Toyota: ಟೊಯೊಟಾ ಕಾರುಗಳಿಗಾಗಿ ಶೋರೂಂ ಎದುರು ಕ್ಯೂ ನಿಂತ ಗ್ರಾಹಕರು.. 6 ಲಕ್ಷ ಆರಂಭಿಕ ಬೆಲೆ!
ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor), ಜನಪ್ರಿಯ ಕಾರು ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರುವ ವಿವಿಧ ಹ್ಯಾಚ್‌ಬ್ಯಾಕ್, ಎಂಪಿವಿ ಹಾಗೂ ಎಸ್‌ಯುವಿಗಳನ್ನು ಮಾರಾಟ ಮಾಡುತ್ತಿದೆ. ಇತ್ತೀಚೆಗೆ ಅಕ್ಟೋಬರ್ 1 2024ಕ್ಕೆ ಅನ್ವಯವಾಗುವಂತೆ ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಎಲ್ಲ ಕಾರುಗಳ ಹೊಂದಿರುವ ಕಾಯುವಿಕೆ ಅವಧಿ (Waiting Period) ಕುರಿತ ವಿವರಗಳನ್ನು ಪ್ರಕಟಿಸಿದೆ.
ಟೊಯೊಟಾ ಗ್ಲಾನ್ಜಾ (Toyota Glanza) ಜನಪ್ರಿಯ ಹ್ಯಾಚ್‌ಬ್ಯಾಕ್ ಆಗಿದೆ. ಈ ಕಾರು ಅತಿಕಡಿಮೆ ಕಾಯುವಿಕೆ ಅವಧಿ ಹೊಂದಿದೆ. ಇದರ ಮ್ಯಾನುವಲ್ ಹಾಗೂ ಆಟೋಮೆಟಿಕ್ ರೂಪಾಂತರಗಳು (ವೇರಿಯೆಂಟ್) ಬುಕ್ಕಿಂಗ್ ಮಾಡಿದ ಸರಿ ಸುಮಾರು 1 ತಿಂಗಳ ನಂತರ ಗ್ರಾಹಕರಿಗೆ ವಿತರಣೆಯಾಗಲಿವೆ. ನೂತನ ಗ್ಲಾನ್ಜಾ ರೂ.6.86 ಲಕ್ಷದಿಂದ ರೂ.10 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್ (Toyota Urban Cruiser Taisor) ಪ್ರಮುಖ ಎಸ್‌ಯುವಿಯಾಗಿದೆ. ಈ ಕಾರನ್ನು ಸಹ 1 ತಿಂಗಳ ಬಳಿಕ ಮನೆಗೆ ತರಬಹುದು. ಹೊಸ ಟೈಸರ್ ಎಸ್‌ಯುವಿ ರೂ.7.74 ರಿಂದ ರೂ.13.08 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದ್ದು, ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದೆ. 19.8 ರಿಂದ 28.5 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.
ಟೊಯೋಟಾ ಅರ್ಬನ್ ಕ್ರೂಸರ್ ಹೈರಿಡರ್ (Toyota Urban Cruiser Hyryder) ಅತಿಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ಎಸ್‌ಯುವಿಯಾಗಿದೆ. ಇದರ ಹೈಬ್ರಿಡ್, ನಿಯೋ ಡ್ರೈವ್ (ಪೆಟ್ರೋಲ್) ಮತ್ತು ಸಿಎನ್‌ಜಿ ಚಾಲಿತ ರೂಪಾಂತರಗಳು, 1 ರಿಂದ 2 ತಿಂಗಳ ನಂತರ ವಿತರಣೆಯಾಗಲಿವೆ. ಈ ಕಾರು, ರೂ.11.14 ರಿಂದ ರೂ.19.99 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ.

ಟೊಯೊಟಾ ರೂಮಿಯನ್ (Toyota Rumion) ಪ್ರಖ್ಯಾತ ಎಂಪಿವಿಯಾಗಿದೆ. ಈ ಕಾರಿನ ನಿಯೋ ಡ್ರೈವ್ (ಪೆಟ್ರೋಲ್) ಹಾಗೂ ಸಿಎನ್‌ಜಿ ರೂಪಾಂತರಗಳನ್ನು ಆರ್ಡರ್ ಮಾಡಿದ 1 ರಿಂದ 2 ಬಳಿಕ ನೀವು ಮನೆಗೆ ತೆಗೆದುಕೊಂಡು ಹೋಗಬಹುದು. ಹೊಸ ರೂಮಿಯನ್ ಎಂಪಿವಿ ರೂ.10.44 ರಿಂದ ರೂ.13.73 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಒಳಗೊಂಡಿದೆ. ಇದರಲ್ಲಿ 7 ಜನರು ಪ್ರಯಾಣಿಸಬಹುದು.
ಟೊಯೊಟಾ ಇನ್ನೋವಾ ಕ್ರಿಸ್ಟಾ (Toyota Innova crysta) ಜನಮೆಚ್ಚಿದ ಎಂಪಿವಿ ಎಂದೇ ಹೆಸರುವಾಸಿಯಾಗಿದೆ. ಈ ಕಾರನ್ನು 3 ರಿಂದ 4 ತಿಂಗಳ ಬಳಿಕ ವಿತರಣೆ ಪಡೆಯಬಹುದು. ನೂತನ ಇನ್ನೋವಾ ಕ್ರಿಸ್ಟಾ ರೂ.19.99 ರಿಂದ ರೂ.26.55 ಲಕ್ಷ ಎಕ್ಸ್ ಶೋರೂಂ ದರವನ್ನು ಒಳಗೊಂಡಿದೆ. ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆದಿದ್ದು, 7, 8 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದೆ.
ಟೊಯೊಟಾ ಇನ್ನೋವಾ ಹೈಕ್ರಾಸ್ (Toyota Innova Hycross) ಕೂಡ ಪ್ರಮುಖ ಎಂಪಿವಿಯಾಗಿದೆ. ಇದರ ಪೆಟ್ರೋಲ್ ಹಾಗೂ ಹೈಬ್ರಿಡ್ ರೂಪಾಂತರಗಳು ಬುಕ್ಕಿಂಗ್ ಮಾಡಿದ 6 ರಿಂದ 8 ತಿಂಗಳ ನಂತರ ವಿತರಣೆಯಾಗಲಿವೆ. ಈ ಕಾರು, ರೂ.19.77 ಲಕ್ಷದಿಂದ ರೂ.30.98 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. 7/8 ಆಸನವನ್ನು ಒಳಗೊಂಡಿದೆ.
ಟೊಯೊಟಾ ಫಾರ್ಚೂನರ್ (Toyota Fortuner) ಫುಲ್-ಸೈಜ್ ಎಸ್‌ಯುವಿಯಾಗಿದೆ. ಈ ಕಾರು 1 ರಿಂದ 2 ತಿಂಗಳ ಬಳಿಕ ಗ್ರಾಹಕರ ಮನೆ ಸೇರಲಿದೆ. ಹೊಸ ಫಾರ್ಚೂನರ್ ರೂ.33.43 ರಿಂದ ರೂ.51.44 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಲಭ್ಯವಿದೆ. ಇದು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‌ನ್ನು ಒಳಗೊಂಡಿದೆ. 7 ಆಸನಗಳನ್ನು ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications