ಈ ಕಾರಿನ ವಿಡಿಯೋ ಬಿಡುಗಡೆ ಮಾಡಿದ ಟೊಯೋಟಾ: ಫ್ರಾಂಕ್ಸ್ ಅಭಿಮಾನಿಗಳಲ್ಲಿ ಮನೆಮಾಡಿದ ಆತಂಕ!
ಟೊಯೋಟಾ ಕಂಪನಿ ಭಾರತೀಯ ಮಾರುಕಟ್ಟೆಯಲ್ಲಿ ಕೆಲವು ವಾರಗಳ ಹಿಂದೆ ಅರ್ಬನ್ ಕ್ರೂಸರ್ ಟೈಸರ್ ಎಂಬ ಕ್ರಾಸ್‌ಓವರ್ ಎಸ್‌ಯುವಿ ಯನ್ನು ಲಾಂಚ್ ಮಾಡಿತ್ತು. ಇದು ಮಾರುತಿ ಸುಜುಕಿ ಫ್ರಾಂಕ್ಸ್‌ನ ರೀ ಬ್ಯಾಡ್ಜಿಂಗ್ ಆವೃತ್ತಿಯಾಗಿದ್ದು, ಇದನ್ನು ಟೊಯೋಟಾ ಟೈಸರ್ ಎಂಬ ಹೆಸರಿನಲ್ಲಿ ಲಾಂಚ್ ಮಾಡಿದೆ.
ಇದೀಗ ಈ ಎಸ್‌ಯುವಿಯ ಔದ್ಯೋಗಿಕ ಟಿವಿ ಕಮರ್ಷಿಯಲ್ ಅನ್ನು ಕಂಪನಿ ಬಿಡುಗಡೆ ಮಾಡಿದೆ. ಆಕರ್ಷಕವಾಗಿ ಮೂಡಿ ಬಂದಿರುವ ಈ ಟಿವಿಸಿಯಲ್ಲಿ ಟೈಸರ್‌ನ ಫೀಚರ್‌ಗಳನ್ನು ಅದ್ಭುತವಾಗಿ ಸೆರೆ ಹಿಡಿಯಲಾಗಿದೆ. ಈ ಕಾರಿನ ಟಿವಿ ಕಮರ್ಷಿಯಲ್ ಆರಂಭವಾಗುವುದೇ ಟೈಸರ್‌ನ ಹೊರಭಾಗದ ಶಾಟ್‌ಗಳಿಂದ. ಮೆಹೆಂದಿ ಬಣ್ಣದ ಕಾರನ್ನು ಟಿವಿ ಕಮರ್ಷಿಯಲ್‌ಗಾಗಿ ಬಳಸಲಾಗಿದ್ದು, ಫ್ರೇಮ್‌ನಲ್ಲಿ ಉತ್ತಮವಾಗಿ ಮೂಡಿ ಬಂದಿದೆ.

ಇನ್ನು ಹಲವಾರು ಭೌಗೋಳಿಕ ಪ್ರದೇಶದಲ್ಲಿ ಈ ಕಾರು (Urban Cruiser Taisor) ಸಂಚರಿಸುತ್ತಿರುವುದನ್ನು ನಾವು ಟಿವಿ ಕಮರ್ಷಿಯಲ್‌ನಲ್ಲಿ ಕಾಣಬಹುದಾಗಿದ್ದು, ಇದು ಈ ಕಾರಿನ ಸಾಮರ್ಥ್ಯವನ್ನು ತೋರಿಸುತ್ತದೆ. ಏನೇ ಆದರೂ ಕಡಿಮೆ ಬೆಲೆಗೆ ಒಂದು ಉತ್ತಮ ಕ್ರಾಸ್‌ಓವರ್ ಕಾರ್ ಅನ್ನು ಬೇಕೆಂದುಕೊಳ್ಳುವವರಿಗೆ ಇದೊಂದು ಉತ್ತಮ ಆಯ್ಕೆಯಾಗಿರಲಿದೆ.
ಇನ್ನು ಟೊಯೋಟಾ ಅರ್ಬನ್ ಕ್ರೂಸರ್ ಟೈಸರ್ ಬಗ್ಗೆ ನೋಡುವುದಾದರೆ, ಹೊಸದಾಗಿ ಬಿಡುಗಡೆಯಾದ ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್ ಮಾದರಿಯು ಮಾರುತಿ ಸುಜುಕಿ ಫ್ರಾಂಕ್ಸ್ ಆಧಾರಿತ ಸಬ್‌ಕಾಂಪ್ಯಾಕ್ಟ್ ಎಸ್‍ಯುವಿಯಾಗಿದೆ. ಮಾರುತಿ ಸುಜುಕಿ ಫ್ರಾಂಕ್ಸ್‌ನ ಬೆಲೆಯು ರೂ.7.51 ಲಕ್ಷವಾಗಿದೆ. ಎರಡೂ ಮಾದರಿಗಳು ಒಂದೇ ರೀತಿಯಾಗಿದ್ದರೂ, ಟೊಯೊಟಾ ಯುಸಿ ಟೈಸರ್‌ಗೆ ಹೊಸ ಶೈಲಿಯೊಂದಿಗೆ ತನ್ನದೇ ಆದ ಗುರುತನ್ನು ಹೊಂದಿರುವುದು ನಿಜ.

