Toyota: ಟೊಯೊಟಾದ ಈ ಕಾರಿಗಾಗಿ ಶೋರೂಂ ಎಡತಾಕಿದ ಗ್ರಾಹಕರು, ಬೈಕ್‍ನ್ನು ಮೀರಿಸುವ ಮೈಲೇಜ್!
ದೇಶದಲ್ಲಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor - TKM) ಪ್ರಖ್ಯಾತ ಕಾರು ತಯಾರಕರಾಗಿದ್ದಾರೆ. ಕಂಪನಿಯ ಇನ್ನೋವಾ ಸರಣಿ ಎಂಪಿವಿಗಳಂತೆ ಅರ್ಬನ್ ಕ್ರೂಸರ್ ಹೈರಿಡರ್ (Urban Cruiser Hyryder) ಎಸ್‌ಯುವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದು, ಆ ಕಾರಣಕ್ಕೆ ಕೊಂಚ ಅಧಿಕ ಕಾಯುವಿಕೆ ಅವಧಿಯನ್ನು ಹೊಂದಿವೆ.
ಟೊಯೊಟಾ ಇಂಡಿಯಾ (Toyota India) ತನ್ನ ಅಧಿಕೃತ ವೆಬ್‌ಸೈಟ್ ನಲ್ಲಿ 1 ಜನವರಿ 2024ಕ್ಕೆ ಅನ್ವಯವಾಗುವಂತೆ ಅರ್ಬನ್ ಕ್ರೂಸರ್ ಹೈರಿಡರ್ ಎಸ್‌ಯುವಿ ಪಡೆದಿರುವ ಕಾಯುವಿಕೆ ಅವಧಿ ಕುರಿತು ಮಾಹಿತಿಯನ್ನು ಪ್ರಕಟಿಸಿದೆ. ಈ ಕಾರಿನ ಹೈಬ್ರಿಡ್ (HYBRID) ರೂಪಾಂತರಗಳನ್ನು ನೀವು ಇವತ್ತು ಬುಕ್ಕಿಂಗ್ ಮಾಡಿದರೂ ವಿತರಣೆಯಾಗಲು ಸುಮಾರು 4 - 5 ತಿಂಗಳು ಹಿಡಿಯುತ್ತದೆ.

ಟೊಯೊಟಾ ಅರ್ಬನ್ ಕ್ರೂಸರ್ ಹೈರಿಡರ್ ನಾನ್ ಹೈಬ್ರಿಡ್ (ನಿಯೋ ಡ್ರೈವ್) ಪೆಟ್ರೋಲ್ ರೂಪಾಂತರಗಳು 8 - 9 ತಿಂಗಳು ಕಾಯುವಿಕೆ ಅವಧಿಯನ್ನು ಹೊಂದಿವೆ. ಗರಿಷ್ಠ ಮೈಲೇಜ್ ನೀಡುವ ಸಿಎನ್‌ಜಿ ರೂಪಾಂತರಗಳು ವಿತರಣೆಯಾಗಲು ಸ್ವಲ್ಪ ಹೆಚ್ಚಿನ ಸಮಯಾವಕಾಶ ಬೇಕು. ಈ ಕಾರುಗಳನ್ನು ಇಂದು ಆರ್ಡರ್ ಮಾಡಿದರೂ ಡೆಲಿವರಿಯಾಗಲು 14 ರಿಂದ 15 ತಿಂಗಳು ಆಗುತ್ತದೆ.
ಭಾರತದ ಮಾರುಕಟ್ಟೆಯಲ್ಲಿ ಅರ್ಬನ್ ಕ್ರೂಸರ್ ಹೈರಿಡರ್ ಎಸ್‌ಯುವಿ, ರೂ.11.14 ಲಕ್ಷದಿಂದ ರೂ.20.19 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಇ, ಎಸ್, ಸಿ, ವಿ ಒಳಗೊಂಡಂತೆ ಹಲವು ರೂಪಾಂತರ ಮತ್ತು ಕೆಫೆ ವೈಟ್, ಗೇಮಿಂಗ್ ಗ್ರೇ, ಸ್ಪೋರ್ಟಿನ್ ರೆಡ್, ಮಿಡ್ನೈಟ್ ಬ್ಲ್ಯಾಕ್ ಸೇರಿದಂತೆ 7-ಮೊನೊಟೊನ್, 4-ಡುಯಲ್ ಟೋನ್ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ.
