ಟೊಯೊಟಾ ಟೈಸರ್ ವಿತರಣೆ ಮಾಹಿತಿ ಬಹಿರಂಗ: ಜನ ಶೋರೂಂ ಮುಂದೆ ಕ್ಯೂ ನಿಲ್ಲುವುದು ಪಕ್ಕಾ!

ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ತನ್ನ ಬಹುನಿರೀಕ್ಷಿತ ಹೊಸ ಅರ್ಬನ್ ಕ್ರೂಸರ್ ಟೈಸರ್ (Toyota Urban Cruiser Taisor) ಎಸ್‍ಯುವಿಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿ ತನ್ನ ಎಸ್‍ಯುವಿ ಸರಣಿಯನ್ನು ವಿಸ್ತರಿಸಿದೆ. ಇದು ಟೊಯೊಟಾ ಮತ್ತು ಮಾರುತಿ ಸುಜುಕಿ ನಡುವಿನ ಪಾಲುದಾರಿಕೆಯಿಂದ ಬರುವ ನಾಲ್ಕನೇ ಮಾದರಿಯಾಗಿದೆ.

ಇದಲ್ಲದೆ, ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್ ಅನ್ನು ಈಗ ಸ್ಥಗಿತಗೊಳಿಸಿರುವುದರಿಂದ ಟೊಯೊಟಾದ ಸರಣಿಯಲ್ಲಿ ಇದು ಇದು ಅತ್ಯಂತ ಕೈಗೆಟುಕುವ ಎಸ್‍ಯುವಿಯಾಗಿದೆ. ಈ ಹೊಸ ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್ ಕಾರಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ಪ್ರಕಾರ ರೂ.7.73 ಲಕ್ಷದಿಂದ ಪ್ರಾರಂಭವಾಗುತ್ತದೆ. ಕಂಪನಿಯು ಈಗಾಗಲೇ ಈ ಎಸ್‍ಯುವಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ. ಈ ಎಸ್‍ಯುವಿ ಖರೀದಿಸಲು ಬಯಸುವ ಗ್ರಾಹಕರು ರೂ.11,00 ಟೋಕನ್ ಮೊತ್ತ ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು.

Toyota Urban Cruiser Taisor

ಈ ಹೊಸ ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್ ಎಸ್‍ಯುವಿಯ ವಿತರಣೆಯು ಮೇ ತಿಂಗಳಿನಲ್ಲಿ ನಡೆಯಲಿದೆ. ಹೊಸದಾಗಿ ಬಿಡುಗಡೆಯಾದ ಟೊಯೊಟಾ ಅರ್ಬನ್ ಕ್ರೂಸರ್ ಟೈಸರ್ ಮಾದರಿಯು ಮಾರುತಿ ಸುಜುಕಿ ಫ್ರಾಂಕ್ಸ್ ಆಧಾರಿತ ಸಬ್‌ಕಾಂಪ್ಯಾಕ್ಟ್ ಎಸ್‍ಯುವಿಯಾಗಿದೆ. ಮಾರುತಿ ಸುಜುಕಿ ಫ್ರಾಂಕ್ಸ್‌ನ ಬೆಲೆಯು ರೂ.7.51 ಲಕ್ಷವಾಗಿದೆ. ಎರಡೂ ಮಾದರಿಗಳು ಒಂದೇ ರೀತಿಯಾಗಿದ್ದರೂ, ಟೊಯೊಟಾ ಯುಸಿ ಟೈಸರ್‌ಗೆ ಹೊಸ ಶೈಲಿಯೊಂದಿಗೆ ತನ್ನದೇ ಆದ ಗುರುತನ್ನು ಹೊಂದಿರುವುದು ನಿಜ.

ಈ ಹೊಸ ಟೊಯೊಟಾ ಟೈಸರ್ ಅನುಪಾತದಲ್ಲಿ ಫ್ರಾಂಕ್ಸ್‌ಗೆ ಹೋಲುತ್ತದೆ ಆದರೆ ವಿಶಿಷ್ಟವಾದ ಹೊಸ ನೋಟದೊಂದಿಗೆ ಹೊಸ ಮುಂಭಾಗವನ್ನು ಪಡೆಯುತ್ತದೆ. ಕೂಪ್-ಶೈಲಿಯ ಸಬ್‌ಕಾಂಪ್ಯಾಕ್ಟ್ ಎಸ್‍ಯುವಿ ಹೊಸ ಮತ್ತು ದಪ್ಪವಾದ ಹನಿಕೂಬ್ ಮೆಶ್ ಗ್ರಿಲ್ ಅನ್ನು ಗ್ಲೋಸ್ ಬ್ಲ್ಯಾಕ್‌ನ ಫಿನಿಶಿಂಗ್ ಅನ್ನು ಹೊಂದಿದೆ. ಇದು ಹೊಸ ಟ್ವಿನ್ LED DRL ಗಳನ್ನು ಸೆಂಟ್ರಲ್ ನಲ್ಲಿ ಭವ್ಯವಾದ ಟೊಯೊಟಾ ಲೋಗೋದೊಂದಿಗೆ ಬಂದಿದೆ.

