Toyota: ಟೊಯೊಟಾದ ಈ ವಿಶಾಲ ಕಾರುಗಳಿಗೆ ಮನಸೋತ ಗ್ರಾಹಕರು, ಆರಾಮದಾಯಕ ಪ್ರಯಾಣ ಸಾಧ್ಯ!
ಭಾರತದಲ್ಲಿ ಟೊಯೊಟಾ (Toyota) ಜನಪ್ರಿಯ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಕಂಪನಿಯ ಕಾರುಗಳಿಗೆ ಪ್ರತ್ಯೇಕ ಅಭಿಮಾನಿ ಬಳಗವಿದೆ. ಇವು ಆರಾಮದಾಯಕ ಪ್ರಯಾಣ ಒದಗಿಸುವುದರೊಂದಿಗೆ ಅತ್ಯಾಧುನಿಕ ವೈಶಿಷ್ಟ್ಯ ಪಡೆದಿರುವುದರಿಂದ ಹೆಚ್ಚಿನ ಮಂದಿ ಇಷ್ಟಪಟ್ಟು ಖರೀದಿಸುತ್ತಾರೆ. ಫಾರ್ಚುನರ್ ಎಸ್‌ಯುವಿ ಹಾಗೂ ಹಿಲಕ್ಸ್ ಪಿಕ್ಅಪ್ ಟ್ರಕ್‌ಗೂ ಉತ್ತಮವಾದ ಬೇಡಿಕೆಯಿದೆ.
ಫೆಬ್ರವರಿ 1 2024ಕ್ಕೆ ಅನ್ವಯವಾಗುವಂತೆ ಟೊಯೊಟಾ ಇಂಡಿಯಾ (Toyota India) ತನ್ನ ಅಧಿಕೃತ ವೆಬ್‌ಸೈಟ್ ನಲ್ಲಿ ಫಾರ್ಚುನರ್ ಮತ್ತು ಹಿಲಕ್ಸ್ ಹೊಂದಿರುವ ಕಾಯುವಿಕೆ ಅವಧಿ (Waiting Period) ಕುರಿತು ಮಾಹಿತಿಯನ್ನು ನೀಡಿದೆ. ಫಾರ್ಚುನರ್ (Fortuner) ಎಸ್‌ಯುವಿಯನ್ನು ನೀವು ಇವತ್ತು ಬುಕ್ಕಿಂಗ್ ಮಾಡಿದರೂ ಸುಮಾರು 1 ರಿಂದ 2 ತಿಂಗಳ ಬಳಿಕ ವಿತರಣೆಯಾಗಲಿದೆ.

ಟೊಯೊಟಾ ಹಿಲಕ್ಸ್ (Toyota Hilux) ಪಿಕ್ಅಪ್ ಟ್ರಕ್ ಅತ್ಯಂತ ಕಡಿಮೆ ಕಾಯುವಿಕೆ ಅವಧಿಯನ್ನು ಹೊಂದಿದ್ದು, ಕೇವಲ 1 ತಿಂಗಳ ನಂತರ ಡಿಲೆವರಿಯಾಗಲಿದೆ. ಇವು ಸ್ವಲ್ಪ ಹೆಚ್ಚಿನ ದರ ಹೊಂದಿದ್ದರೂ ಆಕರ್ಷಕ ವಿನ್ಯಾಸ ಹಾಗೂ ದೊಡ್ಡ ಗಾತ್ರದಲ್ಲಿರುವುದರಿಂದ ನೋಡುಗರನ್ನು ಸೆಳೆಯುತ್ತವೆ. ಆ ಕಾರಣಕ್ಕೂ ಏನೋ ಹೆಚ್ಚಿನ ಮಂದಿ ಆಸೆಪಟ್ಟು ಕೊಂಡುಕೊಳ್ಳುತ್ತಾರೆ.
ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಟೊಯೊಟಾ ಫಾರ್ಚುನರ್ (Toyota Fortuner) ಫುಲ್-ಸೈಜ್ ಎಸ್‌ಯುವಿ, ರೂ.33.44 ಲಕ್ಷದಿಂದ ರೂ.51.44 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿದೆ. ಲೆಜೆಂಡರ್, ಸ್ಟ್ಯಾಂಡರ್ಡ್, ಜಿಆರ್-ಎಸ್ ರೂಪಾಂತರ ಹಾಗೂ ಪ್ಲಾಟಿನಂ ವೈಟ್ ಪರ್ಲ್, ಸ್ಪಾರ್ಕ್ಲಿಂಗ್ ಬ್ಲ್ಯಾಕ್ ಕ್ರಿಸ್ಟಲ್ ಶೈನ್ ಸೇರಿದಂತೆ ವಿವಿಧ ಆಕರ್ಷಕ ಬಣ್ಣಗಳೊಂದಿಗೆ ದೊರೆಯುತ್ತದೆ.

ಈ ಫಾರ್ಚುನರ್, 2.7-ಲೀಟರ್ ಪೆಟ್ರೋಲ್ ಎಂಜಿನ್, 2.8-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಸಿಗಲಿದ್ದು, ರೂಪಾಂತರಗಳಿಗೆ ಅನುಗುಣವಾಗಿ 5-ಸ್ವೀಡ್ ಮ್ಯಾನುವಲ್/ 6-ಸ್ವೀಡ್ ಮ್ಯಾನುವಲ್/ 6-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಪಡೆದಿದೆ. 2WD (ಟೂ ವೀಲ್ ಡ್ರೈವ್) ಮತ್ತು 4WD (ಫೋರ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದ್ದು, 10.0 ಕೆಎಂಪಿಎಲ್ ಮೈಲೇಜ್ ನೀಡುತ್ತದೆ.
ಟೊಯೊಟಾ ಫಾರ್ಚುನರ್ ಎಸ್‌ಯುವಿಯಲ್ಲಿ 7 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು. 8-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 6-ಸ್ಪೀಕರ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಚಾರ್ಜರ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ 7-ಏರ್‌ಬ್ಯಾಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಪಡೆದಿದೆ.
ಟೊಯೊಟಾ ಹಿಲಕ್ಸ್ (Toyota Hilux) ಬಗ್ಗೆ ಹೇಳುವುದಾದರೆ, ಈ ಪಿಕ್ಅಪ್ ಟ್ರಕ್ ರೂ.30.40 ಲಕ್ಷದಿಂದ ರೂ.37.90 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ. ಸ್ಟ್ಯಾಂಡರ್ಡ್ ಹಾಗೂ ಹೈ ಎಂಬ ರೂಪಾಂತರಗಳು ಎಮೋಷನಲ್ ರೆಡ್, ವೈಟ್ ಪರ್ಲ್ ಕ್ರಿಸ್ಟಲ್ ಶೈನ್ ಸೇರಿದಂತೆ ವಿವಿಧ ಬಣ್ಣಗಳೊಂದಿಗೆ ದೊರೆಯುತ್ತದೆ. ಇದರಲ್ಲಿ 5 ಮಂದಿ ತೆರಳಬಹುದು.
ಈ ಹಿಲಕ್ಸ್ 2.8-ಲೀಟರ್ ಟರ್ಬೊ ಡಿಸೇಲ್ ಎಂಜಿನ್ ಹೊಂದಿದ್ದು, ರೂಪಾಂತರಗಳಿಗೆ ತಕ್ಕಂತೆ 6-ಸ್ವೀಡ್ ಮ್ಯಾನುವಲ್/ 6-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಒಳಗೊಂಡಿದೆ. ವಿನ್ಯಾಸದ ದೃಷ್ಟಿಯಿಂದಲೂ ಅತ್ಯುತ್ತಮವಾಗಿದ್ದು, ಮುಂಭಾಗ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್, ದೊಡ್ಡದಾದ ಗ್ರಿಲ್ ಇದ್ದು, 18-ಇಂಚಿನ ಮಲ್ಟಿ ಸ್ಪೋಕ್ ಅಲಾಯ್ ವೀಲ್ಸ್ ಪಡೆದಿದೆ.
ಟೊಯೊಟಾ ಹಿಲಕ್ಸ್, 8-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಪುಶ್-ಬಟನ್ ಸ್ಟಾರ್ಟ್/ ಸ್ಟಾಪ್, ಡುಯಲ್-ಝೋನ್ ಆಟೋ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 7-ಏರ್‌ಬ್ಯಾಗ್, VSC (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್), ಬ್ರೇಕ್ ಅಸಿಸ್ಟ್, ಫ್ರಂಟ್, ರೇರ್ ಪಾರ್ಕಿಂಗ್ ಸೇನಾರ್ಸ್ ಅನ್ನು ಒಳಗೊಂಡಿದೆ.


Click it and Unblock the Notifications