು ಕಳೆದ ತಿಂಗಳು, 10,383 ಯುನಿಟ್ ಎಸ್‌ಯುವಿಗಳನ್ನು ಮಾರಾಟ ಮಾಡಿದೆ. 2022ರ ಇದೇ ಅವಧಿಗೆ ಹೋಲಿಸಿದರೆ (8,285 ಯುನಿಟ್) ವರ್ಷದಿಂದ ವರ್ಷಕ್ಕೆ ಶೇಕಡ 25% ಪ್ರಗತಿ ಕಂಡಿದೆ. ನೂತನ ಹ್ಯುಂಡೈ ವೆನ್ಯೂ ರೂ.7.89 ಲಕ್ಷದಿಂದ ರೂ.13.48 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ.

ಕಿಯಾ ಸೆಲ್ಟೋಸ್ (Kia Seltos) ಆರನೇ ಸ್ಥಾನದಲ್ಲಿ ಮುಂದುವರಿದ್ದು, ಹೋದ ತಿಂಗಳು ಕಂಪನಿಯು 9,957 ಯುನಿಟ್ ಕಾರುಗಳನ್ನು ಸೇಲ್ ಮಾಡಿದೆ. 2022ರ ಡಿಸೆಂಬರ್ ತಿಂಗಳಿಗೆ ಹೋಲಿಕೆ ಮಾಡಿದರೆ (5,995 ಯುನಿಟ್) ವರ್ಷದಿಂದ ವರ್ಷಕ್ಕೆ ಶೇಕಡ 66% ಬೆಳೆವಣಿಗೆಯಾಗಿದೆ. ಈ ಕಾರು, ರೂ.10.90 ಲಕ್ಷದಿಂದ ರೂ.20.30 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಗ್ರಾಹಕರಿಗೆ ದೊರೆಯುತ್ತದೆ.
ಇನ್ನುಳಿದಂತೆ ನಂತರದ ಸ್ಥಾನದಲ್ಲಿ ಮಾರುತಿ ಸುಜುಕಿ ಫ್ರಾಂಕ್ಸ್ (9,692 ಯುನಿಟ್), ಹ್ಯುಂಡೈ ಕ್ರೆಟಾ (9,243 ಯುನಿಟ್), ಹ್ಯುಂಡೈ ಎಕ್ಸ್‌ಟರ್ (7,516 ಯುನಿಟ್) ಹಾಗೂ ಮಾರುತಿ ಸುಜುಕಿ ವಿಟಾರಾ (6,988 ಯುನಿಟ್) ಎಸ್‌ಯುವಿಗಳಿವೆ. ಅಂತೂ ದೇಶೀಯ ಎಸ್‌ಯುವಿ ಮಾರುಕಟ್ಟೆಯಲ್ಲಿ ಮೊದಲೆರಡು ಸ್ಥಾನಗಳಲ್ಲಿ ಟಾಟಾ ಕಾರುಗಳು ಮುಂದುವರೆಯುವ ಮೂಲಕ ಪಾರುಪಾತ್ಯ ಸಾಧಿಸಿರುವುದು ಸುಳ್ಳಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








