ಕಡಿಮೆ ಬೆಲೆಯ ಟರ್ಬೊ ಪೆಟ್ರೋಲ್ ಎಸ್‌ಯುವಿಗಳು: ಇವು ಪರ್ಫಾಮೆನ್ಸ್ ಪ್ರಿಯರಿಗೆ ಮಾತ್ರ!

ವೇಗದ ಕಾರಿನಲ್ಲಿ ನಿಧಾನವಾಗಿ ಹೋಗುವುದಕ್ಕಿಂತ ನಿಧಾನವಾದ ಕಾರಿನಲ್ಲಿ ವೇಗವಾಗಿ ಹೋಗುವುದು ಹೆಚ್ಚು ಖುಷಿ ಕೊಡುತ್ತದೆ. ಇದರರ್ಥ ನೀವು ಉನ್ನತ ಗುಣಮಟ್ಟದ ಜರ್ಮನ್ ಕಾರುಗಳನ್ನು ಖರೀದಿಸಬೇಕೆಂದಲ್ಲ. ನಾವು ಇಲ್ಲಿ ತಿಳಿಸಿರುವ ಕಡಿಮೆ ಬೆಲೆಯ ಈ ಟರ್ಬೊ ಪೆಟ್ರೋಲ್ ಕಾರುಗಳಲ್ಲಿ ಒಂದನ್ನು ಖರೀದಿಸಿ ಹೆಚ್ಚಿನ ಪರ್ಫಾಮೆನ್ಸ್ ಅನ್ನು ಆನಂದಿಸಬಹುದು.

ಹುಂಡೈ ವೆನ್ಯೂ ಎನ್-ಲೈನ್: ಹುಂಡೈ ವೆನ್ಯೂ ಎನ್-ಲೈನ್ ಸ್ಪೋರ್ಟಿ ಆವೃತ್ತಿಯಾಗಿದ್ದು, ಇದು 1.0-ಲೀಟರ್ ಟರ್ಬೊ ಪೆಟ್ರೋಲ್ ಆಯ್ಕೆಯಲ್ಲೂ ಲಭ್ಯವಿದೆ. ಈ ಆವೃತ್ತಿಯಲ್ಲಿ ತುಸು ಹೆಚ್ಚಿನ 120bhp ಪವರ್ ಮತ್ತು 172Nm ನ ಅದೇ ಟಾರ್ಕ್ ಅನ್ನು ಪಡೆಯುತ್ತದೆ. ಇದು ಸ್ಪೋರ್ಟಿಯರ್ ಸ್ವಭಾವಕ್ಕೆ ಕೊಡುಗೆ ನೀಡುತ್ತದೆ.

turbo-petrol-performance-affordable-suvs

ಈ ಪವರ್ ಔಟ್‌ಪುಟ್‌ಗಳಿಂದ ಕಾರು ಹೆಚ್ಚಿನ ವೇಗವನ್ನು ಸಾಧಿಸಲು ಸಹಾಯ ಮಾಡುತ್ತದೆ. ಟ್ರಾನ್ಸ್‌ಮಿಷನ್ ಆಯ್ಕೆಗಳಲ್ಲಿ 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ DCT ಗೇರ್‌ಬಾಕ್ಸ್ ಸೇರಿವೆ. ಹ್ಯುಂಡೈ ವೆನ್ಯೂ ಎನ್-ಲೈನ್ i20 N-ಲೈನ್‌ನಂತೆಯೇ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಬೆಲೆಯು ರೂ. 12.08 ಲಕ್ಷದಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ.

ಮಹೀಂದ್ರಾ XUV300 ಟರ್ಬೋಸ್ಪೋರ್ಟ್: ಮಹೀಂದ್ರಾ XUV300 ತನ್ನ ಪೆಟ್ರೋಲ್ ಅವತಾರದಲ್ಲಿ ಈಗಾಗಲೇ ಎಂಜಿನ್ ಅನ್ನು ಹೊಂದಿತ್ತು. ಇದೀಗ ಟರ್ಬೋಸ್ಪೋರ್ಟ್‌ನೊಂದಿಗೆ ಮಹೀಂದ್ರಾ ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. XUV300 TurboSport 1.2-ಲೀಟರ್ mStallion TGDi ಟರ್ಬೊ ಪೆಟ್ರೋಲ್ ಅನ್ನು ಹೊಂದಿದೆ. ಇದು ಈಗ 130bhp ಪವರ್ ಮತ್ತು 250Nm ಟಾರ್ಕ್ ಉತ್ಪಾದಿಸುತ್ತದೆ.

turbo-petrol-performance-affordable-suvs

ಕೇವಲ 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ. ಹಾಗೆಯೇ ಮುಂಭಾಗದ ಸಸ್ಪೆನ್ಷನ್ ಹೊಂದಿರುವ ಏಕೈಕ SUV ಇದಾಗಿದೆ. ಇದು ಆಂಟಿ-ರೋಲ್ ಬಾರ್‌ನೊಂದಿಗೆ ಮ್ಯಾಕ್‌ಫರ್ಸನ್ ಸ್ಟ್ರಟ್ ಆಗಿದ್ದು, ಈ ಸಬ್‌ಕಾಂಪ್ಯಾಕ್ಟ್ SUV 4 ರೂಪಾಂತರಗಳಲ್ಲಿ ಲಭ್ಯವಿದೆ. ಬೆಲೆಯು 9.3 ಲಕ್ಷ ರೂ. (ಎಕ್ಸ್ ಶೋ ರೂಂ)ದಿಂದ ಪ್ರಾರಂಭವಾಗುತ್ತದೆ.

ಸಿಟ್ರನ್ C3: ಸಿಟ್ರನ್ C3, 1.2-ಲೀಟರ್ 3-ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ 110bhp ಪವರ್ ಮತ್ತು 190Nm ಟಾರ್ಕ್ ಉತ್ಪಾದಿಸುತ್ತದೆ. ಜನಪ್ರಿಯ ಯೂಟ್ಯೂಬ್ ಚಾನೆಲ್ ನಡೆಸಿದ ಇತ್ತೀಚಿನ ಡ್ರ್ಯಾಗ್ ರೇಸ್‌ಗಳಲ್ಲಿ, ಸಿಟ್ರನ್ C3 ಮಹೀಂದ್ರಾ XUV300 TurboSport ಅನ್ನು ಸೋಲಿಸುವಲ್ಲಿ ಯಶಸ್ವಿಯಾಗಿದೆ. ಇದು 2 ರೂಪಾಂತರಗಳಲ್ಲಿ ಲಭ್ಯವಿದ್ದು, ರೂ. 8.28 ಲಕ್ಷದ (ಎಕ್ಸ್ ಶೋ ರೂಂ) ಆರಂಭಿಕ ಬೆಲೆಯಲ್ಲಿ ಲಭ್ಯವಿದೆ.

turbo-petrol-performance-affordable-suvs

ಹುಂಡೈ i20 N-ಲೈನ್: ಐ20 ಎನ್-ಲೈನ್ ಪ್ರಸ್ತುತ ದೇಶದಲ್ಲಿನ ಅತ್ಯುತ್ತಮ ಪರ್ಫಾಮೆನ್ಸ್ ಹ್ಯಾಚ್‌ಬ್ಯಾಕ್ ಆಗಿದೆ. ಜೊತೆಗೆ ಉತ್ತಮ ಮೈಲೇಜ್ ಕೂಡ ಹಿಂದಿರುಗಿಸುತ್ತದೆ. ಇದರ 1.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 118bhp ಪವರ್ ಮತ್ತು 172Nm ಟಾರ್ಕ್ ಉತ್ಪಾದಿಸುತ್ತದೆ. 6-ಸ್ಪೀಡ್ ಮ್ಯಾನುವಲ್, 7-ಸ್ಪೀಡ್ DCT ಯುನಿಟ್‌ ಜೊತೆಗೆ ಬರುತ್ತದೆ. ಬೆಲೆಯು ರೂ. 9.99 ಲಕ್ಷದಿಂದ (ಎಕ್ಸ್ ಶೋ ರೂಂ) ಆರಂಭವಾಗುತ್ತದೆ. ಎರಡು ರೂಪಾಂತರಗಳಲ್ಲಿ ಲಭ್ಯವಿದೆ.

ಮಾರುತಿ ಸುಜುಕಿ ಫ್ರಾಂಕ್ಸ್: ಮಾರುತಿಯವರ 1.0-ಲೀಟರ್ ಬೂಸ್ಟರ್ ಜೆಟ್ ಟರ್ಬೊ ಪೆಟ್ರೋಲ್ ಎಂಜಿನ್ ಫ್ರಾಂಕ್ಸ್‌ನೊಂದಿಗೆ ಮಾರುಕಟ್ಟೆಗೆ ಮರಳಿದೆ. ಈಗ 99bhp ಪವರ್ ಮತ್ತು 147Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನ್ಯುವಲ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಘಟಕಕ್ಕೆ ಜೋಡಿಸಲಾಗಿದೆ. ಇದು 9.72 ಲಕ್ಷ (ಎಕ್ಸ್ ಶೋರೂಂ) ಆರಂಭಿಕ ಬೆಲೆಯಲ್ಲಿ 3 ರೂಪಾಂತರಗಳಲ್ಲಿ ಲಭ್ಯವಿದೆ.

turbo-petrol-performance-affordable-suvs

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, November 1, 2023, 9:00 [IST]
English summary
Turbo petrol performance affordable suvs
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+