Compact SUV: ಬಿಡುಗಡೆಗೆ ಸಜ್ಜಾಗುತ್ತಿವೆ 3 ಪವರ್‌ಫುಲ್ ಕಾಂಪ್ಯಾಕ್ಟ್ ಎಸ್‌ಯುವಿಗಳು: ಕಡಿಮೆ ಬೆಲೆ!

ಭಾರತದಲ್ಲಿ ಕಾಂಪ್ಯಾಕ್ಟ್ ಎಸ್‌ಯುವಿ (Compact SUV) ವಿಭಾಗಕ್ಕೆ ಎಲ್ಲಿಲ್ಲದ ಬೇಡಿಕೆ ಇದೆ. ಈ ವಿಭಾಗವು ತೀವ್ರ ಪ್ರತಿಸ್ಪರ್ಧೆಯಿಂದ ಕೂಡಿರುತ್ತದೆ. ಎಲ್ಲಾ ಬ್ರಾಂಡ್‌ಗಳು ಸ್ಪರ್ಧಾತ್ಮಕ ಬೆಲೆಯಲ್ಲಿ ತಮ್ಮ ಕಾರುಗಳನ್ನು ನೀಡುತ್ತಿದ್ದು, ಗ್ರಾಹಕರಿಗೆ ಹೊಸ ಆಯ್ಕೆಗಳನ್ನು ನೀಡಲು ಹೊಸ ಕಾಂಪ್ಯಾಕ್ಟ್‍ ಎಸ್‌ಯುವಿಗಳನ್ನು ಕೂಡ ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದಾರೆ.

ಸದ್ಯ ಇದೇ ವರ್ಷದಲ್ಲಿ ಮಹೀಂದ್ರಾ ತನ್ನ Xuv300 ಫೆಸ್‌ಲಿಫ್ಟ್ ಮತ್ತು ಇತರ ಹೊಸ ಎಸ್‌ಯುವಿಗಳನ್ನು ಬಿಡುಗಡೆ ಮಾಡಲು ಹೊರಟಿದ್ದಾರೆ. ಇದು ಹೀಗಿದ್ದರೆ ಕಿಯಾ, ಹ್ಯುಂಡೈ, ಸ್ಕೋಡಾ ಬ್ರಾಂಡ್‌ಗಳಿಂದ ಮೂರು ಹೊಸ ಕಾಂಪ್ಯಾಕ್ಟ್ ಎಸ್‌ಯುವಿಗಳು ಬರುವುದು ಖಚಿತವಾಗಿದೆ. ಇವುಗಳ ಬೆಲೆ ರೂ.10 ಲಕ್ಷದೊಳಗೆ ಇರಲಿದ್ದು, 2025 ರ ಹೊಸ ಸಬ್-4 ಮೀಟರ್ ಎಸ್‌ಯುವಿ ವಿಭಾಗದಲ್ಲಿ ಹೊಸ ಅಲೆ ಎಬ್ಬಿಸುವ ಸಾಧ್ಯತೆಯಿದೆ.

upcoming-compact-suvs-in-india-hyundai-kia-skoda

1. ಕಿಯಾ ಕ್ಲಾವಿಸ್ (Kia Clavis): ಕಿಯಾ ಸದ್ಯ ಅಂತರಾಷ್ಟ್ರೀಯ ಮಾರುಕಟ್ಟೆ ಸೇರಿದಂತೆ ಭಾರತೀಯ ಮಾರುಕಟ್ಟೆಗಾಗಿ ಹೊಸ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ತಯಾರಿಸುತ್ತಿದೆ. ಈಗಾಗಲೇ ಈ ಕಾರು ವಿದೇಶಗಳಲ್ಲಿ ಟೆಸ್ಟಿಂಗ್ ವೇಳೆ ಹಲವು ಬಾರಿ ಕಾಣಿಸಿಕೊಂಡಿದೆ. ಆಂತರಿಕವಾಗಿ ಎವೈ ಎಂದು ಹೆಸರಿಟ್ಟು ಸದ್ಯ ಈ ಹೊಸ ಎಸ್‌ಯುವಿಯನ್ನು ಅಭಿವೃದ್ಧಿಪಡಿಸುತ್ತಿದೆ. ಇದು 4WD ಕಾನ್ಫಿಗರೇಶನ್ ಅನ್ನು ಹೊಂದಿಲ್ಲದ ಕಾರಣ ಆಫ್-ರೋಡ್ ಸಾಮರ್ಥ್ಯಗಳನ್ನು ಹೊಂದಿರುವುದಿಲ್ಲ.

ಮುಂಬರುವ ಕಿಯಾ 'ಎವೈ'ಗೆ ಕ್ಲಾವಿಸ್ ಎಂದು ಹೆಸರಿಡುವ ನಿರೀಕ್ಷೆಯಿದೆ. 2025 ರ ಆರಂಭದಲ್ಲಿ ಭಾರತೀಯ ಶೋರೂಂಗಳಿಗೆ ತಲುಪಲಿದ್ದು, ವರ್ಷದ ಕೊನೆಯಲ್ಲಿ ಜಾಗತಿಕವಾಗಿ ಬಿಡುಗಡೆಯಾಗಲಿದೆ. ಐಸಿ-ಎಂಜಿನ್, ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ಆವೃತ್ತಿಗಳಲ್ಲಿ ಇದು ಸಿಗಬಹುದು ಎಂದು ಮೂಲಗಳು ಹೇಳುತ್ತಿವೆ. ಕಡಿಮೆ ಬೆಲೆಯಲ್ಲಿ ಐದು ಆಸನಗಳೊಂದಿಗೆ ಸಣ್ಣ ಕುಟುಂಬಗಳಲ್ಲಿ ಜನಪ್ರಿಯತೆ ಪಡೆಯುವ ಸಾಧ್ಯೆತೆ ಇದೆ.

upcoming-compact-suvs-in-india-hyundai-kia-skoda

2. ಸ್ಕೋಡಾ ಕಾಂಪ್ಯಾಕ್ಟ್ ಎಸ್‌ಯುವಿ (Skoda Compact SUV): ಸ್ಕೋಡಾ ತನ್ನ ಎಂಟ್ರಿ ಲೆವೆಲ್ ಕಾಂಪ್ಯಾಕ್ಟ್ ಎಸ್‌ಯುವಿಯನ್ನು 2025ರ ಮಾರ್ಚ್‌ನಲ್ಲಿ ಬಿಡುಗಡೆಗೊಳಿಸುವುದಾಗಿ ಅಧಿಕೃತವಾಗಿ ಘೋಷಿಸಿದೆ. MQB A0 IN ಪ್ಲಾಟ್ ಫಾರ್ಮ್‌ನಿಂದ ಆಧಾರವಾಗಿರುವ ಕುಶಾಕ್ ಮಧ್ಯಮ ಗಾತ್ರದ ಎಸ್‌ಯುವಿಯಂತೆ ಇದು ಕೂಡ ಇರಲಿದೆ. 1.0 ಲೀಟರ್ 3 ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್‌ನೊಂದಿಗೆ, ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳೊಂದಿಗೆ ಬರಲಿದೆ.

3. ಮುಂದಿನ ತಲೆಮಾರಿನ ಹ್ಯುಂಡೈ ವೆನ್ಯೂ: ಮುಂದಿನ ವರ್ಷ ಎರಡನೇ ತಲೆಮಾರಿನ ಹ್ಯುಂಡೈ ವೆನ್ಯೂವನ್ನು ಪರಿಚಯಿಸಲಾಗುವುದು, ಒಳಗೆ ಮತ್ತು ಹೊರಗೆ ಸಾಕಷ್ಟು ನವೀಕರಣಗಳನ್ನು ಪಡೆದು ಬಿಡುಗಡೆಯಾಗುವ ಸಾಧ್ಯತೆಗಳಿವೆ. ಈ ಹೊಸ ವೆನ್ಯೂ ಟಾಟಾ ನೆಕ್ಸಾನ್, ಕಿಯಾ ಸಾನೆಟ್, ಮಾರುತಿ ಸುಜುಕಿ ಬ್ರೆಝಾ, ನಿಸ್ಸಾನ್ ಮ್ಯಾಗ್ನೈಟ್, ರೆನಾಲ್ಟ್ ಟ್ರೈಬರ್ ಕಾರುಗಳಿಗೆ ಪೈಪೋಟಿ ನೀಡಲಿವೆ.

upcoming-compact-suvs-in-india-hyundai-kia-skoda

ಪ್ರಸ್ತುತ ವೆನ್ಯೂಗೆ ಗ್ರಾಹಕರಲ್ಲಿ ಉತ್ತಮ ಬೇಡಿಕೆಯಿದೆ, ಗ್ರಾಹಕರನ್ನು ಇನ್ನಷ್ಟು ಸೆಳೆಯಲು ಮುಂಬರುವ ಮಾದರಿಯು ಅಸ್ತಿತ್ವದಲ್ಲಿರುವ ಎಂಜಿನ್ ಅನ್ನು ಉಳಿಸಿಕೊಂಡು ಹೆಚ್ಚು ಪ್ರೀಮಿಯಂ ಮತ್ತು ವೈಶಿಷ್ಟ್ಯ-ಸಮೃದ್ಧ ಕ್ಯಾಬಿನ್ ನೊಂದಿಗೆ ಬರಬಹುದು ಎಂದು ನಿರೀಕ್ಷಿಸಲಾಗಿದೆ. ಮುಂಬರಲಿರುವ 2025ರ ಹ್ಯುಂಡೈ ವೆನ್ಯೂ ಕಾಂಪ್ಯಾಕ್ಟ್ ಎಸ್‌ಯುವಿ, ಎಕ್ಸ್‌ಟರ್ ಮೈಕ್ರೋ ಎಸ್‌ಯುವಿಗಿಂತ ಮೇಲಿರಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, March 18, 2024, 16:53 [IST]
English summary
Upcoming compact suvs in india hyundai kia skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+