Toyota: ಈ ಕಾರಿಗಾಗಿ ಕ್ಯೂ ನಿಂತ ಜನರು.. 11 ಲಕ್ಷ ಬೆಲೆ, 27 ಕಿ.ಮೀ ಮೈಲೇಜ್, 5 ಜನ ಹೋಗಬಹುದು!

ದೇಶದ ಜನಪ್ರಿಯ ಕಾರು ತಯಾರಕ ಕಂಪನಿಯಾಗಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor - TKM) ಗುರುತಿಸಿಕೊಂಡಿದೆ. ಕಂಪನಿ ಮಾರಾಟಗೊಳಿಸುವ ಅರ್ಬನ್ ಕ್ರೂಸರ್ ಹೈರಿಡರ್ (Urban Cruiser Hyryder) ಎಸ್‌ಯುವಿ ವಿತರಣೆಯಾಗಲು ಈ ತಿಂಗಳು ಕೂಡ ಹೆಚ್ಚಿನ ಸಮಯಾವಕಾಶ ಹಿಡಿಯುತ್ತದೆ.

ಟೊಯೊಟಾ ಇಂಡಿಯಾ (Toyota India) ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾರ್ಚ್ 1, 2024ಕ್ಕೆ ಅನ್ವಯವಾಗುವಂತೆ ಅರ್ಬನ್ ಕ್ರೂಸರ್ ಹೈರಿಡರ್ ಎಸ್‌ಯುವಿ ಪಡೆದಿರುವ ಕಾಯುವಿಕೆ ಅವಧಿ ಕುರಿತ ವಿವರವನ್ನು ಬಹಿರಂಗಪಡಿಸಿದೆ. ಹೈಬ್ರಿಡ್ ರೂಪಾಂತರ ಸ್ವಲ್ಪ ಬೇಗನೆ ವಿತರಣೆಯಾಗುತ್ತದೆ. ನೀವು ಇವತ್ತು ಬುಕ್ಕಿಂಗ್ ಮಾಡಿದರೂ ಸುಮಾರು 3 ರಿಂದ 4 ತಿಂಗಳ ನಂತರ ಡಿಲೆವರಿಯಾಗುತ್ತದೆ.

Toyota Urban Cruiser Hyryder Car Waiting Period In March 2024 11 Lakh Price 27 Km Mileage

ಟೊಯೊಟಾ ಅರ್ಬನ್ ಕ್ರೂಸರ್ ಹೈರಿಡರ್ ಕಾರಿನ ಪೆಟ್ರೋಲ್ (ನಿಯೋ ಡ್ರೈವ್) ರೂಪಾಂತರಗಳ ವಿಚಾರಕ್ಕೆ ಬರುವುದಾದರೆ, ಇದು ಕೊಂಚ ಹೆಚ್ಚಿನ ಕಾಯುವಿಕೆ ಅವಧಿಯನ್ನು ಹೊಂದಿದೆ. ಬರೋಬ್ಬರಿ 8 ರಿಂದ 9 ತಿಂಗಳ ಬಳಿಕ ಗ್ರಾಹಕರ ಮನೆ ಸೇರುತ್ತದೆ. ಸಿಎನ್‌ಜಿ ಮಾದರಿಯು ಆದಷ್ಟು ಶೀಘ್ರದಲ್ಲಿಯೇ ಖರೀದಿದಾರರಿಗೆ ಸಿಗಲಿದ್ದು, 6 ರಿಂದ 7 ತಿಂಗಳ ನಂತರ ವಿತರಣೆಯಾಗುತ್ತದೆ.

ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಟೊಯೊಟಾ ಅರ್ಬನ್ ಕ್ರೂಸರ್ ಹೈರಿಡರ್ (Toyota Urban Cruiser Hyryder) ಎಸ್‌ಯುವಿ, ರೂ.11.14 ಲಕ್ಷದಿಂದ ರೂ.20.19 ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯುತ್ತದೆ. ಇ, ಎಸ್, ಸಿ, ವಿ ಸೇರಿದಂತೆ ಹಲವು ರೂಪಾಂತರಗಳು ಹಾಗೂ ಆಕರ್ಷಕ ಬಣ್ಣಗಳೊಂದಿಗೂ ಲಭ್ಯವಿದೆ. ವಿನ್ಯಾಸದ ದೃಷ್ಟಿಯಿಂದಲೂ ಈ ಕಾರು ಅತ್ಯುತ್ತಮವಾಗಿದ್ದು, 5 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು.

ಈ ಕಾರು 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಹೈಬ್ರಿಡ್ ಪೆಟ್ರೋಲ್ ಮತ್ತು 1.5-ಲೀಟರ್ ಸಿಎನ್‌ಜಿ ಎಂಜಿನ್ ನೊಂದಿಗೆ ಲಭ್ಯವಿದೆ. ರೂಪಾಂತರಗಳಿಗೆ ಅನುಗುಣವಾಗಿ 5-ಸ್ವೀಡ್ ಮ್ಯಾನುವಲ್ ಅಥವಾ 6-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಇಂಧನ ದಕ್ಷತೆ ಬಗ್ಗೆ ಹೇಳುವುದಾದರೆ 19.39 ರಿಂದ 27.97 ಕೆಎಂಪಿಎಲ್ ಮೈಲೇಜ್ ನೀಡುತ್ತದೆ.

ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಎಸ್‌ಯುವಿ ರೂಪಾಂತರಗಳಿಗೆ ಅನುಗುಣವಾಗಿ 2WD (ಟೂ ವೀಲ್ ಡ್ರೈವ್) ಮತ್ತು AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಹೊಂದಿದೆ. 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯೂನಿಟ್, ವೆಂಟಿಲೇಟೆಡ್ ಫ್ರಂಟ್ ಸೀಟ್ಸ್, ಆಂಬಿಯೆಂಟ್ ಲೈಟಿಂಗ್, ಪ್ಯಾಡಲ್ ಶಿಫ್ಟರ್‌, ಹೆಡ್ಸ್-ಅಪ್ ಡಿಸ್ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, ಪನೋರಮಿಕ್ ಸನ್‌ರೂಫ್‌ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಸುರಕ್ಷತೆಯ ದೃಷ್ಟಿಯಿಂದಲೂ ಅರ್ಬನ್ ಕ್ರೂಸರ್ ಹೈರೈಡರ್ ಕಾರು ಅತ್ಯಾಧುನಿಕವಾಗಿದೆ. 6-ಏರ್‌ಬ್ಯಾಗ್‌, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), VSC (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್), ಆಲ್ ವೀಲ್ ಡಿಸ್ಕ್ ಬ್ರೇಕ್ಸ್ ಅನ್ನು ಪಡೆದಿದೆ. ಈ ಕಾರಿಗೆ ಹ್ಯುಂಡೈ ಕ್ರೆಟಾ, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾಗಳು ದೊಡ್ಡ ಎದುರಾಳಿಯಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, March 9, 2024, 15:45 [IST]
English summary
Toyota urban cruiser hyryder car waiting period march 2024 rs 11 lakh price 27 km mileage
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+