ಫ್ಯಾಮಿಲಿಯೊಂದಿಗೆ ಅರಾಮದಾಯಕ ಪ್ರಯಾಣಕ್ಕಾಗಿ ಇನ್ನೋವಾ ಹೈಕ್ರಾಸ್ ಹೊಸ ರೂಪಾಂತರ ಬಿಡುಗಡೆ

ಭಾರತದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor) ತನ್ನ ಇನ್ನೋವಾ ಹೈಕ್ರಾಸ್ (Innova Hycross) ಎಂಪಿವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟ ಮಾಡುತ್ತಿದೆ. ಇದೀಗ ಟೊಯೊಟಾ ಕಂಪನಿಯು ತನ್ನ ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿಯ ಸರಣಿಯನ್ನು ವಿಸ್ತರಿಸಿದೆ.

ಟೊಯೊಟಾ ಕಂಪನಿಯು ತನ್ನ ಟೊಯೊಟಾ ಇನ್ನೋವಾ ಹೈಕ್ರಾಸ್ GX (O) ರೂಪಾಂತರವನ್ನು ಬಿಡುಗಡೆಗೊಳಿಸಿದೆ. ಈ ಹೊಸ ರೂಪಾಂತರವು 7 ಮತ್ತು 8-ಆಸನಗಳ ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿದೆ, ಇವುಗಳ ಬೆಲೆಯು ಕ್ರಮವಾಗಿ ರೂ.20.99 ಲಕ್ಷ ಮತ್ತು ರೂ.21.13 ಲಕ್ಷವಾಗಿದೆ. ಈ ಹೊಸ ಟೊಯೊಟಾ ಇನ್ನೋವಾ ಹೈಕ್ರಾಸ್ GX (O) ರೂಪಾಂತರವು ಸುಮಾರು 1.2 ಲಕ್ಷ ರೂಪಾಯಿ ಹೆಚ್ಚು ದುಬಾರಿಯಾಗಿದೆ.

Toyota Innova Hycross GX

ಹೊಸ ರೂಪಾಂತರದಲ್ಲಿ 360-ಡಿಗ್ರಿ ಕ್ಯಾಮೆರಾ, ಮುಂಭಾಗದ ಪಾರ್ಕಿಂಗ್ ಸೆನ್ಸರ್, ಹಿಂಭಾಗದ ಡಿಫಾಗರ್ ಮತ್ತು ಎಲ್ಇಡಿ ಫಾಗ್ ಲ್ಯಾಂಪ್‌ಗಳಂತಹ ವೈಶಿಷ್ಟ್ಯಗಳನ್ನು ಸೇರಿಸುವ ಮೂಲಕ ಈ ಹೆಚ್ಚುವರಿ ವೆಚ್ಚವನ್ನು ಸಮರ್ಥಿಸಿಕೊಂಡಿದೆ. ಟೊಯೊಟಾ ಇನ್ನೋವಾ ಹೈಕ್ರಾಸ್ ಹೊಸ GX (O) ರೂಪಾಂತರವು ಡ್ಯಾಶ್‌ಬೋರ್ಡ್ ಮತ್ತು ಡೋರುಗಳಲ್ಲಿ ಸಾಫ್ಟ್ ಟಚ್ ಸಾಮಗ್ರಿಗಳೊಂದಿಗೆ ಚೆಸ್ಟ್‌ನಟ್ ಥೀಮ್ ಅನ್ನು ಒಳಗೊಂಡಿದೆ.

ಹೊಸ ಫ್ಯಾಬ್ರಿಕ್ ಸೀಟ್ ಕವರ್‌ಗಳು ಅದನ್ನು GX ಟ್ರಿಮ್‌ನಿಂದ ಮತ್ತಷ್ಟು ಪ್ರತ್ಯೇಕಿಸುತ್ತದೆ. ಇನ್ನು ಕುತೂಹಲಕಾರಿಯಾಗಿ, ವೈರ್‌ಲೆಸ್ Apple CarPlay ಜೊತೆಗೆ 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಹಿಂಭಾಗದ ಸನ್‌ಶೇಡ್‌ನಂತಹ ಫಿಚರ್ಸ್ ಗಳು ಟೊಯೊಟಾ ಇನ್ನೋವಾ ಹೈಕ್ರಾಸ್ (Toyota Innova Hycross) GX (O) 7 ಸೀಟರ್ ಆವೃತ್ತಿಯೊಂದಿಗೆ ಮಾತ್ರ ಲಭ್ಯವಿದೆ.

Toyota Innova Hycross GX

ಈ ಹೊಸ ಎಂಪಿವಿಯು 7 ಮತ್ತು 8 ಸೀಟುಗಳ ಎರಡೂ ಆವೃತ್ತಿಗಳು ಆಟೋಮ್ಯಾಟಿಕ್ ಕಂಟ್ರೋಲ್ ಗಳೊಂದಿಗೆ ಬರುತ್ತವೆ. ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿಯು ಅವಂತ್ ಗಾರ್ಡೆ ಕಂಚಿನ ಮೆಟಾಲಿಕ್, ಸ್ಪಾರ್ಕ್ಲಿಂಗ್ ಬ್ಲ್ಯಾಕ್ ಪರ್ಲ್ ಕ್ರಿಸ್ಟಲ್ ಶೈನ್, ಬ್ಲ್ಯಾಕ್ಲಿಶ್ ಅಗೆಹಾ ಗ್ಲಾಸ್ ಫ್ಲೇಕ್, ಸಿಲ್ವರ್ ಮೆಟಾಲಿಕ್, ಸೂಪರ್ ವೈಟ್, ಪ್ಲಾಟಿನಂ ವೈಟ್ ಪರ್ಲ್ ಮತ್ತು ಆಟಿಟ್ಯೂಡ್ ಬ್ಲ್ಯಾಕ್ ಮೈಕಾ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.

ಇತರ ರೂಪಾಂತರಗಳಂತೆಯೇ, ಹೊಸ ಟೊಯೊಟಾ ಇನ್ನೋವಾ ಹೈಕ್ರಾಸ್ GX (O) ಮಾದರಿಯಲ್ಲಿ 2.0 ಲೀಟರ್ ಪೆಟ್ರೋಲ್ ಎಂಜಿನ್‌ ಅನ್ನು ನೀಡಲಾಗಿದೆ. ಈ ಎಂಜಿನ್ 172 bhp ಮತ್ತು 205 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು CVT ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಎಂಪಿವಿಯ ಹೈಬ್ರಿಡ್ ಅಲ್ಲದ ಆವೃತ್ತಿಯು 16.13 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ.

Toyota Innova Hycross GX

ಹೆಚ್ಚುವರಿಯಾಗಿ, ಇನ್ನೋವಾ ಹೈಕ್ರಾಸ್ 2.0 ಲೀಟರ್ 4-ಸಿಲಿಂಡರ್ ಅಟ್ಕಿನ್ಸನ್ ಸ್ಟ್ರಾಂಗ್ ಹೈಬ್ರಿಡ್ ಪವರ್‌ಟ್ರೇನ್‌ನೊಂದಿಗೆ ಲಭ್ಯವಿದೆ. ಈ ಎಂಜಿನ್ 172 ಬಿಹೆಚ್‍ಪಿ ಪವರ್ ಮತ್ತು 205 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಸ್ಟ್ರಾಂಗ್ ಹೈಬ್ರಿಡ್ ಟಾಪ್ VX, ZX ಮತ್ತು ZX (O) ಟ್ರಿಮ್‌ಗಳೊಂದಿಗೆ ಮಾತ್ರ ಲಭ್ಯವಿದೆ. ಈ ಎಂಪಿವಿಯು ಮಾಡೆಲ್ ಲೈನ್ ಫ್ರಂಟ್-ವೀಲ್-ಡ್ರೈವ್ ಸೆಟಪ್‌ನೊಂದಿಗೆ ಬರುತ್ತದೆ ಮತ್ತು ಯಾವುದೇ ಮ್ಯಾನ್ಯುವಲ್ ಗೇರ್‌ಬಾಕ್ಸ್ ಆಯ್ಕೆ ಇಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, April 16, 2024, 11:50 [IST]
English summary
Toyota innova hycross gx o variant launched prices details
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+