Toyota: 'ಬಾಹುಬಲಿ' ಟೊಯೊಟಾ ಹಿಲಕ್ಸ್ ಕಾರನ್ನು 1 ತಿಂಗಳಲ್ಲಿ ಮನೆಗೆ ತರಬಹುದು, ವಿಶೇಷತೆಗಳೇನು?
ಭಾರತದಲ್ಲಿ ಟೊಯೊಟಾ (Toyota) ದಶಕಗಳಿಂದ ಜನಪ್ರಿಯ ಕಾರು ತಯಾರಕ ಕಂಪನಿಯಾಗಿ ಮನೆಮಾತಾಗಿದೆ. ಕಂಪನಿ ಮಾರಾಟಗೊಳಿಸುವ ಇನ್ನೋವಾ, ರೂಮಿಯನ್ ಸೇರಿದಂತೆ ಇತರೆ ಕಾರುಗಳಿಗೆ ಪ್ರತ್ಯೇಕ ಅಭಿಮಾನಿ ಬಳಗವಿದ್ದು, ಪ್ರಮುಖ ಹಿಲಕ್ಸ್ (Hilux) ಪಿಕ್-ಅಪ್ ಟ್ರಕ್ ಪಡೆದುಕೊಂಡಿರುವ ಕಾಯುವಿಕೆ ಅವಧಿ ಕುರಿತು ಮಾಹಿತಿ ದೊರೆತಿದೆ.
ಟೊಯೊಟಾ ಇಂಡಿಯಾ (Toyota India) ತನ್ನ ಅಧಿಕೃತ ವೆಬ್‌ಸೈಟ್ ನಲ್ಲಿ ಜನವರಿ 1, 2024ಕ್ಕೆ ಅನ್ವಯವಾಗುವಂತೆ ಹಿಲಕ್ಸ್ (Hilux) ಪಿಕ್-ಅಪ್ ಟ್ರಕ್ ವಿತರಣೆಗೆ ಹೊಂದಿರುವ ಕಾಯುವಿಕೆ ಅವಧಿ (Waiting period) ಕುರಿತು ವಿವರವನ್ನು ಬಹಿರಂಗಪಡಿಸಿದೆ. ನೀವು ಇವತ್ತು 'ಹಿಲಕ್ಸ್' ಅನ್ನು ಬುಕ್ಕಿಂಗ್ ಮಾಡಿದರೂ ಸುಮಾರು 1 ತಿಂಗಳ ನಂತರ ಡಿಲೆವರಿಯಾಗಲಿದೆ.

ಪ್ರಸ್ತುತ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಟೊಯೊಟಾ ಹಿಲಕ್ಸ್ (Toyota Hilux) ಪಿಕ್-ಅಪ್ ಟ್ರಕ್, ರೂ.30.40 ಲಕ್ಷದಿಂದ ರೂ.37.90 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. ಸ್ಟ್ಯಾಂಡರ್ಡ್ (Standard) ಹಾಗೂ ಹೈ (High) ಎಂಬ 2 ರೂಪಾಂತರ, ಎಮೋಷನಲ್ ರೆಡ್, ವೈಟ್ ಪರ್ಲ್ ಕ್ರಿಸ್ಟಲ್ ಶೈನ್, ಸೂಪರ್ ವೈಟ್ ಒಳಗೊಂಡಂತೆ 5 - ಮೊನೊಟೋನ್ ಬಣ್ಣಗಳ ಆಯ್ಕೆಯಲ್ಲಿ ದೊರೆಯುತ್ತದೆ.
ಟೊಯೊಟಾ ಹಿಲಕ್ಸ್, 2.8 - ಲೀಟರ್ ಟರ್ಬೊ ಡಿಸೇಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ. 6 - ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರುವ ಮಾದರಿ 204 PS ಗರಿಷ್ಠ ಪವರ್, 420 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 6 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಪಡೆದಿರುವ ಮಾದರಿಯು 204 PS ಪವರ್, 500 Nm ಪೀಕ್ ಟಾರ್ಕ್ ಹೊರಹಾಕುತ್ತದೆ.

ಈ ಟೊಯೊಟಾ ಹಿಲಕ್ಸ್ ಪಿಕ್-ಅಪ್ ಟ್ರಕ್ ಆಗಿದ್ದರೂ 5 ಮಂದಿ ಆರಾಮದಾಯವಾಗಿ ಪ್ರಯಾಣಿಸಬಹುದು. ವಿನ್ಯಾಸದ ದೃಷ್ಟಿಯಿಂದ ಕೂಡ ಅತ್ಯುತ್ತಮವಾಗಿದ್ದು, ಮುಂಭಾಗ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್, ದೊಡ್ಡದಾದ ಗ್ರಿಲ್, ಎಲ್ಇಡಿ ಫಾಗ್ ಲ್ಯಾಂಪ್ಸ್ ಹೊಂದಿದೆ. ಜೊತೆಗೆ 18 - ಇಂಚಿನ ಮಲ್ಟಿ ಸ್ಪೋಕ್ ಅಲಾಯ್ ವೀಲ್ಸ್, ಆಕರ್ಷಕ ಡೋರ್ ಹ್ಯಾಂಡಲ್‌ನ್ನು ಪಡೆದಿದೆ. ಹಿಂಭಾಗದ ವಿನ್ಯಾಸವು ಚೆನ್ನಾಗಿದ್ದು, ಅತ್ಯಾಧುನಿಕ ಟೈಲ್‌ಗೇಟ್‌ನ್ನು ಒಳಗೊಂಡಿದೆ.
ಟೊಯೊಟಾ ಹಿಲಕ್ಸ್, ಫಾರ್ಚುನರ್ ಎಸ್‌ಯುವಿ ರೀತಿಯಲ್ಲಿಯೇ ವೈಶಿಷ್ಟ್ಯ (Features)ಗಳನ್ನು ಪಡೆದಿದೆ. 8 - ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಪುಶ್ - ಬಟನ್ ಸ್ಟಾರ್ಟ್/ ಸ್ಟಾಪ್, ಡುಯಲ್ - ಝೋನ್ ಆಟೋ ಕ್ಲೈಮೇಟ್ ಕಂಟ್ರೋಲ್, ರೇರ್ ಎಸಿ ವೆಂಟ್ಸ್, ಕ್ರೂಸ್ ಕಂಟ್ರೋಲ್ ಸೇರಿದಂತೆ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ.
ಸುರಕ್ಷತೆಯಲ್ಲಿಯೂ ಈ ಕಾರಿಗೆ ಸರಿ ಸಾಟಿಯೇ ಇಲ್ಲ ಎಂದು ಹೇಳಬಹುದು. 7 ಏರ್‌ಬ್ಯಾಗ್, VSC (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್), ಬ್ರೇಕ್ ಅಸಿಸ್ಟ್, ಫ್ರಂಟ್, ರೇರ್ ಪಾರ್ಕಿಂಗ್ ಸೇನಾರ್ಸ್, ರಿವರ್ಸಿಂಗ್ ಕ್ಯಾಮೆರಾನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಟೊಯೊಟಾ ಹಿಲಕ್ಸ್ 12 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications