Toyota: ಇನ್ನೋವಾ ಕ್ರಿಸ್ಟಾ, ಫಾರ್ಚುನರ್, ಹಿಲಕ್ಸ್ ಡೀಸೆಲ್ ಕಾರುಗಳ ವಿತರಣೆ ಪುನಾರಂಭ
ಜಪಾನಿನ ಪ್ರಸಿದ್ಧ ವಾಹನ ತಯಾರಕ ಕಂಪನಿ ಟೊಯೊಟಾ (Toyota), ಭಾರತದಲ್ಲಿ ಇನ್ನೋವಾ ಕ್ರಿಸ್ಟಾ ಎಂಪಿವಿ, ಫಾರ್ಚುನರ್ ಎಸ್‌ಯುವಿ ಮತ್ತು ಹಿಲಕ್ಸ್ ಪಿಕ್-ಅಪ್ ಟ್ರಕ್ ವಿತರಣೆಯನ್ನು ಪುನರಾರಂಭಿಸಿದೆ. ಡಿಸೇಲ್ ಎಂಜಿನ್ ತಯಾರಿಕೆಯಲ್ಲಿ ದೋಷಗಳಾಗಿವೆ ಎಂಬ ಕಾರಣದಿಂದ ಈ ಕಾರುಗಳ ಸಾಗಾಟ (dispatch)ವನ್ನು ಸ್ಥಗಿತಗೊಳಿಸಿತ್ತು.
ಕಾರ್ಖಾನೆಯಿಂದ ಡೀಲರ್‌ಶಿಪ್‌ಗಳಿಗೆ ಇನ್ನೋವಾ ಕ್ರಿಸ್ಟಾ (Innova Crysta), ಫಾರ್ಚುನರ್ (Fortuner) ಹಾಗೂ ಹಿಲಕ್ಸ್ (Hilux) ಕಾರುಗಳನ್ನು ಪುನಃ ರವಾನಿಸುವುದನ್ನು ಆರಂಭಿಸಲಾಗಿದೆ ಎಂದು ಟೊಯೊಟಾ ದೃಢಪಡಿಸಿದೆ. ಜೊತೆಗೆ ಕಂಪನಿಯ ಡೀಸೆಲ್ ಎಂಜಿನ್‌ಗಳು, ಭಾರತದ ಹೊರಸೂಸುವಿಕೆ ನಿಯಮಗಳಿಗೆ ಅನುಗುಣವಾಗಿವೆ ಎಂದು ಪುನರುಚ್ಚರಿಸಿದೆ. ಜನವರಿ 29ರಂದು, ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ, ಹಲವು ಮಾದರಿಗಳ ಸಾಗಾಟವನ್ನು ಟೊಯೊಟಾ ಸ್ಥಗಿತಗೊಳಿಸಿತ್ತು.

ಟೊಯೊಟಾ ಇಂಡಸ್ಟ್ರೀಸ್ ಕಾರ್ಪೊರೇಷನ್ (TICO), ಈ ಡೀಸೆಲ್ ಎಂಜಿನ್‌ಗಳನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ಹೊತ್ತಿದ್ದು, ಘಟನೆ ಸಂಬಂಧ ಕಂಪನಿಯು ಜಾಗರೂಕತೆಯಿಂದ ತಪಾಸಣೆ ನಡೆಸಿದೆ. ಪವರ್ & ಟಾರ್ಕ್ ಉತ್ಪಾದನೆಯಲ್ಲಿ ಕಂಡು ಬಂದ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸಿದೆ ಎಂಬ ವಿವರಗಳು ಲಭ್ಯವಾಗಿದೆ. ಜಪಾನ್‌ನಲ್ಲಿ 6, ಭಾರತದಲ್ಲಿ 3 ಒಳಗೊಂಡಂತೆ ಜಾಗತಿಕವಾಗಿ 10 ಮಾದರಿಗಳಲ್ಲಿ ಈ ಎಂಜಿನ್‌ನ್ನು ಬಳಸಲಾಗುತ್ತಿದೆ.
ತಯಾರಿಕಾ ಘಟಕದಿಂದ ಡೀಲರ್‌ಶಿಪ್‌ಗಳಿಗೆ ಈ ಕಾರುಗಳನ್ನು ರವಾನಿಸುವುದನ್ನು ಕಂಪನಿ ಸ್ಥಗಿತಗೊಳಿಸಿದ್ದರೂ ಉತ್ಪಾದನೆ ಮತ್ತು ಬುಕ್ಕಿಂಗ್ ಅನ್ನು ನಿಲ್ಲಿಸಿರಲಿಲ್ಲ. ಘಟನೆ ಬಗ್ಗೆ ಗ್ರಾಹಕರಿಗೂ ಮನವರಿಕೆ ಮಾಡಿಕೊಡಲು ಸಹ ಕಂಪನಿಯು ನಿರ್ಧಾರ ಮಾಡಿದೆ ಎಂದು ತಿಳಿದುಬಂದಿದೆ. ಸದ್ಯ, ಭಾರತದಲ್ಲಿ ಇನ್ನೋವಾ ಕ್ರಿಸ್ಟಾ, ಫಾರ್ಚುನರ್, ಹಿಲಕ್ಸ್ ಕಾರುಗಳು ಯಶಸ್ವಿಯಾಗಿ ಮಾರಾಟವಾಗುತ್ತಿವೆ.

ದೇಶದಲ್ಲಿ ಖರೀದಿಗೆ ದೊರೆಯುವ ಟೊಯೊಟಾ ಇನ್ನೋವಾ ಕ್ರಿಸ್ಟಾ, ರೂ.19.99 ಲಕ್ಷದಿಂದ ರೂ.26.30 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಕಾರು, 2.4-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, 150 ಪಿಎಸ್ ಗರಿಷ್ಠ ಪವರ್ (ಶಕ್ತಿ), 343 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆದಿದೆ.
ಟೊಯೊಟಾ ಇನ್ನೋವಾ ಕ್ರಿಸ್ಟಾ, 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ರೇರ್ ಎಸಿ ವೆಂಟ್ಸ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ 7 ಏರ್‌ಬ್ಯಾಗ್, VSC (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್), ಹಿಲ್-ಸ್ಟಾರ್ಟ್ ಅಸಿಸ್ಟ್, ಫ್ರಂಟ್ & ರೇರ್ ಪಾರ್ಕಿಂಗ್ ಸೆನ್ಸರ್ಸ್ ಅನ್ನು ಪಡೆದಿದೆ.

ಟೊಯೊಟಾ ಫಾರ್ಚುನರ್ (Toyota Fortuner), ರೂ.33.44 ಲಕ್ಷದಿಂದ ರೂ.51.44 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದೆ. 2.7 - ಲೀಟರ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 166 ಪಿಎಸ್ ಗರಿಷ್ಠ ಪವರ್, 245 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. 5 - ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯುತ್ತದೆ. 10 ಕೆಎಂಪಿಎಲ್ ಮೈಲೇಜ್ ನೀಡುತ್ತದೆ.
ಟೊಯೊಟಾ ಹಿಲಕ್ಸ್ ಪಿಕ್-ಅಪ್ ಟ್ರಕ್, ರೂ.30.40 ಲಕ್ಷದಿಂದ ರೂ.37.90 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯುತ್ತದೆ. 2.8 - ಲೀಟರ್ ಟರ್ಬೊ ಡಿಸೇಲ್ ಎಂಜಿನ್ ಹೊಂದಿದ್ದು, 6 - ಸ್ವೀಡ್ ಮ್ಯಾನುವಲ್/ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗುತ್ತದೆ. 8 - ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಪುಶ್ - ಬಟನ್ ಸ್ಟಾರ್ಟ್/ ಸ್ಟಾಪ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications