Toyota: ಟೊಯೊಟಾ ಕಾರುಗಳಿಗಾಗಿ ಶೋರೂಂ ಮುಂದೆ ಸಾಲುಗಟ್ಟಿ ನಿಂತ ಗ್ರಾಹಕರು

ದೇಶದ ಜನಪ್ರಿಯ ವಾಹನ ತಯಾರಕ ಕಂಪನಿಯಾಗಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor - TKM) ಗುರುತಿಸಿಕೊಂಡಿದೆ. ಕಂಪನಿಯ ಕಾರುಗಳಿಗೆ ದಶಕಗಳಿಂದ ಪ್ರತ್ಯೇಕ ಅಭಿಮಾನಿ ಬಳಗವಿದ್ದು, ಹೆಚ್ಚಿನ ಮಂದಿ ಇಷ್ಟಪಟ್ಟು ಖರೀದಿಸುತ್ತಾರೆ. ತಿಂಗಳಿಂದ ತಿಂಗಳಿಗೆ ಬೇಡಿಕೆ ಹೆಚ್ಚಾಗುತ್ತಲೇ ಇದೆ.

ಫೆಬ್ರವರಿ.1, 2024ಕ್ಕೆ ಅನ್ವಯವಾಗುವಂತೆ ಟೊಯೊಟಾ ಇಂಡಿಯಾ (Toyota India) ತನ್ನ ಅಧಿಕೃತ ವೆಬ್‌ಸೈಟ್‌ ನಲ್ಲಿ ಗ್ಲಾನ್ಜಾ, ರೂಮಿಯನ್, ಇನ್ನೋವಾ ಹೈಕ್ರಾಸ್, ಇನ್ನೋವಾ ಕ್ರಿಸ್ಟಾ, ಅರ್ಬನ್ ಕ್ರೂಸರ್ ಹೈರೈಡರ್, ಫಾರ್ಚುನರ್, ಹಿಲಕ್ಸ್ ಮತ್ತು ವೆಲ್‌ಫೈರ್ ಕಾರುಗಳ ಕಾಯುವಿಕೆ ಅವಧಿಯನ್ನು ಪ್ರಕಟಿಸಿದೆ. ಮೊದಲಿಗೆ ರೂಮಿಯನ್ ಎಂಪಿವಿ ಬಗ್ಗೆ ಮಾತನಾಡೋಣ. ಹೆಚ್ಚಿನ ಬೇಡಿಕೆಯಿರುವುದರಿಂದ ಸಿಎನ್‌ಜಿ ರೂಪಾಂತಗಳ ಬುಕ್ಕಿಂಗ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

Toyota All Cars Waiting Period In February 2024 India

ಟೊಯೊಟಾ ರೂಮಿಯನ್ ಪೆಟ್ರೋಲ್ ರೂಪಾಂತರಗಳಿಗೂ ಅಧಿಕ ಡಿಮ್ಯಾಂಡ್ ಇದ್ದು, ನೀವು ಇವತ್ತು ಬುಕ್ಕಿಂಗ್ ಮಾಡಿದರೂ ವಿತರಣೆಯಾಗಲು 6-7 ತಿಂಗಳು ಹಿಡಿಯುತ್ತದೆ. ಸದ್ಯ ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ರೂಮಿಯನ್ ಎಂಪಿವಿ ರೂ.10.29 ಲಕ್ಷದಿಂದ ರೂ.13.68 ಲಕ್ಷ ಎಕ್ಸ್ ಶೋರೂಂ ಲಕ್ಷ ಬೆಲೆಯನ್ನು ಹೊಂದಿದ್ದು, 20.51 ರಿಂದ 26.11 ಕೆಎಂಪಿಎಲ್ ಮೈಲೇಜ್ ನೀಡುತ್ತದೆ.

ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿ ಪೆಟ್ರೋಲ್ ರೂಪಾಂತರಗಳು ಸುಮಾರು 5 - 6 ತಿಂಗಳ ನಂತರ ಡೆಲೆವರಿಯಾಗಲಿವೆ. ಹೈಬ್ರಿಡ್ ರೂಪಾಂತರಗಳು 12 - 13 ತಿಂಗಳ ಬಳಿಕ ಗ್ರಾಹಕರಿಗೆ ದೊರೆಯಲಿವೆ. ಅಧಿಕ ಬೇಡಿಕೆಯಿರುವುದರಿಂದ ಝಡ್ಎಕ್ಸ್ & ಝಡ್ಎಕ್ಸ್ (ಒ) ರೂಪಾಂತರಗಳ ಬುಕ್ಕಿಂಗ್ ಅನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಇನ್ನೋವಾ ಹೈಕ್ರಾಸ್ ರೂ.18.92 ಲಕ್ಷದಿಂದ ರೂ.30.68 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ.