Toyota Urban Cruiser Taisor

ಈ ಹೊಸ ಟೊಯೊಟಾ ಟ್ವೀಕ್ ಮಾಡಲಾದ LED ಟೈಲ್‌ಲೈಟ್‌ಗಳನ್ನು ಸಹ ಪಡೆಯುತ್ತದೆ, ಅದು ಬೂಟ್‌ನಲ್ಲಿ ಲೈಟ್ ಬಾರ್ ಮೂಲಕ ಸಂಪರ್ಕಿಸುತ್ತದೆ, ಆದರೆ ಮಾದರಿಯಲ್ಲಿ ಮರುಹೊಂದಿಸಲಾದ ಅಲಾಯ್ ವ್ಹೀಲ್ ಗಳು ಸಹ ಇವೆ. ಟೈಸರ್ ಹಿಂದಿನ ವಿಂಡ್‌ಸ್ಕ್ರೀನ್ ಅನ್ನು ಉಳಿಸಿಕೊಂಡಿದೆ, ಅದು ಮಾದರಿಗೆ ಅದರ ಸೊಗಸಾದ ಲುಕ್ ಒಳಗೊಂಡಿದೆ.

ಈ ಹೊಸ ಟೊಯೋಟಾ ಟೈಸರ್ ಎಸ್‍ಯುವಿಯಲ್ಲಿ 1.2-ಲೀಟರ್ ನ್ಯಾಚುರಲ್ ಮತ್ತು 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಗಳೊಂದಿಗೆ ಲಭ್ಯವಿರುತ್ತದೆ. ಈ ಎಸ್‍ಯುವಿಯ 1.2-ಲೀಟರ್ ಪೆಟ್ರೋಲ್ ಎಂಜಿನ್ 89 bhp ಮತ್ತು 113 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 99 bhp ಮತ್ತು 148 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸವ ಸಾಮರ್ಥ್ಯವನ್ನು ಹೊಂದಿದೆ.

Toyota Urban Cruiser Taisor

ಈ ಎಂಜಿನ್ ಗಳೊಂದಿಗೆ ಟ್ರಾನ್ಸ್‌ಮಿಷನ್ ಆಯ್ಕೆಗಳು ಎರಡೂ ಪವರ್ ಮಿಲ್‌ಗಳೊಂದಿಗೆ 5-ಸ್ಪೀಡ್ ಮ್ಯಾನ್ಯುವಲ್ ಅನ್ನು ಒಳಗೊಂಡಿವೆ. ಆದರೆ ನ್ಯಾಚುರಲ್ ಎಂಜಿನ್ 5-ಸ್ಪೀಡ್ AMT ಅನ್ನು ಹೊಂದಿದೆ. ಇನ್ನು ಟರ್ಬೊ ಪೆಟ್ರೋಲ್ 6-ಸ್ಪೀಡ್ ಟಾರ್ಕ್ ಕರ್ನಟವಾರ್ ಅನ್ನು ಪಡೆಯುತ್ತದೆ. ಇನ್ನು ಇದು ಸಿಎನ್‌ಜಿ ಪವರ್ ಟ್ರೈನ್ ಕೂಡ ಲಭ್ಯವಿದೆ.

ಟೊಯೊಟಾ ಎಸ್‍ಯುವಿಯಲ್ಲಿ ಕ್ಯಾಬಿನ್ 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಮಧ್ಯದಲ್ಲಿ MID ಯುನಿಟ್ ಗಳೊಂದಿಗೆ ಟ್ವಿನ್-ಪಾಡ್ ಇನ್‌ಸ್ಟ್ರುಮೆಂಟ್ ಕನ್ಸೋಲ್‌ನೊಂದಿಗೆ ಮಾರುತಿ ಸುಜುಕಿ ಫ್ರಾಂಕ್ಸ್‌ಗೆ ಹೋಲುತ್ತದೆ. ಕ್ಯಾಬಿನ್ ಹೊಸ ಡ್ಯುಯಲ್-ಟೋನ್ ಟ್ರೀಟ್ಮೆಂಟ್ ಅನ್ನು ಪಡೆಯುತ್ತದೆ. ಈ ಕಾರು ಅತ್ಯಾಧುನಿಕ ಫಿಚರ್ಸ್ ಗಳಿಂದ ಲೋಡ್ ಆಗಿದೆ.

Toyota Urban Cruiser Taisor

ಈ ಟೈಸರ್ ಕಾರಿನಲ್ಲಿ ಕ್ಲೈಮೆಂಟ್ ಕಂಟ್ರೋಲ್ ಸಿಸ್ಟಂ, ಕನಕ್ಟಿವಿಟಿ ಕಂಟ್ರೋಲ್ ಕಾರ್ ತಂತ್ರಜ್ಞಾನ, ವೈರ್‌ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹೊಂದಾಣಿಕೆ, 360-ಡಿಗ್ರಿ ಕ್ಯಾಮೆರಾ, ಹೆಡ್-ಅಪ್ ಡಿಸ್ಪ್ಲೇ, ಕ್ರೂಸ್ ಕಂಟ್ರೋಲ್, ಡಿಆರ್‌ಎಲ್‌ಗಳೊಂದಿಗೆ ಆಟೋಮ್ಯಾಟಿಕ್ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಹೆಚ್ಚಿನದನ್ನು ಹೊಂದಿದೆ. ಸಬ್‌ಕಾಂಪ್ಯಾಕ್ಟ್ ಕೊಡುಗೆಯು ಆರು-ಸ್ಪೀಕರ್ ಸೌಂಡ್ ಸಿಸ್ಟಂ, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್ ಮತ್ತು ರಿಯರ್ ಎಸಿ ವೆಂಟ್‌ಗಳನ್ನು ಸಹ ಪಡೆಯುತ್ತದೆ.

Article Published On: Friday, April 5, 2024, 16:40 [IST]
English summary
Toyota urban cruiser taisor delivery to start in may 2024 details
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+