ಈ ಹೊಸ ಟೊಯೋಟಾ ಟೈಸರ್ ಎಸ್‍ಯುವಿಯಲ್ಲಿ 1.2-ಲೀಟರ್ ನ್ಯಾಚುರಲ್ ಮತ್ತು 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿರುತ್ತದೆ. ಈ ಎಸ್‍ಯುವಿಯ 1.2-ಲೀಟರ್ ಪೆಟ್ರೋಲ್ ಎಂಜಿನ್ 89 bhp ಮತ್ತು 113 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 99 bhp ಮತ್ತು 148 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸವ ಸಾಮರ್ಥ್ಯವನ್ನು ಹೊಂದಿದೆ.
ಈ ಎಂಜಿನ್ ಗಳೊಂದಿಗೆ ಟ್ರಾನ್ಸ್‌ಮಿಷನ್ ಆಯ್ಕೆಗಳು ಎರಡೂ ಪವರ್ ಮಿಲ್‌ಗಳೊಂದಿಗೆ 5-ಸ್ಪೀಡ್ ಮ್ಯಾನ್ಯುವಲ್ ಅನ್ನು ಒಳಗೊಂಡಿವೆ. ಆದರೆ ನ್ಯಾಚುರಲ್ ಎಂಜಿನ್ 5-ಸ್ಪೀಡ್ AMT ಅನ್ನು ಹೊಂದಿದೆ. ಇನ್ನು ಟರ್ಬೊ ಪೆಟ್ರೋಲ್ 6-ಸ್ಪೀಡ್ ಟಾರ್ಕ್ ಕರ್ನಟವಾರ್ ಅನ್ನು ಪಡೆಯುತ್ತದೆ. ಇನ್ನು ಇದು ಸಿಎನ್‌ಜಿ ಪವರ್ ಟ್ರೈನ್ ಕೂಡ ಲಭ್ಯವಿದೆ.
ಹೊಸ ಟೊಯೊಟಾ ಎಸ್‍ಯುವಿಯಲ್ಲಿ ಕ್ಯಾಬಿನ್ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಮಧ್ಯದಲ್ಲಿ MID ಯುನಿಟ್ ಗಳೊಂದಿಗೆ ಟ್ವಿನ್-ಪಾಡ್ ಇನ್‌ಸ್ಟ್ರುಮೆಂಟ್ ಕನ್ಸೋಲ್‌ನೊಂದಿಗೆ ಮಾರುತಿ ಸುಜುಕಿ ಫ್ರಾಂಕ್ಸ್‌ಗೆ ಹೋಲುತ್ತದೆ. ಕ್ಯಾಬಿನ್ ಹೊಸ ಡ್ಯುಯಲ್-ಟೋನ್ ಟ್ರೀಟ್ಮೆಂಟ್ ಅನ್ನು ಪಡೆಯುತ್ತದೆ. ಈ ಕಾರು ಅತ್ಯಾಧುನಿಕ ಫಿಚರ್ಸ್ ಗಳಿಂದ ಲೋಡ್ ಆಗಿದೆ.
ಈ ಟೈಸರ್ ಕಾರಿನಲ್ಲಿ ಕ್ಲೈಮೆಂಟ್ ಕಂಟ್ರೋಲ್ ಸಿಸ್ಟಂ, ಕನಕ್ಟಿವಿಟಿ ಕಂಟ್ರೋಲ್ ಕಾರ್ ತಂತ್ರಜ್ಞಾನ, ವೈರ್‌ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹೊಂದಾಣಿಕೆ, 360-ಡಿಗ್ರಿ ಕ್ಯಾಮೆರಾ, ಹೆಡ್-ಅಪ್ ಡಿಸ್ಪ್ಲೇ, ಕ್ರೂಸ್ ಕಂಟ್ರೋಲ್, ಡಿಆರ್‌ಎಲ್‌ಗಳೊಂದಿಗೆ ಆಟೋಮ್ಯಾಟಿಕ್ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಹೆಚ್ಚಿನದನ್ನು ಹೊಂದಿದೆ. ಸಬ್‌ಕಾಂಪ್ಯಾಕ್ಟ್ ಕೊಡುಗೆಯು ಆರು-ಸ್ಪೀಕರ್ ಸೌಂಡ್ ಸಿಸ್ಟಂ, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್ ಮತ್ತು ರಿಯರ್ ಎಸಿ ವೆಂಟ್‌ಗಳನ್ನು ಸಹ ಪಡೆಯುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








