ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಲಿವೆ ಹೊಸ ಎಂಪಿವಿ ಕಾರುಗಳು
ಮಲ್ಟಿ-ಪರ್ಪಸ್ ವಾಹನಗಳು (MPV) ಭಾರತದಲ್ಲಿ ತಮ್ಮ ಪ್ರಾಯೋಗಿಕತೆ ಮತ್ತು ಸಾಮರ್ಥ್ಯದ ಕ್ಯಾಬಿನ್‌ಗಳಿಂದ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ. ದೊಡ್ಡ ಕುಟುಂಬಗಳು ಎಂಪಿವಿ ವಾಹನಗಳನ್ನು ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಾರೆ. ಆರೇಳು ಜನರು ಎಂಪಿವಿ ವಾಹನಗಳಲ್ಲಿ ಆರಾಮದಾಯಕವಾಗಿ ಸಂಚರಿಸಬಹುದು. ಭಾರತದಲ್ಲಿ ಇತ್ತೀಚೆಗೆ ಎಂಪಿವಿ ವಾಹನಗಳಲ್ಲಿ ಭಾರೀ ಬೇಡಿಕೆಯನ್ನು ಪಡೆದುಕೊಂಡಿದೆ.
ಪ್ರಸ್ತುತ ಭಾರತದಲ್ಲಿ ರೆನಾಲ್ಟ್ ಟ್ರೈಬರ್, ಮಾರುತಿ ಸುಜುಕಿ ಎರ್ಟಿಗಾ, ಟೊಯೊಟಾ ರೂಮಿಯಾನ್, ಕಿಯಾ ಕ್ಯಾರೆನ್ಸ್, ಮಹೀಂದ್ರಾ ಮರಾಜೋ, ಮಾರುತಿ ಸುಜುಕಿ ಎಕ್ಸ್‌ಎಲ್ 6, ಟೊಯೊಟಾ ಇನ್ನೋವಾ ಕ್ರಿಸ್ಟಾ, ಇನೋವಾ ಹೈಬ್ರಿಡ್, ಟೊಯೊಟಾ ಕಾರ್ನಿವಾಲ್, ಮತ್ತು ಕಿಯಾ ಕಾರ್ನಿವಾಲ್‌ನಂತಹ ವಿವಿಧ ಬೆಲೆಗಳ ಸರಣಿಗಳಲ್ಲಿ ಲಭ್ಯವಿದೆ. ಕೈಗೆಟುಕುವ ಆಯ್ಕೆಯ ಹುಡುಕಾಟದಲ್ಲಿರುವವರಿಗೆ, ಮಾರುತಿ ಸುಜುಕಿ ಮತ್ತು ನಿಸ್ಸಾನ್ ಮುಂಬರುವ ವರ್ಷಗಳಲ್ಲಿ ಎರಡು ಹೊಸ ಮಾದರಿಗಳನ್ನು ಪರಿಚಯಿಸುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಸುಜುಕಿ ಸ್ಪೇಸಿಯಾ: ಮಾರುತಿ ಸುಜುಕಿ ಕಂಪನಿಯು ತನ್ನ ಸರಣಿಯನ್ನು ವಿಸ್ತರಿಸಲು ಮುಂದಾಗಿದೆ. ಮಾರುತಿ ಸುಜುಕಿ (Maruti Suzuki) ಕಂಪನಿಯು ಹೊಸ ಎಂಪಿವಿಯನ್ನು (MPV) ತಯಾರಿಸುತ್ತಿದೆ. ದೇಶದ ಅತಿ ದೊಡ್ಡ ಕಾರು ಉತ್ಪಾದಕ ಸಂಸ್ಥೆಯು ತನ್ನ UV ಪೋರ್ಟ್‌ಫೋಲಿಯೊವನ್ನು ವಿಸ್ತರಿಸಿದೆ ಮತ್ತು ಇದು ಪ್ರಸಕ್ತ ಹಣಕಾಸು ವರ್ಷದಲ್ಲಿ ಬ್ರ್ಯಾಂಡ್ ಭಾರತದಲ್ಲಿ ಹೆಚ್ಚು ಮಾರಾಟವಾದ ಎಸ್‍ಯುವಿ ತಯಾರಕರಾಗಲು ಕಾರಣವಾಗಿದೆ.
ಮುಂದಿನ ಎರಡು ವರ್ಷಗಳಲ್ಲಿ, ಇಂಡೋ-ಜಪಾನೀಸ್ ಬ್ರ್ಯಾಂಡ್ ಅದನ್ನು ಮತ್ತಷ್ಟು ಬಲಪಡಿಸಲು ಅದರ ಸರಣಿಗೆ ಹೆಚ್ಚಿನ ಯುವಿಗಳನ್ನು ಸೇರಿಸಿಕೊಳ್ಳುತ್ತದೆ. ನ್ಯೂ ಜನರೇಷನ್ ಸ್ವಿಫ್ಟ್ ಮತ್ತು ಡಿಜೈರ್ ಈ ಕ್ಯಾಲೆಂಡರ್ ವರ್ಷದಲ್ಲಿ ಬಿಡುಗಡೆ ಮಾಡಲಿರುವಾಗ, 2024 ರ ಕೊನೆಯಲ್ಲಿ ಮೊದಲ ಎಲೆಕ್ಟ್ರಿಕ್ ಎಸ್‍ಯುವಿ, eVX ಅನ್ನು ಅನುಸರಿಸುತ್ತದೆ. ಏಳು ಸೀಟುಗಳ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಕೋಡ್ ನೆಮ್ Y17 ಮಾದರಿಯು 2025 ರಲ್ಲಿ ಬರಲಿದೆ.
ಬ್ರ್ಯಾಂಡ್ ಆಂತರಿಕವಾಗಿ YDB ಎಂಬ ಕೋಡ್ ನೆಮ್ ಹೊಂದಿರುವ ಕಾಂಪ್ಯಾಕ್ಟ್ ಎಂಪಿವಿಯನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಹೇಳಲಾಗುತ್ತಿದೆ. ಈ ಹೊಸ ಮಾದರಿಯು ಜಪಾನ್‌ನಲ್ಲಿ ಮಾರಾಟವಾದ ಸುಜುಕಿ ಸ್ಪೇಸಿಯಾವನ್ನು ಆಧರಿಸಿದೆ.ಇದು JDM-ಸ್ಪೆಕ್ MPV ಗೆ ಹೋಲಿಸಿದರೆ ವಿಭಿನ್ನ ವಿನ್ಯಾಸವನ್ನು ಹೊಂದಿರುತ್ತದೆ ಮತ್ತು ದೊಡ್ಡ ಆಯಾಮಗಳನ್ನು ಹೊಂದಿರುತ್ತದೆ. ಪ್ರಸ್ತುತ ಮಾರಾಟವಾಗುತ್ತಿರುವ ಸ್ಪೇಸಿಯಾ ಒಟ್ಟಾರೆ 3,395 mm ಉದ್ದವನ್ನು ಹೊಂದಿದೆ ಮತ್ತು ಆದ್ದರಿಂದ ಮುಂಬರುವ ಕಾಂಪ್ಯಾಕ್ಟ್ ಎಂಪಿವಿಯು ಖಂಡಿತವಾಗಿಯೂ ಉದ್ದವಾಗಿರುತ್ತದೆ.
ಭಾರತದಲ್ಲಿ ಹೆಚ್ಚು ಮಾರಾಟವಾಗುವ ಎಂಪಿವಿ ಎರ್ಟಿಗಾಕ್ಕಿಂತ ಕೆಳಗಿರುತ್ತದೆ. ಮಾರುತಿ ಸುಜುಕಿ YDBಯು ನೇರವಾದ ಬಾಕ್ಸಿ ಅನುಪಾತಗಳನ್ನು ಸ್ಪೇಸಿಯಾದಂತೆ ಉಳಿಸಿಕೊಳ್ಳುತ್ತದೆ ಆದರೆ ಉತ್ಪಾದನಾ ವೆಚ್ಚವನ್ನು ತಗ್ಗಿಸಲು ಸಾಂಪ್ರದಾಯಿಕ ಹಿಂಬದಿಯ ಡೋರುಗಖ್ಳ ಪರವಾಗಿ ಸ್ಲೈಡಿಂಗ್ ಡೋರುಗಳನ್ನು ಆಯ್ಕೆಮಾಡಬಹುದು. ಎರ್ಟಿಗಾವನ್ನು ಸಾಮಾನ್ಯ ಅರೆನಾ ಡೀಲರ್‌ಶಿಪ್‌ಗಳ ಮೂಲಕ ಚಿಲ್ಲರೆ ಮಾರಾಟ ಮಾಡಲಾಗಿದ್ದರೂ, ಎಕ್ಸ್‌ಎಲ್ 6 ಮಾರಾಟವಾಗುವ ನೆಕ್ಸಾ ಪ್ರೀಮಿಯಂ ಔಟ್‌ಲೆಟ್‌ಗಳಲ್ಲಿ YDB ಅನ್ನು ನೀಡಬಹುದು.
ಹೆಚ್ಚಿನ ಪ್ರಾಯೋಗಿಕತೆಗಾಗಿ ಸ್ಪೇಸಿಯಾಕ್ಕೆ ಹೋಲಿಸಿದರೆ ಏಳು-ಸೀಟುಗಳ MPV ವಿಶಾಲವಾದ ಒಳಾಂಗಣವನ್ನು ಹೊಂದಿರುತ್ತದೆ ಮತ್ತು ಇದು ರೆನಾಲ್ಟ್ ಟ್ರೈಬರ್‌ನೊಂದಿಗೆ ಸ್ಪರ್ಧಿಸಬಹುದು. ಕಾರ್ಯಕ್ಷಮತೆಗೆ ಸಂಬಂಧಿಸಿದಂತೆ, ಮುಂಬರುವ ಸ್ವಿಫ್ಟ್‌ನಲ್ಲಿ ಪಾದಾರ್ಪಣೆ ಮಾಡಲಿರುವ 1.2LZ ಸೀರಿಸ್ ಮೂರು-ಸಿಲಿಂಡರ್ ಮೈಲ್ಡ್-ಹೈಬ್ರಿಡ್ ಪೆಟ್ರೋಲ್ ಎಂಜಿನ್ ಅನ್ನು ಬಳಸಿಕೊಳ್ಳಬಹುದು. ಇದು ಮ್ಯಾನ್ಯುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗೆ ಹೊಂದಿಕೆಯಾಗಲಿದೆ.
ನಿಸ್ಸಾನ್ ಎಂಪಿವಿ: ನಿಸ್ಸಾನ್ ಕೂಡ ಭಾರತೀಯ ಮಾರುಕಟ್ಟೆಗೆ ಹೊಸ ಕೊಡುಗೆಗಳ ಒಂದು ಸರಣಿಯನ್ನು ಯೋಜಿಸಿದೆ. ಮಾರ್ಗಸೂಚಿಯು ಹೊಸ ರೆನಾಲ್ಟ್ ಡಸ್ಟರ್ (5 ಮತ್ತು 7-ಆಸನಗಳ ರೂಪಾಂತರಗಳಲ್ಲಿ ಲಭ್ಯವಿದೆ), 7-ಆಸನಗಳ MPV ಮತ್ತು ಎಂಟ್ರಿ ಲೆವೆಲ್ ಎಲೆಕ್ಟ್ರಿಕ್ ಕಾರ್ ಅನ್ನು ಆಧರಿಸಿ ಎರಡು ಎಸ್‍ಯುವಿಗಳನ್ನು ಒಳಗೊಂಡಿದೆ. ಮುಂಬರುವ ನಿಸ್ಸಾನ್ ಕೈಗೆಟುಕುವ ಎಂಪಿವಿ ತನ್ನ ಪ್ಲಾಟ್‌ಫಾರ್ಮ್, ಎಂಜಿನ್ ಮತ್ತು ಘಟಕಗಳನ್ನು ರೆನಾಲ್ಟ್ ಟ್ರೈಬರ್‌ನೊಂದಿಗೆ ಹಂಚಿಕೊಳ್ಳುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