Toyota All Cars Waiting Period In February 2024 India

ಟೊಯೊಟಾ ಕ್ರಿಸ್ಟಾ ಎಂಪಿವಿ ಬುಕ್ಕಿಂಗ್ ಮಾಡಿದ 7 ತಿಂಗಳ ಬಳಿಕ ವಿತರಣೆಯಾಗಲಿದ್ದು, ಈ ಕಾರು ರೂ.19.99 ಲಕ್ಷದಿಂದ ರೂ.26.30 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಕೇವಲ 2.4-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಸಿಗಲಿದ್ದು, 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪೇ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ 7 ಏರ್‌ಬ್ಯಾಗ್‌ ಪಡೆದಿದೆ.

ಟೊಯೊಟಾದ ಪ್ರೀಮಿಯಂ ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಗ್ಲಾನ್ಜಾ ಅತ್ಯಂತ ಕಡಿಮೆ ಕಾಯುವಿಕೆ ಅವಧಿಯನ್ನು ಹೊಂದಿದೆ. ಮ್ಯಾನುವಲ್ ಮತ್ತು ಆಟೋಮೆಟಿಕ್ ರೂಪಾಂತರಗಳು ಸುಮಾರು 1 ತಿಂಗಳ ನಂತರ ಗ್ರಾಹಕರಿಗೆ ಸಿಗಲಿವೆ. ಈ ಕಾರು ರೂ.6.81 ಲಕ್ಷದಿಂದ ರೂ.10 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ. ಪೆಟ್ರೋಲ್ ರೂಪಾಂತರಗಳು 22.35 - 22.94 ಕೆಎಂಪಿಎಲ್, ಸಿಎನ್‌ಜಿ ರೂಪಾಂತರ 30.61 ಕಿ.ಮೀ/ಕೆಜಿ ಮೈಲೇಜ್ ಕೊಡುತ್ತದೆ.

Toyota All Cars Waiting Period In February 2024 India

ಟೊಯೊಟಾ ಅರ್ಬನ್ ಕ್ರೂಸರ್ ಹೈರಿಡರ್ ಎಸ್‌ಯುವಿ ಕೂಡ ಅಧಿಕ ಬೇಡಿಕೆಯನ್ನು ಪಡೆದಿದೆ. ಸಿಎನ್‌ಜಿ ರೂಪಾಂತರಗಳು 12 - 13 ತಿಂಗಳ ನಂತರ ಡಿಲೆವರಿಯಾಗುತ್ತವೆ. ಈ ಕಾರು ರೂ.11.14 ಲಕ್ಷದಿಂದ ರೂ.20.19 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿದ್ದು, 19.39 ರಿಂದ 27.97 ಕೆಎಂಪಿಎಲ್ ಮೈಲೇಜ್ ಕೊಡುತ್ತದೆ. 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯೂನಿಟ್ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಫುಲ್-ಸೈಜ್ ಎಸ್‌ಯುವಿ ಟೊಯೊಟಾ ಫಾರ್ಚುನರ್ ಕೇವಲ 1 ರಿಂದ 2 ತಿಂಗಳ ನಂತರ ವಿತರಣೆಯಾಗಲಿದೆ. ಈ ಕಾರು ರೂ.33.44 ಲಕ್ಷದಿಂದ ರೂ.51.44 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಜನಪ್ರಿಯ ಟೊಯೊಟಾ ಹಿಲಕ್ಸ್ ಪಿಕ್ಅಪ್ ಟ್ರಕ್ ತುಂಬಾ ಕಡಿಮೆ ಕಾಯುವಿಕೆ ಅವಧಿಯನ್ನು ಹೊಂದಿದ್ದು, 1 ತಿಂಗಳಲ್ಲಿ ಬಳಿಕ ಡಿಲೆವರಿಯಾಗಲಿದೆ. ಟೊಯೊಟಾ ವೆಲ್‌ಫೈರ್ ಕೂಡ ಸುಮಾರು 10 ತಿಂಗಳ ನಂತರ ಗ್ರಾಹಕರ ಕೈಸೇರಲಿದೆ.

Toyota All Cars Waiting Period In February 2024 India

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, February 25, 2024, 9:02 [IST]
English summary
Toyota all cars waiting period in february 2024 india
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+