ಈ ಎಸ್‌ಯುವಿ, ಪೆಟ್ರೋಲ್ ಹಾಗೂ ಸಿಎನ್‌ಜಿ ಪವರ್‌ಟ್ರೇನ್ ಆಯ್ಕೆಯನ್ನು ಪಡೆದಿದೆ. 1.5-ಲೀಟರ್ ನಾನ್ ಹೈಬ್ರಿಡ್ ಪೆಟ್ರೋಲ್ (ನಿಯೋ ಡ್ರೈವ್) ಎಂಜಿನ್ 103 PS ಗರಿಷ್ಠ ಪವರ್, 137 Nm ಪೀಕ್ ಟಾರ್ಕ್ ಹೊರಹಾಕುತ್ತದೆ. 1.5-ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ 116 PS ಗರಿಷ್ಠ ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ರೂಪಾಂತರಗಳಿಗೆ ಅನುಗುಣವಾಗಿ 5-ಸ್ವೀಡ್ ಮ್ಯಾನುವಲ್/ 6-ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಹೊಂದಿದೆ.
ಸಿಎನ್‌ಜಿ ಪವರ್‌ಟ್ರೇನ್ ಪಡೆದಿರುವ ಕಾರು, 1.5-ಲೀಟರ್ ನಾನ್ ಹೈಬ್ರಿಡ್ ಎಂಜಿನ್ ಒಳಗೊಂಡಿದೆ. ಅದಕ್ಕೆ ಅನುಗುಣವಾಗಿ ಪವರ್ ಉತ್ಪಾದಿಸುತ್ತದೆ. ಕೇವಲ 5-ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ದೊರೆಯುತ್ತದೆ. ರೂಪಾಂತರಗಳಿಗೆ ತಕ್ಕಂತೆ 19.39 - 27.97 kmpl ಮೈಲೇಜ್ ನೀಡುತ್ತದೆ. ಜೊತೆಗೆ 2WD (ಟೂ ವೀಲ್ ಡ್ರೈವ್) ಹಾಗೂ AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಒಳಗೊಂಡಿದೆ.
ಟೊಯೊಟಾ ಅರ್ಬನ್ ಕ್ರೂಸರ್ ಹೈರಿಡರ್ ವಿನ್ಯಾಸ ಯುವ ಗ್ರಾಹಕರನ್ನು ಸೆಳೆಯುವ ರೀತಿಯಿದ್ದು, 5 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು. ವೈಶಿಷ್ಟ್ಯಗಳ ಹೇಳುವುದಾದರೆ, 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯೂನಿಟ್, ವೆಂಟಿಲೇಟೆಡ್ ಫ್ರಂಟ್ ಸೀಟ್, ಸ್ಮಾರ್ಟ್‌ಫೋನ್, ಸ್ಮಾರ್ಟ್‌ವಾಚ್ ಕನೆಕ್ಟಿವಿಟಿ, ಆಂಬಿಯೆಂಟ್ ಲೈಟಿಂಗ್, ಪ್ಯಾಡಲ್ ಶಿಫ್ಟರ್, ಹೆಡ್ಸ್-ಅಪ್ ಡಿಸ್ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್, ಪನೋರಮಿಕ್ ಸನ್‌ರೂಫ್ ವಿವಿಧ ಫೀಚರ್ಸ್ ಪಡೆದಿದೆ.
ಸುರಕ್ಷತೆಯ ವಿಚಾರದಲ್ಲಿಯೂ ಈ ಕಾರಿಗೆ ಸರಿ ಸಾಟಿಯೇ ಇಲ್ಲ ಎಂದು ಹೇಳಬಹುದು. 6-ಏರ್‌ಬ್ಯಾಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), VSC (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್), ಆಲ್-ವೀಲ್ ಡಿಸ್ಕ್ ಬ್ರೇಕ್ ಮತ್ತು 360-ಡಿಗ್ರಿ ಕ್ಯಾಮೆರಾದಂತಹ ಸೇಫ್ಟಿ ಫೀಚರ್ಸ್ ಅನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications